ಸಿದ್ದು ಆರೋಗ್ಯ ವಿಚಾರಿಸಿದ ಜಮೀರ್, ಬಳಿಕ ಅಭಿಮಾನಿಗಳಿಗೆ ಹೇಳಿದ್ದು ಹೀಗೆ

Published : Jun 02, 2021, 10:00 PM IST
ಸಿದ್ದು ಆರೋಗ್ಯ ವಿಚಾರಿಸಿದ ಜಮೀರ್, ಬಳಿಕ ಅಭಿಮಾನಿಗಳಿಗೆ ಹೇಳಿದ್ದು ಹೀಗೆ

ಸಾರಾಂಶ

* ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದ ಜಮೀರ್ ಅಹ್ಮದ್ ಖಾನ್ * ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತರೋ ಸಿದ್ದರಾಮಯ್ಯ * ಸಿದ್ದು ಆರೋಗ್ಯದ ಬಗ್ಗೆ ಜಮೀರ್ ಮಾಹಿತಿ

ಬೆಂಗಳೂರು, (ಜೂನ್.02): ಅನಾರೋಗ್ಯ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನ ಜಮೀರ್ ಅಹ್ಮದ್ ಖಾನ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಬಳಿಕ ಸಿದ್ದರಾಮಯ್ಯನವರ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿರುವ ಜಮೀರ್​, ಆರೋಗ್ಯದ ಬಗ್ಗೆ ಯಾರೂ ಕೂಡ ಚಿಂತಿತರಾಗಬೇಕಾದ ಅಗತ್ಯವಿಲ್ಲ. ಇನ್ನೆರಡು ದಿನಗಳಲ್ಲಿ ಸಿದ್ದರಾಮಯ್ಯನವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಸಿದ್ದರಾಮಯ್ಯಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು

ತೀವ್ರ ಜ್ವರ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರು ನಿನ್ನೆ (ಮಂಗಳವಾರ) ಮಣಿಪಾಲ್ ಆಸ್ಪತ್ರೆಗೆ ದಾಖಲಾದರು. ಕೊರೋನಾ ನೆಗೆಟಿವ್ ಅಂತ ಬಂದಿದೆ. ಇನ್ನು ಸಿಟಿ ಸ್ಕ್ಯಾನ್‌ನಲ್ಲೂ ಸಹ ನಾರ್ಮಲ್ ಇದೆ. ಇದರಿಂದ ಸಿದ್ದರಾಮಯ್ಯನವರು ನಿರಾಳರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ
karnataka news live ಪಕ್ಷದಲ್ಲಿನ ಗೊಂದಲಕ್ಕೆ ತಲೆಕೆಡಿಸಿಕೊಳ್ಳದೆ ದಾಖಲೆಯ17ನೇ ಬಜೆಟ್‌ಗೆ ಸಿದ್ದು ಸಿದ್ಧತೆ