Karnataka CM Announcement: ಡಿಕೆಶಿ-ಸಿದ್ದು ಸಿಟ್ಟು ಶಮನಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿ!

By Gowthami K  |  First Published May 17, 2023, 2:23 PM IST

ಡಿ.ಕೆ.ಶಿವಕುಮಾರ್ ಡಿಸಿಎಂ ಪೋಸ್ಟಿಗೆ ಒಪ್ಪುತ್ತಿಲ್ಲ ಎನ್ನಲಾಗಿದೆ.  ಈ ನಡುವೆ ಸಿಎಂ ಹುದ್ದೆ ವಿಚಾರ ಶಮನಗೊಳಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಎಂಟ್ರಿ ಕೊಡುತ್ತಿದ್ದಾರೆ.


ಬೆಂಗಳೂರು (ಮೇ 17): ಕರ್ನಾಟಕ ಹೊಸ ಸಿಎಂ ಆಯ್ಕೆಯಾಯಿತು, ಕುತೂಹಲಕ್ಕೆ ತರೆ  ಬಿತ್ತು ಎನ್ನುತ್ತಿರುವಾಗಲೇ ಮತ್ತೊಂದು ಸುದ್ದಿ ಹೊರ ಬದ್ದಿದ್ದು, ಡಿ.ಕೆ.ಶಿವಕುಮಾರ್ ಡಿಸಿಎಂ ಪೋಸ್ಟಿಗೆ ಒಪ್ಪುತ್ತಿಲ್ಲ ಎನ್ನಲಾಗಿದೆ. ಸಭೆ ಮುಗಿಸಿ ಸೋನಿಯಾ ನಿವಾಸದಿಂದ ರಾಹುಲ್ ಗಾಂಧಿ ಜೊತೆಗೆ ಮಾತುಕತೆ ನಡೆಸಿ ತುಂಬಾ ಕೋಪದಿಂದಲೇ ಡಿಕೆಶಿ ಹೊರಬಂದಿದ್ದಾರೆ.  ಹೈಕಮಾಂಡ್ ಪ್ರಸ್ತಾಪ ಒಪ್ಪಲು ಡಿಕೆಶಿ ಹಿಂದೇಟು ಹಾಕಿದ್ದು, ಡಿಕೆಶಿ ಮುಂದಿನ ನಡೆ ಬಗ್ಗೆ ತೀವ್ರ ಕುತೂಹಲ ಹೆಚ್ಚಿದೆ.

ಪ್ರಿಯಾಂಕಾ ಗಾಂಧಿ ಎಂಟ್ರಿ: ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಏರಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಇದ್ದು,  ಪಕ್ಷದ ಯಾವ ವರಿಷ್ಠರೂ ಮಾತುಕತೆ ನಡೆಸಿದರೂ ಇಬ್ಬರೂ ನಾಯಕರ ಮನವೊಲಿಕೆ ಸಾಧ್ಯವಾಗುತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠ ರಾಹುಲ್ ಗಾಂಧಿ ಸಹಿತ ಯಾರು ಮಾತುಕತೆ ನಡೆಸಿದರೂ ಡಿಕೆಶಿ ಮತ್ತು ಸಿದ್ದರಾಮಯ್ಯ ಸಿಎಂ ಹುದ್ದೆ ತನಗೇ ಬೇಕೆಂದು ರಚ್ಚೆ ಹಿಡಿದು ಕುಳಿತಿದ್ದಾರೆ. ಇದೀಗ ಈ ಸಮಸ್ಯೆ ಬಗೆಹರಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಎಂಟ್ರಿ ಕೊಡುತ್ತಿದ್ದಾರೆ. ಇಬ್ಬರ ಜೊತೆಗೆ ಮಾತುಕತೆಗೆ ಪ್ರಿಯಾಂಕ ಗಾಂಧಿ ಒಪ್ಪಿದ್ದಾರೆ. ಉಭಯ ನಾಯಕರ ಜೊತೆಗೆ ಮಾತುಕತೆ ಮಾಡಲು ಪ್ರಿಯಾಂಕಾ ಒಪ್ಪಿಗೆ ಸೂಚಿಸಿದ್ದು, ರಾಹುಲ್ ಗಾಂಧಿಗೆ ಈ ಬಗ್ಗೆ  ಪ್ರಿಯಾಂಕ ತಿಳಿಸಿದ್ದಾರೆ. ಡಿಕೆಶಿ ಮನವೊಲಿಕೆಗೆ ಮುಂದಾಗ್ತಾರಾ ಪ್ರಿಯಾಂಕಾ ಎಂಬುದನ್ನು ಕಾದು ನೋಡಬೇಕಿದೆ.

Tap to resize

Latest Videos

ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನಿವಾಸದಲ್ಲಿ ಡಿಕೆ ಶಿವಕುಮಾರ್ ಅವರು ಮಾತುಕತೆ ನಡೆಸುತ್ತಿದ್ದಾರೆ. ಡಿಕೆಶಿ  ಅವರನ್ನು ಮನವೊಲಿಸಲು ಖರ್ಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಈ ಸಂಧಾನ ಯಶಸ್ವಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಖರ್ಗೆ ನಿವಾಸಕ್ಕೆ  ಡಿಕೆಶಿ ಬೆಂಬಲಿಗ ಶಾಸಕರಾದ  ಬಾಲಕೃಷ್ಣ, ರಂಗನಾಥ್, ಎಮ್ ಎಲ್ ಸಿ ರ ವಿ ಅವರು ಆಗಮಿಸಿದ್ದಾರೆ.

ನಾನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದನ್ನು ಒಪ್ಪುವುದೇ ಇಲ್ಲ ಎಂದು ರಾಹುಲ್ ಗಾಂಧಿ ಎದುರು ಡಿಕೆಶಿ ಖಡಕ್ ಆಗಿ ಹೇಳಿದ್ದಾರಂತೆ. ನಾನು ಮುಖ್ಯಮಂತ್ರಿ ಆದರೆ ಸಿದ್ದರಾಮಯ್ಯ ಅವರ ಸವಾಲುಗಳನ್ನು ಎದುರಿಸಬಲ್ಲೆ.  ಒಬ್ಬ ಶಾಸಕನೂ ಪಕ್ಷ ತೊರೆಯದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ನೇರವಾಗಿ ಹೇಳಿದ್ದಾರೆ ಎನ್ನಲಾಗಿದೆ.

KARNATAKA GOVT FORMATION: ಕರ್ನಾಟಕ ಸಿಎಂ ಆಯ್ಕೆಯಾಗಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ : ಸುರ್ಜೇವಾಲಾ 

ಇದರ ಮಧ್ಯೆ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು  ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ದೆಹಲಿಯಲ್ಲಿರುವ ಸೋನಿಯಾ ನಿವಾಸದ ಬಳಿ ಘೋಷಣೆ ಕೂಗಿ ಒತ್ತಾಯಿಸಿದ್ದಾರೆ. ಜೊತೆಗೆ ಖರ್ಗೆ ನಿವಾಸದ ಬಳಿ ಕೂಡ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

Karnataka CM Announcement : ಸಿದ್ದರಾಮಯ್ಯ ಮನೆ ಮುಂದೆ ಸಂಭ್ರಮ, ಡಿಕೆಶಿ ಮನೆ ಮುಂದೆ

 

click me!