ಪ್ರಧಾನಿ ಮೋದಿ ವಿಷ ಸರ್ಪವಲ್ಲ, ಕಾಳಿಂಗ ಸರ್ಪ! ಸಚಿವ ಸುಧಾಕರ್‌

By Kannadaprabha News  |  First Published Apr 29, 2023, 6:18 PM IST

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಷ ಸರ್ಪ ಅಲ್ಲ.  ದೇಶದ ಖಜಾನೆ ಕಾಯುವ ಕಾಳಿಂಗ ಸರ್ಪವಾಗಿದ್ದಾರೆ  ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದಾರೆ.


ಕನ್ನಡ ಪ್ರಭ ವಾರ್ತೆ ಚಿಕ್ಕಬಳ್ಳಾಪುರ (ಏ.29): ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಷ ಸರ್ಪ ಅಲ್ಲ.  ದೇಶದ ಖಜಾನೆ ಕಾಯುವ ಕಾಳಿಂಗ ಸರ್ಪವಾಗಿದ್ದಾರೆ  ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಶನಿವಾರ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಜರಬಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶನಿವಾರ ಕೈಗೊಂಡಿದ್ದ ಚುನಾವಣಾ  ಪ್ರಚಾರದ ವೇಳೆ ಮಾತನಾಡಿದ ಅವರು, ರಾಹುಲ್ ಗಾಂಧಿ ಚೌಕಿದಾರ್ ಚೋರ್ ಅಂದಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ ಅವರು ವಿಷ ಸರ್ಪ ಎಂದಿದ್ದಾರೆ. ಆದರೆ ನರೇಂದ್ರ ಮೋದಿ ವಿಷ ಸರ್ಪ ಅಲ್ಲ, ದೇಶದ 140 ಕೋಟಿ ಜನರ ಖಜಾನೆ ರಕ್ಷಣೆ ಮಾಡುವ ಕಾಳಿಂಗ ಸರ್ಪವಾಗಿದ್ದಾರೆ. ಪುರಾತನ ದೇವಸ್ಥಾನಗಳ ಖಜಾನೆಗಳನ್ನ ರಕ್ಷಣೆ ಮಾಡುವುದು ಕಾಳಿಂಗ ಸರ್ಪಗಳು. ಈಗ ದೇಶದ 140 ಕೋಟಿ ಜನರ ತೆರಿಗೆಯ ಹಣ ಖಜಾನೆಯನ್ನು ಕಾಪಾಡುತ್ತಿರುವುದು ನರೇಂದ್ರ ಮೋದಿ ಎಂಬ ಕಾಳಿಂಗ ಸರ್ಪವೇ ಹೊರತು, ವಿಷ ಸರ್ಪ ಅಲ್ಲ. 130 ಕೋಟಿ ಜನರಿಗೆ ಕೊರೊನಾ ಲಸಿಕೆ   ಎಂಬ ಅಮೃತ ಕೊಟ್ಟ ಅವರನ್ನು ವಿಷ ಸರ್ಪ ಎನ್ನುತ್ತೀರಾ ಎಂದು ಕುಟುಕಿದರು.

Tap to resize

Latest Videos

undefined

ಬೆಂಗಳೂರು: ಮಾಗಡಿ ರೋಡ್‌ ಮದುಮಗ ಆಯ್ತು! ಸುಂಕದಕಟ್ಟೆ ಮದುಮಗಳಿಗೆ ರಸ್ತೆ ಬಿಡದ ಪೊಲೀಸರು

ದೇಶದೆಲ್ಲೆಡೆ ಚುನಾವಣೆಗಳಲ್ಲಿ‌ ಸೋತು ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಅವರನ್ನು 'ಚೋರ್', 'ಮೌತ್ ಕಿ ಸೌದಾಗರ್', 'ರಾವಣ', 'ನೀಚ ವ್ಯಕ್ತಿ' ಎಂದೆಲ್ಲಾ ನಿಂದಿಸಿದ್ದ ಕಾಂಗ್ರೆಸ್ ನಾಯಕರು ಈಗ 'ವಿಷಸರ್ಪ' ಎಂದು ನಿಂದಿಸುವ ಮೂಲಕ ಮತ್ತೊಮ್ಮೆ ಹತಾಶೆ ಹೊರಹಾಕಿದ್ದಾರೆ. ನಿಂದನೆ, ಹತಾಶೆಗಳಿಂದ ಜನರ ಆಶೀರ್ವಾದ ಪಡೆಯಲು ಸಾಧ್ಯವೆ? ಕಾಂಗ್ರೆಸ್‍ನವರ ವಿಷವನ್ನು ಕಂಠದಲ್ಲಿ ಇಟ್ಟುಕೊಂಡಿರುವ ನಂಜುಡೇಶ್ವರ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.

