ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರದಿಂದ ಜನಕಲ್ಯಾಣ ಆಗಿಲ್ಲ. ಉದ್ಯೋಗ ಸೃಷ್ಟಿಯಾಗಲಿಲ್ಲ, ಖಾತೆಗೆ 15 ಲಕ್ಷ ಬರಲಿಲ್ಲ. ಇಂತಹ ಸರ್ಕಾರ ಬೇಕೆ ಅಥವಾ ದಾನಧರ್ಮಗಳನ್ನು ಮಾಡುವ ಹಸ್ತದ ಸರ್ಕಾರ ಬೇಕೆ ಎನ್ನುವುದನ್ನು ಮತದಾರರೇ ತೀರ್ಮಾನಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹುಣಸೂರು (ಫೆ.17): ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರದಿಂದ ಜನಕಲ್ಯಾಣ ಆಗಿಲ್ಲ. ಉದ್ಯೋಗ ಸೃಷ್ಟಿಯಾಗಲಿಲ್ಲ, ಖಾತೆಗೆ 15 ಲಕ್ಷ ಬರಲಿಲ್ಲ. ಇಂತಹ ಸರ್ಕಾರ ಬೇಕೆ ಅಥವಾ ದಾನಧರ್ಮಗಳನ್ನು ಮಾಡುವ ಹಸ್ತದ ಸರ್ಕಾರ ಬೇಕೆ ಎನ್ನುವುದನ್ನು ಮತದಾರರೇ ತೀರ್ಮಾನಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಬಲ್ ಎಂಜಿನ್ ಸರ್ಕಾರದ ಭರವಸೆಗಳು ಸುಳ್ಳುಭರವಸೆಗಳಾಗಿವೆ. ಆದರೆ ಕಾಂಗ್ರೆಸ್‌ಗೆ ಸುಳ್ಳು ಹೇಳುವ ಅವಶ್ಯಕತೆಯಿಲ್ಲ.
ಸಿದ್ಧರಾಮಯ್ಯರ ಸರ್ಕಾರದ ಭಾಗ್ಯಗಳ ಯೋಜನೆಗಳೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್‌ಗೆ ಶಕ್ತಿ ಎಂದರೆ ಅದು ದೇಶದ ಶಕ್ತಿ. ಕಾಂಗ್ರೆಸ್‌ನ ಇತಿಹಾಸವೆಂದರೆ ಅದು ದೇಶದ ಇತಿಹಾಸವೆಂದರು. ದೇವರು ವರವನ್ನೂ ನೀಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಆದರೆ ಪ್ರತಿಯೊಬ್ಬರಿಗೂ ಅವಕಾಶ ನೀಡುತ್ತಾನೆ. ಹುಣಸೂರಿನ ಶಾಸಕ ಎಚ್.ಪಿ. ಮಂಜುನಾಥ್ ಸಿಕ್ಕ ಅವಕಾಶವನ್ನು ತಾಲೂಕಿನ ಸರ್ವಜನರ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದಾರೆ. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡಿದ್ದಾರೆ. ದಾನಧರ್ಮಗಳಲ್ಲಿ ಎತ್ತಿದ ಕೈ ಅವರದ್ದು. ನಾವ್ಯಾರೂ ಶಾಶ್ವತವಲ್ಲ, ನಮ್ಮ ಕೊಡುಗೆಗಳೇ ಎಂದಿಗೂ ಶಾಶ್ವತವಾಗಿರುತ್ತದೆ.
undefined
ಬಿಜೆಪಿಯಿಂದ ಧರ್ಮದ ವಿಷ ಬೀಜ ಬಿತ್ತನೆ: ಡಿ.ಕೆ.ಶಿವಕುಮಾರ್
ಸಾಂಸ್ಕೃತಿಕ ನಗರಿ ಮೈಸೂರು ಭಾಗದ ಸರ್ವತೋಮುಖ ಅಭಿವೃದ್ಧಿಯಲ್ಲಿ ಯದುವಂಶದ ದೊರೆಗಳ ಕೊಡುಗೆ ಅಪಾರ. ಅಂತೆಯೇ ಕಾಂಗ್ರೆಸ್ ಸರ್ಕಾರಗಳು ಆಹಾರ, ಅಕ್ಷರ, ಆರೋಗ್ಯ ಮತ್ತು ಆಶ್ರಯಕ್ಕೆ ಹೆಚ್ಚಿನ ಆದ್ಯತೆ ನೀಡಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದೆ ಎಂದರು. ಶಾಸಕ ಎಚ್.ಪಿ. ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಮ್ಮ ಮಂಜಣ್ಣ ಈ ಮಣ್ಣಿನಲ್ಲೇ ಹುಟ್ಟಿ, ಬೆಳೆದು, ಆಟವಾಡಿ, ಇಲ್ಲೇ ಮಣ್ಣಾಗುವವನು. ಕೊನೆಯುಸಿರು ಇರುವವರೆಗೆ ನಿಮ್ಮ ಸೇವೆಗಾಗಿಯೇ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. 14 ವರ್ಷಗಳ ನನ್ನ ಕಾಲದ ಅಧಿಕಾರಾವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳು ನಿಮ್ಮ ಕಣ್ಣ ಮುಂದೆಯೇ ಇದೆ. ಎಲ್ಲವನ್ನೂ ಗಮನಿಸಿ ಉತ್ತಮ ತೀರ್ಮಾನ ತೆಗೆದುಕೊಳ್ಳರೆಂದು ಕೋರಿದರು.
ಮನೆ ಮಗನ ಬೆಂಬಲಿಸಿ: ಡಿ.ಕೆ.ಶಿವಕುಮಾರ್ ಮತ್ತೆ ಸಿಎಂ ಇಂಗಿತ
ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ರೇವಣ್ಣ ಮಾತನಾಡಿದರು. ಮಾಜಿ ಸಂಸದ ಆರ್. ಧ್ರುವನಾರಾಯಣ್, ಪ್ರಜಾದ್ವನಿ ಯಾತ್ರೆಯ ಸಂಚಾಲಕ ಬಿ.ಸಿ. ಚಂದ್ರಶೇಖರ್, ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್, ಮುಖಂಡರಾದ ರಾಣಿ ಸತೀಶ್, ಲಕ್ಷ್ಮಣ್, ಸೂರಜ್ ಹೆಗಡೆ, ಜಿ.ಬಾವ, ಧರ್ಮಸೇನ ಸೇರಿದಂತೆ ಕಾಂಗ್ರೆಸ್ ರಾಜ್ಯ ಸಮಿತಿ ಸದಸ್ಯರು ಹಾಗೂ 5 ಸಾವಿರಕ್ಕೂ ಹೆಚ್ಚು ಪಕ್ಷ ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಅರಸು ಪುತ್ಥಳಿಯಿಂದ ಮೆರವಣಿಗೆ ಮೂಲಕ ಡಿಕೆಶಿ ಮತ್ತವರ ತಂಡವನ್ನು ಕರೆತರಲಾಯಿತು. ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಕಿತ್ತಳೆ ಮತ್ತು ಸೇಬಿನ ಹಣ್ಣಿನ ಹಾರ ಹಾಕಿ ಕಾರ್ಯಕರ್ತರು ಸಂಭ್ರಮಿಸಿದರು.