ಕಾರ್ಲ್‌ ಮಾರ್ಕ್ ಓಕೆ, ಪಠ್ಯದಲ್ಲಿ ಆರೆಸ್ಸೆಸ್‌ ನಾಯಕರು ಬೇಡವೇ?: ಸಿ.ಟಿ.ರವಿ

By Kannadaprabha News  |  First Published Jun 10, 2023, 6:23 AM IST

ಕಾರ್ಲ್‌ ಮಾರ್ಕ್ಸ್ ಪಠ್ಯ ಓದಬಹುದು. ಆದರೆ ಆರೆಸ್ಸೆಸ್‌ ನಾಯಕರನ್ನು ಓದುವುದು ಬೇಡವೇ? ಪಠ್ಯದಿಂದ ಆರೆಸ್ಸೆಸ್‌ ನಾಯಕರ ವಿಚಾರ ತೆಗೆಯಬಹುದು. ಆದರೆ ಜನರ ಹೃದಯದಿಂದ ತೆಗೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.


ನವದೆಹಲಿ (ಜೂ.10): ಕಾರ್ಲ್‌ ಮಾರ್ಕ್ಸ್ ಪಠ್ಯ ಓದಬಹುದು. ಆದರೆ ಆರೆಸ್ಸೆಸ್‌ ನಾಯಕರನ್ನು ಓದುವುದು ಬೇಡವೇ? ಪಠ್ಯದಿಂದ ಆರೆಸ್ಸೆಸ್‌ ನಾಯಕರ ವಿಚಾರ ತೆಗೆಯಬಹುದು. ಆದರೆ ಜನರ ಹೃದಯದಿಂದ ತೆಗೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ, ಯಾರ ನೆರವೂ ಇಲ್ಲದೆ ಸಂಘದ ಶಾಖೆ ಮೂಲಕವೇ ಆರೆಸ್ಸೆಸ್‌ ನಾಯಕರ ವಿಚಾರ ಬೆಳೆಯಲಿದೆ. 

ನೆಹರೂ, ಇಂದಿರಾ ಗಾಂಧಿ ಅವರು ಆರೆಸ್ಸೆಸ್‌ ನಿಷೇಧಿಸಲು ಹೋಗಿ ಸೋತಿದ್ದಾರೆ. ಸುಳ್ಳು ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್‌ ನಾಯಕರು ಕುರ್ಚಿಗೆ ಅಂಗಲಾಚಿದ್ದರು. ಕಾಂಗ್ರೆಸ್ಸಿಗರನ್ನು ಯಾಕೆ ಅಂಡಮಾನ್‌ ಜೈಲಿಗೆ ಹಾಕಲಿಲ್ಲ? ಎಂದು ಸಾವರ್ಕರ್‌ ವಿಚಾರವಾಗಿ ಕಾಂಗ್ರೆಸ್‌ ನಾಯಕರ ಹೇಳಿಕೆಗಳಿಗೆ ಸಿ.ಟಿ.ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸೂಲಿಬೆಲೆ ಬೆಂಬಲಿಗರು ತುಂಬಾ ಜನ ಇದ್ದಾರೆ. ದೇಶ ಭಕ್ತಿ ಕಾರಣಕ್ಕೆ ಸೂಲಿಬೆಲೆ ಪ್ರಖ್ಯಾತರಾಗಿದ್ದಾರೆ. ಅವರ ಖ್ಯಾತಿ ಕುಗ್ಗಿಸೋಕೆ ಆಗಲ್ಲ ಎಂದರು.

Tap to resize

Latest Videos

108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಕೇಂದ್ರ ಗುತ್ತಿಗೆ ರದ್ದು: ಸಚಿವ ದಿನೇಶ್‌ ಗುಂಡೂರಾವ್‌

