ವಿರೋಧಿಗಳು ಬಲಿಷ್ಠರಾಗಿರುವ ಕಡೆ ಪ್ರಬಲ ಅಭ್ಯರ್ಥಿ: ಸಿ.ಪಿ.ಯೋಗೇಶ್ವರ್‌

By Kannadaprabha News  |  First Published Apr 13, 2023, 10:42 PM IST

ಕನಕಪುರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಎದುರಾಳಿಗಳೇ ಇಲ್ಲ ಎಂಬ ಮಾತಿತ್ತು. ಅಲ್ಲಿದ್ದ ಜೆಡಿಎಸ್‌ ಅಭ್ಯರ್ಥಿಯೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ವಿರೋಧಿಗಳನ್ನು ನಾವು ಅಷ್ಟುಸುಲಭವಾಗಿ ಬಿಡುವುದಿಲ್ಲ.


ಚನ್ನಪಟ್ಟಣ (ಏ.13): ಕನಕಪುರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಎದುರಾಳಿಗಳೇ ಇಲ್ಲ ಎಂಬ ಮಾತಿತ್ತು. ಅಲ್ಲಿದ್ದ ಜೆಡಿಎಸ್‌ ಅಭ್ಯರ್ಥಿಯೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ವಿರೋಧಿಗಳನ್ನು ನಾವು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಹಾಗಾಗಿ ಕನಕಪುರ ಸೇರಿದಂತೆ ವಿರೋಧ ಪಕ್ಷದವರು ಪ್ರಬಲರಾಗಿರುವ ಕ್ಷೇತ್ರಗಳಲ್ಲಿ ಬಲಿಷ್ಠ ಅಭ್ಯರ್ಥಿಯನ್ನು ಹಾಕಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ವಿರೋಧ ಪಕ್ಷದ ನಾಯಕರು ಕೆಲ ಕ್ಷೇತ್ರಗಳಲ್ಲಿ ವಿರೋಧಿಗಳೇ ಇಲ್ಲದಂತೆ ಮಾಡಿಕೊಂಡಿದ್ದರು. ಅದನ್ನು ತಪ್ಪಿಸಲು ನಮ್ಮ ಪಕ್ಷದಿಂದ ಈ ತಂತ್ರ ಅನುಸರಿಸಲಾಗಿದೆ. ಹಾಗಾಗಿ ಇಂತಹ ಕ್ಷೇತ್ರಗಳಲ್ಲಿ ಅವರ ವಿರುದ್ಧ ಬಲಿಷ್ಠ ನಾಯಕರನ್ನು ಹಾಕಿದ್ದಾರೆ ಎಂದರು.

ಕನಕಪುರದಲ್ಲಿ ನಮಗೆ ಗೆಲ್ಲುವ ಅವಕಾಶ ಇದೆ. ಆದರೆ ಕನಕಪುರದ ಜೊತೆಗೆ ರಾಮನಗರದಲ್ಲೂ ಅವಕಾಶ ಇತ್ತು. ಆದರೂ ಪರವಾಗಿಲ್ಲ, ಒಂದಷ್ಟುಹೊಸ ಪ್ರಯೋಗ ಮಾಡಿರುವುದು ಒಳ್ಳೆಯದೇ. ವಿರೋಧಿಗಳನ್ನ ನಾವು ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಕನಕಪುರದಲ್ಲಿ ಗೆಲುವು ಸೋಲು ಆಮೇಲೆ. ಆದರೆ ಪೈಪೋಟಿ ಇದ್ದೇ ಇರುತ್ತದೆ. ಈಗ ಶಿವಕುಮಾರ್‌ ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತೋಕೆ ಆಗಲ್ಲ. ಅವರೂ ಕ್ಷೇತ್ರದಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು. ಬಿಜೆಪಿ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಚನ್ನಪಟ್ಟಣದಿಂದ ನನ್ನ ಹೆಸರು ಘೋಷಣೆಯಾಗಿದೆ. 

Tap to resize

Latest Videos

ಮೋದಿ, ಶಾ ಟಕ್ಕರ್‌ ನಮ್ಮತ್ರ ನಡೆಯಲ್ಲ: ಸಂಸದ ಡಿ.ಕೆ.ಸುರೇಶ್‌

ನನಗೆ ಟಿಕೆಟ್‌ ಸಿಗುವ ವಿಶ್ವಾಸ ಇತ್ತು. ಅದರಂತೆ ಚನ್ನಪಟ್ಟಣ ಕ್ಷೇತ್ರಕ್ಕೆ ವರಿಷ್ಠರು ನನ್ನ ಹೆಸರು ಸೂಚಿಸಿದ್ದಾರೆ. ಕ್ಷೇತ್ರದಿಂದ ನನನ್ನು ಕಣಕ್ಕಿಳಿಸಿದ್ದು ಅದರಂತೆ ನಾನು ಹೋರಾಟಕ್ಕೆ ಸಿದ್ಧವಾಗಿದ್ದೇನೆ ಎಂದು ತಿಳಿಸಿದರು. ಕೆಲ ಹಿರಿಯ ನಾಯಕರಿಗೆ ಟಿಕೆಟ್‌ ಕೈತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷ ಬೇರೆ ಬೇರೆ ರಾಜ್ಯಗಳಲ್ಲಿ ಹಲವು ಪ್ರಯೋಗ ಮಾಡಿ ಯಶಸ್ವಿಯಾಗಿದೆ. ನಮ್ಮ ಪಕ್ಷದ ವೈಶಿಷ್ಟ್ಯವೇ ಪ್ರಯೋಗಳನ್ನು ಮಾಡುವುದು. ಹಲವು ಹೊಸಬರಿಗೆ ಅವಕಾಶ ನೀಡುವ ಕೆಲಸ ಮಾಡಿದ್ದಾರೆ. ಕೆಲವರಿಗೆ ವಯಸ್ಸಿನ ಕಾರಣ ಅಥವಾ ಇನ್ನಿತರ ಕಾರಣಗಳಿಂದ ಟಿಕೆಟ್‌ ನೀಡಿಲ್ಲ. ಆದರೆ ಹಿರಿಯ ನಾಯಕರಿಗೆ ಪರ್ಯಾಯ ಅವಕಾಶಗಳಿದ್ದು, ಅವರನ್ನು ಗೌರವದಿಂದ ನಡೆಸಿಕೊಳ್ಳುವ ಕೆಲಸ ಆಗುತ್ತದೆ ಎಂದರು.

