ಕಲಬುರಗಿ (ಏ.22) : ಕಲಬುರಗಿ ಜಿಲ್ಲೆಯ 9 ಅಸೆಂಬ್ಲಿ ಕ್ಷೇತ್ರಗಳಿಂದ ಕಣಕ್ಕಿಳಿದಿರುವವರಲ್ಲಿ ಕೊನೆ ದಿನ ನಾಮಪತ್ರ ಸಲ್ಲಿಸಿದವರಲ್ಲಿ ಹಲವರು ಬಹುಕೋಟಿ ಒಡೆಯರಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳಿಗೆ ಸೇರಿದ ಈ ಉಮೇದುವಾರರು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿಪಾಸ್ತಿ ಮಾಹಿತಿ ಹೇಳಿಕೊಂಡಿದ್ದಾರೆ.
ಶಾಸಕ ರಾಜಕುಮಾರ್‌ಗಿಂತ ಸಂತೋಷಿ ರಾಣಿ ಸಿರಿವಂತೆ:
undefined
ಸೇಡಂ ಕ್ಷೇತ್ರದಿಂದ ಬಿಜೆಪಿ ಹುರಿಯಾಳಾಗಿ ಪುನರಾಯ್ಕೆ ಬಯಸಿರುವ ರಾಜಕುಮಾರ್ ಪಾಟೀಲ್ ತೇಲ್ಕೂರ್(Rajkumar Patil Telkur) ಅವರ ಒಟು ಕುಟುಂಬದ ಆಸ್ತಿ 33 ಕೋಟಿ ರು. ಇದೆ. ಆಯೋಗಕ್ಕೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿರುದ್ಧ ಪತ್ನಿ ಆಸ್ತಿ ವಿವರ ಮುಚ್ಚಿಟ್ಟ ಆರೋಪ, ಕೋರ್ಟ್ ಮೊರೆಗೆ ಉಮಾಪತಿ ಶ್ರೀನಿವಾಸ್ ಗೌಡ ನಿರ್ಧಾರ
ತೇಲ್ಕೂರ್ ಬಳಿ 1. 3 ಕೋಟಿ ರು, ಪತ್ನಿ ಸಂತೋಷಿ ರಾಣಿ ಬಳಿ 20 ಕೋಟಿ ರು ಮೌಲ್ಯದ ಆಸ್ತಿ ಇದೆ. ತೇಲ್ಕೂರ್ ಬಳಿ 85 ಲಕ್ಷ ರು ನಗದು ಇದೆ. ಇವರ ಹೆಸರಲ್ಲಿ ಆವುದೇ ವಾಹನಗಲಿಲ್ಲ. ಆದರೆ ಪ್ನಿ ಸಂತೋಷಿ ರಾಣಿಯವರ ಹೆಸರಲ್ಲಿ 2. 93 ಕೋಟಿ ರು ಮೌಲ್ಯದ ಮಹೀಂದ್ರಾ ಕಾರು, ಮಹಾರಾಷ್ಟ್ರ ಪಾಸಿಂಗ್ ಟ್ರಕ್‌ಗಳಿವೆ. ಜೆಇಪಿಎಲ್ ಕಾಪಿಟಲ್, ಶುಭಂ ಇಕ್ವಿಟರ್‌ನಲ್ಲಿ ತೇಲ್ಕೂರ್ ಅವರು ತಲಾ 73 ಲಕ್ಷ ಹಾಗೂ 51 ಲಕ್ಷ ರು ಹೂಡಿದ್ದಾರೆ. 11. 34 ಲಕ್ಷ ರು ಚಿನ್ನಾಭರಣ,
ಸೇಡಂ, ಹಾಬಾಳ ಹಾಗೂ ಸಿರೋಳ್ಳಿಯಲ್ಲಿ ಕೃ,ಇ ಭೂಮಿ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ 8 ಎಕರೆ ಕೃಷಿ ಭೂಮಿ ಇದೆ. ಕಾಸಗಿಯಾಗಿ 5 ಕೋಟಿ ರು ನಷ್ಟುಸಾಲ ಬರಬೇಕಿದೆ. ಗೋದಾಮಿನ ನಕಲಿ ರಸೀದಿಗಳನ್ನು ನೀಡಿದ ಪ್ರಯುಕ್ತ 2011 ರಲ್ಲಿ ಕೆನರಾ ಬ್ಯಾಂಕ್ ಸಿಬಿಐನಲ್ಲಿ ದೂರು ದಾಖಲಿಸಿದ್ದು, ಧಾರವಾಡ 3 ನೇ ಹೆಚ್ಚುವರಿ, ಜಿಲ್ಲಾ ಸೆಷನ್ಸ್ ನ್ಯಾಯಾಲಯವು ವಿಚಾರಣೆ ನಡೆಸಿ 2019 ರಲ್ಲೇ ತಮ್ಮನ್ನು ದೋಷಮುಕ್ತನನ್ನಾಗಿ ಮಾಡಿತ್ತು. ಆರೆ ಸಿಬಿಐ ಇದೇ ಪ್ರಕರಣದಲ್ಲಿ ದೋಷಮುಕ್ತಿ ಪ್ರಶ್ನಿಸಿ ಧಾರವಾಡ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ ಎಂದು ತೇಲ್ಕೂರ್ ಅವರು ತಮ್ಮ ಮೇಲಿನ ಅಪರಾಧಗಳ ಕುರಿತಂತೆಯೂ ಅಫಿದಾವಿತ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಅಜಯ್ ವಾಸದ ಮನೆ ಮೌಲ್ಯ .15.66 ಕೋಟಿ:
ಮಾಜಿ ಸಿಎಂ ಧರಂಸಿಂಗ್ ಪುತ್ರ, ಜೇವರ್ಗಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯ್‌ಸಿಂಗ್ ಕೋಟ್ಯಧಿಪತಿಯಾಗಿದ್ದಾರೆ. ಕೈಯಲ್ಲಿ 75 ಲಕ್ಷ ರು ನಗದು, ಪತ್ನಿ ಶ್ವೇತಾ ಸಿಂಗ್ ಬಳಿ 2.14 ಲಕ್ಷ ರು. ನಗದು ಇದೆ. ತಮ್ಮ ಬಳಿ 20.22 ಕೋಟಿ ರು, ಪತ್ನಿ ಹೆಸರಲ್ಲಿ 9.93 ಕೋಟಯಷ್ಟುಚರಾಸ್ಥಿ ಹೊದಿದ್ದಾರೆ. ಇವರ ಬಳಿ 22 ಲಕ್ಷ ಮೌಲ್ಯದ ಟಯೋಟಾ ಇನ್ನೋವಾ ರಿಸ್ಟಾಕಾರಿದೆ. ಮಕ್ಕಳಾದ ಶೈನಾ, ಅರ್ಹನ್ ಜಯ್ ಸಿಂಗ್ ಕ್ರಮವಾಗಿ 1.28 ಕೋಟಿ ರು, 1.23 ಕೋಟಿ ರುಪಾಯಿನಷ್ಟುಚರಾಸ್ತಿ ಇದೆ.
1.77 ಕೆಜಿ ಚಿನ್ನ, 1.55 ಕ್ಯಾರೆಟ್ ವಜ್ರ, ನವರತ್ನ, 10.75 ಕೆಜಿ ರಜತ ಸೇರಿದಂತೆ 1.17 ಕೋಟಿ ರು ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಪತ್ನಿ ಶ್ವೇತಾ ಬಳಿ 3. 45 ಕೆಜಿ ಚಿನ್ನ, 82 ಅಮೂಲ್ಯ ವಜ್ರಗಳು, 11. 50 ಕೆಜಿ ಬೆಳ್ಳಿ ಸೇರಿದಂತೆ 2. 22 ಕೋಟಿಯಷ್ಟುಮೌಲ್ಯದ ಇನ್ನಾಭರಣ, ವಜ್ರಗಳಿವೆ. ಕಲಬುರಗಿ ವಿವಿಧೆಡೆಯಲ್ಲ 3. 97 ಕೋಟಿ ರು ಕೃಷಿ ಜಮೀನು, 2. 13 ಕೋಟಿ ರು ಮೌಲ್ಯದ ಕೃಷಿಯೇತರ ಭೂಮಿ ಪತ್ನಿ ಹೆಸರಲ್ಲಿ 1. 13 ಕೋಟಿ ರು ಕೃಷಿಯೇತರ ಭೂಮಿ ಇದೆ. ಅಜಯ್‌ಸಿಂಗ್ ಹೆಸರಲ್ಲಿ 3. 41 ಕೋಟಿ ರು ಮೌಲ್ಯದ ವಾಣಿಜ್ಯ ಕಟ್ಟಡ, 15. 66 ಕೋಟಿ ರು ಬೆಲೆಬಾಳುವ ವಾಸದ ಮನೆ, ಪತ್ನಿ ಹೆಸರಲ್ಲಿ ಬೆಂಗಳೂರಿನ ವಿವಿಧೆಡೆ 6. 58 ಕೋಟಿಯ ಮೌಲ್ಯದ ವಿವಿಧೆಡೆ ಮನೆಗಳು ಸೇರಿದಂತೆ ಈ ದಂಪತಿಯ ಸ್ತಿರಾಸ್ತಿ ಮೌಲ್ಯ ಕ್ರಮವಾಗಿ 28. 15 ಹಾಗೂ 6. 32 ಕೋಟಿ ರುಪಾಯಿ ಇದೆ.
