ಕಾಂಗ್ರೆಸ್‌ ಹಿರಿಯ ಶಾಸಕರಿಗೆ ಮಂತ್ರಿಗಿರಿ ಇಲ್ಲ: ಹೈಕಮಾಂಡ್‌ ಅಷ್ಟ ಸೂತ್ರ ಪಾಲನೆ

By Sathish Kumar KH  |  First Published May 25, 2023, 1:45 PM IST

ಕಾಂಗ್ರೆಸ್‌ನಿಂದ ಕೊನೇ ಚುನಾವಣೆ ಎಂದು ಘೋಷಣೆ ಮಾಡಿ ಗೆದ್ದುಬಂದ ಹಿರಿಯ ಶಾಸಕರಿಗೆ ಸಚಿವ ಸ್ಥಾನದ ಪಟ್ಟಿಯಿಂದ ಕೈಬಿಡಲು ತೀರ್ಮಾನಿಸಲಾಗಿದೆ.


ನವದೆಹಲಿ (ಮೇ 25): ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ರಾಜ್ಯದ 50ಕ್ಕೂ ಅಧಿಕ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದು, ಈ ವೇಳೆ ಕಾಂಗ್ರೆಸ್‌ನಿಂದ ಕೊನೇ ಚುನಾವಣೆ ಎಂದು ಘೋಷಣೆ ಮಾಡಿ ಗೆದ್ದುಬಂದ ಹಿರಿಯ ಶಾಸಕರಿಗೆ ಸಚಿವ ಸ್ಥಾನದ ಪಟ್ಟಿಯಿಂದ ಕೈಬಿಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಇದೇ ನನ್ನ ಕೊನೆಯ ಚುನಾವಣೆ ನನ್ನನ್ನು ಗೆಲ್ಲಿಸಿ ಎಂದು ಹೇಳಿಕೊಂಡಿರುವ ಹಿರಿಯ ಶಾಸಕರಿಗೆ ಸಚಿವ ಸ್ಥಾನದಿಂದ ಕೈಬಿಡಲು ನಿರ್ಧರಿಸಲಾಗಿದೆ. ಕಾಂಗ್ರೆಸ್‌ನಿಂದ ಸಚಿವ ಸ್ಥಾನವನ್ನು ಪಡೆದುಕೊಂಡು ಅಧಿಕಾರವನ್ನು ಅನುಭವಿಸಿ, ಅಭಿವೃದ್ಧಿಯನ್ನೂ ಮಾಡಿದ ನಂತರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದರೆ ಕಾಂಗ್ರೆಸ್‌ ಪಕ್ಷಕ್ಕೆ ಭಾರಿ ನಷ್ಟ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯ ಮೇಲೆಯೂ ಕಣ್ಣಿಟ್ಟಿರುವ ಹೈಕಮಾಂಡ್‌ ನಾಯಕರು ಹಿರಿಯ ಶಾಸಕರನ್ನು ಸಚಿವ ಸ್ಥಾನದಿಂದ ಕೈಬಿಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

Tap to resize

Latest Videos

ಸಿದ್ದರಾಮಯ್ಯ ಮುಂದೆ ಘರ್ಜಿಸೋ ಕೇಸರಿ ಕಲಿಯಾರು? ಯತ್ನಾಳರೋ.. ಬೊಮ್ಮಾಯಿಯೋ?

ಹಲವು ಸೂತ್ರಗಳ ಅಳವಡಿಕೆ: ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿರುವ ಕಾಂಗ್ರೆಸ್‌ ಹೈಕಮಾಂಡ್‌ ಹಲವು ಸೂತ್ರಗಳನ್ನು ಅಳವಡಿಕೆ ಮಾಡಿಕೊಂಡು ಶಾಸಕರಿಗೆ ಸಚಿವ ಸ್ಥಾನವನ್ನು ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ ಎಂಟು ಸೂತ್ರಗಳನ್ನು ಅಳವಡಿಕೆ ಮಾಡಿಕೊಂಡು ಮಂತ್ರಿಗಿರಿ ಕೊಡಲಾಗುತ್ತಿದೆ. ಈ ಸೂತ್ರಗಳಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯಲು ಕೂಡ ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ. 

  • ಸಚಿವ ಸ್ಥಾನ ನೀಡಲು ಕಾಂಗ್ರೆಸ್‌ ಹೈಕಮಾಂಡ್‌ ಅಷ್ಟ ಸೂತ್ರಗಳು: 
  • ಪರಿಷತ್‌ನಿಂದ ಒಬ್ಬರಿಗೆ ಮಾತ್ರ ಸಚಿವ ಸ್ಥಾನ
  • ಲಿಂಗಾಯತ ಸಮುದಾಯಕ್ಕೆ ಹೆಚ್ಚಿನವರಿಗೆ ಮಂತ್ರಿಗಿರಿ
  • ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ವರ್ಗಕ್ಕೂ ಭಾರಿ ಬಂಪರ್
  • ಹಲವು ಹಿರಿಯ ನಾಕರಿಗೆ ಸಂಪುಟದಿಂದ ಕೋಕ್‌
  • ಸಚಿವ ಸಂಪುಟದಲ್ಲಿ ಒಬ್ಬ ಶಾಸಕಿಗೆ ಮಾತ್ರ ಸ್ಥಾನ
  • ಒಕ್ಕಲಿಗ ಸಮುದಾಯದ ಯುವ ಶಾಸಕರಿಗೆ ಮಂತ್ರಿಗಿರಿ
  • ಗಂಭೀರ ಆರೋಪ ಎದುರಿಸುವ ಶಾಸಕರಿಗೆ ಮಂತ್ರಿಗಿರಿ ಇಲ್ಲ
  • ಹೋರಾಟದಲ್ಲಿ ನಿರಾಸಕ್ತಿ ತೋರಿದವರಿಗೂ ಒಲಿಯಲ್ಲ ಸಚಿವ ಸ್ಥಾನ

