ವಿಜಯಪುರ ಜಿಲ್ಲೆಯಲ್ಲಿ ಎಚ್‌ಡಿಕೆ ಪ್ರಚಾರ ಪರೇಡ್: ಜೆಡಿಎಸ್‌ ಪಕ್ಷಕ್ಕೆ ಭರವಸೆ ಮೂಡಿಸಿದ ಕ್ಷೇತ್ರಗಳು ಯಾವುವು ಗೊತ್ತಾ?

Published : May 02, 2023, 12:30 AM IST
ವಿಜಯಪುರ ಜಿಲ್ಲೆಯಲ್ಲಿ ಎಚ್‌ಡಿಕೆ ಪ್ರಚಾರ ಪರೇಡ್: ಜೆಡಿಎಸ್‌ ಪಕ್ಷಕ್ಕೆ ಭರವಸೆ ಮೂಡಿಸಿದ ಕ್ಷೇತ್ರಗಳು ಯಾವುವು ಗೊತ್ತಾ?

ಸಾರಾಂಶ

ದೇಶದ ಘಟಾನುಘಟಿ ನಾಯಕರ ಕಣ್ಣು ಕರ್ನಾಟಕ ಚುನಾವಣೆಯ ಮೇಲೆ ನೆಟ್ಟಿದೆ. ಕಳೆದ ದಿನಾಂಕ 29 ರಂದು ಪ್ರಧಾನಿ ಮೋದಿ ಸ್ವತಃ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಅಖಾಡಕ್ಕೆ ಇಳಿದಿದ್ದಾರೆ. 

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಮೇ.02): ದೇಶದ ಘಟಾನುಘಟಿ ನಾಯಕರ ಕಣ್ಣು ಕರ್ನಾಟಕ ಚುನಾವಣೆಯ ಮೇಲೆ ನೆಟ್ಟಿದೆ. ಕಳೆದ ದಿನಾಂಕ 29 ರಂದು ಪ್ರಧಾನಿ ಮೋದಿ ಸ್ವತಃ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಅಖಾಡಕ್ಕೆ ಇಳಿದಿದ್ದಾರೆ. ಅದ್ರಲ್ಲು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆ ಮೈಸೂರು ಭಾಗದಲ್ಲು ಮೋದಿ ಮೋಡಿ ಮಾಡಿದ್ದಾರೆ. ಈ ನಡುವೆ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ ಪಕ್ಷಕ್ಕೆ ಆಶಾಭಾವ ಮೂಡಿದ್ದು, ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿಲು ಮಾಜಿ ಸಿಎಂ ಕುಮಾರಸ್ವಾಮಿ ವಿಜಯಪುರ ಜಿಲ್ಲೆಯಲ್ಲಿ ಪ್ರಚಾರದ ಪರೇಡ್‌ ನಡೆಸಿದ್ದಾರೆ.

ನಾಗಠಾಣ ಕ್ಷೇತ್ರದಲ್ಲಿ ಹೆಚ್ಡಿಕೆ ಪ್ರಚಾರ: ಜೆಡಿಎಸ್‌ ವರಿಷ್ಠ ಮಾಜಿ ಸಿಎಂ ಕುಮಾರಸ್ವಾಮಿ ಒಂದೆ ವಿಜಯಪುರ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿದ್ದಾರೆ. ಬಸವನ ಬಾಗೇವಾಡಿ, ದೇವರ ಹಿಪ್ಪರಗಿ, ನಾಗಠಾಣ ಕ್ಷೇತ್ರಗಳಲ್ಲಿ ಹೆಚ್ಡಿಕೆ ಸಂಚಾರ ನಡೆಸಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಭರವಸೆ ಮೂಡಿಸಿದ್ದರು ಹೆಚ್ಡಿಕೆ ಪ್ರವಾಸ ಇದಕ್ಕೆ ಪೂರಕವಾಗಿದೆ ಎನ್ನುವ ಮಾತುಗಳು ಕೇಳಿ ಬರ್ತಿವೆ.. ನಾಗಠಾಣ ಕ್ಷೇತ್ರದ ಚಡಚಣ ಪಟ್ಟಣದಲ್ಲಿ ಜೆಡಿಎಸ್‌ ಅಭ್ಯರ್ಥಿ ದೇವಾನಂದ ಚೌಹಾನ್‌ ಪರವಾಗಿ ಹೆಚ್ಡಿಕೆ ಪ್ರಚಾರ ನಡೆಸಿದರು. ಈ ವೇಳೆ ಕುಟುಂಬ ಸಮೇತವಾಗಿ ನಿಂತು ದೇವಾನಂದ ಚೌಹಾನ್‌ ಜನರಲ್ಲಿ ಮತ ಯಾಚನೆ ಮಾಡಿದ್ದು ವಿಶೇಷವಾಗಿತ್ತು.

