ಮಂತ್ರಿಗಿರಿ ಲಾಬಿ ಬಿಟ್ಟು ಈಶ್ವರಪ್ಪ ಸದನಕ್ಕೆ ಹೋಗಲಿ: ಕೆ.ಬಿ.ಪ್ರಸನ್ನಕುಮಾರ್‌

By Kannadaprabha News  |  First Published Dec 21, 2022, 7:40 AM IST
  • ಮಂತ್ರಿಗಿರಿ ಲಾಭಿ ಬಿಟ್ಟು ಸದನಕ್ಕೆ ಹೋಗಲಿ
  • ಗಂಟೆಗೊಂದು ಹೇಳಿಕೆ ನೀಡುತ್ತಿರುವ ಈಶ್ವರಪ್ಪರಿಂದ ಪಕ್ಷಕ್ಕೆ ಬ್ಲಾಕ್‌ಮೇಲ್‌: ಆರೋಪ
  • ಈಶ್ವರಪ್ಪರಿಗೆ ಕ್ಲೀನ್‌ಚಿಟ್‌ ನೀಡಿರುವುದು ಇವರದ್ದೇ ಸರ್ಕಾರದ ಪೊಲೀಸ್‌ ತನಿಖೆಯಲ್ಲಿ ಮಾತ್ರ
  • 2 ಬಾರಿ ಪ್ರವಾಹದಿಂದ ನಷ್ಟಕ್ಕಿಡಾದವರಿಗೆ ಇದುವರೆಗೂ ಪರಿಹಾರವೇ ಸಿಕ್ಕಿಲ್ಲ

ಶಿವಮೊಗ್ಗ (ಡಿ.21) : ಶಾಸಕ ಕೆ.ಎಸ್‌.ಈಶ್ವರಪ್ಪ ಅವರು ಮಂತ್ರಿ ಸ್ಥಾನಕ್ಕಾಗಿ ಲಾಭಿ ಮಾಡುವುದನ್ನು ಬಿಟ್ಟು, ಸದನಕ್ಕೆ ಹೋಗಿ ನಗರದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರನ್ನಕುಮಾರ್‌ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗ ಕ್ಷೇತ್ರ ಶಾಸಕರು ಸದನದಲ್ಲಿ ಕಾಣುತ್ತಿಲ್ಲ. ಬೆಳಗಾವಿಯಲ್ಲಿ ಮಂತ್ರಿ ಪದವಿ ನೀಡಿಲ್ಲ ಎಂದು ಮೌನ ಪ್ರತಿಭಟನೆ ಎಂದರು. ಅನಂತರ ನಾನು ಬಿ.ಎಸ್‌.ವೈ. ಮತ್ತು ಅನಂತ್‌ಕುಮಾರ್‌ ಸೇರಿ ಪಕ್ಷ ಕಟ್ಟಿದ್ದೇವೆ, ಪೊಲೀಸರು ಕ್ಲೀನ್‌ಚಿಟ್‌ ನೀಡಿದ್ದರೂ ಕ್ಷುಲ್ಲಕ ಕಾರಣಕ್ಕಾಗಿ ನನ್ನನ್ನು ಸಂಪುಟಕ್ಕೆ ತೆಗೆದುಕೊಂಡಿಲ್ಲ. ಆದ್ದರಿಂದ ಅಧಿವೇಶನಕ್ಕೆ ಹೋಗುವುದಿಲ್ಲ ಎಂದರು. ಮತ್ತೆ ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿಗಳು ನನಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದಾರೆ. ಅವರಿಗೆ ಅಭಿನಂದನೆ ಎಂದರು. ಹೀಗೆ ಗಂಟೆಗೊಂದು ಹೇಳಿಕೆ ನೀಡುತ್ತ ಪಕ್ಷವನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ಸದನಕ್ಕೆ ಹಾಜರಾದರೆ ಶೇ.40 ಕಮಿಷನ್‌ ಆರೋಪ ಮತ್ತೆ ಸದನದಲ್ಲಿ ಚರ್ಚೆಗೆ ಬರುತ್ತದೆ ಎಂಬ ಭಯದಿಂದ ಇವರು ಅಧಿವೇಶನಕ್ಕೆ ಗೈರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

