ಮುಳುಗುವ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್‌ ‘ಕೈ’ ಹಿಡಿದ ಕರ್ನಾಟಕ ಮತದಾರ: ಲೋಕಸಭೆ ಚುನಾವಣೆಗೂ ಬೂಸ್ಟರ್ ಡೋಸ್‌!

By BK Ashwin  |  First Published May 13, 2023, 8:24 PM IST

ಅಕ್ಟೋಬರ್ 2022 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ ಅದೃಷ್ಟ ಖುಲಾಯಿಸುತ್ತಿದೆ. ಮುಳುಗುತ್ತಿರುವವರಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ಮಲ್ಲಿಕಾರ್ಜುನ ಖರ್ಗೆ ಅವರು ಕೈ ಪಕ್ಷದ ಪರವಾಗಿ ಲಕ್ಕಿ ಹ್ಯಾಂಡ್‌ ಎಂದು ಕೆಲ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ.


ಬೆಂಗಳೂರು (ಮೇ 13, 2023): ಕಾಂಗ್ರೆಸ್‌ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಭರ್ಜರಿ ಗೆಲುವು ಸಾಧಿಸಿದೆ. ಕಳೆದ 4 ದಶಕಗಳಲ್ಲಿ ಕಾಂಗ್ರೆಸ್‌ ಈ ಹಿಂದೆ ಎಂದೂ ಕಾಣದ ಗೆಲುವನ್ನು ಕಂಡಿದೆ. ಇದಕ್ಕೆ ರಣದೀಪ್‌ ಸುರ್ಜೇವಾಲಾ, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಪ್ರಮುಖ ಕಾರಣರು ಎನ್ನಲಾಗಿದೆ. 

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 80 ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಆದರೂ, ಜೆಡಿಎಸ್‌ನೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿದರೂ ಅದು ಹೆಚ್ಚು ಕಾಳ ಉಳಿಯಲಿಲ್ಲ. ಇನ್ನೊಂದೆಡೆ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದ 28ರ ಪೈಕಿ 25 ಸ್ಥಾನಗಳನ್ನು ಗೆದ್ದಿತ್ತು. ಇನ್ನು, ದೇಶದ ಅನೇಕ ರಾಜ್ಯಗಳ ಪ್ರಮುಖ ಚುನಾವಣೆಗಳಲ್ಲೂ ಕಾಂಗ್ರೆಸ್‌ ಬಹುತೇಕ ರಾಜ್ಯಗಳಲ್ಲಿ ಸೋಲನುಭವಿಸಿತ್ತು. 

Tap to resize

Latest Videos

ಇದನ್ನು ಓದಿ: ಕರ್ನಾಟಕ ಗೆದ್ದು ರಾಹುಲ್‌ ಅನರ್ಹತೆಗೆ ಉತ್ತರ ನೀಡೋಣ: ಸಾಮೂಹಿಕ ರಾಜೀನಾಮೆಗೆ ಮುಂದಾದ ಸಂಸದರಿಗೆ ಪ್ರಿಯಾಂಕಾ ಸಲಹೆ

ಅಲ್ಲದೆ, ಬಿಜೆಪಿ ಸಹ ಕಾಂಗ್ರೆಸ್‌ ಮುಕ್ತ ಭಾರತ ಅಭಿಯಾನ ಎಂದು ಬಹುತೇಕ ರಾಜ್ಯಗಳಲ್ಲಿ ಅಬ್ಬರಿಸುತ್ತಲೇ ಇತ್ತು,ಅಂದ್ರೆ ಅನೇಕ ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿತ್ತು ಹಾಗೂ ಬಿಜೆಪಿಯೇತರ ರಾಜ್ಯಗಳಲ್ಲೂ ತನ್ನ ಸ್ಥಾನಗಳನ್ನು ಹೆಚ್ಚುಗೊಳಿಸಿಕೊಂಡಿತ್ತು. ಇನ್ನೊಂದೆಡೆ, ಕಾಂಗ್ರೆಸ್‌ ಬಹುತೇಕ ರಾಜ್ಯಗಳಲ್ಲಿ ಸೋಲನುಭವಿಸುತ್ತಿತ್ತು.

ಆದರೆ, ಅಕ್ಟೋಬರ್ 2022 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ ಅದೃಷ್ಟ ಖುಲಾಯಿಸುತ್ತಿದೆ. ಮುಳುಗುತ್ತಿರುವವರಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ಮಲ್ಲಿಕಾರ್ಜುನ ಖರ್ಗೆ ಅವರು ಕೈ ಪಕ್ಷದ ಪರವಾಗಿ ಲಕ್ಕಿ ಹ್ಯಾಂಡ್‌ ಎಂದು ಕೆಲ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ. ಖರ್ಗೆ ಅಧಿಕಾರ ಹಿಡಿದ ಕೂಡಲೇ ಹಿಮಾಚಲ ಪ್ರದೇಶದಲ್ಲಿ ‘ಕೈ’ ಪಕ್ಷಕ್ಕೆ ಗೆಲುವು ಸಿಕ್ಕಿತು. ಈ ಗೆಲುವು ಅನೇಕ ರಾಜಕೀಯ ಪಂಡಿತರಲ್ಲಿ ಹಾಗೂ ಕಾಂಗ್ರೆಸ್‌ ಪಡಸಾಲೆಯಲ್ಲೂ ಆಶ್ಚರ್ಯ ಮೂಡಿಸಿತ್ತು. ಗುಜರಾತ್ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತವರು ರಾಜ್ಯ ಹಿಮಾಚಲ ಪ್ರದೇಶದಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿಗೆ ನಿಜಕ್ಕೂ ಮುಖಭಂಗವಾಯ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಚಾಣಕ್ಯನಾಗಿ ಗೆದ್ದ ಹರಿಯಾಣದ ಜಾದೂಗಾರ ರಣದೀಪ್‌ ಸುಜೇರ್ವಾಲ!