ಅಂಬೇಡ್ಕರ್‌ ಹೆಸರನ್ನು ಪಸರಿಸಲು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದೇನೆ: ಶಾಸಕ ಎನ್‌.ಮಹೇಶ್‌

ಹೆಚ್ಡಿಕೆಯಲ್ಲಿ ಭರವಸೆ ಮೂಡಿಸಿದ ಕ್ಷೇತ್ರಗಳು: ವಿಜಯಪುರ ಜಿಲ್ಲೆಯ ಕೆಲ ಕ್ಷೇತ್ರಗಳು ಈ ಬಾರಿ ಜೆಡಿಎಸ್‌ ಪಕ್ಷ ವರಿಷ್ಠರಲ್ಲಿ ಭರವಸೆ ಮೂಡಿಸಿದಂತೆ ಕಾಣ್ತಿದೆ. ಹಾಲಿ ಜೆಡಿಎಸ್‌ ಶಾಸಕರೇ ಇರುವ ನಾಗಠಾಣ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ ಹಾಗೂ ಇಂಡಿ ಕ್ಷೇತ್ರಗಳು ಹೆಚ್ಡಿಕೆಗೆ ಭರವಸೆ ಮೂಡಿಸಿವೆ. ಕಳೆದ ಚುನಾವಣೆಯಲ್ಲಿ ನಾಗಠಾಣದಿಂದ ಗೆದ್ದ ದೇವಾನಂದ ಚೌಹಾನ ಮತ್ತೆ ಸ್ಪರ್ಧೆಗೆ ಇಳಿದಿದ್ದಾರೆ. ಬಿಜೆಪಿಯಿಂದ ಪ್ರಬಲ ಸ್ಪರ್ಧಿ ಇಲ್ಲದ ಕಾರಣ, ಕಾಂಗ್ರೆಸ್‌ ಏಕ ಮಾತ್ರ ಎದುರಾಳಿ ಅನ್ನೋ ಕಾರಣಕ್ಕೆ ಇಲ್ಲಿ ಜೆಡಿಎಸ್‌ ದಾರಿ ಸುಗಮ ಎನ್ನಲಾಗ್ತಿದೆ.

