ಕಾಂಗ್ರೆಸ್ ಗರ್ಭದಲ್ಲಿ ಹುಟ್ಟುವ ಪ್ರತಿ ಕೂಸು ಭ್ರಷ್ಟಾಚಾರಿ: ಹರಿಕೃಷ್ಣ ಬಂಟ್ವಾಳ್

By Govindaraj S  |  First Published May 2, 2023, 1:30 AM IST

ಬ್ರಿಟಿಷರ ಗರ್ಭದಿಂದ ಕಾಂಗ್ರೆಸ್ ಹುಟ್ಟಿದೆ. ಕಾಂಗ್ರೆಸ್‌ನ ಗರ್ಭದಲ್ಲಿ ಹುಟ್ಟುವ ಪ್ರತಿಯೊಂದು ಕೂಸು ಭ್ರಷ್ಟಾಚಾರಿಯಾಗಿರುತ್ತದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಕಿಡಿಕಾರಿದರು. ಅವರು ಸೋಮವಾರ ಸಂಜೆ ಹಿರಿಯಡ್ಕದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. 


ಉಡುಪಿ (ಮೇ.02): ಬ್ರಿಟಿಷರ ಗರ್ಭದಿಂದ ಕಾಂಗ್ರೆಸ್ ಹುಟ್ಟಿದೆ. ಕಾಂಗ್ರೆಸ್‌ನ ಗರ್ಭದಲ್ಲಿ ಹುಟ್ಟುವ ಪ್ರತಿಯೊಂದು ಕೂಸು ಭ್ರಷ್ಟಾಚಾರಿಯಾಗಿರುತ್ತದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಕಿಡಿಕಾರಿದರು. ಅವರು ಸೋಮವಾರ ಸಂಜೆ ಹಿರಿಯಡ್ಕದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಈ ಜನ್ಮದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತವನ್ನು ಕಂಡು ಬೇಸತ್ತು ಜನರು, ಬಿಜೆಪಿ ಕಡೆಗೆ ಒಲವು ತೋರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಬಿಜೆಪಿಯೂ ಜನರ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿದೆ ಎಂದವರು ಹೇಳಿದರು. 

ನೆಹರು ಕಾಲದಿಂದ ಆರಂಭವಾದ ಜೀಪು ಹಗರಣ, ಮನಮೋಹನ್ ಸಿಂಗ್ ಅವಧಿಯಲ್ಲಿ 2 ಜಿ ಹಗರಣ, ಕಲ್ಲಿದ್ದಲು ಹಗರಣ ಹೀಗೆ ಕಾಂಗ್ರೆಸ್ ಅವಧಿಯಲ್ಲಿ ನಡೆದ ಹಗರಣಗಳ ಪಟ್ಟಿಯನ್ನು ಕೊಡಬಲ್ಲೆ. ಆದರೆ ನರೇಂದ್ರ ಮೋದಿಯವರು ಈ ದೇಶದ ಚುಕ್ಕಾಣಿ ಹಿಡಿದ ಬಳಿಕ ಯಾವುದೇ ಒಂದು ಹಗರಣ ನಡೆದಿದೆ ಎಂದು ಸಾಕ್ಷ್ಯ ನೀಡಲು ಕಾಂಗ್ರೆಸ್ ಗೆ ಸಾಧ್ಯವಿದೆಯಾ ಎಂದು ಪ್ರಶ್ನಿಸಿದರು. ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ತಾನು ವಾಸಿಸುವ ಪಂಚಾಯತ್ ವ್ಯಾಪ್ತಿಯಾಗಿರುವ ಬೊಮ್ಮರಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ 2018 ರ ವಿಧಾನಸಭಾ ಚುನಾವಣೆಗೆ ಅತೀ ಹೆಚ್ಚು ಅಂತರದ ಮುನ್ನಡೆಯನ್ನು ನೀಡಿತ್ತು. 

Tap to resize

Latest Videos

undefined

ಅಂಬೇಡ್ಕರ್‌ ಹೆಸರನ್ನು ಪಸರಿಸಲು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದೇನೆ: ಶಾಸಕ ಎನ್‌.ಮಹೇಶ್‌

ಈ ಬಾರಿ ಅದಕ್ಕಿಂತ 2,500 ಅಂತರದಲ್ಲಿ ಮುನ್ನಡೆಯನ್ನು ನೀಡುತ್ತೇವೆ ಎಂದರು. ವಿನಯ್ ಕುಮಾರ್ ಸೊರಕೆಯವರು ತನ್ನನ್ನು ತಾನು ಪ್ರಾಮಾಣಿಕ ಎನ್ನುತ್ತಾ, ತಾನು ಗೆದ್ದರೇ ಶಿರ್ವವನ್ನು ಪುರಸಭೆಯನ್ನಾಗಿ ಮಾಡುತ್ತೇನೆ ಎಂದಿದ್ದಾರೆ. ಆದರೆ ಜನರು ಇವರನ್ನು ಪ್ರಾಮಾಣಿಕ ಎನ್ನಬೇಕೆ ವಿನಃ ತನ್ನನ್ನು ತಾನೇ ಪ್ರಾಮಾಣಿಕ ಎನ್ನಬಾರದು‌. ನಿಜವಾದ ಪ್ರಾಮಾಣಿಕ ವ್ಯಕ್ತಿ ಎಂದರೇ ಅದು ಸುರೇಶ್ ಶೆಟ್ಟಿ ಗುರ್ಮೆ ಎಂದವರು ಹೇಳಿದರು‌. 

