ನಾಳೆ ಬಿಜೆಪಿಗೆ ರಾಜೀನಾಮೆ, ವಿದಾಯ ಭಾಷಣದಲ್ಲಿ ಲಕ್ಷ್ಮಣ ಸವದಿ ಘೋಷಣೆ!

By Suvarna NewsFirst Published Apr 13, 2023, 8:12 PM IST
Highlights

ಅಥಣಿ ಟಿಕೆಟ್ ವಂಚಿತ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಇದೀಗ ಮಹತ್ವದ ಘೋಷಣೆ ಮಾಡಿದ್ದಾರೆ. ನಾಯಕರ ಸಂಧನಾಕ್ಕೂ ಬಗ್ಗದ ಸವದಿ ನಾಳೆ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ
 

ಬೆಳಗಾವಿ(ಏ.13): ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಭುಗಿಲೆದ್ದಿರುವ ಬಂಡಾಯ ಕೆಲವೆಡೆ ತಣ್ಣಗಾಗಿದ್ದರೂ, ಹಿರಿಯ ನಾಯಕರ ಮುನಿಸು ಹಾಗೇ ಉಳಿದಿದೆ. ಅಥಣಿ ಕ್ಷೇತ್ರದ ಟಿಕೆಟ್ ಅಕಾಂಕ್ಷಿ ಲಕ್ಷ್ಮಣ ಸವದಿ ಬಂಡಾಯ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಇಂದು ಬಿಜೆಪಿ ವಿದಾಯ ಭಾಷಣ ಮಾಡಿದ ಲಕ್ಷ್ಮಣ ಸವದಿ, ನಾಳೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ವಿಧಾನ ಪರಿಷತ್ ಸ್ಥಾನಕ್ಕ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅಥಣಿ ಅಭಿವೃದ್ದಿಗೆ ಶ್ರಮಿಸುವ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ಇಲ್ಲವಾದರೆ ಪಕ್ಷೇತರರನಾಗಿ ಸ್ಪರ್ಧಿಸುತ್ತೇನೆ ಎಂದು ಸವದಿ ತೊಡೆತಟ್ಟಿದ್ದಾರೆ. 

ಬೆಂಬಲಿಗರ ಜೊತೆ ಸಭೆ ನಡೆಸಿದ ಲಕ್ಷ್ಮಣ ಸವದಿ ವಿದಾಯ ಭಾಷಣ ಮಾಡಿದರು. ಅಥಣಿ ಟಿಕೆಟ್ ಹಂಚಿಕೆ ಸಂಬಂಧ ಕೋರ್ ಕಮಿಟಿ ಸಭೆಯಲ್ಲಿ ನಾನು ಭಾಗಿಯಾಗಿದ್ದೆ.ನನಗೆ ಅಥಣಿ ಟಿಕೆಟ್ ನೀಡುವಂತೆ ವರಿಷ್ಠರನ್ನು, ರಾಜ್ಯ ನಾಯಕರನ್ನು ಕೋರಿದ್ದೇನೆ.ನನಗೆ ಟಿಕೆಟ್ ನೀಡಿದಿದ್ದರೆ ಬಿಜೆಪಿಗೆ ಗೆಲುವು ಕಷ್ಟ ಎಂದು ಮನವಿ ಮಾಡಿದ್ದೆ. ಅಥಣಿಯಲ್ಲಿ ಬಿಜೆಪಿ ಸೋತರೆ ಆ ಸೋಲಿನ ಹಣೆಪಟ್ಟಿ ನನ್ನ ವಿರುದ್ಧ ಕಟ್ಟಲು ತಂತ್ರ ನಡೆದಿದೆ. ನನ್ನ ಕ್ಷೇತ್ರ, ಇಲ್ಲಿ ನಾನು ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ಕಟ್ಟಿ ಬೆಳೆಸಿದ್ದೇನೆ. ಈ ಕ್ಷೇತ್ರದಲ್ಲಿ ಬೇರೆಯವರು ಬಂದು ಚುಚ್ಚು ಮಾತುಗಳನ್ನಾಡಿದ್ದಾರೆ. ಇವೆಲ್ಲವನ್ನು ವರಿಷ್ಠರಿಗೆ ಮನವರಿಕೆ ಮಾಡಿ ಟಿಕೆಟ್‌ಗಾಗಿ ಮನವಿ ಮಾಡಿದ್ದಾರೆ. ಆದರೆ ನನ್ನ ಮನವಿಗೆ ಸ್ಪಂದಿಸಲಿಲ್ಲ ಎಂದು ಸವದಿ ಬೇಸರ ವ್ಯಕ್ತಪಡಿಸಿದ್ದಾರೆ.