ವಿಶ್ವನಾಯಕನಿಗೆ ವಿಷಸರ್ಪ ಅನ್ನೋದಕ್ಕೆ ನಾಚಿಕೆ ಆಗೊಲ್ವಾ?: ಕೇಂದ್ರ ಸಚಿವ ಎ ನಾರಯಣಸ್ವಾಮಿ ಮಾತನಾಡಿ, ವಿಶ್ವನಾಯಕನಿಗೆ ವಿಷಸರ್ಪ ಎನ್ನುತ್ತಿರಿ ನಿಮಗೆ ನಾಚಿಕೆ ಆಗೋದಿಲ್ಲವಾ? ಅಭಿವೃದ್ದಿ ಪರ ಹಾಗೂ ನೈತಿಕತೆಯಿಂದ ಮಾತನಾಡಿ ಎಂದು ಹೇಳಿದ್ದಾರೆ. ರಮೇಶಕುಮಾರ ಕಾಂಗ್ರೆಸ್ ಮೂರು ತಲೆಮಾರು ತಿನ್ನೋವಷ್ಟು ಗಳಿಸಿದ್ದೇವೆ ಎನ್ನುತ್ತಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಕ್ಕಾಗಿ ನರೇಂದ್ರ ಮೋದಿ ಮತಯಾಚನೆ ಮಾಡುತ್ತಿದ್ದಾರೆ. ರಾಜಸ್ಥಾನದಲ್ಲಿ ಗ್ಯಾರಂಟಿ ನೀಡಿ ಯಾವುದೇ ಗ್ಯಾರಂಟಿ ಆಶ್ವಾಸನೆ ಪೂರೈಸಿಲ್ಲ. 65 ವರ್ಷ ಆಡಳಿತ ನಡೆಸಿದ ನೀವು ಈಗ ಗ್ಯಾರಂಟಿ ಕಾರ್ಡು ಕೊಡುತ್ತಾರೆ. 65 ವರ್ಷ ಏನು ಮಾಡಿದಿರಿ. 75 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಮಹಿಳೆಯರಿಗೆ ಗೌರವ ನೀಡುವಂಥ ಯೋಜನೆ ತರಲಿಲ್ಲ. ಪಂಚಮಸಾಲಿಗಳು ಹಾಗು ವಕ್ಕಲಿಗರಿಗೆ ನೀಡಿದ ಮೀಸಲಾತಿ ತೆಗೆಯುತ್ತಿರಿ ಎನ್ನುತ್ತಿರಿ. ಪರಿಶಿಷ್ಟರಿಗೆ 7 ರಷ್ಟು ನೀಡಿದ ಮೀಸಲಾತಿಯನ್ನು ನೀವು ತೆಗೆದು ಹಾಕುವ ಧೈರ್ಯವಿದೆಯೇ ಎಂದು ಕಿಡಿಕಾರಿದರು.