ದಂಪತಿ ಹಾಗೂ ಮಕ್ಕಳು ಎಲ್ಲರ ಆಸ್ಪಿಪಾಸ್ತಿ ಸೇರಿದಂತೆ ಡಾ. ಅಜಯ್ ಸಿಂಗ್ ಕುಟುಂಬದ ಒಟ್ಟಾರೆ ಆಸ್ತಿ 63. 19 ಕೋಟಿ ರು ನಷ್ಟಿದೆ. ಇವೆಲ್ಲದರಜೊತೆಗೇ ಡಾ. ಅಜಯ್ ಸಿಂಗ್ ಮೇಲೆ 21. 97 ಕೋಟಿ ರು, ಪತ್ನಿ ಶ್ವೇತಾಸಿಂಗ್ ಮೇಲೆ 9.37 ಕೋಟಿ ರು. ಸಾಲದ ಹೊರೆ ಇದೆ.
ಅಲ್ಲಂಪ್ರಭು ಪಾಟೀಲ್ 1.07 ಕೋಟಿ ರು ಸಾಲಗಾರ:
ಕಲಬುರಗಿ ದಕ್ಷಿಣದಲ್ಲಿ ಕಾಂಗ್ರೆಸ್ ಹುರಿಯಾಳಾಗಿ ಕಣದಲ್ಲಿರುವ ಅಲ್ಲಂಪ್ರಭು ಪಾಟೀಲ್ ದಂಪತಿ ಸ್ಥಿರಾಸ್ತಿ ಒಟ್ಟು ಮೌಲ್ಯ 5. 41 ಕೋಟಿ ರು. ಜೇವರ್ಗಿ, ಕಲಬುರಗಿ, ಬೆಂಗಳೂರು, ಹಳ್ಳಿಸಲಗರ, ಸಿರನೂರ್ ಸೇರಿದಂತೆ ಹಲವೆಡೆ ಕೃಷಿ, ಕೃಷಿಯೇತರ ಭೂಮಿಗಳಿವೆ ಎಂದು ಪಾಟೀಲರು ತಮ್ಮ ನಾಮಪತ್ರದಲ್ಲಿ ಆ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.
ಈ ದಂಪತಿ ಬಳಿ 21 ಲಕ್ಷ ರು ಮೌಲ್ಯದ ಇನ್ನೋವಾ ಕಾರ್, 1 ಲಕ್ಷ ರು ಮೌಲ್ಯದ ಲ್ಯಾನ್ಸರ್ ಕಾರ್, 42 ಲಕ್ಷ ರು ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರುಗಳಿವೆ. 18 ಲಕ್ಷ ಮೌಲ್ಯದ 30 ತೊಲೆ ಬಂಗಾರ, 2 ಕೆಜಿ ಬೆಳ್ಳಿ (1. 50 ಲಕ್ಷ) ಅಲ್ಲಂಪ್ರಭು ಬಳಿ ಹಾಗೂ 36 ಲಕ್ಷ ರು ಮೌಲ್ಯದ 60 ತೊಲೆ ಚಿನ್ನ, 2. 25 ಲಕ್ಷ ಮೌಲ್ಯದ 3 ಕೆಜಿ ಬೆಳ್ಳಿ ಇದೆ. ಪಾಟೀಲ್ ದಂಪತಿಯ ಚರಾಸ್ತಿ ಎಲ್ಲವೂ ಸೇರಿದಂತೆ ಕ್ರಮವಾಗಿ ಪಾಟೀಲರ ಬಳಿ 57. 91 ಲಕ್ಷ ರು ಇದ್ದರೆ, ಪತ್ನಿ ಪ್ರೇಮಲತಾ ಬಳಿ 85. 70 ಲಕ್ಷ ರು ನಷ್ಟಿದೆ. ಅಲ್ಲಂಪ್ರಭು ಪಾಟೀಲ್ ಇವರ ಹೆಸರಲ್ಲಿ ವಿವಿಧ ಬ್ಯಾಂಕ್ ಹಣಕಾಸು ಸಂಸ್ಥೆಗಳಲ್ಲಿ ಹಲವು ಸ್ವರೂಪದಲ್ಲಿ 1. 07 ಕೋಟಿ ರು ಸಾಲದಹೊರೆಯೂ ಇವರ ಮೇಲಿದೆ.
