ಬಿಜೆಪಿ ಭದ್ರ ಕೋಟೆ ಬಳ್ಳಾರಿಯಲ್ಲಿಯೇ ಶ್ರೀರಾಮುಲುಗೆ ಡಿಕೆಶಿ ಡಿಚ್ಚಿ ಹೊಡೆದಿದ್ದು ಹೇಗೆ?
ಮಂಡ್ಯದಲ್ಲಿ ಸೋತರೂ ಬಿಜೆಪಿ ಅಭ್ಯರ್ಥಿಯ ದಾಖಲೆ ಏನು?
ನಿರೀಕ್ಷೆಯಂತೆ ನಿರಾಯಾಸವಾಗಿ ಗೆದ್ದ ಅನಿತಾ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಕಷ್ಟ ಪಟ್ಟು ಗೆಲುವಿನ ಹಾದಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ
ಜಮಖಂಡಿಯಲ್ಲಿ ವರ್ಕ್ ಔಟ್ ಆದ ಅನುಕಂಪದ ಅಲೆ...ಇಲ್ಲಿದೆ ಸಂಪೂರ್ಣ ಮಾಹಿತಿ

01:52 PM (IST) Nov 06
ರಾಮನಗರ ಉಪ ಚುನಾವಣೆ ಯಲ್ಲಿ ಭರ್ಜರಿ ಗೆಲುವು ತಂದಿರುವುದು ತುಂಬಾ ಸಂತಸ ತಂದಿದೆ. ಇಡೀ ರಾಜ್ಯದಲ್ಲೇ ಇಷ್ಟು ದೊಡ್ಡ ಅಂತರದಲ್ಲಿ ಗೆದ್ದ ಉದಾಹರಣೆ ಇಲ್ಲ. ಕ್ಷೇತ್ರದ ಜನತೆ ನಮ್ಮ ಕುಟುಂಬದ ಮೇಲೆ ಮೊದಲಿನಿಂದಲೂ ಇಟ್ಟಿರುವ ಅಭಿಮಾನದಿಂದ ಈ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಬೆಂಬಲ ನೀಡಿದ್ದು ಬಾರಿ ಅಂತರದ ಗೆಲುವಿಗೆ ಕಾರಣ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತೇವೆ.ರಾಮನಗರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ.
-ಅನಿತಾ ಕುಮಾರಸ್ವಾಮಿ, ರಾಮನಗರ ಹೊಸ ಶಾಸಕಿ
01:35 PM (IST) Nov 06
ಶಿವಮೊಗ್ಗ, ಬಳ್ಳಾರಿ, ಜಮಖಂಡಿ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ನಿರೀಕ್ಷೆಯನ್ನೂ ಮೀರಿ ಕಾಂಗ್ರೇಸ್- ಜೆಡಿಎಸ್ ಗೆಲುವು ಸಾಧಿಸಿದೆ. ಬಳ್ಳಾರಿಯಲ್ಲಿ ಡಿಕೆಶಿ ನೇತೃತ್ವದಲ್ಲಿ ಹಣದ ಹೊಳೆ ಹರಿಸಿದ್ದಾರೆ. ಹಣದ ದಂಧೆಯನ್ನು ತಡೆಯದಿದ್ದರೆ ಏರುಪೇರಾಗುತ್ತೆ ಅನ್ನೋ ಆತಂಕ ಇತ್ತು. ಆಳುವ ಪಕ್ಷ ತನ್ನೆಲ್ಲಾ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಶಿವಮೊಗ್ಗದ ಗೆಲುವು ಸಂತೋಷ ನೀಡಿದೆ. ನಮ್ಮ ಪಕ್ಷಕ್ಕೆ ಆತ್ಮಾವಲೋಕನ ಮಾಡಲು ಸಕಾಲ. ತಳಮಟ್ಟದಿಂದಲೇ ಪಕ್ಷವನ್ನು ಗಟ್ಟಿಗೊಳಿಸಬೇಕಾಗಿದೆ. ಬಿಜೆಪಿ ಮುಂದಿನ ಪಾರ್ಲಿಮೆಂಟ್ ಚುನಾವಣೆ ಯಲ್ಲಿ ಹೆಚ್ವು ಸ್ಥಾನ ಗೆಲ್ಲುತ್ತೆ.
- ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ವಿಪಕ್ಷ ನಾಯಕ
01:21 PM (IST) Nov 06
ಕೈ ಮತ್ತು ಜೆಡಿಎಸ್ ಮೈತ್ರಿ ಸರಕಾರ ಆರು ತಿಂಗಳಿಂದ ಸರ್ಕಾರ ನಡೆಸುತ್ತಿದೆ. ಜಮಖಂಡಿ ಯಲ್ಲಿ ಕಳೆದ ಬಾರಿ ಕೇವಲ 2 ಸಾವಿರ ಮತದಿಂದ ಗೆದ್ದಿದ್ದೆವು. ಈ ಬಾರಿ ಗೆಲುವಿನ ಅಂತರ 40 ಸಾವಿರ ದಾಟಿದೆ. ಇದು ಕಾಂಗ್ರೆಸ್, ಜೆಡಿಎಸ್ ಸರ್ಕಾರಕ್ಕೆ ಸಿಕ್ಕ ಜನಾದೇಶ. ಇದು ಸಮ್ಮಿಶ್ರ ಸರ್ಕಾರಕ್ಕೆ ಸಿಕ್ಕ ಮಾರ್ಕ್ಸ್.
- ಕೆ.ಸಿ ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ
01:03 PM (IST) Nov 06
ಇದು ಸಿದ್ಧರಾಮಯ್ಯ ನೇತ್ರತ್ವದಲ್ಲಿ ಒಗ್ಗಟ್ಟಿನಿಂದ ಬಂದ ಗೆಲವು. ಪರಮೇಶ್ವರ್ ಅವರ ಚುನಾವಣಾ ಉಸ್ತುವಾರಿಯೂ ಈ ಗೆಲುವಿಗೆ ಕಾರಣ. ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು. ಜಮಖಂಡಿಯ ಸಿದ್ದುನ್ಯಾಮಗೌಡರ ಅಭಿವೃದ್ಧಿ ಕೆಲಸದಿಂದ ಅವರ ಮಗ ಗೆಲುವು ಸಾಧಿಸಿದ್ದಾರೆ. ಬಿಜೆಪಿಯವರು ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ, ಅವರ ವ್ಯರ್ಥ ಪ್ರಯತ್ನವನ್ನ ನಿಲ್ಲಿಸಲಿ. ವಿರೋಧ ಪಕ್ಷದಲ್ಲಿದ್ದು ಬಿಜೆಪಿ ಕಾರ್ಯನಿರ್ವಹಿಸಲಿ.
- ಎಂ.ಬಿ.ಪಾಟೀಲ್, ಕಾಂಗ್ರೆಸ್ ಮುಖಂಡ
12:43 PM (IST) Nov 06
ಕರ್ನಾಟಕದ ಕಿರುಸಮರ ಮುಗಿದಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಗೆ ಮತದಾರ ಆಶೀರ್ವದಿಸಿದ್ದಾರೆ. ಮೈತ್ರಿ ಸರ್ಕಾರದ ಕಾರ್ಯಚಟುವಟಿಕೆಗೆ ರಾಜ್ಯದ ಜನ ಖುಷಿಪಟ್ಟಿದ್ದಾರೆ. ಕುಮಾರಸ್ವಾಮಿ ಯವರಿಗೆ ರಾಜ್ಯದ ಜನ್ರ ಬೆಂಬಲ ಸಿಕ್ಕಿದೆ. ದೇವೇಗೌಡ್ರ ಚಾಣಕ್ಯ ನಡುವಳಿಕೆಯಿಂದ ಗೆಲುವು ಸಾಧಿಸಿದೆ. ಗೌಡ್ರು ಬಳ್ಳಾರಿಯಲ್ಲಿ ನಡೆಸಿದ ಭಾಷಣ ಬಳ್ಳಾರಿ ಜನರ ಕಣ್ಣು ತೆರೆಸಿತ್ತು.ಇದ್ರ ಜೊತೆಗೆ ಡಿಕೆಶಿ, ಸಿದ್ದರಾಮಯ್ಯ ಎಲ್ಲರ ಶ್ರಮ ಒಗ್ಗೂಡಿ ಮೈತ್ರಿಗೆ ಗೆಲುವು ಸಿಕ್ಕಿದೆ.
- ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
12:20 PM (IST) Nov 06
ನಿರೀಕ್ಷೆಯಂತೆ ರಾಮನಗರದ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲ್ಲುವುದು ಬಹುತೇಕ ಖಚಿತವಾಗಿದೆ.
20ನೇ ಸುತ್ತು ಕೊನೆ ಸುತ್ತು ಮುಗಿಯುವ ಹೊತ್ತಿಗೆ ಅಭ್ಯರ್ಥಿಗಳು ಪಡೆದ ಮತಗಳು...