ಭರವಸೆ ಮೂಡಿಸಿದ ಬ.ಬಾಗೇವಾಡಿ-ದೇ.ಹಿಪ್ಪರಗಿ: ಇತ್ತ ಬಸವನ ಬಾಗೇವಾಡಿಯಲ್ಲಿ ಬಿಜೆಪಿ ಸೇರ್ಪಡೆಯಾಗಿ ಟಿಕೇಟ್‌ ಗಾಗಿ ಕಾಯುತ್ತಿದ್ದ ಅಪ್ಪುಗೌಡ ಉರ್ಫ ಸೋಮನಗೌಡ ಪಾಟೀಲ್‌ ಮನಗೂಳಿಗೆ ಬಿಜೆಪಿ ಟಿಕೇಟ್‌ ಕೈ ತಪ್ಪಿತ್ತು. ಈ ವೇಳೆ ಹೆಚ್ಡಿ ಕುಮಾರಸ್ವಾಮಿ ಕರೆದು ಟಿಕೇಟ್‌ ಕೊಟ್ಟು ಕಣಕ್ಕೆ ಇಳಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ ನಿಂದ ಸ್ಪರ್ಧಿಸಿದ್ದ ಸೋಮನಗೌಡ ಪಾಟೀಲ್‌ ಮನಗೂಳಿ ಒಳ್ಳೆಯ ಮತಗಳನ್ನ ಪಡೆದು ಜನರ ಭರವಸೆ ಗಿಟ್ಟಿಸಿಕೊಂಡಿದ್ದರು. ಈ ಬಾರಿ ಈ ಕ್ಷೇತ್ರ ಜೆಡಿಎಸ್‌ ನಾಯಕರಲ್ಲಿ ಭರವಸೆ ಮೂಡಿಸಿದೆ. ದೇವರ ಹಿಪ್ಪರಗಿಯಲ್ಲು ಜೆಡಿಎಸ್‌ ಗೆ ಒಳ್ಳೆಯ ರೆಸ್ಪಾನ್ಸ್‌ ಸಿಗ್ತಿದೆ. ಕಳೆದ ಬಾರಿ ಇಲ್ಲಿಯು ಜೆಡಿಎಸ್‌ ಗೆ ಉತ್ತಮ ಮತಗಳು ಸಿಕ್ಕಿದ್ದವು, ಸ್ವಲ್ಪ ವರ್ಕೌಟ್‌ ಮಾಡಿದ್ರೆ ಇಲ್ಲಿ ಜೆಡಿಎಸ್‌ ಜನರ ಭರವಸೆ ಉಳಿಸಿಕೊಳ್ಳಬಹುದು ಎನ್ನುವ ಮಾತುಗಳಿವೆ. ಹೀಗಾಗಿ ಹೆಚ್ಡಿಕೆ ಪ್ರವಾಸದಲ್ಲಿ ದೇವರ ಹಿಪ್ಪರಗಿಯನ್ನು ಆಯ್ದುಕೊಂಡಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಚಾಮರಾಜನಗರವನ್ನು ಗುಡಿಸಲು ಮುಕ್ತ ಜಿಲ್ಲೆಯಾಗಿಸುವೆ: ಸಚಿವ ಸೋಮಣ್ಣ

HDK ಭರವಸೆ ಮಣ್ಣು ಮಾಡಿದ ನಗರ ಕ್ಷೇತ್ರ: ಜಿಲ್ಲೆಯ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಭರವಸೆ ಮೂಡಿಸಿದ್ರೆ, ಇಲ್ಲಿ ವಿಜಯಪುರ ನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯದ್ದು ಬೇರೆಯದ್ದೆ ಕಥೆಯಾಗಿದೆ. ಕೊನೆಯ ಕ್ಷಣದಲ್ಲಿ ಜೆಡಿಎಸ್‌ ಪಕ್ಷದ ಕೈ ಬಿಟ್ಟು ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ ಇಲ್ಲಿನ ಜೆಡಿಎಸ್‌ ಅಭ್ಯರ್ಥಿ ಬಂದೇನವಾಜ್‌ ಮಹಬರಿ. ಅಷ್ಟಕ್ಕು ಆಗಿದ್ದೇನು ಎಂದರೆ ನಿನ್ನೆಯಷ್ಟೆ ವಿಜಯಪುರ ನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಮಹಬರಿ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ನಾನು ಕಣದಲ್ಲಿ ಇರೋಲ್ಲ, ನನ್ನ ಬೆಂಬಲ ಏನಿದ್ರು ಕಾಂಗ್ರೆಸ್‌ ಪಕ್ಷಕ್ಕೆ ಅಂತಾ ಕೈ ಕೊಟ್ಟಿದ್ದಾರೆ. ಇದು ಸ್ವತಃ ಜೆಡಿಎಸ್‌ ನಾಯಕರನ್ನೆ ಶಾಕ್‌ ಆಗೋ ಹಾಗೆ ಮಾಡಿದೆ. ಇದೊಂದು ಕ್ಷೇತ್ರ ಬಿಟ್ಟರೆ ಉಳಿದೆಡೆ ಜೆಡಿಎಸ್‌ ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಬಸವನ ಬಾಗೇವಾಡಿ, ದೇವರಹಿಪ್ಪರಗಿ, ಇಂಡಿ ಕ್ಷೇತ್ರಗಳಲ್ಲಿ ಜೆಡಿಎಸ್‌ ಭರವಸೆ ಉಳಿಸಿಕೊಳ್ಳುತ್ತಾ ಕಾದುನೋಡಬೇಕಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