Hijab Row ಹಿಜಾಬ್ ವಿವಾದ: ಕಾಂಗ್ರೆಸ್ ವಿರುದ್ಧ ಅಶೋಕ್ ಟೀಕೆ, ಸಿಂಹಗೆ ಖಾದರ್ ಟಾಂಗ್

By Suvarna News  |  First Published Feb 7, 2022, 11:08 PM IST

* ಕರ್ನಾಟಕದಲ್ಲಿ ಹಿಜಾಬ್ ಭಾರೀ ವಿವಾದ
* ರಾಜಕೀಯ ನಾಯಕರ ನಡುವೆ ಆರೋಪ-ಪ್ರತ್ಯಾರೋಪ
* ವಿವಾದ ಬಗೆಹರಿಸುವವರಿಂದಲೇ ಪರಸ್ಪರ ಕಿತ್ತಾಟ


ಚಿಕ್ಕಬಳ್ಳಾಪುರ, (ಫೆ.07): ಕರ್ನಾಟಕದಲ್ಲಿ ಭಾರೀ ವಿವಾದವನ್ನು ಸೃಷ್ಟಿ ಮಾಡಿರುವ ಹಿಜಾಬ್‌ಗೆ (Hijab Row) ಸಂಬಂಧಿಸಿದಂತೆ ರಾಜಕೀಯ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. 

ಈ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ದ ವಾಗ್ದಾಳಿ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದೆಡೆ ಮೈಸೂರು ಸಂಸದ ಪ್ರತಾಪ್ ಸಿಂಹ(Pratap Simha) ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕ ಯುಟಿ ಖಾದರ್ ಕಿಡಿಕಾರಿದ್ದಾರೆ.

Latest Videos

Pratap Simha-Tanvir Sait ತಾರಕಕ್ಕೇರಿದ ಪ್ರತಾಪ್ ಸಿಂಹ- ತನ್ವೀರ್ ಸೇಠ್ ಆರೋಪ-ಪ್ರತ್ಯಾರೋಪ

ಹಿಜಾಬ್ ವಿವಾದ ಕಾಂಗ್ರೆಸ್ ಸೃಷ್ಠಿ ಎಂದ ಅಶೋಕ್
ಹಿಜಾಬ್ ವಿವಾದದ ಹಿಂದೆ ಬಿಜೆಪಿ ಕೈವಾಡ ಇಲ್ಲ. ಅದು ಕಾಂಗ್ರೆಸ್‌ನ ಕುಮ್ಮಕ್ಕುನಿಂದ ಸೃಷ್ಠಿಯಾಗಿರುವ ವಿವಾ. ಹಿಂದೂಗಳ ಹಾಗೂ ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್‌ನಲ್ಲಿ ದ್ವಂದ್ವ ನಿಲುವು ಇದೆ.  ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ನಿರಂತರವಾಗಿ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದ ಇವತ್ತು ಅದನ್ನು ಶಾಲಾ ಹಾಗೂ ವಿದ್ಯಾಬ್ಯಾಸಕ್ಕೆ ಮಟ್ಟಕ್ಕೆ ತಂದಿದ್ದಾರೆಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದರು.
  
ಚಿಕ್ಕಬಳ್ಳಾಪುರ ತಾಲೂಕಿನ ಮೊಟ್ಲೂರು ಗ್ರಾಮದಲ್ಲಿ ಸೋಮವಾರ ಪದ್ಮಶ್ರೀ, ನಾಡೋಜ ಸಾಹಿತಿ ದಿ.ಕೆ.ಎಸ್.ನಿಸಾರ್ ಅಹಮ್ಮದ್ ರವರ ಪುತ್ಥಳಿ ಆನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಜಾಬ್ ಇದು ವಿವಾದವೇ ಅಲ್ಲ. ಕಾಂಗ್ರೆಸ್ ಮಾಡಿರುವ ಸೃಷ್ಠಿ ಅಷ್ಟೇ ಎಂದು ಆರೋಪಿಸಿದರು.

ಪ್ರತಾಪ್‌ಸಿಂಹಗೆ ದೇಶದ ಸಂಸ್ಕೃತಿ, ಪರಂಪರೆ ಗೊತ್ತಿಲ್ಲ
ಚಿಕ್ಕಬಳ್ಳಾಪುರ,  ಸಂಸದ ಪ್ರತಾಪ್ ಸಿಂಹಗೆ ಈ ದೇಶದ ಸಂಸ್ಕೃತಿ, ಪರಂಪರೆ ಏನು? ಆಚಾರ, ವಿಚಾರ, ಇತಿಹಾಸ ಏನು ಗೊತ್ತಿಲ್ಲ. ಭಾರತದಲ್ಲಿ ವಿಶ್ವದಲ್ಲಿ ಗೌರವ ಸಿಗುತ್ತಿದ್ದರೆ ಎಲ್ಲ ವರ್ಗದ ಜನರ ಪ್ರೀತಿ, ವಿಶ್ವಾಸ, ನಮ್ಮ ಸಂಸ್ಕೃತಿ, ಪಂಪರೆ, ವೈವಿದ್ಯಮಯ ಜೀವನದಿಂದ ಹೊರತೇ ಪ್ರಧಾನಿ, ಸಂಸದರು, ಶಾಸಕ, ಮಂತ್ರಿಗಳಿಂದಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಹೇಳಿದರು.

ಚಿಕ್ಕಬಳ್ಳಾಪುರ ತಾಲೂಕಿನ ಮೋಟ್ಲೂರುನಲ್ಲಿ ಸೋಮವಾರ ಪದ್ಮಶ್ರೀ ನಾಡೋಜ ಕೆ.ಎಸ್.ನಿಸಾರ್ ಅಹ್ಮದ್ ಪುತ್ಥಳಿ ಆನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದರಸಗಳನ್ನು ಮುಚ್ಚಬೇಕೆಂಬ ಪ್ರತಾಪ್ ಸಿಂಹ ಹೇಳಿಕೆಗೆ ತೀಕ್ಷಣ ಪ್ರತಿಕ್ರಿಯೆ ನೀಡಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ಭಾರತದ್ದು,  ಸಂಸ್ಕೃತಿ, ಆಹಾರ, ಸಮವಸ್ತ್ರ ಬೇರೆ ಇದ್ದರೂ ನಾವೆಲ್ಲಾ ಭಾರತೀಯ ಎಂಬುದನ್ನು ಮೊದಲು ಅರಿಯಬೇಕು ಎಂದರು.

click me!