60:40  ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?

60:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?

Published : Jul 18, 2026, 02:51 PM IST
ಸಚಿವ ಸಂಪುಟ ವಿಸ್ತರಣೆಗೆ ತಾತ್ಕಾಲಿಕ ತಡೆ ಬಿದ್ದಿದ್ದು, ರಾಹುಲ್ ಗಾಂಧಿ ಸೂಚಿಸಿರುವ ಹೊಸ ಸೂತ್ರವು ಸಂಚಲನ ಮೂಡಿಸಿದೆ. ಈ ಸೂತ್ರವು ಯುವ ಶಾಸಕರಲ್ಲಿ ಆಶಾಭಾವನೆ ಮೂಡಿಸಿದ್ದರೆ, ಹಿರಿಯ ನಾಯಕರಲ್ಲಿ ಆತಂಕ ಸೃಷ್ಟಿಸಿದೆ. ಇದರ ಜೊತೆಗೆ, ಮುಂದಿನ ಸ್ಪೀಕರ್ ಯಾರು ಎಂಬ ಚರ್ಚೆಯೂ ತೀವ್ರಗೊಂಡಿದೆ.

ಸಂಪುಟ ವಿಸ್ತರಣೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.. ಆದ್ರೆ ಈ ಬ್ರೇಕ್ ಮಧ್ಯೆದಲ್ಲಿಯೇ ದೊಡ್ಡ ಬಾಂಬ್ ಸಿಡಿದಿದೆ.. ಅದು ರಾಹುಲ್ ಗಾಂಧಿ ಮುಂದಿಟ್ಟಿರೋ ಹೊಸ ಸೂತ್ರದ ಬಾಂಬ್.. ಹಾಗಿದ್ರೆ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್​ ಅಧಿನಾಯಕ ಪ್ರಸ್ತಾಪಿಸಿರೋ ಆ ಹೊಸ ಸೂತ್ರವೇನು..? ಅದ್ರಿಂದ ಮಂತ್ರಿಸ್ಥಾನಕ್ಕಾಗಿ ಕಾದು ಕುಳಿತಿರುವ ಯುವ ಶಾಸಕರಲ್ಲಿ ಆಶಾಭಾವನೆ ಮೂಡಿದ್ರೆ, ಹಿರಿಯ ಶಾಸಕರುಗಳಿಗೆ ಆತಂಕದ ಅಲೆ ಅಪ್ಪಳಿಸಿರೋದು ಯಾಕೆ..? ಸ್ಪೀಕರ್ ಸ್ಥಾನಕ್ಕೆ ಪ್ರಮುಖವಾಗಿ ಐದು ಹೆಸರುಗಳು ಕೇಳಿ ಬರ್ತಿವೆ..? ಹಾಗಿದ್ರೆ ಆ ಐವರು ಯಾರು..? ಅವರ ಹೆಸರೇ ಮುಂಚೂಣಿಯಲ್ಲಿರೋದು ಯಾಕೆ..?

ಒಂದು ಕಡೆ ಸಚಿವ ಸಂಪುಟ ಕಸರತ್ತು ನಡೆಯುತ್ತಿದ್ರೆ ಮತ್ತೊಂದು ಕಡೆ ಮುಂದಿನ ಸ್ಪೀಕರ್ ಯಾರಾಗ್ಬೋದು ಅನ್ನೋ ಚರ್ಚೆಯೂ ಜೋರಾಗಿದೆ. ಇದ್ರಲ್ಲಿ ಪ್ರಮುಖವಾಗಿ ಐದು ಹೆಸರುಗಳು ಸದ್ಯ ಮುಂಚೂಣಿಯಲ್ಲಿ ಕೇಳಿ ಬರ್ತಿವೆ.. ಹಾಗಿದ್ರೆ ಆ ಐದು ಹೆಸರುಗಳು ಯಾರದ್ದು..? ಸ್ಪೀಕರ್ ಸ್ಥಾನಕ್ಕೆ ಅವರ ಹೆಸರು ಮುಂಚೂಣಿಗೆ ಬರಲು ಕಾರಣ ಏನು..? 55 ವರ್ಷದ ಒಳಗಿನವರಾಗಿದ್ದು, ಈಗಾಗಲೇ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ರೆ ಅವರನ್ನ ಇಲ್ಲಿ ಪರಿಗಣನೆಗೆ ತೆಗೆದುಕೊಳ್ತಾರಾ..? ಮೊದಲ ಬಾರಿ ಶಾಸಕರಾದವರಿಗೆ ಮಾತ್ರವೇ ಅವಕಾಶ ಸಿಗುತ್ತಾ..? ಅಥವ 55 ವರ್ಷದ ಒಳಗಿದ್ದು ಎರಡ್ಮುರು ಬಾರಿ ಎಂಎಲ್​ಎಯಾಗಿದ್ದು ಸಚಿವ ಸ್ಥಾನದ ಸಿಗದೇ ಇದ್ದವರಿಗೆ ಅಕವಾಶ ಕೊಡಲಾಗುತ್ತಾ..? ಈ ಪ್ರಶ್ನೆಗಳಿಗೆ ಸದ್ಯಕ್ಕೆ ಖಚಿತ ಉತ್ತರವಿಲ್ಲ. ಆದ್ರೆ ಒಂದೊಂತು ಕ್ಲಿಯರ್.. ವಯಸ್ಸನ್ನೇ ಪ್ರಮುಖ ಮಾನದಂಡವನ್ನಾಗಿಸೋ ಮೂಲಕ ಯುವ ಪಡೆಯನ್ನ ಕಟ್ಟೋಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾದಂತಿದೆ.

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
Read more