ಪರಿಶಿಷ್ಟ ಪಂಗಡಕ್ಕೆ 4 ಸಚಿವ ಸ್ಥಾನ ಕೊಡಿ: ಸತೀಶ್ ಜಾರಕಿಹೊಳಿ ನೇತೃತ್ವದ ಪರಿಶಿಷ್ಟ ಪಂಗಡದ ಸಮುದಾಯದ ಶಾಸಕರ ತಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದೆ. ಎಸ್‌ಟಿ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮತ್ತೊಮ್ಮೆ ಆಗ್ರಹ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಸ್ಥಾನದ ಯಾವುದೇ ಭರವಸೆ ನೀಡದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈಗ ಯಾಕೆ ಕೊಡುತ್ತಿಲ್ಲ ಎಂದು ಕೇಳಲಾಗುತ್ತಿದೆ. ಈಗ ಹೆಚ್ಚಿನ ಜನರಿಗೆ ಸಚಿವ ಸ್ಥಾನ ನಿಡುವಂತೆ ಒತ್ತಡ ಹೇರಲಾಗುತ್ತಿದೆ. ಎಸ್‌ಟಿ ಸಮುದಾಯಕ್ಕೆ ಕನಿಷ್ಠ 3-4 ಸಚಿವ ಸ್ಥಾನ ನೀಡುವ ಬಗ್ಗೆ ಭರವಸೆ ನೀಡಲಾಗಿದೆ. ಈಗಾಗಲೇ ಸತೀಶ್‌ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲಾಗಿದ್ದು, ಜಿಲ್ಲಾವಾರು ಪ್ರಾತಿನಿಧ್ಯ ಗಮನದಲ್ಲಿಟ್ಟುಕೊಂಡು ಎಸ್.ಟಿ ಸಮುದಾಯಕ್ಕೆ 3 ಸಚಿವ ಸ್ಥಾನ ನಿಡಬೇಕು. ಬಹುತೇಕ ಹೈದ್ರಾಬಾದ್ ಕರ್ನಾಟಕ ಭಾಗದ ಎಸ್.ಟಿ ಕ್ಷೇತ್ರಗಳಿಗೆ ಸಚಿವ ಸ್ಥಾನ ನೀಸುವಂತೆ ಮನವಿ ಮಾಡಲಾಗಿದೆ.

Bengaluru- ಏರ್‌ಪೋರ್ಟ್‌ನಲ್ಲಿ ಎಲ್ನೋಡಿದ್ರೂ ಕಾಂಗ್ರೆಸ್‌ ಶಾಸಕರು: ಸಚಿವ ಸ್ಥಾನ ಲಾಭಿಗೆ ದೆಹಲಿಯತ್ತ..

ನಾಯಕರು ಆಯ್ತು, ಸಚಿವರ ಬೆಂಬಲಿಗರಿಂದಲೂ ಲಾಭಿ: ದೆಹಲಿಯ ಕಾಂಗ್ರೆಸ್‌ ವಾರ್ ರೂಂನಲ್ಲಿ ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಕೊನೆ ಕಸರತ್ತಿನ ಸಭೆ ನಡೆಯುತ್ತಿದೆ. ಇತ್ತ ಖರ್ಗೆ ನಿವಾಸದತ್ತ ಸಚಿವಾಕಾಂಕ್ಷಿಗಳ ಲಾಭಿ ನಡೆಯುತ್ತಿದೆ. ಹೆಚ್.ಕೆ. ಪಾಟೀಲ್, ಈಶ್ವರ್ ಖಂಡ್ರೆ, ಆರ್.ವಿ. ದೇಶಪಾಂಡೆ, ಅಶೋಕ್ ಪಟ್ಟಣ್‌ ಸೇರಿದಂತೆ ಹಲವು ಶಾಸಕರು ಇಲ್ಲಿ ಬಿಡು ಬಿಟ್ಟಿದ್ದಾರೆ. ಸಚಿವರುಗಳು ಸಹ ಖಾತೆಗಾಗಿ ಮತ್ತು ತಮ್ಮ ಬೆಂಬಲಿಗರಿಗಾಗಿ ಲಾಬಿ ಆರಂಭಿಸಿದ್ದಾರೆ. ಸಚಿವರಾದ ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಮತ್ತು ಕೆ ಜೆ ಜಾರ್ಜ್ ಬಂದು ಭೇಟಿ ಮಾಡಿದ್ದಾರೆ. 

click me!