ಶಿಕ್ಷಕರ ನೇಮಕಾತಿ ಅಕ್ರಮ: ಬಿಜೆಪಿ ಮಾಡಿದ ಆರೋಪ ನಮ್ಮ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದ ಮಾಜಿ ಶಿಕ್ಷಣ ಸಚಿವ

By Ramesh B  |  First Published Sep 20, 2022, 2:57 PM IST

 2014-15 ನೇ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದು, ಹಲವರನ್ನು ಬಂಧಿಸಿ ಮಹತ್ವದ ದಾಖಲೆಗಳನ್ನ ಕಲೆಹಾಕುತ್ತಿದೆ. ಇನ್ನು ಈ ಬಗ್ಗೆ ಅಂದಿನ ಶಿಕ್ಷಣ ಸಚಿವ ಸ್ಪಷ್ಟನೆ ಕೊಟ್ಟಿದ್ದಾರೆ.


ಬೆಂಗಳೂರು, (ಸೆಪ್ಟೆಂಬರ್.20): ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 2014-15 ನೇ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮತ್ತಷ್ಟು ಚುರುಕುಗೊಳಿಸಿದೆ.

ಇದರ ಮಧ್ಯೆ ಅಂದಿನ ಶಿಕ್ಷಣ ಸಚಿವರಾಗಿದ್ದ ಕಿಮ್ಮನ್ನೆ ರತ್ನಾಕರ್ ಇಂದು(ಮಂಗಳವಾರ) ಸುದ್ದಿಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.  

Tap to resize

Latest Videos

undefined

ಸಚಿವಾಲಯಕ್ಕಿಂತ ಕೆಳ ಹಂತದಲ್ಲಿ ನೇಮಕಾತಿ ನಡೆದಿರೋದು. ಎಷ್ಟು ಹುದ್ದೆ ಖಾಲಿ ಇದೆ ಎಂದು ಪ್ರಪೋಸಲ್ ಬರುತ್ತೆ, ನಂತರ ಅದು ಆರ್ಥಿಕ ಇಲಾಖೆಗೆ ಹೋಗುತ್ತೆ. ಸೆಲೆಕ್ಷನ್ ಅಥಾರಿಟಿಯಿಂದ ನೇಮಕಾತಿ ಪ್ರಕ್ರಿಯೆ ಶುರುವಾಗುತ್ತೆ. ಈ ನೇಮಕಾತಿಯಲ್ಲಿ ಸಚಿವರ, ಸಿಎಂ ಹಸ್ತಕ್ಷೇಪ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿಕ್ಷಕರ ನೇಮಕಾತಿ ಅಕ್ರಮ ಆರೋಪ; ಶಿಕ್ಷಣ ಸಚಿವರ ತವರು ಜಿಲ್ಲೆಯ 10 ಶಿಕ್ಷಕರು ಸಿಐಡಿ ವಶಕ್ಕೆ

ಕಾಂಗ್ರೆಸ್ ಸರ್ಕಾರದ ಅವಧಿಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಬಂದಿದೆ..ಇದಕ್ಕೆ ನಾನು ಉತ್ತರ ಕೊಡುತೇನೆ. ಯಾಕಂದ್ರೆ ನಾನು ಆಗ ಶಿಕ್ಷಣ ಸಚಿವನಾಗಿದ್ದೆ.ಯಾವುದಲ್ಲಾದ್ರೂ ತೆನಿಖೆ ಮಾಡಲಿ. ಸಿಬಿಐನಿಂದನಾದ್ರೂ ತನಿಖೆ ಮಾಡ್ಲಿನಮ್ಮದೇನು ತಕರಾರಿಲ್ಲ. ಸಿಟ್ಟಿಂಗ್ ಜಡ್ಜ್ ಮೂಲಕ ಈ ಪ್ರಕರಣವನ್ನ ತೆನಿಖೆ ಮಾಡಲಿ ಅಥಾವ ಸಿಬಿಐಗಾದ್ರೂ ನೀಡಲಿ ಎಂದರು