ರಾಹುಲ್‌ಗಾಂಧಿ ಸುಳ್ಳು ಹೇಳ್ತಾರೆ:  ಕೊಪ್ಪಳ ಜಿಲ್ಲೆಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ದೇಶದಲ್ಲಿ ರಾಹುಲ್ ಗಾಂಧಿ ಸುಳ್ಳು ಹೇಳುತ್ತಾರೆ. ಅದಕ್ಕೆ ಕಾರ್ಯಕರ್ತರು ಹೌದು ಹೌದು ಎನ್ನುತ್ತಾರೆ. ಕಾಂಗ್ರೆಸ್ ಗ್ಯಾರಂಟಿ, ವಾರಂಟಿ ಏನು ಇಲ್ಲ.  ಕಾಂಗ್ರೆಸ್ ಶೈತ್ಯಾಗಾರದಲ್ಲಿದೆ. ಈಗ ಸಿದ್ದರಾಮಯ್ಯರನ್ನು ಕೋಲ್ಡ್ ಸ್ಟೋರೇಜಿನಲ್ಲಿಟ್ಟಿದ್ದಾರೆ. ನಿಮ್ಮ ಮುಖ್ಯಮಂತ್ರಿ ಶಿವಕುಮಾರ, ಸಿದ್ದರಾಮಯ್ಯ ಹೇಳಬೇಕು. ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರಬೇಕು. ಸೋನಿಯಾ ಗಾಂಧಿಯವರ ರಿಮೋಟ್ ಕಂಟ್ರೋಲ್ ನಲ್ಲಿ ರಾಜ್ಯ ಸರ್ಕಾರ ನಡೆಯುತ್ತಿತ್ತು. ಮುಂದೆ ಕಾಂಗ್ರೆಸ್ ಸರ್ಕಾರ ಬಂದರೆ ಕೇಂದ್ರದಿಂದ ಕಾಂಗ್ರೆಸ್ ಅನುದಾನ ನೀಡುವುದಿಲ್ಲ. ಶ್ರೀ ಆಂಜನೇಯನ ಜನ್ಮಸ್ಥಳವಾದ ಇಲ್ಲಿ ಕಾಂಗ್ರೆಸ್‌ಗೆ ಒಂದೂ ವೋಟು ಬರಬಾರದು ಎಂದು ಹೇಳಿದರು.

ನನ್ ಫ್ರೆಂಡ್ ಡಿಕೆಶಿ ಸಿಎಂ ಆಗೋದು ಬೇಡ್ವಾ?: ಕಾಂಗ್ರೆಸ್ ಗೆ ಕಾಮಿಡಿ ಮಾಡಿದ ಜಗ್ಗೇಶ್

ಕಳಸ ಬಂಡೂರಿಗೆ ಬಿಜೆಪಿ ಸರ್ಕಾರ ಬರಬೇಕಾಯ್ತು: ಈಗಾಗಲೇ ರಾಹುಲ್ ಗಾಂಧಿ ಆಮೇಠಿ ಸೋತರು. ಆಮೇಠಿಯಲ್ಲಿ ಏನು ಅಭಿವೃದ್ದಿ ಮಾಡಿರಲಿಲ್ಲ. ಆದರೆ  ನಾನು ಆಯ್ಕೆಯಾದ ನಂತರ ಅಭಿವೃದ್ದಿ ಪಡಿಸಿದ್ದೇನೆ. ಜನರು ಅಭಿವೃದ್ಧಿ ಹಾಗೂ ವಿಕಾಸಕ್ಕಾಗಿ ಮತ ಹಾಕಬೇಕು. ಬಿಜೆಪಿಯಿಂದ ಅಭಿವೃದ್ದಿ ಆಗುತ್ತಿದ್ದರೆ, ಕಾಂಗ್ರೆಸ್‌ನಿಂದ ಹಿನ್ನಡೆಯಾಗುತ್ತದೆ. ಕರ್ನಾಟಕ ಸರ್ಕಾರ ರೈತರಿಗೆ ಅನುಕೂಲವಾಗುವಂಥ ಕಾರ್ಯಕ್ರಮ ನೀಡುತ್ತಿದೆ ಎಂದು ಜನ ಹೇಳುತ್ತಾರೆ. ಕಾಂಗ್ರೆಸ್ ನೀರಾವರಿ, ರೈತರಿಗೆ ಅನುಕೂಲ ನೀಡಿಲ್ಲ. ಕಾಂಗ್ರೆಸ್ ಏನು ಕೊಡದ ಯೋಜನೆ ತಂದಿದ್ದರು. ಕಾಂಗ್ರೆಸ್ ಸೋತ ನಂತರ ಕಲ್ಯಾಣ ಕರ್ನಾಟಕ ಹಣ ನೀಡುತ್ತೇನೆ ಹೇಳುತ್ತಾರೆ. ಆದರೆ, ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ನೀಡಿದೆ. ಕಳಸ ಬಂಡೂರಿ ಪೂರ್ಣಗೊಳಿಸಲು ಬಿಜೆಪಿ ಬರಬೇಕಾಯಿತು. 1960 ಭದ್ರ ಮೇಲ್ದಂಡೆ ಯೋಜನೆ ರೂಪಿಸಿದ್ದು, ಆದರೆ ಪೂರ್ಣಗೊಳಿಸಿದ್ದು ನರೇಂದ್ರ ಮೋದಿ ಎಂದು ಹೇಳಿದರು.

click me!