ಕರ್ನಾಟಕ Election 2024 Voting ರಾಜ್ಯದಲ್ಲಿ ಸಂಜೆ 5 ಗಂಟೆಯ ವೇಳೆಗೆ ಶೇ 63.90 ರಷ್ಟು ಮತದಾನ

By Santosh NaikFirst Published Apr 26, 2024, 11:56 AM IST
Highlights

Lok Sabha Election Karnataka 2024: ರಾಜ್ಯದಲ್ಲಿ ಸಂಜೆ 5 ಗಂಟೆ  ವೇಳೆಗೆ ಶೇ. 63.90 ರಷ್ಟು ಮತದಾನವಾಗಿದೆ. ಮಂಡ್ಯದಲ್ಲಿ ಗರಿಷ್ಠ ಶೇ 74.87  ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಮತದಾನವಾಗಿದೆ.

ಬೆಂಗಳೂರು (ಏ.26): ರಾಜ್ಯದಲ್ಲಿ ಸಂಜೆ 5 ಗಂಟೆಗೆ ಒಟ್ಟು 63.90% ಮತದಾನವಾಗಿದೆ. 5 ಗಂಟೆಯ ಮತದಾನದಲ್ಲಿ ಟಾಪ್‌  ಜಿಲ್ಲೆಗಳು ಇಂತಿದೆ. ಮಂಡ್ಯ  74.87% , ಉಡುಪಿ ಚಿಕ್ಕಮಗಳೂರು 72.13%, ಹಾಸನ 72.13% ಮತ್ತು ದಕ್ಷಿಣ ಕನ್ನಡ 71.83% ಮತದಾನವಾಗಿದೆ. ಬೆಂಗಳೂರು ಕೇಂದ್ರದಲ್ಲಿ 48.61 ಮತದಾನವಾಗಿದ್ದು, ಅತ್ಯಂತ ಕಡಿಮೆ ದಾಖಲಾಗಿದೆ.

 

 

ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ. 38.23ರಷ್ಟು ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ ಗರಿಷ್ಠ 48.10ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ. 30.10ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ದಕ್ಷಿಣ ಕನ್ನ ಮಾತ್ರವಲ್ಲದೆ, ಉಡುಪಿ ಚಿಕ್ಕಮಗಳೂರು, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮತದಾನದ ಪ್ರಮಾಣ ಶೇ. 40ರಷ್ಟು ದಾಟಿದೆ. ಇನ್ನು ಬೆಂಗಳೂರು ಕೇಂದ್ರ ಮಾತ್ರವಲ್ಲದೆ, ಬೆಂಗಳೂರು ದಕ್ಷಿಣ (31.51), ಉತ್ತರ (ಶೇ. 32.25), ಬೆಂಗಳೂರು ಗ್ರಾಮಾಂತರ ಶೇ. 36.09 ಅಲ್ಲಿ ಅತೀ ಕಡಿಮೆ ಪ್ರಮಾಣದ ಮತದಾನವಾಗಿದೆ.

ಬೆಳಗ್ಗೆ 11 ಗಂಟೆಯ ವೇಳೆ ಶೇ. 21.34ರಷ್ಟು ಮತದಾನವಾಗಿತ್ತು. ಬೆಂಗಳೂರಿನಲ್ಲಿ ಶೇಕಡವಾರು ಮತದಾನದ ಪ್ರಮಾಣದಲ್ಲಿ ಈ ಬಾರಿಯೂ ಇಳಿಕೆಯಾಗಿದೆ. ಬೆಳಗ್ಗೆ 11 ಗಂಟೆಯ ವರೆಗೆ ಬೆಂಗಳೂರು ಕೇಂದ್ರದಲ್ಲಿ ಶೇ. 19.21, ಬೆಂಗಳೂರು ದಕ್ಷಿಣದಲ್ಲಿ ಶೇ. 19.81 ಹಾಗೂ ಬೆಂಗಳೂರು ಉತ್ತರದಲ್ಲಿ ಶೇ. 19.78 ರಷ್ಟು ಮತದಾನವಾಗಿದೆ. ಇಡೀ ರಾಜ್ಯದಲ್ಲಿ ದಕ್ಷಿಣ ಕನ್ನಡದಲ್ಲಿ ಗರಿಷ್ಠ 30.98 ಅಂದರೆ ಶೇ. 31ರಷ್ಟು ಮತದಾನವಾಗಿದೆ. ಸಿನಿಮಾ ತಾರೆಯರು, ಕ್ರೀಡಾ ತಾರೆಯರು, ರಾಜಕಾರಣಿಗಳು, ಸಮಾನ್ಯ ನಾಗರೀಕರು ಮತದಾನ ಮಾಡಿದ ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಜ್ಯಾದ್ಯಂತ ಶೇ. 9.21ರಷ್ಟು ಮತದಾನ: ಬೆಳಗ್ಗೆ 9 ಗಂಟೆಯ ವೇಳೆಗೆ ಶೇ. 9.21ರಷ್ಟು ಮತದಾನವಾಗಿತ್ತು.ದಕ್ಷಿಣ ಕನ್ನಡದಲ್ಲಿ ಗರಿಷ್ಠ ಶೇ. 14.33ರಷ್ಟು ಮತದಾನವಾಗಿದೆ. ಚಿತ್ರದುರ್ಗ,ಮಂಡ್ಯ ಹಾಗೂ ಚಾಮರಾಜನಗರದಲ್ಲಿ ಅತೀ ಕಡಿಮೆ ಮತದಾನವಾಗಿತ್ತು.

 

ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆ.ಕಡಿಮೆ ವೋಟಿಂಗ್ ...

LIVE: ಹಾಸನ Elections 2024: ಏಕಾಂಗಿಯಾಗಿ ಬಂದು ಮತ ಚಲಾಯಿಸಿದ ಪ್ರಜ್ವಲ್ ರೇವಣ್ಣ

click me!