‘ಅಸೆಂಬ್ಲಿ ಚುನಾವಣೆಗೆ ಎರಡನೇ ಪಟ್ಟಿಬಿಡುಗಡೆಯಾಗಿದ್ದು, ಇನ್ನೂ 12 ಮಂದಿ ಅಭ್ಯರ್ಥಿಗಳ ಪಟ್ಟಿಬಾಕಿಯುಳಿದಿದೆ. ಕಾಂಗ್ರೆಸ್‌ನವರಿಗೆ 60- 65 ಕ್ಷೇತ್ರಗಳಿಗೆ ಟಿಕೆಟ್‌ಗೆ ಅಭ್ಯರ್ಥಿಗಳು ಸಿಕ್ಕಿಲ್ಲ, ಅದಕ್ಕೆ 160 ಸೀಟು ಘೋಷಣೆ ಮಾಡಿ ನಿಲ್ಲಿಸಿದ್ದಾರೆ. ಅವರದ್ದು ಆರಂಭ ಶೂರತ್ವ ಮಾತ್ರ, ಅವರಲ್ಲಿ ಸಮರ್ಥ ಅಭ್ಯರ್ಥಿ ಇಲ್ಲ, ಈಗ ಅಭ್ಯರ್ಥಿ ಆಮದು ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಇದ್ದಾರೆ. ಅವರು ಅಧಿಕಾರಕ್ಕೆ ಬರುವುದಿಲ್ಲ.’
ಮಂಗಳೂರು (ಏ.14) : ‘ಅಸೆಂಬ್ಲಿ ಚುನಾವಣೆಗೆ ಎರಡನೇ ಪಟ್ಟಿಬಿಡುಗಡೆಯಾಗಿದ್ದು, ಇನ್ನೂ 12 ಮಂದಿ ಅಭ್ಯರ್ಥಿಗಳ ಪಟ್ಟಿಬಾಕಿಯುಳಿದಿದೆ. ಕಾಂಗ್ರೆಸ್‌ನವರಿಗೆ 60- 65 ಕ್ಷೇತ್ರಗಳಿಗೆ ಟಿಕೆಟ್‌ಗೆ ಅಭ್ಯರ್ಥಿಗಳು ಸಿಕ್ಕಿಲ್ಲ, ಅದಕ್ಕೆ 160 ಸೀಟು ಘೋಷಣೆ ಮಾಡಿ ನಿಲ್ಲಿಸಿದ್ದಾರೆ. ಅವರದ್ದು ಆರಂಭ ಶೂರತ್ವ ಮಾತ್ರ, ಅವರಲ್ಲಿ ಸಮರ್ಥ ಅಭ್ಯರ್ಥಿ ಇಲ್ಲ, ಈಗ ಅಭ್ಯರ್ಥಿ ಆಮದು ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಇದ್ದಾರೆ. ಅವರು ಅಧಿಕಾರಕ್ಕೆ ಬರುವುದಿಲ್ಲ.’
ಹೀಗೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಕಾಂಗ್ರೆಸ್ ನಡೆಯನ್ನು ಕುಟುಕಿದ್ದಾರೆ.
ಎರಡು ದಿನಗಳ ದ.ಕ. ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ಮಂಗಳೂರಿಗೆ ಆಗಮಿಸಿದ ಅವರು ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಸುದ್ದಿಗಾರರಲ್ಲಿ ಮಾತನಾಡಿದರು.
ನೆಹರೂ ಒಲೇಕಾರ್ ಯಾವ ಆರೋಪ ಬೇಕಾದರೂ ಮಾಡಲಿ, 1500 ಕೋಟಿ ರು.ಅಲ್ಲ, ಯಾವುದೇ ಆರೋಪ ಇದ್ದರೂ ದಾಖಲೆ ಸಮೇತ ಮಾಡಲಿ. ಹೇಳಿಕೆಗಳಿಂದ ಹಗರಣ ಆಗುವುದಿಲ್ಲ, ಬೇಕಾದರೆ ದಾಖಲೆ ಸಹಿತ ಆರೋಪ ಮಾಡಲಿ, ಸತ್ಯಾಸತ್ಯತೆ ಹೊರಬರಲಿ ಎಂದರು.
