ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ. ಜಾಜ್‌ರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಚಿಕ್ಕಮಗಳೂರು (ಜೂ.10) ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ. ಜಾಜ್‌ರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದು, ನಿರೀಕ್ಷಿತ. ಕಾರಣ, ಜಿಲ್ಲೆಗೆ ಒಂದೂ ಸಚಿವ ಸ್ಥಾನ ನೀಡದೆ ಇದ್ದ ದಿನದಂದು ಜಿಲ್ಲಾ ಉಸ್ತುವಾರಿ ಸಚಿವರು ಯಾರು ಆಗುತ್ತಾರೆಂಬ ಪ್ರಶ್ನೆಗೆ ಕಾಂಗ್ರೆಸ್ ಪಾಳೆಯದಲ್ಲಿ ಓಡಾಡುತ್ತಿದ್ದ ಹೆಸರು ಕೆ.ಜೆ. ಜಾಜ್‌ರ್ ಅವರದ್ದು. ಕೆ.ಜೆ. ಜಾಜ್‌ರ್ ಅವರಿಗೆ ಚಿಕ್ಕಮಗಳೂರು ಜಿಲ್ಲೆ ಪರಿಚಿತ. ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಇಲ್ಲಿನ ಸಮಸ್ಯೆ ಗಳು ಹಾಗೂ ರಾಜಕಾರಣದ ಒಳ ಮತ್ತು ಹೊರ ಸುಳಿವು ಬಲ್ಲವರಾಗಿದ್ದಾರೆ. ಅದ್ದರಿಂದ ಅವರೇ ಸೂಕ್ತ ಎಂದು ಹೇಳಲಾಗುತ್ತಿದೆ.
undefined
ಆದರೆ, ಇನ್ನೊಂದೆಡೆ ಕೆ.ಜೆ. ಜಾಜ್‌ರ್ ಬಗ್ಗೆ ಅಸಮಾಧಾನವೂ ಕೂಡ ಇದೆ. ಎಚ್.ಡಿ.ಕುಮಾರಸ್ವಾಮಿ ಅವರು 2018ರ ಮೇ 23 ರಿಂದ 2019ರ ಜುಲೈ 23 ರವರೆಗೆ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಆಗ, ಕೆ.ಜೆ. ಜಾಜ್‌ರ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ಅವರು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ 14 ತಿಂಗಳ ಅವಧಿಯಲ್ಲಿ ಜಿಲ್ಲೆಗೆ ಅವರ ಕೊಡುಗೆ ಶೂನ್ಯ.
ಉಚಿತ ವಿದ್ಯುತ್‌ಗೆ ರಾಜ್ಯದ 2.14 ಕೋಟಿ ಸಂಪರ್ಕಗಳು ಅರ್ಹ: ಸಚಿವ ಕೆ.ಜೆ.ಜಾರ್ಜ್
ಸರ್ವಜ್ಞನಗರ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದು ಶಾಸಕರಾಗಿ, ಸಚಿವರಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಕಾಫಿ ತೋಟ ಹೊಂದಿರುವ ಅವರು, ಈ ಜಿಲ್ಲೆಯಲ್ಲೇ ನೆಲೆ ಕಂಡಿದ್ದಾರೆ. ಹಾಗಾಗಿ ಅವರನ್ನು ಹೊರಗಿನವರೆಂದು ಪೂರ್ಣ ಪ್ರಮಾಣದಲ್ಲಿ ಪರಿಗಣಿಸಲಾಗದು. ಆದರೆ, ಈ ಮನೋಭಾವನೆ ಅವರಲ್ಲಿ ಇರಬೇಕು ಎಂಬುದು ಜಿಲ್ಲೆಯ ಬಹಳಷ್ಟುಜನರ ಅಭಿಪ್ರಾಯ ಮಾತ್ರವಲ್ಲ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಅಭಿಪ್ರಾಯವೂ ಕೂಡ ಇದೆ ಆಗಿದೆ.
