ಬಿಜೆಪಿ, ವ್ಯಕ್ತಿಗಿಂತ ಸಿದ್ಧಾಂತಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾರ್ಕಳ (ಏ.14) : ಬಿಜೆಪಿ, ವ್ಯಕ್ತಿಗಿಂತ ಸಿದ್ಧಾಂತಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಪ್ರಜಾಪ್ರಭುತ್ವ ಮಾದರಿಯಲ್ಲಿ ಅಭ್ಯರ್ಥಿ ಆಯ್ಕೆಯನ್ನು ಬಿಜೆಪಿ ಪಕ್ಷದ ಹೈಕಮಾಂಡ್ ಮಾಡಿದೆ. ಕಳೆದ ಬಾರಿ ಚುನಾವಣೆಯಲ್ಲಿ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಹರೀಶ್ ಪೂಂಜರಿಗೆ ಟಿಕೆಟ್ ನೀಡಲಾಗಿದ್ದು, ಅದರಲ್ಲಿ ಯಶಸ್ಸು ಕಂಡಿದೆ. ಈ ಬಾರಿಯೂ ಹೊಸ ಹೊಸ ಪ್ರಯೋಗಗಳು ನಡೆದಿದ್ದು ಯಶಸ್ವಿ ಕಾಣಲಿದೆ. ಒಂದು ಕುಟುಂಬಕ್ಕೆ ಜೋತು ಬೀಳದೆ, ಕಾರ್ಯಕರ್ತರನ್ನೇ ಆಧಾರವಾಗಿಟ್ಟುಕೊಂಡು ಹೊಸ ಪ್ರಯೋಗಗಳನ್ನು ಬಿಜೆಪಿ ಮಾಡಿದೆ ಎಂದರು.
undefined
ಪಕ್ಷದ ಸರ್ವೆಯಂತೆ ಶಾಸಕರಿಗೆ ಟಿಕೆಟ್ ತಪ್ಪಿದೆ: ಸಿಎಂ ಬೊಮ್ಮಾಯಿ
ಅಭ್ಯರ್ಥಿ ಆಯ್ಕೆಯ ವೇಳೆ ಅಸಮಾಧಾನ ಇದ್ದದ್ದೆ, ಆದರೆ ಪಕ್ಷದ ವಿರುದ್ಧವಾಗಿ ಹೋಗಬಾರದು. ಪಕ್ಷ ಎಲ್ಲರಿಗೂ ಅವಕಾಶ ನೀಡಿದೆ, ನೀಡುತ್ತಾ ಬಂದಿದೆ. ಆದರೆ ಭಿನ್ನಮತ, ಬೇರೆ ಪಾರ್ಟಿಗೆ ಹೋಗಿ ಸ್ಪರ್ಧಿಸುವುದು ಒಳ್ಳೆಯದಲ್ಲ. ಕಳೆದ ಬಾರಿ ಅದೇ ಕಾರ್ಯಕರ್ತರೇ ಗೆಲ್ಲಿಸಿದ್ದು, ವ್ಯಕ್ತಿ ಪ್ರತಿಷ್ಠೆ ಕಾರ್ಯಸಾಧುವಲ್ಲ ಎಂದರು.
ಕಾರ್ಕಳದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ನೇರ ಹಣಾಹಣಿಯಾಗಲಿದೆ. ಐದು ವರ್ಷಗಳ ಸಾಧನೆಯನ್ನು ಗುರುತಿಸಿ ಜನರು ಬಿಜೆಪಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.
ಕಾರ್ಕಳ ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರಸ್ತಾಪಿಸಿದ ಸುನೀಲ್ ಕುಮಾರ್, ಅವರ ಮನೆಯೇ ಸರಿಯಿಲ್ಲ. ಅವರ ತಟ್ಟೆಯಲ್ಲಿರುವ ಹೆಗ್ಗಣವನ್ನು ಎತ್ತಿಡಲಿ ಎಂದು ಕುಹಕವಾಡಿದರು. ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ, ಯಾರೋ ಮಾಡಿದ ಟೀಕೆಗಳಿಗೆ ನಾನು ಸ್ಪಷ್ಟೀಕರಿಸುವ ಅಗತ್ಯವಿಲ್ಲ ಎಂದರು.
ದತ್ತಾ ಜೆಡಿಎಸ್ ಸೇರ್ಪಡೆಯ ಬಗ್ಗೆ ಗೊತ್ತಿಲ್ಲ: ಕುಮಾರಸ್ವಾಮಿ
19ರಂದು ನಾಮಪತ್ರ ಸಲ್ಲಿಕೆ
ಏ.19ರಂದು ಸುನೀಲ್ ಕುಮಾರ್(Sunil kumar karkal) ನಾಮಪತ್ರ ಸಲ್ಲಿಕೆ ಮಾಡಲಿದ್ದು, ಬೆಳಗ್ಗೆ 9.30ಕ್ಕೆ ಸ್ವರಾಜ್ಯ ಮೈದಾನದಿಂದ ಕಾರ್ಕಳ ಬಸ್ ನಿಲ್ದಾಣ ಮಾರ್ಗವಾಗಿ, ಬಂಡಿಮಠ ಮೂಲಕ ಕುಕ್ಕೂಂದೂರು ಪಂಚಾಯಿತಿ ಮೈದಾನ ವರೆಗೆ ಮೆರವಣಿಗೆ ನಡೆಯಲಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.