ಬೆಂಗಳೂರು (ಜೂ.04): ಮೈಸೂರಿನಲ್ಲಿ IAS ಅಧಿಕಾರಿಗಳ ನಡುವೆ ಸಮರ ಭುಗುಲೆದ್ದಿದ್ದು, ಅಲ್ಲಿನ ಲೀಡರ್‌ಗಳು ಸಚಿವರೇ ಫೈಟ್ ಮಾಡುತ್ತಿದ್ದಾರೆ, ಅಧಿಕಾರಿಗಳು ಮಾಡೋದು ದೊಡ್ಡದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಸಮರದ ಬಗ್ಗೆ ಪ್ರತಿಕ್ರಿಯಿಸಿದರು.
undefined
ರಾಜೀನಾಮೆ ಕೊಟ್ಟು ಹೋಗುತ್ತಿದ್ದ ಮೈಸೂರು ಪಾಲಿಕೆ ಆಯುಕ್ತೆ ಕಾಲಿಗೆ ಬಿದ್ದ ಸೆಕ್ಯೂರಿಟಿ ಗಾರ್ಡ್ .
ಯತ ರಾಜಾ ತತಾ ಪ್ರಜಾ. ಲೀಡರ್ ಗಳು, ಸಚಿವರೇ ಫೈಟ್ ಮಾಡುತ್ತಿದ್ದಾ. ಅಧಿಕಾರಿಗಳ ಅಸಮಾಧಾನ ಭುಗಿಲೇಳಲು ಇಲ್ಲಿನ ಲೀಡರ್‌ಗಳೇ ಉದಾಹರಣೆಯಾಗಿದ್ದಾರೆ. ಮಂತ್ರಿಗಳು ಹೇಗೆ ಮಾಡ್ತಾರೋ ಆಫಿಸರ್‌ಗಳು ಹಾಗೆ ಮಾಡುತ್ತಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಡಿಕೆಶಿ ಮಾರ್ಮಿಕವಾಗಿ ನುಡಿದರು.
ರಾಜ್ಯಪಾಲರ ಭೇಟಿ : ಇನ್ನು ಇಂದು ಸಂಜೆ 4 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ಈ ವೇಳೆ ಲಸಿಕೆ ವಿಚಾರವಾಗಿ ಮನವಿ ಮಾಡುವುದಾಗಿ ಹೇಳಿದರು.
ಲಾಕ್‌ಡೌನ್‌ನಿಂದ ರೈತರಿಗೇ ಹೆಚ್ಚು ತೊಂದರೆ: ಡಿಕೆಶಿ
ಇಂದು ಸಂಜೆ ರಾಜ್ಯಪಾಲರ ಅಪಾಯಿಂಟ್ ಮೆಂಟ್ ಕೇಳಿದ್ದೇವೆ. ರಾಜ್ಯದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು. ಉಚಿತ ಲಸಿಕೆಗೆ ಸರ್ಕಾರಕ್ಕೆ ಸೂಚನೆ ಕೊಡುವಂತೆ ರಾಜ್ಯ ಪಾಲರಿಗೆ ಮನವಿ ಮಾಡುತ್ತೇವೆ. ಅಲ್ಲದೆ ಕಾಂಗ್ರೆಸ್ ಶಾಸಕರ ಪಾಲಿನ 1 ಕೋಟಿ ಹಣ ಬಿಡುಗಡೆಗೆ ಸೂಚನೆ ನೀಡುವಂತೆ ಸಹಾ ರಾಜ್ಯ ಪಾಲರಲ್ಲಿ ಮನವಿ ಮಾಡುತ್ತೇವೆ ಎಂದರು.
ಸದ್ಯ ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಇಲ್ಲ. ಕೋರ್ಟ್ ಅಷ್ಟೋ ಇಷ್ಟೋ ಪ್ರಾಣ ಉಳಿಸಿದೆ. ಎಣ್ಣೆ ಮಾರೋಕೆ 4 ಗಂಟೆ ಅವಕಾಶ ಕೊಟ್ಟಿದ್ದಾರೆ. ರೈತರ ತರಕಾರಿ ಮಾರೋಕೆ ಅವಕಾಶ ಇಲ್ಲಾ. ಅದನ್ನ ರಾಜ್ಯಪಾಲರ ಗಮನಕ್ಕೆ ತರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.