ಹಣಕ್ಕೆ ಮತ ಮಾರಿಕೊಳ್ಳದಿರಿ: ಮತದದಾರರಿಗೆ ಕಿವಿಮಾತು ಹೇಳಿದ ಮಾಜಿ ಸಚಿವ ರಾಯರೆಡ್ಡಿ

By Kannadaprabha News  |  First Published Apr 8, 2023, 3:06 PM IST

ಜನರು ತಮ್ಮ ಮತವನ್ನು .500, .1000ಕ್ಕೆ ಮಾರಿಕೊಳ್ಳಬಾರದು.ಅಭಿವೃದ್ಧಿಯ ಚರ್ಚೆ ಮಾಡಿ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮತದಾರರಿಗೆ ಕಿವಿ ಮಾತು ಹೇಳಿದರು.


ಕುಕನೂರು (ಏ.8) : ಜನರು ತಮ್ಮ ಮತವನ್ನು .500, .1000ಕ್ಕೆ ಮಾರಿಕೊಳ್ಳಬಾರದು.ಅಭಿವೃದ್ಧಿಯ ಚರ್ಚೆ ಮಾಡಿ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ತಾಲೂಕಿನ ದ್ಯಾಂಪುರು, ರಾಜೂರು ಗ್ರಾಮದಲ್ಲಿ ಜರುಗಿದ ಕಾಂಗ್ರೆಸ್‌ ಕಾರ್ಯಕರ್ತ(Congress)ರ ಸಭೆನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಬೆಲೆ ಏರಿಕೆಯಿಂದ ಜನ ಹೈರಾಣ ಆಗಿದ್ದಾರೆ. ಪೆಟ್ರೋಲ್‌,ಡಿಸೇಲ್‌,ಅಡುಗೆ ಎಣ್ಣೆ, ಗ್ಯಾಸ್‌ ಸಿಲಿಂಡರ್‌, ಕಬ್ಬಿಣ,ಗೊಬ್ಬರ ಹೀಗೆ ಬೆಲೆ ಏರಿಕೆ ಬಡ ಜನರ ಹೊಟ್ಟೆಮೇಲೆ ಬರೆ ಎಳೆಯುತ್ತಿವೆ. ಬಿಜೆಪಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ನಿರುದ್ಯೋಗ ತಾಂಡವಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ 2 ಕೋಟಿ ಉದ್ಯೋಗದ ಆಸೆ ತೋರಿಸಿದ್ದರು, ಅವು ಎಲ್ಲ ಈಗ ಮರಿಚೀಕೆ ಆಗಿವೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಸಂಕೇತ ಆಗಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಹಾಲಪ್ಪ ಆಚಾರ ಅವರು ಉನ್ನತ ಖಾತೆಗಳ ಸಚಿವರಾಗಿದ್ದೂ ಸಹ ಕ್ಷೇತ್ರಕ್ಕೆ ಹೊಸ ಅಂಗನವಾಡಿಗಳ ಮಂಜೂರಾತಿ ಇಲ್ಲ. ಅಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸ್ವಂತ ಕಟ್ಟಡವಿಲ್ಲ. ಹಿರಿಯ ನಾಗರಿಕರಿಗೆ ಕ್ಷೇತ್ರಕ್ಕೆ ಎರಡು ವೃದ್ಧಾಶ್ರಮ ತರಲಿಲ್ಲ ಎಂದರು.

Latest Videos

undefined

ನನ್ನ ಯೋಜನೆಗಳಿಗೆ ಪ್ರಚಾರ ಪಡೆಯುತ್ತಿರುವ ಬಿಜೆಪಿ: ಬಸವರಾಜ ರಾಯರೆಡ್ಡಿ

ಯಲಬುರ್ಗಾ ಕ್ಷೇತ್ರ(Yalburga assembly constituency)ದಲ್ಲಿ ರಾಜಕೀಯ ಬೇಡ,ಅಭಿವೃದ್ಧಿ ಚರ್ಚೆ ಆಗಲಿ.ಅಭಿವೃದ್ಧಿ ಮಾನದಂಡದ ಮೇಲೆ ಮತದಾನ ಮಾಡಿ,ಹಣ,ಹೆಂಡ, ಜಾತಿಗಳ ಆಮಿಷಕ್ಕೆ ಮತ ಮಾರಿಕೊಳ್ಳದಿರಿ ಎಂದರು.

ಯಲಬುರ್ಗಾ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಕುಕನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹನುಮಂತಗೌಡ ಚಂಡೂರು, ವೀರನಗೌಡ ಬಳೂಟಗಿ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ, ಸುಧೀರ ಕೊರ್ಲಹಳ್ಳಿ, ಬಸವರಾಜ ಮಾಸೂರು, ರಾಮಣ್ಣ ನೋಟಗಾರ, ಪಪಂ ಸದಸ್ಯ ಗಗನ ನೋಟಗಾರ, ಮಂಜುನಾಥ ಕಡೆಮನಿ, ದೇವಪ್ಪ ಮರಡಿ ಇತರರಿದ್ದರು.

'ಪ್ರಜಾಧ್ವನಿ' ಯಾತ್ರೆಗೂ ಮುನ್ನ 'ಕೈ' ನಾಯಕರ ನಡುವೆ 'ಏರುಧ್ವನಿ': ಬ್ಯಾನರ್ ಹಾಕೋ ವಿಚಾರದಲ್ಲಿ ಬೀದಿ ರಂಪಾಟ

ಏ.13ರಂದು ಕುಕನೂರಿಗೆ ಸಿದ್ದರಾಮಯ್ಯ:

ಕುಕನೂರಿನ ವಿದ್ಯಾನಂದ ಗುರುಕುಲ ಕಾಳೇಜ್‌ ಆವರಣದಲ್ಲಿ ಏ.13ರಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಕುಕನೂರಿಗೆ ಪಕ್ಷದ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.ಅಂದು ಅಪಾರ ಸಂಖ್ಯೆಯಲ್ಲಿ ಜನರು ಬರಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

click me!