Kodagu: ವೈಯಕ್ತಿಕ ಟೀಕೆ ಬಿಟ್ಟು ಅಭಿವೃದ್ಧಿ ಬಗ್ಗೆ ಹೇಳಿ: ಅಪ್ಪಚ್ಚು ರಂಜನ್‌ಗೆ ಮಂತರ್ ಗೌಡ ಸವಾಲು

By Govindaraj SFirst Published May 2, 2023, 1:00 AM IST
Highlights

ಕೇವಲ ವೈಯಕ್ತಿಕ ಟೀಕೆ ಮಾಡುವುದನ್ನು ಬಿಟ್ಟು ಕಳೆದ 25 ವರ್ಷಗಳಲ್ಲಿ ನೀವು ಮಾಡಿರುವ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸಿ ಎಂದು ಮೈಸೂರು ಕೊಡಗು ಸಂಸದ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಸವಾಲು ಹಾಕಿದ್ದಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮೇ.02): ಕೇವಲ ವೈಯಕ್ತಿಕ ಟೀಕೆ ಮಾಡುವುದನ್ನು ಬಿಟ್ಟು ಕಳೆದ 25 ವರ್ಷಗಳಲ್ಲಿ ನೀವು ಮಾಡಿರುವ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸಿ ಎಂದು ಮೈಸೂರು ಕೊಡಗು ಸಂಸದ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಸವಾಲು ಹಾಕಿದ್ದಾರೆ. ಸೋಮವಾರಪೇಟೆ ಪಟ್ಟಣದ ಜೆಸಿಐ ವೇದಿಕೆಯಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ತಮಗೆ ಮತ ನೀಡುವಂತೆ ಡಾ. ಮಂತರ್ ಗೌಡ ಜನರಲ್ಲಿ ಮನವಿ ಮಾಡಿ ಬಳಿಕ ಮಾಡಿದ್ದಾರೆ. 

ಕಾಂಗ್ರೆಸ್ ಸಮಾವೇಶಕ್ಕೂ ಮುನ್ನ ಇದೇ ವೇದಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ ಅಪ್ಪಚ್ಚು ರಂಜನ್ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ನ ಅಭ್ಯರ್ಥಿ ಹೊರ ಜಿಲ್ಲೆಯವರಾಗಿದ್ದು ಅಲ್ಲಿ ಆಲೂಗೆಡ್ಡೆ ಬೆಳೆಯುವವರು ಕೊಡಗಿಗೆ ಬಂದು ಕಾಫಿಗೆ ಗೊಬ್ಬರ ಹಾಕುವುದನ್ನು ಹೇಳಿಕೊಡಬೇಕಾಗಿಲ್ಲ. ನಾವು ಕಾಫಿಗೆ ಸಂಬಂಧಿಸಿ ಆಧುನಿಕ ಅಭಿವೃದ್ಧಿ ಬಗ್ಗೆ ಕೇಂದ್ರ ಆರಂಭಿಸಲು ಚಿಂತಿಸಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದರು. ಮುಂದುವರಿದು ಅಪ್ಪ ಮಕ್ಕಳು ಬೇರೆ ಬೇರೆ ಪಕ್ಷದಲ್ಲಿ ಸ್ಪರ್ಧಿಸಿದ್ದಾರೆ. 

ಪ್ರಧಾನಿಯ ನಿಂದಿಸುವುದೇ ಕಾಂಗ್ರೆಸ್‌ ಸಾಧನೆ: ಸಚಿವ ಸುಧಾಕರ್‌

ಅಪ್ಪ ಅರಕಲಗೂಡಿನಲ್ಲಿ ಹಗಲು ಜೆಡಿಎಸ್ ಪರವಾಗಿ ಮತಯಾಚಿಸಿದರೆ ರಾತ್ರಿ ಕೊಡಗಿನಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಾರೆ. ಇನ್ನು ಮಗ ಹಗಲು ಕೊಡಗಿನಲ್ಲಿ ಕಾಂಗ್ರೆಸ್ ಪರವಾಗಿ ಮತಕೇಳಿದರೆ ರಾತ್ರಿ ಅರಕಲಗೂಡಿನಲ್ಲಿ ಜೆಡಿಎಸ್ ಪರವಾಗಿ ಮತಯಾಚಿಸುತ್ತಾರೆ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ತಿರುಗೇಟು ನೀಡಿರುವ ಮಂತರ್ ಗೌಡ ಕ್ಷೇತ್ರದ ಶಾಸಕರಿಗೆ ಅಭಿವೃದ್ಧಿ ಮಾಡಲು 25 ವರ್ಷಗಳ ಕಾಲಾವಧಿ ಬೇಕಾಗಿರಲಿಲ್ಲ. ನನಗೆ ಒಂದು ಅವಧಿ ಸಮಯ ಕೊಡಿ ಸಾಕು. ಅಭಿವೃದ್ಧಿಗೆ ಹೊಸ ರೂಪ ನೀಡುತ್ತೇನೆ ನೆರೆದಿದ್ದ ಜನರಲ್ಲಿ ಮನವಿ ಮಾಡಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷಕ್ಕೆ  ಜನರು ಸರಿಯಾದ ಉತ್ತರ ನೀಡಿದ್ದರು ಎಂದು ಮೈಸೂರು ಕೊಡಗು ಸಂಸದರು ಹೇಳಿದ್ದಾರೆ. 

ಈ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ ಎಂದು ಮಂತರ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿಯ ಶಾಸಕರ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದ್ದು, ಶಾಸಕರ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಈ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ  ಮತ ನೀಡಲಿದ್ದಾರೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಎಲ್ಲಾ ಕಡೆ ಸ್ಪರ್ಧಿಸುವ ಅವಕಾಶವಿದ್ದು, ಈ ಸಲ ಆಶೀರ್ವಾದ ಮಾಡಬೇಕೆಂದು ಕೋರಿದರು. ಇತ್ತೀಚೆಗೆ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಗುಡುಗಿದ ಡಾ. ಮಂತರ್ ನಮ್ಮ ಕಾರ್ಯಕರ್ತರು ಇವೆಲ್ಲವನ್ನು  ಎದುರಿಸಲು ಸಜ್ಜಾಗಿದ್ದಾರೆ.

ಅಂಬೇಡ್ಕರ್‌ ಹೆಸರನ್ನು ಪಸರಿಸಲು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದೇನೆ: ಶಾಸಕ ಎನ್‌.ಮಹೇಶ್‌

ಹಾಗೂ ಜನರು ವಿದ್ಯಾವಂತರಾಗಿದ್ದು  ಅಪಪ್ರಚಾರಗಳಿಗೆ ಸೊಪ್ಪು ಹಾಕುವುದಿಲ್ಲವೆಂದರು. 25 ವರ್ಷ ಆಡಳಿತ ನಡೆಸಿದ ಶಾಸಕರಿಗೆ ಸರಕಾರದಲ್ಲಿ ಯಾವುದೇ ಮಾನ್ಯತೆ ಇಲ್ಲ ಎಂದ ಡಾ.ಮಂತರ್, ನಿಮ್ಮ ಪಕ್ಷದ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ. ಬಹಿರಂಗ ಸಭೆಯಲ್ಲಿ ನೂರಾರು ಜನರು ಕಿಕ್ಕಿರಿದು ನಿಂತಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!