Tap to resize

Latest Videos

Shivamogga: ಸಾಗರ ಕೋರ್ಟ್ ಗೆ ವಿವಾದಾತ್ಮಕ ಸಾಹಿತಿ ಭಗವಾನ್ ಹಾಜರು

ಇದು ಶಿವಮೊಗ್ಗ ನಗರ ಜನತೆಗೆ ಶಾಸಕರು ಮಾಡುತ್ತಿರುವ ದ್ರೋಹ. ಈಶ್ವರಪ್ಪನವರಿಗೆ ಕ್ಲೀನ್‌ಚಿಟ್‌ ನೀಡಿರುವುದು ಇವರದ್ದೇ ಸರ್ಕಾರದ ಪೊಲೀಸ್‌ ತನಿಖೆಯಲ್ಲಿ ಮಾತ್ರ. ಆದರೆ, ನ್ಯಾಯಾಲಯ ಇನ್ನು ಕ್ಲೀನ್‌ಚಿಟ್‌ ನೀಡಿಲ್ಲ. ಕೊರೋನಾದಿಂದ 2 ವರ್ಷಗಳ ಕಾಲ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ನಾಗರಿಕರು ತಮ್ಮ ಸಮಸ್ಯೆ ಬಗೆಹರಿಸಲು ಒದ್ದಾಡುತ್ತಿದ್ದಾರೆ. ಮೆಗ್ಗಾನ್‌ನಲ್ಲಿ ಕ್ಯಾನ್ಸರ್‌ ಆಪರೇಷನ್‌ ಮಾಡಿದರೆ ಕಿಮಿಯೋಥೆರಪಿಗೆ ಖಾಸಗಿ ಆಸ್ಪತ್ರೆಗೆ ಹೋಗುವಂತೆ ರೋಗಿಗಳಿಗೆ ಹೇಳುತ್ತಾರೆ. ಸಮಸ್ಯೆಯನ್ನು ಶಾಸಕರಲ್ಲಿ ಹೇಳೋಣವೆಂದರೆ ಶಾಸಕರು ಮಂತ್ರಿಗಿರಿಗಾಗಿ ಓಡಾಟದಲ್ಲಿದ್ದಾರೆ. ಇವರ ಮಾತನ್ನು ಯಾವ ಅಧಿಕಾರಿಗಳೂ ಕೇಳುತ್ತಿಲ್ಲ. ಆಶ್ರಯ ಮನೆಗಳು ಇನ್ನು ಹಂಚಿಕೆಯಾಗಿಲ್ಲ. ಪುರಾತನ ದೇವಸ್ಥಾನಗಳು ಹಾಳು ಬಿದ್ದುಹೋಗಿವೆ. 2 ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮತ್ತು ಹಾನಿಗೀಡಾದವರಿಗೆ ಇನ್ನು ಪರಿಹಾರ ಸಿಗದೇ ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಆರ್‌.ಸಿ.ನಾಯಕ್‌, ಮಾಜಿ ಸದಸ್ಯರಾದ ಶ್ಯಾಮ್‌ಸುಂದರ್‌, ದೀಪಕ್‌ ಸಿಂಗ್‌, ಲಕ್ಷ್ಮಣ್‌, ಬೊಮ್ಮನಕಟ್ಟೆಮಂಜುನಾಥ್‌, ಮಂಜುನಾಥ್‌ ಬಾಬು, ಶಿವಾನಂದ್‌, ಶಣ್ಮುಖ, ಸಲೀಂ ಮತ್ತಿತರರಿದ್ದರು.

‘ಇಡಿ, ಐಟಿ, ಸಿಬಿಐ ಬಿಜೆಪಿ ಮೋರ್ಚಾಗಳೇ?’

ಇಡಿ, ಐಟಿ, ಸಿಬಿಐಗಳನ್ನು ಬಿಜೆಪಿ ತನ್ನ ಮೋರ್ಚಾಗಳನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್‌ ಬೆಂಬಲಿಗರ ಮೇಲೆ ರೈಡ್‌ ಮಾಡಿಸುವುದು, ನೋಟಿಸ್‌ ನೀಡುವುದು, ಹೆದರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿ ನಾಯಕರ ಕೋಟಿಗಟ್ಟಲೆ ಆಸ್ತಿ ಬಗ್ಗೆ ಈ ಸಂಸ್ಥೆಗಳು ಚಕಾರವೆತ್ತಿಲ್ಲ. ತನಿಖೆಯೂ ನಡೆಸಿಲ್ಲ. ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ದೇಶದ ಜನತೆಗೆ ಈ 3 ಸಂಸ್ಥೆಗಳ ಪಾರದರ್ಶಕತೆಯ ಮೇಲೆ ಸಂಶಯ ಉಂಟಾಗಿದೆ ಎಂದು ಕೆ.ಬಿ.ಪ್ರಸನ್ನಕುಮಾರ್‌ ಹೇಳಿದರು.

ಭಯೋತ್ಪಾದಕರನ್ನು ಬೆಂಬಲಿಸಿದರೆ ಕಾಂಗ್ರೆಸ್‌ ಬ್ಯಾನ್‌: ಕೆ.ಎಸ್‌.ಈಶ್ವರಪ್ಪ

ಕೆ.ಎಸ್‌.ಈಶ್ವರಪ್ಪ ಮನೆಯಲ್ಲಿ ಕೌಟಿಂಗ್‌ ಮಿಶನ್‌ ಸಿಕ್ಕಿತ್ತು, ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆಸ್ತಿನೇ ಇಲ್ಲವೇ? ಬಿಜೆಪಿ ನಾಯಕರ ಬಳಿ ಹಣವೇ ಇಲ್ಲವೇ? ಇವ್ಯಾವುದು ಇಡಿ, ಐಟಿ, ಸಿಬಿಐ ಅಧಿಕಾರಿಗಳ ಕಣ್ಣಿಗೆ ಏಕೆ ಬೀಳುತ್ತಿಲ್ಲ ಎಂದು ಪ್ರಶ್ನಿಸಿದರು.

click me!