ಟೆಂಪಲ್ ರನ್ ಮುಗಿಸಿ ಬೆಂಗಳೂರಿಗೆ ಬೊಮ್ಮಾಯಿ ವಾಪಸ್, ಏ.15ಕ್ಕೆ ನಾಮಪತ್ರ ಸಲ್ಲಿಕೆ!
ಸ್ಪರ್ಧೆಗೆ ಅವಕಾಶ ಸಿಗದವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಇವುಗಳನ್ನೆಲ್ಲ ಪಕ್ಷ ಹಿರಿಯರು ಮಾತನಾಡಿ ಸರಿಪಡಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೆಲವು ಕಡೆ ಅಪೇಕ್ಷಿತರು, ಆಕಾಂಕ್ಷಿಗಳು, ಎಂಎಲ್‌ಸಿಗಳು ಟಿಕೆಟ್ ಸಿಕ್ಕಿಲ್ಲ ಎಂದು ರಾಜಿನಾಮೆ ಕೊಟ್ಟಿದ್ದಾರೆ. ಬಹುತೇಕ ಕಡೆ ಭಿನ್ನಮತ ಶಮನ ಆಗಲಿದೆ. ಈ ಬಗ್ಗೆ ಹಿರಿಯರು ಅಂತಹವರ ಜತೆ ಮಾತನಾಡುತ್ತಿದ್ದಾರೆ. ಹಿರಿಯರ ಜೊತೆಗೂ ನಾನು ಮತ್ತು ಹೈಕಮಾಂಡ್ ಮಾತನಾಡುತ್ತಿದ್ದೇವೆ. ಈ ಭಿನ್ನಮತ ಬಗೆಹರಿಯುವ ವಿಶ್ವಾಸ ಇದೆ ಎಂದರು.
ಸವದಿಗೆ ಈ ಪಾರ್ಟಿಲಿ ಒಳ್ಳೆ ಭವಿಷ್ಯವಿದೆ: ಟಿಕೆಟ್ ವಂಚಿತಗೊಂಡ ಲಕ್ಷ್ಮಣ ಸವದಿ ಹಿರಿಯರಿದ್ದಾರೆ. ಅವರಿಗೆ ಭಾವನೆ ಇದೆ, ಸುದೀರ್ಘ ರಾಜಕೀಯ ಜೀವನದಲ್ಲಿ ಇದ್ದಾರೆ. ಜೀವನದಲ್ಲಿ ಇಂತಹ ಘಟನೆಗಳು ಬಂದೇ ಬರುತ್ತವೆ. ಬಹಳ ನೋವಾಗುತ್ತದೆ, ಆದರೆ ದುಡುಕುವ ಅವಶ್ಯಕತೆ ಇಲ್ಲ. ಸ್ವಲ್ಪ ಸಂಯಮದಿಂದ ಇದ್ದು ನಿರ್ಧಾರಕ್ಕೆ ಬರಬೇಕು. ಅವರಿಗೆ ಈ ಪಾರ್ಟಿಯಲ್ಲಿ ಒಳ್ಳೆಯ ಭವಿಷ್ಯ ಇದೆ. ಅವರ ಕ್ಷೇತ್ರದ ಜನರ ವಿಶ್ವಾಸವನ್ನು ಅವರು ಉಳಿಸಿಕೊಳ್ಳಬೇಕು. ಆ ಕಡೆಯಿಂದಲೂ ಅವರಿಗೆ ಒತ್ತಡ ಇದೆ, ಸಮಯ ಬೇಕು. ಆದಷ್ಟುಬೇಗ ಅವರ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ ಎಂದು ಕಟೀಲು ದೇವಸ್ಥಾನ ಭೇಟಿ ವೇಳೆಯೂ ಸಿಎಂ ಬೊಮ್ಮಾಯಿ ಹೇಳಿದರು.