Latest Videos

ಟೆಂಪಲ್ ರನ್ ಮುಗಿಸಿ ಬೆಂಗಳೂರಿಗೆ ಬೊಮ್ಮಾಯಿ ವಾಪಸ್, ಏ.15ಕ್ಕೆ ನಾಮಪತ್ರ ಸಲ್ಲಿಕೆ!

ಕೇಂದ್ರ ಸಚಿವರಾದ ಧರ್ಮೆಂದ್ರ ಪ್ರಧಾನ, ಪ್ರಹ್ಲಾದ ಜೋಶಿ ಭೇಟಿಯಾಗಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ. ಆದರೆ ಗಣನೆಗೆ ತೆಗೆದುಕೊಳ್ಳಲಿಲ್ಲ. ಟಿಕೆಟ್ ಕೊಡಲು ಸಾಧ್ಯವಾಗದಿದ್ದರೆ ಏನು ಮಾಡ್ತುತ್ತೀರಿನ ಅನ್ನೋ ಮರು ಪ್ರಶ್ನೆ ಹಾಕಿದಾದ ಪಕ್ಷದಿಂದ ಹೊರಹೋಗುತ್ತೇನೆ ಎಂದು ಉತ್ತರಿಸಿದ್ದೇನೆ. ಪ್ರಾಮಾಣಿಕ ಕಾರ್ಯಕರ್ತನನ್ನು ಕಳೆದುಕೊಳ್ಳಬೇಡಿ ಎಂದು ಕೈಮುಗಿದು ಎಲ್ಲರಿಗೂ ಮನವಿ ಮಾಡಿದ್ದೇನೆ. ಯಾರೂ ಕೂಡ ನನ್ನ ಮನವಿಗೆ ಬೆಲೆ ಕೊಡಲಿಲ್ಲ. ಅಥಣಿ ಟಿಕೆಟ್ ಕೊಡದಿದಕ್ಕೆ ಬಿಜೆಪಿಯಿಂದ ಹೊರಬಂದಿದ್ದೇನೆ. ಬಿಜೆಪಿ ನನಗೆ ಎಲ್ಲವನ್ನೂ ನೀಡಿದೆ. ಬಿಜೆಪಿ ನಾಯಕರಿಗೆ ಧನ್ಯವಾದ ಎಂದು ಭಾವುಕರಾಗಿದ್ದಾರೆ. 

ಜೆಡಿಎಸ್‌‌, ಕಾಂಗ್ರೆಸ್‌ನಿಂದಲೂ ಆಹ್ವಾನ ಇದೆ. ಆದರೆ ಅಥಣಿ ಕ್ಷೇತ್ರದ ಅಭಿೃದ್ಧಿ ನನ್ನ ಗುರಿ. ಅಥಣಿ ಕ್ಷೇತ್ರಕ್ಕಾಗಿ ನನ್ನದೊಂದು ಮನವಿ ಇದೆ. ಈ ಮನವಿ ಈಡೇರಿಸುವ ಪಕ್ಷಕ್ಕೆ ನಾನು ಸೇರುತ್ತೇನೆ. ಇಲ್ಲವಾದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಪಕ್ಷೇತರರಾಗಿ ಸ್ಪರ್ಧಿಸಿದರೆ, ನೀವು ನನ್ನ ಒಪ್ಪಿಕೊಳ್ಳಬೇಕು ಎಂದು ಸವದಿ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.  

ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಇಂದು ಪ್ರಕಟ ಸಾಧ್ಯತೆ, ಸಂಜೆ 7.30ಕ್ಕೆ ದೆಹಲಿಯಲ್ಲಿ ಮಹತ್ವದ ಸಭೆ!

ಬಿಜೆಪಿ ನಾಯಕರ ಯಾವುದೇ ಸಂಧಾನಕ್ಕೂ ಲಕ್ಷ್ಮಣ ಸವದಿ ಬಗ್ಗಿಲ್ಲ. ಬಿಜೆಪಿ ತೊರೆಯುವ ನಿರ್ಧಾರದಿಂದ ಹಿಂದೆ ಸರಿಯುವ ಮಾತಿಲ್ಲ. ಹಲವು ನಾಯಕರನ್ನು ಪಕ್ಷಕ್ಕೆ ಕರೆತಂದಿದ್ದೇನೆ. ಹಲವರಿಗೆ ಟಿಕೆಟ್ ಕೊಡಿಸಿದ್ದೇನೆ. ಆದರೆ ಬಿಜೆಪಿ ನಾಯಕರು ನನಗೆ ಟಿಕೆಟ್ ನೀಡಿಲ್ಲ ಎಂದು ಸವದಿ ಅವಲತ್ತುಕೊಂಡಿದ್ದಾರೆ.

click me!