ಅನಿತಾ ಕುಮಾರಸ್ವಾಮಿ -125043
ಬಿಜೆಪಿ : 15906
ಅಂತರ : 109137
ನೋಟಾ: 2909
11:52 AM (IST) Nov 06
11:40 AM (IST) Nov 06
ಬಳ್ಳಾರಿಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರ ಬಿದಿದ್ದು, ಬಿಜೆಪಿ ಅಭ್ಯರ್ಥ ಸೋಲಿಗೆ ಶ್ರೀರಾಮುಲು ಅವರೇ ಹೊಣೆ ಹೊತ್ತಿದ್ದಾರೆ.
11:25 AM (IST) Nov 06
ಶಿವಮೊಗ್ಗಕ್ಕೆ ಬರಬೇಕು ಅಂತ ನಿನ್ನೆಯಿಂದ ಕರೆಬರುತ್ತಿದೆ. ಇವತ್ತು ಬಳ್ಳಾರಿಗೆ ಹೋಗಬೇಕೋ, ಬೇಡವೋ ಎಂದು ತೀರ್ಮಾನಿಸುತ್ತೇನೆ. ರಾಜಕಾರಣದಲ್ಲಿ ಕೊನೆ ಸುತ್ತಿನಲ್ಲಿ ಏನು ಬೇಕಾದ್ರೂ ಆಗಬಹುದು. ಯಾಕಂದ್ರೆ ನನಗೆ ಅನುಭವ ಇದೆ. ನನಗೆ ಬಳ್ಳಾರಿ ಚುನಾವಣೆ ಜವಾಬ್ದಾರಿ ಸಿಕ್ಕಿತ್ತು. ನನಗೆ ಅನೇಕ ಟೀಕೆ ಟಿಪ್ಪಣಿಗಳನ್ನೂ ಮಾಡಿದ್ದರು. ಮೂವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಶ್ರೀರಾಮುಲು ಅಣ್ಣನಿಗೆ ಮೊದಲಿಗೆ ಧನ್ಯವಾದ. ಈ ಚುನಾವಣೆ ಉತ್ತಮ ರೀತಿ ನಡೆಯಲು ಸಹಕರಿಸಿದ್ದಾರೆ. ನಮ್ಮಿಂದ ಕಾರ್ಯಕರ್ತರಿಗೆ ಯಾವುದೇ ತೊಂದರೆ ಆಗಬಾರದು. ಶಾಂತಕ್ಕ ಕೂಡ ಬಹಳ ಸೌಮ್ಯವಾಗಿ ಮತಯಾಚಿಸಿದ್ದಾರೆ. ಪಕ್ಷ ಭೇದ, ಜಾತಿ ಧರ್ಮ ಬಿಟ್ಟು ಮತದಾರರು ಸಹಕಾರ ನೀಡಿದ್ದಾರೆ. ಉಗ್ರಪ್ಪ ಅವರು ಪಾರ್ಲಿಮೆಂಟ್ ನಲ್ಲಿ ಉತ್ತಮ ಕೆಲಸ ಮಾಡಲಿದ್ದಾರೆ. ನಾನು ಗೆದ್ದಿದ್ದೇನೆ ಎಂದು ನಾನು ಹಿಗ್ಗಲ್ಲ. 5 ತಿಂಗಳ ಚುನಾವಣೆ ಆದರೂ ನಾವು ಅದನ್ನು ಎದುರಿಸಬೇಕು.
-ಡಿ.ಕೆ.ಶಿವಕುಮಾರ್
11:15 AM (IST) Nov 06
11:12 AM (IST) Nov 06
ಮೈತ್ರಿ ಸರ್ಕಾರದ ಹಣ ಬಲ, ಅಧಿಕಾರದ ದುರುಪಯೋಗದಿಂದ ಕಾಂಗ್ರೆಸ್- ಜೆಡಿಎಸ್ ಗೆದ್ದಿದೆ. ಜನರ ತೀರ್ಪು ನಾವು ಸ್ವಾಗತಿಸುತ್ತೇವೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಾಗುವುದು ಈ ಹಿಂದೆ ಗುಂಡ್ಲುಪೇಟೆ ಹಾಗೂ
ನಂಜನಗೂಡು ಫಲಿತಾಂಶಗಳು ಏನಾಯ್ತು? ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಯಾವ ಸರ್ಕಾರ ಅಧಿಕಾರದಲ್ಲಿರುತ್ತೋ ಅವರು ಅಧಿಕಾರ, ಹಣ ದುರ್ಬಳಕೆ ಮಾಡಿಕೊಂಡ ಗೆಲ್ಲುವುದು ಸಹಜ. ಈ ಫಲಿತಾಂಶ ಸಾರ್ವತ್ರಿಕ ಚುನಾವಣೆಯಲ್ಲಿ ಉಲ್ಟಾ ಆಗಲಿದೆ. ಫಲಿತಾಂಶದಿಂದ ಸಾರ್ವತ್ರಿಕ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜಮಖಂಡಿಯಲ್ಲಿ ಇವಿಎಂ ಮಷಿನ್ ಗಳನ್ನ ಖಾಸಗಿ ವಾಹನಗಳಲ್ಲಿ ಸಾಗಿಸಲಾಗಿದೆ.ಈ ಬಗ್ಗೆ ಬಿಜೆಪಿ ಆಯೋಗಕ್ಕೆ ದೂರು ನೀಡಿದೆ.ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ಮಾಡಿದ್ದೇವೆ.- ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
11:10 AM (IST) Nov 06
ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮನೆಗೆ ಸಚಿವ ಹೆಚ್ ಡಿ ರೇವಣ್ಣ ಭೇಟಿ ನೀಡಿದ್ದಾರೆ.
ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಇದು ಸಹಜವಾಗಿ ಜನರ ತೀರ್ಪು ಮೈತ್ರಿ ಪಕ್ಷದ ಪರ ಇರೋದನ್ನು ತೋರಿಸಿದೆ. ಶಿವಮೊಗ್ಗದಲ್ಲಿ ಹಣ ಬಲ ವರ್ಕೌಟ್ ಆಗಿದೆ ಅಷ್ಟೆ. ಕುಮಾರಸ್ವಾಮಿ ಒಳ್ಳೆ ಆಡಳಿತ ಕೊಟ್ಟಿದ್ದಾರೆ. ಅದಕ್ಕೆ ಜನರ ತೀರ್ಪು ಇದಾಗಿದೆ. ಇನ್ನಾದ್ರೂ ಸಂಪೂರ್ಣ ಸಾಲಮನ್ನಕ್ಕೆ ಕೇಂದ್ರ ಸಹಕಾರ ನೀಡಬೇಕು.
- ಎಚ್.ಡಿ.ರೇವಣ್ಣ
11:03 AM (IST) Nov 06
10:43 AM (IST) Nov 06
10:30 AM (IST) Nov 06
ಮಂಡ್ಯ ಲೋಕಸಭಾ ಬೈ ಎಲೆಕ್ಷನ್. ನಿರೀಕ್ಷೆಯಂತೆ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿನ ಸಂಭ್ರಮ ನಡೆಸಲು ಬಾರದ ಒಬ್ಬೇ ಒಬ್ಬ ಕಾರ್ಯಕರ್ತ. ಕೌಂಟಿಂಗ್ ಸೆಂಟರ್ ಸಂಪೂರ್ಣ ಬಣ ಬಣ. ಮತದಾನಕ್ಕೆ ನಿರುತ್ಸಾಹ ತೋರಿದಂತೆ, ಮತ ಎಣಿಕೆ ಕೇಂದ್ರದ ಬಳಿಯೂ ಬಾರದ ಕಾರ್ಯಕರ್ತರು.
10:23 AM (IST) Nov 06
10:21 AM (IST) Nov 06
09:41 AM (IST) Nov 06
09:40 AM (IST) Nov 06
ಬಿಜೆಪಿ ಭದ್ರಕೋಟೆಯಾದ, ಗಣಿ ನಾಡು ಬಳ್ಳಾರಿಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಮುನ್ನಡೆ ಸಾಧಿಸುತ್ತಿದ್ದಾರೆ.
09:16 AM (IST) Nov 06
ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲ್ಲುವುದು ಗ್ಯಾರಂಟಿ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಗೆಲವುದು ಬಹುತೇಕ ಖಚಿತ. ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಸ್ಪರ್ಧಿಸಿರುವುದು ಕಾಂಗ್ರೆಸ್ ಅಭ್ಯರ್ಥಿ. ಶಿವಮೊಗ್ಗದಲ್ಲೊಂದು ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಗೆದ್ದರೆ ಸಾಕೆನ್ನುವ ಆತಂಕದಲ್ಲಿದ್ದಾರೆ, ಸಿಎಂ.
09:08 AM (IST) Nov 06
ಅತ್ಯಂತ ಕುತೂಹಲ ಕೆರಳಿಸಿರುವ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಧು ಬಂಗಾರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಒಂದು ಸುತ್ತಿನಲ್ಲಿ ರಾಘವೇಂದ್ರ ಮುಂದೆ ಇದ್ದರೆ, ಮತ್ತೊಂದು ಸುತ್ತಿನಲ್ಲಿ ಮಧು ಹೆಚ್ಚಿನ ಮತ ಪಡೆಯುತ್ತಿದ್ದಾರೆ.