ರಾಜಕಾರಣದಲ್ಲಿ ಪಕ್ಷ ಬದಲಿಸುವುದು ಸಾಮಾನ್ಯ, ಅಂಥದ್ದು ನಡೆಯುತ್ತಲೇ ಇರುತ್ತದೆ. ಬಂಡಾಯ ಸರಿಪಡಿಸುತ್ತಾ ಇದ್ದೇವೆ. ಕಾರ್ಯಕರ್ತರು ಮತ್ತು ಪಕ್ಷ ಗಟ್ಟಿಇರುವುದರಿಂದ ಪಕ್ಷಕ್ಕೆ ಏನೂ ತೊಂದರೆ ಆಗದು ಎಂದರು.
2ನೇ ದಿನವೂ ಸಿಎಂ ಟೆಂಪಲ್ ರನ್
ದ.ಕ. ಜಿಲ್ಲೆಗೆ ಬುಧವಾರ ಆಗಮಿಸಿ ಟೆಂಪಲ್ ರನ್ ಕೈಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ದಂಪತಿ ಗುರುವಾರವೂ ದೇವಸ್ಥಾನಗಳಿಗೆ ತೆರಳಿದ್ದಾರೆ.
ಬುಧವಾರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ(Kukke subrahmanya temple)ಗಳಿಗೆ ತೆರಳಿ ರಾತ್ರಿ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದ ಸಿಎಂ ಬೊಮ್ಮಾಯಿ ಅವರು ಗುರುವಾರ ಬೆಳಗ್ಗೆ ಪತ್ನಿ ಜತೆ ಹೆಲಿಕಾಪ್ಟರ್‌ನಲ್ಲಿ ಕೊಲ್ಲೂರಿಗೆ ತೆರಳಿದರು. ಕೊಲ್ಲೂರಿನಲ್ಲಿ ವಿಶೇಷ ಸೇವೆ ಸಲ್ಲಿಸಿದ ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್‌ಗೆ ಅಗಮಿಸಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಕಟೀಲಿಗೆ ತೆರಳಿದರು. ಕಟೀಲಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಏಳಿಗೆಗೆ ಪ್ರಾರ್ಥಿಸಿದರು. ದೇವಳದ ವತಿಯಿಂದ ಮಲ್ಲಿಗೆ ಹಾರ, ಶಾಲು ಹಾಕಿ ಸಿಎಂ ದಂಪತಿಯನ್ನು ಗೌರವಿಸಲಾಯಿತು. ಬಳಿಕ ಸಿಎಂ ದಂಪತಿ ದೇವಸ್ಥಾನದಲ್ಲೇ ಪ್ರಸಾದ ಭೋಜನ ಸ್ವೀಕರಿಸಿದರು. ಈ ವೇಳೆ ಮೂಡುಬಿದಿರೆ ಕ್ಷೇತ್ರದ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಇದ್ದರು.
ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್!
ಅಲ್ಲಿಂದ ಸಿಎಂ ಬೊಮ್ಮಾಯಿ ದಂಪತಿ ಉಳ್ಳಾಲ ಸಮೀಪದ ಸೋಮೇಶ್ವರ ಶ್ರೀಸೋಮನಾಥ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಶ್ರೀದೇವರ ದರ್ಶನ ಪಡೆದರು. ಅಲ್ಲಿ ಸೋಮೇಶ್ವರ ಬೀಚ್ ವೀಕ್ಷಿಸಿ ವಾಪಸ್ ಮಂಗಳೂರಿಗೆ ಹಿಂದಿರುಗಿದರು. ಈ ಸಂದರ್ಭ ಅಭ್ಯರ್ಥಿ ಸತೀಶ್ ಕುಂಪಲ ಇದ್ದರು.