ಮೆಕಾಲೆ, ಮಾರ್ಕ್ಸ್ ಗರಡಿಯಲ್ಲಿ ಇದ್ದವರಿಗೆ ದೇಶದ ಹಿರಿಮೆ ಅಪಥ್ಯ: ಮೆಕಾಲೆ, ಕಾರ್ಲ್‌ ಮಾರ್ಕ್ಸ್ ಗರಡಿಯವರಿಗೆ ಭಾರತದ ಹಿರಿಮೆ-ಗರಿಮೆಯನ್ನು ಕಲಿಸುವುದು ಅಪಥ್ಯವಾಗಿ ಕಾಣುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಕಾಲೆಗೆ ಭಾರತ ತಲೆಯೆತ್ತಿ ನಿಲ್ಲಬೇಕೆಂದು ಯಾವತ್ತಾದರೂ ಅನಿಸಿತ್ತೇ? ಭಾರತವು ಸದಾ ಗುಲಾಮಗಿರಿಯಲ್ಲಿ ಇರಬೇಕು ಎಂಬುದು ಆತನ ಚಿಂತನೆಯಾಗಿತ್ತು. 

ಅದಕ್ಕಾಗಿ ದಾಸ್ಯವನ್ನು ಒಪ್ಪಿಕೊಳ್ಳುವ ಜನರನ್ನು ತಯಾರಿಸುವ ಯೋಚನೆ ಮೆಕಾಲೆಯದಾಗಿತ್ತು. ಕುಟುಂಬ, ಸಮಾಜ, ರಾಜ್ಯದ ವ್ಯವಸ್ಥೆ ಇರಬಾರದು ಎಂಬುದು ಕಾಲ್‌ರ್‍ ಮಾರ್ಕ್ಸ್ನ ಚಿಂತನೆಯಾಗಿತ್ತು. ಮೆಕಾಲೆ ಮತ್ತು ಕಾಲ್‌ ಮಾರ್ಕ್ಸ್ ಚಿಂತನೆಯ ಗರಡಿಯಲ್ಲಿ ತಯಾರಾದ ಭಾರತೀಯತೆಯನ್ನು ಶ್ರೇಷ್ಠ ಎನ್ನಲು ಯಾವತ್ತಾದರೂ ಸಿದ್ಧರಿದ್ದಾರಾ ಎಂದು ಪ್ರಶ್ನಿಸಿದರು. ನಮ್ಮ ದೇಶವನ್ನು ಲೂಟಿ ಹೊಡೆದ ಮತ್ತು ದಾಳಿ ಮಾಡಿದ ಅಲೆಕ್ಸಾಂಡರ್‌ ಗ್ರೇಟ್‌ ಎಂದು ಕಲಿಸಲಾಗುತ್ತಿದೆ. 

ಸೋಲಿಗೆ 3 ಕಾರಣ ಹುಡುಕಿದ ಬಿಜೆಪಿ: ಮತಪ್ರಮಾಣ ಕುಸಿದಿಲ್ಲವೆಂದ ಸಿ.ಟಿ.ರವಿ

ನಮ್ಮ ಸಂಸ್ಕೃತಿ ನಾಶ ಮಾಡಿದವರು, ನಮ್ಮ ತಾಯಂದಿರ ಶೀಲ ಕೆಡಿಸಲು ಮುಂದಾದವರನ್ನು ಗ್ರೇಟ್‌ ಅಂತ ಸ್ವತಂತ್ರ ಭಾರತ ಇತಿಹಾಸದಲ್ಲಿ ನಾವು ಹೇಳಿಕೊಳ್ಳುವುದು ದೇಶಕ್ಕೇ ಅಪಮಾನ. ದೇಶದಲ್ಲಿ ಸಾಧನೆ ಮಾಡಿದವರು ಯಾರೂ ಇಲ್ಲವೇ? ಆರ್ಯಭಟ ಎಲ್ಲಿಯವರು? ಚಾಣಕ್ಯ, ಅಶೋಕ ಚಕ್ರವರ್ತಿ, ರಾಜರಾಜ ಚೋಳ ಎಲ್ಲಿಯವರು? ನಾವು ಇತಿಹಾಸದಲ್ಲಿ ಹಿಂದೆ ಚೋಳರು ಇಂಡೋನೇಷ್ಯಾ- ಕಾಂಬೋಡಿಯಾದವರೆಗೆ ಭಾರತವನ್ನು ವಿಸ್ತರಿಸಿದ್ದರು ಎಂದು ಕಲಿಸಿದ್ದೇವಾ ಎಂದು ಅವರು ಪ್ರಶ್ನೆಗಳ ಸುರಿಮಳೆಗೈದರು.

click me!