Karnataka Election Results 2023: ಚುನಾವಣಾ ಕಣದಲ್ಲಿ ಗೆದ್ದು ಬೀಗಿದ ಅಣ್ಣ-ತಂಗಿ!

By Govindaraj SFirst Published May 13, 2023, 8:08 PM IST
Highlights

ಈಗಾಗಲೇ ರಾಜ್ಯದ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಇದರಲ್ಲಿ ಹಲವಾರು ರಕ್ತಸಂಬಂಧಿಗಳು ಸೋಲು-ಗೆಲುವಿನ ರುಚಿ ಕಂಡಿದ್ದಾರೆ. ಈ ಪೈಕಿ ಹಲವು ಜನ ಅಪ್ಪ- ಮಕ್ಕಳು ಇದ್ದಾರೆ. ಜತೆಗೆ ಅಣ್ಣ-ತಂಗಿ ಕೂಡ ಇದ್ದಾರೆ.
 

ಬೆಂಗಳೂರು (ಮೇ.13): ಈಗಾಗಲೇ ರಾಜ್ಯದ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಇದರಲ್ಲಿ ಹಲವಾರು ರಕ್ತಸಂಬಂಧಿಗಳು ಸೋಲು-ಗೆಲುವಿನ ರುಚಿ ಕಂಡಿದ್ದಾರೆ. ಈ ಪೈಕಿ ಹಲವು ಜನ ಅಪ್ಪ- ಮಕ್ಕಳು ಇದ್ದಾರೆ. ಜತೆಗೆ ಅಣ್ಣ-ತಂಗಿ ಕೂಡ ಇದ್ದಾರೆ. ಈ ನಡುವೆ ಬೆಂಗಳೂರಿನ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಎಸ್. ರಘು ಹಾಗೂ ಮಹದೇವಪುರ ಕ್ಷೇತ್ರದಲ್ಲಿ ಜಯಶಾಲಿಯಾಗಿರುವ ಮಂಜುಳಾ ಲಿಂಬಾವಳಿ ಸ್ವಂತ ಅಣ್ಣ ಮತ್ತು ತಂಗಿ ಎಂಬುದು ವಿಶೇಷ. 

ಇನ್ನು ಮಂಜುಳಾ ಅವರು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಅವರ ಪತ್ನಿ. ಮಹದೇವಪುರ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿ, ಕೊನೆಯ ಹಂತದಲ್ಲಿ ಪ್ರಕಟಿಸಿದ್ದ 10 ಅಭ್ಯರ್ಥಿಗಳ ಪಟ್ಟಿಯಲ್ಲಿ ಲಿಂಬಾವಳಿ ಅವರ ಪತ್ನಿ ಮಂಜುಳಾ ಅವರಿಗೆ ಟಿಕೆಟ್ ನೀಡಿತ್ತು. ಅವರು ಇದೀಗ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಅಣ್ಣ ಎಸ್. ರಘು ಅವರಂತೂ ಕಳೆದ ಹಲವು ಚುನಾವಣೆಗಳಿಂದ ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ ಜಯಭೇರಿ ಬಾರಿಸುತ್ತಲೇ ಬಂದಿದ್ದಾರೆ.

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!

ಸಿವಿ ರಾಮನ್ ನಗರ ಕ್ಷೇತ್ರದ ಪರಿಚಯ: ಸಿವಿ ರಾಮನ್ ನಗರವು ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ  ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಬೆಂಗಳೂರಿನಲ್ಲಿ ನೆಲೆಸಿದ್ದ ಖ್ಯಾತ ವಿಜ್ಞಾನಿ, ಭಾರತ ರತ್ನ ಸರ್ ಸಿ.ವಿ. ರಾಮನ್ ಅವರ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿದೆ. ಇಲ್ಲಿ ಬಾಗ್ಮನೆ ಟೆಕ್ ಪಾರ್ಕ್ ಇದೆ. ಈ ಕ್ಷೇತ್ರ ಇಂದಿರಾನಗರ, ಕಗ್ಗದಾಸಪುರ ಮತ್ತು ಬೈಯಪ್ಪನಹಳ್ಳಿಯಿಂದ ಸುತ್ತುವರಿದಿದೆ. ಇದು ಒಂದು ಉನ್ನತ ಮಾರುಕಟ್ಟೆ ಪ್ರದೇಶವಾಗಿದೆ. ಇದನ್ನು ಗ್ರೇಟರ್ ಇಂದಿರಾನಗರ ಎಂದೂ ಕರೆಯಲಾಗುತ್ತದೆ. ಇನ್ನು ಬಿಬಿಎಂಪಿಯ ಬೆನ್ನಿಗಾನಹಳ್ಳಿ, ಸಿವಿ ರಾಮನ್ ನಗರ, ನ್ಯೂ ತಿಪ್ಪಸಂದ್ರ, ಸರ್ವಜ್ಞ ನಗರ, ಹೊಯ್ಸಳ ನಗರ, ಜೀವನ್ ಭೀಮಾ ನಗರ, ಕೋನೇನ ಅಗ್ರಹಾರ ಸೇರಿದಂತೆ 7 ವಾರ್ಡ್‌ಗಳನ್ನು ಹೊಂದಿದೆ.

ಸವದಿ-ಹೆಬ್ಬಾಳ್ಕರ್-ಸತೀಶ್‌ ಕಾಂಬಿನೇಷನ್: ಬೆಳಗಾವಿ ಕೇಸರಿ ಕೋಟೆ ಛಿದ್ರ

ಕ್ಷೇತ್ರದ ಮತದಾರರ ವಿವರ: ಸಿವಿ ರಾಮನ್ ನಗರದಲ್ಲಿ ಒಟ್ಟು 2,60,811 ಮತದಾರರಿದ್ದಾರೆ. ಈ ಪೈಕಿ ಎಸ್‌ಸಿ – 60,000 ಮತಗಳಿದ್ದರೆ, ಇತರೇ ಸಮುದಾಯದ ವೋಟ್ 66,669 ಆಗಿದೆ. ಇನ್ನುಳಿದಂತೆ ತಮಿಳು – 40,000, ಒಕ್ಕಲಿಗ – 20,000, ಅಲ್ಪಸಂಖ್ಯಾತ –  10,000, ಲಿಂಗಾಯತ – 8,000, ಕುರುಬ – 18,000 ಹಾಗೂ ಬೋವಿ – 8,000 ಮತದಾರರಿದ್ದಾರೆ.

click me!