ಮಂಡ್ಯದಲ್ಲಿ ನಾನೇ ಕರೆತಂದ ಇಬ್ಬರಿಗೆ ಟಿಕೆಟ್‌ ಸಿಕ್ಕಿದೆ. ಇಂಡವಾಳು ಸಚ್ಚಿದಾನಂದ ಹಾಗೂ ಅಶೋಕ್‌ ಜಯರಾಂಗೆ ಟಿಕೆಟ್‌ ನೀಡಿದೆ. ರಾಮನಗರದಲ್ಲೂ ಇಬ್ಬರು ಹೊಸ ಮುಖಗಳಿಗೆ ಮಣೆಹಾಕಲಾಗಿದೆ. ರಾಮನಗರದಲ್ಲಿ ಕನಿಷ್ಠ ಎರಡು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇದೆ. ಕಾಂಗ್ರೆಸ್‌ನಿಂದಲೂ ಸಿಪಿವೈಗೆ ಆಹ್ವಾನ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷಕ್ಕೆ ಬರುವಂತೆ ನನ್ನನ್ನು ಯಾವ ಕಾಂಗ್ರೆಸ್‌ ನಾಯಕರೂ ಸಂಪರ್ಕ ಮಾಡಿರಲಿಲ್ಲ. ನನಗೆ ಬಿಜೆಪಿಯಲ್ಲೇ ಟಿಕೆಟ್‌ ಸಿಗುವ ವಿಶ್ವಾಸ ಇತ್ತು. ಅದರಂತೆ ನನಗೆ ಟಿಕೆಟ್‌ ಸಿಕ್ಕಿದ್ದು, ಚುನಾವಣೆಗೆ ತಯಾರಿ ನಡೆಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಗೆಲುವು ನನ್ನದೆ: ಕುಮಾರಸ್ವಾಮಿ ಅವರು ನಮ್ಮ ಬಗ್ಗೆ ಸಿರಿಯಸ್‌ ಆಗಿ ತೆಗೆದುಕೊಂಡಿಲ್ಲ. ನಮ್ಮ ತಾಲೂಕಿನಲ್ಲಿ ಒಕ್ಕಲಿಗ ಮತದಾರರದ್ದೇ ಪ್ರಾಬಲ್ಯವಿದೆ. ನಾನು ಗೆಲ್ಲುವುದರ ಕುರಿತು ನೂರಕ್ಕೆ ನೂರು ವಿಶ್ವಾಸ ಇದೆ. ನಮಗೆ ಪ್ರತಿ ಓಟು ಶ್ರಮದಿಂದ ದುಡಿಮೆ ಪ್ರತಿಫಲದಿಂದ ಬರುತ್ತದೆ. ನಾವು ಕ್ಷೇತ್ರಕ್ಕೆ ಬರಲ್ಲ, ನಾವು ನಾಮಿನೇಷನ್‌ ಹಾಕಿದರೆ ಸಾಕು ಗೆಲ್ಲುತ್ತೇವೆ ಅಂತ ನಾನು ಅಂದುಕೊಳ್ಳಲ್ಲ ಎಂದು ಪರೋಕ್ಷವಾಗಿ ಎಚ್‌ಡಿಕೆಗೆ ಟಾಂಗ್‌ ನೀಡಿದರು. ನಮ್ಮ ತಾಲೂಕಿನಲ್ಲಿ ಪ್ರತಿಯೊಬ್ಬ ಮತದಾರರು ಪ್ರಬದ್ಧರಾಗಿದ್ದಾರೆ. ಅಭಿವೃದ್ಧಿ ಮಾಡಿದರೆ ಮಾತ್ರ ಜನ ಮತ ಹಾಕುತ್ತಾರೆ. 

ರಾಮ​ನ​ಗರ ಕ್ಷೇತ್ರ​ದಲ್ಲಿ ಕಾಂಗ್ರೆಸ್‌-ಜೆಡಿಎಸ್‌​ ಅಭ್ಯ​ರ್ಥಿ​ಗ​ಳಿಗೆ ಅಳಿವು ಉಳಿ​ವಿನ ಪ್ರಶ್ನೆ?

ಹಾಗಾಗಿ ನಮ್ಮ ಮುಖಂಡರು ಮತದಾರರ ಮೇಲೆ ಪ್ರಭಾವ ಬೀರುತ್ತಾರೆ ಅಂತ ಹೇಳಲು ಆಗುವುದಿಲ್ಲ. ಮತದಾರರು ವೈಯಕ್ತಿಕವಾಗಿ ಅವರಿಗೆ ಇಷ್ಟಬಂದವರಿಗೆ ಮತ ನೀಡಲು ತಯಾರಿ ಮಾಡುತ್ತಿದ್ದಾರೆ. ಈಗಾಗಿ ಮತದಾರರ ಮನಸ್ಸು ಗುಪ್ತವಾಗಿದೆ. ಅದನ್ನು ಅರಿಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!