* ಎಲ್ಲಾ ಶಾಸಕರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ
* ಸ್ವಲ್ವ ನೀವು ಬಾಯಿ ಮುಚ್ಚಿಕೊಂಡಿರಿ
* ನಿಮ್ಮ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ
ದಾವಣಗೆರೆ(ಫೆ.08): ಎಲ್ಲಾ ಶಾಸಕರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಶಾಸಕರಾದ ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್‌ಗೆ(Basanagoda Patil Yatnal) ಟಿವಿ ಕ್ಯಾಮೆರಾ ನೋಡಿದರೆ ಜೋಶ್ ಬಂದು ಬಿಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನಗೆ ಚಟಾಕಿ ಹಾರಿಸಿದರು.
ದಾವಣಗೆರೆ(Davanagere) ಜಿಲ್ಲೆ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ‘ಸ್ವಲ್ವ ನೀವು ಬಾಯಿ ಮುಚ್ಚಿಕೊಂಡಿರಿ. ನಿಮ್ಮ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ತಮ್ಮ ಪಕ್ಕದಲ್ಲೇ ಇದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯಗೆ(MP Renukacharya) ಕಿವಿಮಾತು ಹೇಳಿದರು.
Karnataka Politics: ಸೋನಿಯಾ ಕರ್ನಾಟಕ್ಕೆ ಮಹಾದಾಯಿ ನೀರು ಕೊಡಲ್ಲ ಅಂದಿದ್ರು: ಈಶ್ವರಪ್ಪ
ಕಾಂಗ್ರೆಸ್(Congress), ಜೆಡಿಎಸ್(JDS) ಪಕ್ಷದಿಂದ ಬಂದು, ಬೆಂಬಲ ನೀಡಿದ ಶಾಸಕರಿದ್ದಾರೆ. ಅವರನ್ನು ಬಿಡುವುದಕ್ಕೆ ಆಗುವುದಿಲ್ಲ. ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಯೋಗ್ಯರಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಆಗ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು.
ರಾಷ್ಟ್ರವಾದಿ ಮುಸ್ಲಿಮರನ್ನು ಮಾತ್ರ ಬಿಜೆಪಿಗೆ ಸೇರಿಸಿಕೊಳ್ತೇವೆ: ಈಶ್ವರಪ್ಪ
ಬಾಗಲಕೋಟೆ: ಕಾಂಗ್ರೆಸ್‌ನಿಂದ ಹೊರಬರಲಿರುವ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಅವರನ್ನು ಯಾವುದೇ ಕಾರಣಕ್ಕೂ ನಮ್ಮ ಹತ್ತಿರಕ್ಕೂ ಸೇರಿಸಲ್ಲ. ಇಬ್ರಾಹಿಂ ಧೂಳು ಸಹ ನಮ್ಮ ಹತ್ತಿರ ಬರಬಾರದು. ರಾಷ್ಟ್ರವಾದಿ ಮುಸ್ಲಿಮರನ್ನು ಖಂಡಿತ ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ. ಆದರೆ, ಸಿ.ಎಂ.ಇಬ್ರಾಹಿಂ ಅವರನ್ನು ಮಾತ್ರ ಯಾವುದೇ ಕಾರಣಕ್ಕೂ ನಾವು ತೆಗೆದುಕೊಳ್ಳುವುದಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಮುಸ್ಲಿಮರು ಇದೀಗ ಬಿಟ್ಟು ಹೋಗುತ್ತಿರುವುದನ್ನು ನೋಡಿದರೆ ಅವರಿಗೂ ಸ್ವಾತಂತ್ರ್ಯ ನಂತರದ 75 ವರ್ಷಗಳ ಬಳಿಕ ನಮ್ಮನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ ಎಂಬುವುದು ಅರ್ಥವಾಗುತ್ತಿದೆ. ಸದ್ಯ ಇಬ್ರಾಹಿಂ ಕಾಂಗ್ರೆಸ್ ತ್ಯಜಿಸುತ್ತಿದ್ದು ಜಮೀರ್ ಸಹ ಎಲ್ಲಿ ಕಾಣುತ್ತಿಲ್ಲ. ಜಮೀರ ಕಾಂಗ್ರೆಸ್ ಜೊತೆಯೂ ಇಲ್ಲ, ಡಿಕೆಶಿ ಜೊತೆಯೂ ಇಲ್ಲ, ಸಿದ್ದರಾಮಯ್ಯ ಜೊತೆಯೂ ಇಲ್ಲ. ಬಿಜೆಪಿ ಜೊತೆ ದಲಿತರು, ಹಿಂದುಳಿದವರು ಇದ್ದಾರೆ. ಮುಸ್ಲಿಮರು ಮಾತ್ರ ಸ್ವಲ್ಪ ಬಿಜೆಪಿಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ತಿಳಿಸಿದ್ದರು.