ರೇವು ನಾಯಕಗಿಂತ ಪತ್ನಿ ಜೀಮಾಬಾಯಿ ಸಿರಿವಂತೆ:
ಕಲಬುರಗಿ ಗ್ರಾಮೀಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇವುನಾಯಕ ಬೆಳಮಗಿಗಿಂತ ಅವರ ಪತ್ನಿ ಜೀಮಾಬಾಯಿ ಕೋಟಿ ಒಡತಿ. ರೇವು ನಾಯಕ್ ತಮ್ಮ ನಾಮಪತ್ರದ ಜೊತೆಗೇ ಸಲ್ಲಿಸಿರುವ ಆಸ್ತಿಪಾಸ್ತಿ ಅಫಿದಾವಿತನಲ್ಲಿ ನೀಡಿರುವ ಮಾಹಿತಿಯಂತೆ ಜೀಮಾಬಾಯಿ ರೇವು ನಾಯಕರಿಗಿಂತ ಸಿರಿವಂತೆಯಾಗಿದ್ದಾರೆ. ರೇವು ನಾಯಕ ಹೆಸರಲ್ಲಿ 50.11 ಲಕ್ಷ ಚರಾಸ್ತಿ ಇದ್ದರೆ ಪತ್ನಿ ಜೀಮಾಬಾಯಿ ಹೆಸರಲ್ಲಿ 45.50 ಲಕ್ಷವಿದೆ. ರೇವು ನಾಯಕ ಬಳಿ ಕಾರಿಲ್ಲ, ಪತ್ನಿ ಬಳಿ 25 ಲಕ್ಷ ರು ಮೌಲ್ಯದ ಇನ್ನೋವಾ ಕಾರ್ ಇದೆ. ರೇವು ನಾಯಕ ಬಳಿ 40 ಲಕ್ಷ ಮೌಲ್ಯದ 80 ತೊಲೆ ಚಿನ್ನ, 20 ಲಕ್ಷ ರು ಮೌಲ್ಯದ 4 ಕೆಜಿ ಬೆಳ್ಳಿ ಇದೆ, ಜೀಮಾಬಾಯಿ ಬಳಿ 20 ಲಕ್ಷ ರು ಮೌಲ್ಯದ 40 ತೊಲೆ ಚಿನ್ನ, ಮಗ ಗಮೇಶನ ಬಳಿ 10 ಲಕ್ಷ ರು ಮೌಲ್ಯದ 20 ತೊಲ ಚಿನ್ನವಿದೆ.
ಕೊನೇ ದಿನವೂ ಕೋಟಿ ಕುಳಗಳು ಕಣಕ್ಕೆ: ಡಿಕೆಸು 353 ಕೋಟಿ ಆಸ್ತಿಗೆ ವಾರಸುದಾರನಾದರೆ ಆಯನೂರು ಆಸ್ತಿ 4 ಪಟ್ಟು ಹೆಚ್ಚಳ
ಬೆಳಮಗಿ, ಮಹಾಂಗಾವ್, ಕಮಲಾಪುರ, ಕಲಬುರಗಿ, ಆಳಂದಗಳಲ್ಲಿ ಕೃಷಿ ಭೂಮಿ, ಮನೆ, ವಾದ ಮನೆಗಳನ್ನು ಹೊಂದಿದ್ದು ಇದೆಲ್ಲ ಸ್ಥಿರಾಸ್ತಿ ಪೈಕಿ ರೇವು ನಾಯಕ ಹೆಸರಲ್ಲಿ 33 ಲಕ್ಷ ರು ಮೌಲ್ಯದ ಆಸ್ತಿ ಇದ್ದರೆ, ಪತ್ನಿ ಜೀಮಾಬಾಯ ಹೆಸರಲ್ಲಿ 2. 75 ಕೋಟಿ ರು, ಅಋೂಲಂಬಿತರು, ಮಕ್ಕಳ ಹೆಸರಲ್ಲಿ ಕ್ರಮವಾಗಿ 70 ಲಕ್ಷ, 1. 50 ಕೋಟ ರು ನಷ್ಟುಸ್ಥಿರಾಸ್ತಿ ಇದೆ. ರೇವುನಾಯಕರ ಪ್ನಿ ಜೀಮಾಬಾಯಿ ಹೆಸರಲ್ಲೇ 5 ಲಕ್ಷ ರು ಸಾಲವೂ ಇದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.