ಈಗ ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ವಿಷಸರ್ಪ ಎಂದಿದ್ದು ಹಾಗೂ ಪುತ್ರ ಪ್ರಿಯಾಂಕ್‌ ಖರ್ಗೆ ನಾಲಾಯಕ್‌ ಎಂದಿದ್ರೂ ಬಿಜೆಪಿ ಪಾಲಿಗೆ ಅಷ್ಟು ಪ್ಲಸ್‌ ಆಗಿಲ್ಲ. ಆದರೆ, ಕಾಂಗ್ರೆಸ್‌ನ ‘ಪೇಸಿಎಂ’ ಕ್ಯಾಂಪೇನ್‌ ಹಾಗೂ ‘40 % ಕಮಿಷನ್‌’ ಕ್ಯಾಂಪೇನ್‌ ಕಾಂಗ್ರೆಸ್‌ ಪಾಲಿಗೆ ಹೆಚ್ಚು ಪ್ಲಸ್‌ ಆಗಿರುವುದಂತೂ ಹೌದು. ಅದರ ಜತೆಗೆ, ಕಾಂಗ್ರೆಸ್‌ನ ಬಿಟ್ಟಿ ಭಾಗ್ಯಗಳ ಘೋಷಣೆ ಹಾಗೂ ಗ್ಯಾರಂಟಿಗಳೂ ಸಹ ಕೈ ಪಾಲಿಗೆ ವರವಾಯ್ತು. ಅಲ್ಲದೆ, ರಣದೀಪ್‌ ಸುರ್ಜೇವಾಲಾ ಕರ್ನಾಟಕ ಚುನಾವಣೆ ಪಾಲಿಗೆ ಚಾಣಕ್ಯರಾಗಿದ್ದಾರೆ ಎಂದೂ ಹೇಳಲಾಗ್ತಿದೆ. ರಾಹುಲ್‌ ಗಾಂಧಿಯ ಭಾರತ್‌ ಜೋಡೋ ಯಾತ್ರೆಗೂ ಅಭೂತಪೂರ್ವ ಬೆಂಬಲ ಸಿಕ್ಕಿತ್ತು.

ಈ ಹಿನ್ನೆಲೆ, ಈ ಮೂಲಕ 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್‌ಗೆ ಹೆಚ್ಚು ಬೂಸ್ಟರ್‌ ಡೋಸ್‌ ಆಗಿದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಂತೆ, ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಸೋಲುತ್ತೆ. ಅನರ್ಹಗೊಂಡಿರುವ ರಾಹುಲ್‌ ಗಾಂಧಿ ಮುಂದಿನ ಪ್ರಧಾನಿಯಾಗ್ತಾರೆ ಎಂದೂ ಕೆಲ ವಾದಗಳು ಈಗಾಗಲೇ ಶುರುವಾಗಿವೆ.

ಇದನ್ನೂ ಓದಿ: Karnataka Election Result 2023: ಸರಳತೆ ಮೆರೆದ ರಾಹುಲ್‌, ಪ್ರಿಯಾಂಕಾ ಗಾಂಧಿಗೆ ಜೈ ಎಂದ ಕರ್ನಾಟಕ ಮತದಾರ

ಒಟ್ಟಾರೆ, ರಾಹುಲ್‌ ಗಾಂಧಿ ಅನರ್ಹತೆ ವಿಷಯದಿಂದ ತೀವ್ರ ಆಕ್ರೋಶಗೊಂಡಿದ್ದ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಕಾಂಗ್ರೆಸ್‌ ಮುಂದೇನು ಮಾಡಬೇಕು ಎಂಬ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿತ್ತು. ಆ ವೇಳೆ, ಕಾಂಗ್ರೆಸ್ಸಿನ ಎಲ್ಲ ಸಂಸದರು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ನಾಯಕರೊಬ್ಬರು ಸಲಹೆ ಮಾಡಿದ್ದರೆ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದು ನಾವು ನೀಡುವ ತಕ್ಕ ತಿರುಗೇಟಾಗಿರುತ್ತದೆ ಎಂದು ಪಕ್ಷದ ನಾಯಕ ಪ್ರಿಯಾಂಕಾ ಗಾಂಧಿ ವಾದಿಸಿದ್ದರು. ಅದರಂತೆ, ಪ್ರಿಯಾಂಕಾ ಗಾಂಧಿ ವಾದ್ರಾ ರಾಜ್ಯ ಚುನಾವಣೆಯಲ್ಲಿ ಹೆಚ್ಚು ಪ್ರಚಾರ ಮಾಡಿ ಗೆಲುವು ತಂದುಕೊಡುವಲ್ಲಿ ಇವರೂ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. 

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

ಇದನ್ನೂ ಓದಿ: ಕರ್ನಾಟಕದಲ್ಲಿ ಚಾಣಕ್ಯನಾಗಿ ಗೆದ್ದ ಹರಿಯಾಣದ ಜಾದೂಗಾರ ರಣದೀಪ್‌ ಸುಜೇರ್ವಾಲ!

 
click me!