Karnataka Election Result 2023: ಬಿಜೆಪಿ ಸೋಲಿಗೆ ಆಡಳಿತ ವಿರೋಧಿ ಅಲೆ ಮುಖ್ಯ ಕಾರಣವಾಗಿರಬಹುದು, ಜೋಶಿ

By Girish Goudar  |  First Published May 13, 2023, 8:10 PM IST

ನಾವು ಫೇಲ್ ಆಗಿದ್ದೇವೆ, ನಮ್ಮ ಎಂಜಿನ್ ಫೇಲ್ ಆಗಿದೆ. ಆಡಳಿತ ವಿರೋಧಿ ಅಲೆ ಮುಖ್ಯ ಕಾರಣವಾಗಿರಬಹುದು. ಲೋಕಸಭೆ ಚುನಾವಣೆ ಮೇಲೆ ಇದು ಪರಿಣಾಮ ಬೀರಲ್ಲ: ಪ್ರಹ್ಲಾದ್ ಜೋಶಿ 


ಹುಬ್ಬಳ್ಳಿ(ಮೇ.13): ನಾವು ಫೇಲ್ ಆಗಿದ್ದೇವೆ, ನಮ್ಮ ಎಂಜಿನ್ ಫೇಲ್ ಆಗಿದೆ. ಆಡಳಿತ ವಿರೋಧಿ ಅಲೆ ಮುಖ್ಯ ಕಾರಣವಾಗಿರಬಹುದು. ಲೋಕಸಭೆ ಚುನಾವಣೆ ಮೇಲೆ ಇದು ಪರಿಣಾಮ ಬೀರಲ್ಲ. 2013 ರಲ್ಲಿ ಕಾಂಗ್ರೆಸ್‌ಗೆ ಭಾರೀ ಬಹುಮತ ಬಂದಿತ್ತು.  ಆದರೆ ಒಂದು ವರ್ಷದ ಅವಧಿಯಲ್ಲಿ ನಡೆದ ಲೋಕಸಭೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗಳಿಸಿತ್ತು. 2019 ರಲ್ಲಿಯೂ ಬಿಜೆಪಿ 25 ಸಂಸದ ಸ್ಥಾನ ಗಳಿಸಿತ್ತು ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. 

ಇಂದು(ಶನಿವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಲಿಂಗಾಯತ ನಾಯಕರ ಕಡೆಗಣೆನೆಯ ಪ್ರಶ್ನೆಯೇ ಬಂದಿಲ್ಲ. ಯಡಿಯೂರಪ್ಪ ನಂಬರ್ ಒನ್ ಲಿಂಗಾಯತ ನಾಯಕರು, ಪ್ರಚಾರ ಮಾಡಿದ್ದಾರೆ ಅಂತ ಹೇಳಿದ್ದಾರೆ. 
ಮೋದಿ ಸಂಚಾರ ಮಾಡಿದಲ್ಲಿ‌ ಬಿಜೆಪಿಗೆ ಸೋಲು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್ ಜೋಶಿ, ಮೋದಿ ಬಂದ ಕಾರಣಕ್ಕೆ ಬಿಜೆಪಿ ಸೋತಿದೆ ಅನ್ನೋಕೆ ಆಗಲ್ಲ. ಉತ್ತರ ಪ್ರದೇಶದಲ್ಲಿ‌ ಮೋದಿ‌ ಪ್ರಚಾರ ಮಾಡಿದಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿತ್ತು. ರಾಹುಲ್ ಹೆಚ್ಚು ಕಡೆ ಪ್ರಚಾರ ಮಾಡಿಲ್ಲ. ಹಾಗಾಗಿ ಹೆಚ್ಚು ಕಾಂಗ್ರೆಸ್ ಗೆದ್ದಿದೆ ಅಂತ ತಿಳಿಸಿದ್ದಾರೆ. 

Tap to resize

Latest Videos

DHARWAD ELECTION RESULT 2023: ಶೆಟ್ಟರ್‌ ಸೋತರೂ ಧಾರವಾಡದಲ್ಲಿ 'ಕೈ' ಹಿಡಿದ ಮತದಾರ!

ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್ ಸೋಲು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮ ಪಕ್ಷ ಗೆದ್ದಿದೆ. ಶೆಟ್ಟರ್ ಸೋಲು ಅನ್ನೋದಕ್ಕಿಂತ, ಬಿಜೆಪಿ ಗೆದ್ದಿದೆ.  ಲೋಕಸಭೆ, ವಿಧಾನಸಭೆ ಚುನಾವಣೆ ನಡೆಯೋದು ಬೇರೆ ಬೇರೆ ರೀತಿ ಆಗಿರಲ್ಲ ಅಂತ ಹೇಳಿದ್ದಾರೆ. 

click me!