ಶಾಲಾ-ಕಾಲೇಜುಗಳಲ್ಲಿ ಮಕ್ಕಳು ಶಿಕ್ಷಣ ಕಲಿಯಲಿಕ್ಕೆ ಹೋಗುವುದು, ಮಕ್ಕಳಲ್ಲಿ ಯಾವ ಧರ್ಮ ಅನ್ನುವ ವಿಷಯ ಬರಬಾರದು. ಯಾವುದೇ ಕಾರಣಕ್ಕೂ ಹಿಜಾಬ್ ಧರಿಸುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಅಂತ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದರು.
ಸಿದ್ದು, ಇಬ್ರಾಹಿಂ ಇಬ್ಬರೂ ಅವಳಿಯಿದ್ದಂತೆ:
ಶಿವಮೊಗ್ಗ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaia) ಮತ್ತು ಕಾಂಗ್ರೆಸ್ ತೊರೆದಿರುವ ಸಿ.ಎಂ. ಇಬ್ರಾಹಿಂ(CM Ibrahim) ಇಬ್ಬರೂ ಅವಕಾಶವಾದಿ ರಾಜಕಾರಣಿಗಳಾಗಿದ್ದು, ಅವಳಿ ಜವಳಿಯಿದ್ದಂತೆ ಎಂದು ಸಚಿವ ಕೆ.ಎಸ್‌ಈಶ್ವರಪ್ಪ(KS Eshwarappa) ಲೇವಡಿ ಮಾಡಿದ್ದರು.
Karnataka Politics ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ, ಈಶ್ವರಪ್ಪ ಹೇಳಿದ್ದಿಷ್ಟು
ಕಳೆದ ವರ್ಷದ ಜ.30 ರಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಅವರಿಬ್ಬರೂ ಬೇರೆ ಬೇರೆ ಅಲ್ಲ. ಅವರಿಗೆ ಆ ಪಕ್ಷ ಈ ಪಕ್ಷ ಯಾವುದೂ ಇಲ್ಲ . ಇಬ್ಬರಿಗೂ ಅಧಿಕಾರದ ಆಸೆ. ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ ಆ ಪಕ್ಷಕ್ಕೆ ಹಾರುವುದು ಇವರ ಜಾಯಮಾನ. ಯಾವುದೇ ಅಧಿಕಾರ ಸಿಗದಿದ್ದರೆ ಇಬ್ಬರೂ ಪಕ್ಷ ಬಿಡುವ ಮಾತನಾಡುತ್ತಾರೆ. ಹಾಗಾಗಿ ಅವರು ಯಾವ ಪಕ್ಷಕ್ಕೆ ಹಾರುತ್ತಾರೆ ಎಂಬುದಕ್ಕೆ ಮಹತ್ವವಿಲ್ಲ ಎಂದು ತಿಳಿಸಿದ್ದರು.
ಜಿಪಂ, ತಾಪಂ ಎಲೆಕ್ಷನ್ ಬಗ್ಗೆ ಶೀಘ್ರವೇ ನಿರ್ಧಾರ
ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯನ್ನು(ZP and TP Election) ನಡೆಸುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದರು.
ಈ ಹಿಂದೆ ಜಿಪಂ, ತಾಪಂ ಚುನಾವಣೆಗೆ ನಿಗದಿ ಮಾಡಿದ್ದ ಮೀಸಲಾತಿ ಆಕ್ಷೇಪಿಸಿ 780ಕ್ಕೂ ಹೆಚ್ಚು ತಕರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಎಲ್ಲ ಜಿಲ್ಲೆಗಳಿಂದ ಕ್ಷೇತ್ರ ವಿಂಗಡನೆ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಈ ಸಮಿತಿ ವರದಿ ಸಲ್ಲಿಸಿದ ಬಳಿಕ ಮೀಸಲಾತಿ ನಿಗದಿಪಡಿಸಿ ಚುನಾವಣೆ ದಿನಾಂಕ ಪ್ರಕಟಿಸಲಾಗುವುದು ಎಂದಿದ್ದರು.