ಬುಲೆಟ್‌ ಪ್ರೂಫ್‌ ವಾಹನದಲ್ಲಿ ಪ್ರಧಾನಿ ಮೋದಿ ರೋಡ್‌ ಶೋ ಮ್ಯಾಜಿಕ್: ಡಿವಿಎಸ್‌, ಚಲವಾದಿ ಸಾಥ್‌

By Sathish Kumar KH  |  First Published Apr 29, 2023, 6:45 PM IST

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನರೇಂದ್ರ ಮೋದಿ ಅವರ ರೋಡ್‌ ಶೋ ಸುಂಕದಕಟ್ಟೆ ನೈಸ್‌ ರೋಡ್‌ ಜಂಕ್ಷನ್‌ನಿಂದ ಆರಂಭವಾಗಿದೆ.


ಬೆಂಗಳೂರು (ಏ.29): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನರೇಂದ್ರ ಮೋದಿ ಅವರ ರೋಡ್‌ ಶೋ ಸುಂಕದಕಟ್ಟೆ ನೈಸ್‌ ರೋಡ್‌ ಜಂಕ್ಷನ್‌ನಿಂದ ಆರಂಭವಾಗಿದೆ. ಬುಲೆಟ್‌ ಪ್ರೂಫ್‌ ವಾಹನದಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಚಲವಾದಿ ನಾರಾಯಣ ಸಾಥ್‌ ನೀಡಿದರು.

ಬೆಂಗಳೂರಿನ ಮಾಗಡಿ ರಸ್ತೆಯ ನೈಸ್‌ ರೋಡ್‌ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ (5.3 ಕಿಮೀ) ರೋಡ್‌ ಶೋ ನಡೆಸಲಿದ್ದಾರೆ. ಈ ವೇಳೆ ಒಂದು ಬದಿಯ ರಸ್ತೆಯಲ್ಲಿ ಮಾತ್ರ ನರೇಂದ್ರ ಮೋದಿ ಅವರ ರೋಡ್‌ ಶೋಗೆ ಜನರು ಕೇಂದ್ರೀಕರಣಗೊಂಡಿದ್ದರು. ಕರ್ನಾಟಕದ ಪ್ರಸಿದ್ಧ ಜಾನಪದ ಕಲಾತಂಡಗಳಾದ ಡೊಳ್ಳು ಕುಣಿತ, ಪಟ ಕುಣಿತ, ಹುಲಿ ವೇಷ, ಮದ್ದಳೆ ಸೇರಿದಂತೆ ಹಲವು ತಮಡಗಳಿಂದ ನೃತ್ಯ ವಾದ್ಯತಂಡಗಳು ಭಾಗವಹಿಸಿದ್ದವು. ಇನ್ನು ತಮ್ಮ ನೆಚ್ಚಿನ ಪ್ರಧಾನಿಯನ್ನು ನೋಡಿದ ಬೆಂಗಳೂರಿನ ಮತದಾರರಿ ಕರಾಡತನದ ಮೂಲಕ ಹೂವಿನ ಸುರಿಮಳೆ ಸುರಿದು ಹರ್ಷೋದ್ಘಾರ ವ್ಯಕ್ತಪಡಿಸಿದರು.

Tap to resize

Latest Videos

Bengaluru: ಮದುಮಗನನ್ನು ತಾಳಿ ಕಟ್ಟೋಕೆ ಹೋಗಲು ಬಿಡದ ಪೊಲೀಸರು! 

ಕೇಸರಿ ಟೊಪ್ಪಿಗೆ ತೊಟ್ಟು ಕೈ ಬೀಸಿದ ಮೋದಿ: ಸಂಜೆ ಬೆಳಕು ಇದ್ದ ವೇಳೆಯೇ ನೈಸ್‌ ರೋಡ್‌ ಜಂಕ್ಷನ್‌ನಲ್ಲಿ ಆರಂಭವಾದ ರೋಡ್‌ ಶೋನಲ್ಲಿ ಪ್ರಧಾನಿ ಮೋದಿ ಕೇಸರಿ ಟೊಪ್ಪಿಗೆಯನ್ನು ಧರಿಸಿ ಸಾರ್ವಜನಿಕರತ್ತ ಕೈಬೀಸಿದರು. ಎಂದಿನಂತೆ ಅವರ ನಗು ಕೂಡ ಡದ್ದು ಕಾಣುತ್ತಿತ್ತು. ಜನರು ಹೂವಿನ ಸುರಿಮಳೆ ಸುರಿಸುತ್ತಿದ್ದರಿಂದ ಹೂವುಗಳು ಕಣ್ಣಿಗೆ ಬೀಳುತ್ತಿದ್ದವು. ಇದರಿಂದ ತಮ್ಮ ಜೇಬಿನಲ್ಲಿದ್ದ ಕನ್ನಡಕವನ್ನು ಧರಿಸಿಕೊಂಡು ಪುನಃ ಮುಗುಳ್ನಗುತ್ತಾ ಜನರತ್ತ ಕೈಬೀಸಲು ಆರಂಭಿಸಿದರು. ಮತದಾರರಿಗೆ ಕೈ ಮುಗಿದು, ಬಿಜೆಪಿಗೆ ಬಹುಮತ ಕೊಡಲು ಮನವಿ ಮಾಡುತ್ತಿದ್ದರು. 