ಕಳೆದ ಅವಧಿಯಲ್ಲಿ ಅವರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಆಸಕ್ತಿ ತೋರಿದ್ದರೆ, ಯಾವುದಾದರೊಂದು ಕೊಡುಗೆ ಸರ್ಕಾರದಿಂದ ನೀಡಿದ್ದರೆ ಕೆ.ಜೆ. ಜಾಜ್‌ರ್ ಅವರು ಎರಡನೇ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದನ್ನು ಜಿಲ್ಲೆಯ ಜನರು ತುಂಬು ಮನಸ್ಸಿನಿಂದ ಸ್ವಾಗತಿಸುತ್ತಿದ್ದರು. ಆದರೆ, ಈ ರೀತಿಯ ವಾತಾವರಣ, ಕಾಂಗ್ರೆಸ್ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ಹುಮ್ಮಸ್ಸು ಇಲ್ಲ.
ಶಾಸಕರ ನಡುವೆ ಸಮನ್ವಯದ ಕೊರತೆ ?
1989ರ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಚುನಾವಣಾ ಫಲಿತಾಂಶದ ನಂತರ ಪಕ್ಷದ ಜಿಲ್ಲಾ ಕೋರ್ ಕಮಿಟಿ ಸಭೆಯೂ ನಡೆದಿದೆ. ಆದರೆ, ಪಕ್ಷ ಮತ್ತು ಶಾಸಕರ ನಡುವೆ ಸಮನ್ವಯದ ಕೊರತೆ ಕಂಡು ಬರುತ್ತಿದೆ ಎಂಬ ಅಸಮಧಾನವನ್ನು ಪಕ್ಷದ ಮುಖಂಡರು ವ್ಯಕ್ತಪಡಿಸಿದ್ದಾರೆ.
ಪಕ್ಷದ ಹಾಗೂ ಜಿಲ್ಲೆಯ ದೃಷ್ಟಿಯಿಂದ ಇದೊಂದು ಅಪಾಯಕಾರಿ ನಡೆ. ಪಕ್ಷದ ಚೌಕಟ್ಟಿನೊಳಗೆ ಶಾಸಕರು ಹೆಜ್ಜೆ ಹಾಕದೆ ಹೋದರೆ ಭವಿಷ್ಯದಲ್ಲಿ ಅದು, ಕವಲು ದಾರಿಯಾಗಿ ಸಾಗಲಿದೆ. ಈಗಿನ ನಡೆ ಹಾಗೆಯೇ ಇದ್ದಂತೆ ಕಾಣುತ್ತಿದೆ. ಪಕ್ಷದ ಜಿಲ್ಲಾಮಟ್ಟದ ಕೋರ್ ಕಮಿಟಿಯಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಶಾಸಕರು ಬದ್ಧವಾಗಿರಬೇಕಾಗುತ್ತದೆ. ಅದು, ಪಕ್ಷದ ಹಿತದೃಷ್ಟಿಯಿಂದ ಒಳಿತು. ಇಲ್ಲದೆ ಹೋದರೆ ಪಕ್ಷ, ಶಾಸಕರು, ಆಡಳಿತ ಯಂತ್ರ ಹೀಗೆ ಮನೆಯೊಂದು ಮೂರು ಬಾಗಿಲು ಆಗುತ್ತದೆ.
ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಬಿಜೆಪಿ ಹೊಣೆ: ಸಚಿವ ಜಾರ್ಜ್
ಈ ಪರಿಸ್ಥಿತಿಗೆ ಬ್ರೇಕ್ ಹಾಕಿ, ಇಡೀ ವ್ಯವಸ್ಥೆಯನ್ನು ಸರಿ ದಾರಿಗೆ ತೆಗೆದುಕೊಂಡು ಹೋಗಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾಜ್‌ರ್ ಅವರ ನಡೆ ಇರುತ್ತಾ ಎಂಬುದು ಕಾಂಗ್ರೆಸ್ ಕಾರ್ಯ ಕರ್ತರ ಪ್ರಶ್ನೆಯಾಗಿದೆ.