ವೇದಿಕೆಯಲ್ಲಿ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಮುಖಂಡರಾದ ರವಿ ಆಮೀನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಿಯಾನಂದ ಹೆಗ್ಡೆ, ಸಂದೀಪ್ ಶೆಟ್ಟಿ, ಕಾಪು ಕ್ಷೇತ್ರ ಬಿಜೆಪಿ ಪ್ರ.ಕಾರ್ಯದರ್ಶಿ ಅನಿಲ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.  ಸುರೇಶ್ ಶೆಟ್ಟಿ ಗುರ್ಮೆಯವರು ಸಾಹಿತ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಈ ಬಾರಿ ತಾವೆಲ್ಲಾ ಸೇರಿ ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಎಲ್ಲರೂ ಗೆಲ್ಲಿಸಬೇಕು ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ಮತದಾರರಲ್ಲಿ ವಿನಂತಿಸಿದರು.

ಬಿಲ್ಲವರು ಜಾತಿವಾದಿಗಳಲ್ಲ, ರಾಷ್ಟ್ರಭಕ್ತರು: ಬಿಲ್ಲವರು ಜಾತಿವಾದಿಗಳಲ್ಲ. ಹಿಂದೂ ಬಿಲ್ಲವ ಕಂಸ, ರಾವಣನ, ಅನುಯಾಯಿಗಳಾಗಲ್ಲ. ಅವರು  ರಾಷ್ಟ್ರೀಯವಾದಿಗಳು. ಭಾರತ್ ಮಾತಾ ಕೀ ಜೈ ಹೇಳುವ ಬಿಜೆಪಿಗೆ ಅನುಯಾಯಿ ಆಗುತ್ತಾರೆಯೇ ವಿನಃ ಸೋನಿಯಾ ಗಾಂಧಿಯ ಅನುಯಾಯಿ ಆಗಲ್ಲ. ಮೋದಿಗೆ ಜೈ ಹೇಳುತ್ತೇವೆಯೇ ಹೊರತು ಗುಜರಿ ರಾಹುಲ್ ಗಾಂಧಿಗೆ ಜೈ ಹೇಳುವುದಿಲ್ಲ. ನಿಮ್ಮ ಒಂದು ವೋಟು ರಾಮಮಂದಿರ ನಿರ್ಮಾಣಕ್ಕೆ ಸಾಧ್ಯವಾಯಿತು. ಮುಸ್ಲಿಂ ಮಹಿಳೆಯರಿಗೆ ಅನುಕೂಲಕರವಾದ ತ್ರಿವಳಿ ತಲಾಖ್ ಪದ್ದತಿ ನಿಷೇಧಕ್ಕೆ ಸಾಧ್ಯವಾಗಿದೆ. ಸುಭದ್ರ ಭಾರತ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಸಾಧ್ಯವಾಯಿತು. 

35 ವರ್ಷದಿಂದ ಕನಕಪುರದ ಅಭಿವೃದ್ಧಿ ಕುಂಠಿತ: ನಟಿ ತಾರಾ

ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿ, ಒಂದು ಅವಕಾಶ ಕೊಡಿ. ಈ ದೇಶ ವಿಶ್ವಗುರು ಮಾಡುವಲ್ಲಿ ನನ್ನ ಅಳಿಲು ಸೇವೆಯನ್ನು ಮಾಡುತ್ತೇನೆ. ಗೆಲ್ಲುವುದು ಗುರ್ಮೆ ಸುರೇಶ್ ಶೆಟ್ಟಿ ಅಲ್ಲ, ನಮ್ಮ ಧರ್ಮ, ಸಂಸ್ಕಾರ ಗೆಲ್ಲಬೇಕು. ಮೋದಿಯವರ ಸಂಕಲ್ಪ ಗೆಲ್ಲಬೇಕು. ಮೂರು ಸಾವಿರ ಕೋ. ರೂ ಮಿಕ್ಕಿ ಅನುದಾನವನ್ನು ಲಾಲಾಜಿಯವರು ತಂದಿದ್ದಾರೆ. ದುಡ್ಡು ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ದೇವರು ಕೊಟ್ಟದರಲ್ಲಿ ತೃಪ್ತನಿದ್ದೇನೆ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಬೇಕು. ಕಾಪು ಕ್ಷೇತ್ರ ಮಾದರಿ ಕ್ಷೇತ್ರ ಆಗಲು, ನನ್ನ ಕೈಗಳಿಗೆ, ತೋಳುಗಳಿಗೆ ಬಲ ನೀಡಿ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!