09:04 AM (IST) Nov 06
ಬಳ್ಳಾರಿ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ಈ ಚುನಾವಣೆಯಲ್ಲಿ ನಾನೇ ಗೆಲುವು ಸಾಧಿಸುತ್ತೇನೆ ಅನ್ನೋ ವಿಶ್ವಾಸ ಇದೆ. ನೂರಕ್ಕೆ ನೂರರಷ್ಟು ಗೆಲುವು ನಮ್ಮದೆ. ಜನರು ಪ್ರಬುದ್ಧರು ಇದ್ದಾರೆ. ಮತದಾರರು ಹಿಂದಿನ ಅಭಿವೃದ್ಧಿ ನೋಡಿ ನಮಗೆ ಮತಹಾಕಿದ್ದಾರೆ.
-ಉಗ್ರಪ್ಪ, ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ
08:58 AM (IST) Nov 06
08:55 AM (IST) Nov 06
ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪಗೆ ಭಾರೀ ಮುನ್ನಡೆ. ಸುಮಾರು 10 ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡ ಉಗ್ರಪ್ಪ.
08:51 AM (IST) Nov 06
ಜಮಖಂಡಿ 2ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಮುನ್ನಡೆ ಸಾಧಿಸಿದ್ದಾರೆ.
08:49 AM (IST) Nov 06
ಬಳ್ಳಾರಿಯಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಮುನ್ನಡೆ ಸಾಧಿಸಿದ್ದಾರೆ.
08:40 AM (IST) Nov 06
ಮತ ಎಣಿಕೆ ಶುರುವಾದರೂ ಕೇಂದ್ರದತ್ತ ಸುಳಿಯದ ಕಾರ್ಯಕರ್ತರು. ಮತ ಎಣಿಕೆ ಕೇಂದ್ರದ ಸುತ್ತ ಭಾರಿ ಭದ್ರತೆ. ಮತ ಎಣಿಕೆ ಕೇಂದ್ರದ ಮುಂಭಾಗ ಮೂರು ಹಂತದ ಭದ್ರತೆ. ಕಾರ್ಯಕರ್ತರನ್ನು ಕಾಲೇಜು ಕಾಂಪೌಂಡ್ ಹೊರಭಾಗದಲ್ಲಿ ನಿಲ್ಲಿಸಿರುವ ಪೊಲೀಸರು. ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿದೆ ಎಣಿಕೆ ಕಾರ್ಯ.
08:26 AM (IST) Nov 06
ಶಿವಮೊಗ್ಗದಲ್ಲಿ ಅಂಚೆ ಮತಗಳ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರಗೆ 34 ಮತಗಳ ಮುನ್ನಡೆ ಸಾಧಿಸಿದ್ದಾರೆ.
08:14 AM (IST) Nov 06
ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಚೆ ಮತಗಳ ಎಣಿಕೆ ಆರಂಭವಾಗಿದ್ದು, ಆರಂಭದಿಂದಲೇ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
07:56 AM (IST) Nov 06
ಮಂಡ್ಯ ಸರ್ಕಾರಿ ಸ್ವಾಯತ್ತ ಕಾಲೇಜಿನಲ್ಲಿರುವ ಮತ ಏಣಿಕೆಯ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದೆ. ಮಂಡ್ಯ ಸರ್ಕಾರಿ ಸ್ವಾಯತ್ತ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಜಿಲ್ಲಾಧಿಕಾರಿ ಎನ್.ಮಂಜುಶ್ರಿ ಮತ ಏಣಿಕಾ ಕೇಂದ್ರದ ಬಳಿ ಆಗಮಿಸಿ ಸ್ಟ್ರಾಂಗ್ ರೂಂ ಪರಿಶೀಲಿಸಿದರು.
07:32 AM (IST) Nov 06
ಚುನಾವಣಾಧಿಕಾರಿ ಇಕ್ರಂ ಶರೀಫ್ ನೇತೃತ್ವದಲ್ಲಿ ಜಮಖಂಡಿಯ ಮಿನಿವಿಧಾನಸೌಧದಲ್ಲಿರುವ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗಿದೆ.
07:13 AM (IST) Nov 06
ಜಮಖಂಡಿ ವಿಧಾನಸಭೆ ಉಪಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಜಮಖಂಡಿ ನಗರದ ಮಿನಿ ವಿಧಾನಸೌಧದತ್ತ ಅಧಿಕಾರಿಗಳ ತಂಡ ಆಗಮಿಸಿದೆ. ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.