9 ವಿಧಾನಸಭಾ ಕ್ಷೇತ್ರದ ಮತದಾರರು ಭಾಗಿ:  ಇನ್ನು ನರೇಂದ್ರ ಮೋದಿ ಅವರ ರೋಡ್‌ ಶೋ ಮೂಲಕ ಒಟ್ಟು 9 ವಿಧಾನಸಭಾ ಕ್ಷೇತ್ರದ ಮತದಾರರನ್ನು ಸೆಳೆಯುವ ತಂತ್ರವನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಆದರೆ, ಪಶ್ಚಿಮ ಬೆಂಗಳೂರಿನ ಕ್ಷೇತ್ರಗಳಾದ ಯಶವಂತಪುರ, ರಾಜರಾಜೇಶ್ವರಿನಗರ, ಮಹಾಲಕ್ಷ್ಮೀ ಲೇಔಟ್‌, ವಿಜಯ ನಗರ, ಬ್ಯಾಟರಾಯನಪುರ, ಗೋವಿಂದರಾಜನಗರ, ರಾಜಾಜಿನಗರ, ದಾಸರಹಳ್ಳಿ, ಮಲ್ಲೇಶ್ವರ ಸೇರಿದಂತೆ ಒಟ್ಟು ಒಂಭತ್ತು ಕ್ಷೇತ್ರದ ಮತದಾರರನ್ನು ಇಲ್ಲಿ ಸೇರಿಸಲಾಗಿದೆ. ಈ ಮೂಲಕ ಮತದಾರರನ್ನು ಸೆಳೆಯುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಸರತ್ತು ಮಾಡಲಾಗುತ್ತಿದೆ.

ಬೆಂಗಳೂರು: ಮಾಗಡಿ ರೋಡ್‌ ಮದುಮಗ ಆಯ್ತು! ಸುಂಕದಕಟ್ಟೆ ಮದುಮಗಳಿಗೆ ರಸ್ತೆ ಬಿಡದ ಪೊಲೀಸರು

ಜೈ ಮೋದಿ, ಜೈ ಶ್ರೀರಾಂ ಘೋಷಣೆ: ಪ್ರಧಾನಿ ಮೋದಿ ರೋಡ್‌ ಶೋ ಆರಂಭವಾಗುತ್ತಿದ್ದಂತೆ ಸಾರ್ವಜನಿಕರು ಜೈ ಮೋದಿ, ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು. ನಂತರ, ಎಲ್ಲೆಡೆ ಮೋದಿ, ಮೋದಿ, ಮೋದಿ.... ಎನ್ನುವುದೇ ಹರ್ಷೋದ್ಘಾರ ಕೇಳಿ ಬರುತ್ತಿತ್ತು. ಇನ್ನು ಈ ಹಿಂದೆ ಹುಬ್ಬಳ್ಳಿ ಮತ್ತು ಬೆಳಗಾವಿ ರೋಡ್‌ ಶೋನಲ್ಲಿ ಸಾರ್ವಜನಿಕರಿಗೆ ಹಾಕಲಾಗಿದ್ದ ಬ್ಯಾರಿಕೇಡ್‌ ದಾಟಿಕೊಂಡು ಮೋದಿ ವಾನದತ್ತ ಆಗಮಿಸಿದ ಘಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮೋದಿ ರೋಡ್‌ ಶೋ ರ್ಯಾಲಿಯಲ್ಲಿ ಯಾರೊಬ್ಬರೂ ಬ್ಯಾರಿಕೇಡ್‌ ದಾಟಿ ಒಳ ಬರದಂತೆ ಹೆಚ್ಚಿನ ನಿಗಾವಹಿಸಲಾಗಿತ್ತು. ಸುಮಾರು 500 ಮೀಟರ್‌ಗೆ ಒಂದು ಕೇಂದ್ರ ಸಶಸ್ತ್ರ ಮೀಸಲು ಪಡೆಯ ಪೊಲೀಸರ ಕಣ್ಗಾವಲು ಪಡೆಯನ್ನು ನಿಯೋಜನೆ ಮಾಡಲಾಗಿತ್ತು.

click me!