ನಾನು ಈಗಾಗಲೇ ಇಲಾಖೆಯಿಂದ ನಾನು ಒರಿಜನಲ್ ಕಾಪಿ ಕೇಳಿದ್ದೇನೆ. ಕಾಗೇರಿ ಮತ್ತು ನನ್ನ ಅವಧಿಯಲ್ಲಿ ಸೇರಿ ಎರಡು ಬಾರಿ ನೇಮಕಾತಿ ನಡೆದಿದೆ. ಏಪ್ರಿಲ್ 2105 ರಲ್ಲಿ ನನ್ನ ಅವಧಿಯಲ್ಲಿ ನೇಮಕಾತಿ ನಡೆದಿದೆ. ಇದರಲ್ಲಿ ಯಾರೇ ತಪ್ಪು ಮಾಡಿದ್ರೆ ಅವರಿಗೆ ಶಿಕ್ಷೆಯಾಗಬೇಕು. ಬೋಗಸ್ ಸರ್ಟಿಫಿಕೇಟ್ ಕೊಟ್ಟು ಬಂದಿದ್ದರೆ ಅವರಿಗೆ ಶಿಕ್ಷೆಯಾಗಬೇಕು. ಬಿಜೆಪಿ ಮಾಡ್ತಿರೋ ಆರೋಪ ನಮ್ಮ ವ್ಯಾಪ್ತಿಯಲ್ಲಿ ನಡೆದಿರೋದು ಅಲ್ಲ ಎಂದು ಹೇಳಿದರು.

ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿದ್ರೆ ಅವರಿಗೆ ಶಿಕ್ಷೆ ಆಗಬೇಕು.ನಾನು ಯಾವುದೇ ಪ್ರಭಾವ ಬೀರಿಲ್ಲ.  ಬಿಜೆಪಿಯವರು ಆಡಳಿತ ಪಕ್ಷನಾ, ವಿರೋಧ ಪಕ್ಷನಾ ಎಂಬುದನ್ನು ಮರೆತಿದ್ದಾರೆ. ನಾವು ಸರಿಯಾದ ಆಡಳಿತ ನೀಡಿಲ್ಲ ಎಂದು ಜನ ಮನೆಗೆ ಕಳಿಸಿದ್ದಾರೆ. ಬೆಲೆ ಏರಿಕೆ,ರೈತರ ಸಮಸ್ಯೆ ಬಗ್ಗೆ ಸರ್ಕಾರ ಉತ್ತರ ನೀಡಲಿ ಎಂದು ತಿರುಗೇಟು ನೀಡಿದರು.

ಇನ್ನು ಇದೇ ವೇಳೆ ಮತ್ತೆ ನಂದಿತಾ ಕೇಸ್ ಬಗ್ಗೆ ಪ್ರಸ್ತಾಪಿಸಿದ ಕಿಮ್ಮನ್ನೆ ರತ್ನಾಕರ್, ಆತ್ಮಹತ್ಯೆ ಕೇಸ್ ನ ಕ್ರಿಯೇಟ್ ಮಾಡಿ ಕೋಮುಗಲಭೆ ಸೃಷ್ಟಿ ಮಾಡಿದ್ರು. ಆಗ ಆರಗ ಜ್ಞಾನೇಂದ್ರ ಸಿಬಿಐಗೆ ಒಪ್ಪಿಸಬೇಕು ಅಂತ ಪ್ರತಿಭಟನೆ ಮಾಡಿದ್ರು. ಈಗ ಆರಗ ಜ್ಞಾನೇಂದ್ರ ಗೃಹ ಸಚಿವರು. ಈ ಶಿಕ್ಷಕರ ನೇಮಕಾತಿ ಬಗ್ಗೆನೂ ಸಿಬಿಐಗೆ ವಹಿಸಲಿ ನಂದಿತ ಪ್ರಕರಣವನ್ನೂ ಸಿಬಿಐಗೆ ವಹಿಸಲಿ ಎಂದು ತಿಳಿಸಿದರು.

ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ 20 ವರ್ಷ ಹಿಂದೆ ಕ್ಲೋಸ್ ಆಗಿದ್ದ ಕೇಸ್ ಈಗ ಒಪನ್  ಮಾಡಿಲ್ವಾ. ನನ್ನದೇನು ತಕರಾರು ಇಲ್ಲ. ನನಗೆ ದಾಖಲೆ ಸಿಕ್ಕದರೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು, ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತಿದ್ದೆ. ವಿನಯ್ ಕುಲಕರ್ಣಿ ಕೇಸ್  ರಿಓಪನ್ ಮಾಡಲಿಲ್ವಾ. ನಂದಿತ ಕೇಸ್ ನಲ್ಲಿ ಮತ್ತೆ ತೆನಿಖೆ ಮಾಡಿದ್ರೆ ಆರಗ ಜ್ಞಾನೇಂದ್ರನೇ ಅಕ್ಯೂಸ್ ಆಗಿಬಿಡುತ್ತಾನೆ. ಅದು ಆತ್ಮಹತ್ಯೆ ಕೇಸ್ 100% ಇವರು ಸುಮ್ನನೆ ಗಲಾಟೆ ಹಬ್ಬಿಸಿ ಮಾಡಿದ್ರು ಎಂದು ಹೇಳಿದರು.

click me!