ತೇರದಾಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವೆ ಉಮಾಶ್ರೀಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು ಎಂದು ಹಲವು ಮಠಗಳ ಸ್ವಾಮೀಜಿಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.
ಬೆಂಗಳೂರು (ಏ.08): ರಾಜ್ಯದಲ್ಲಿ ಕಾಂಗ್ರೆಸ್ ಟಿಕೆಟ್ ('ಬಿ' ಫಾರ್ಮ್) ಗಾಗಿ ಇಷ್ಟು ದಿನ ಕೇವಲ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಪೈಪೋಟಿ ಮಾಡುತ್ತಿದ್ದರು. ಆದರೆ, ಈಗ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವೆ ಉಮಾಶ್ರೀಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು ಎಂದು ಹಲವು ಮಠಗಳ ಸ್ವಾಮೀಜಿಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ದಿನಾಂಕಕ್ಕೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿಯಿದ್ದರೂ ರಾಜಕೀಯ ಪಕ್ಷಗಳು ಶೇ.100 ರಷ್ಟು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್‌ನಿಂದ ಮೊದಲ ಪಟ್ಟಿಯಲ್ಲಿ 124 ಹಾಗೂ ಎರಡನೇ ಪಟ್ಟಿಯಲ್ಲಿ 42 ಸೇರಿ ಒಟ್ಟಿ 166 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಬಾಕಿ 54 ವಿಧಾನಸಭಾ ಕ್ಷೇತ್ರಗಳ ಫೈಟ್ ಹೆಚ್ಚಾಗಿದೆ. ಈಗ ಹಲವು ಮಠಾಧೀಶರು ಕೆಲವು ಅಭ್ಯರ್ಥಿಗಳಿಗೆ ಕಾಂಗ್ರೆಸ್‌ನಿಂದ ಬಿ ಫಾರ್ಮ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಮಾಜಿ ರಾಜ್ಯಪಾಲರ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಡಿ: ಮುಸ್ಲಿಂ ಸಘಟನೆಯಿಂದ AICCಗೆ ಪತ್ರ
ತೇರದಾಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು ಎಂದು ಅಭಿನವ ರೇವಣ ಸಿದ್ದೇಶ್ವರ್ ಶ್ರೀ, ಮೃತ್ಯುಂಜಯಶ್ರೀ, ಪಂಡಿತ ಪಟ್ಟಣ್ ಶ್ರೀ, ಮಲ್ಲಪ್ಪ ಬಾವಿಕಟ್ಟಿ, ಚಂದ್ರಶೇಖರ ಶಿವಪೂಜಿ ಸ್ವಾಮೀಜಿಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿಗಳಾದ ಡಾ.ಮಲ್ಲೇಶಪ್ಪ ಎಸ್.ದಡ್ಡೆನವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಉಮಾಶ್ರೀಗೆ ಟಿಕೆಟ್ ನೀಡಿದರೆ ಕಾಂಗ್ರೆಸ್‌ಗೆ ಸೋಲು: ತೇರದಾಳದಲ್ಲಿ ಕ್ಷೇತ್ರದಲ್ಲಿ ಒಟ್ಟು 60 ಸಾವಿರ ಹಟಗಾರ ಲಿಂಗಾಯತರಿದ್ದಾರೆ. ಅಂದರೆ ಲಿಂಗಾಯತ ನೇಕಾರರಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ 10 ಲಕ್ಷ ನಮ್ಮ ಸಮಾಜದ ಜನರಿದ್ದಾರೆ. ನಮ್ಮ ಸಮುದಾಯ ಬಹಳ ಹಿಂದಿನಿಂದಲೂ ಕಾಂಗ್ರೆಸ್ ಜೊತೆಗಿದೆ. ಮಲ್ಲೇಶಪ್ಪ ದಡ್ಡೆನವರ ಕುಟುಂಬ ಜೊತೆಗಿದೆ. ಹಾಗಾಗಿ ಡಾ.ಮಲ್ಲೇಶಪ್ಪಗೆ ಟಿಕೆಟ್ ನೀಡಬೇಕು. ಅವರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಗೆಲ್ಲಬಹುದು. ಉಮಾಶ್ರೀಗೆ ಟಿಕೆಟ್ ನೀಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಉಮಾಶ್ರೀ ಈಗಾಗಲೇ ಗೆದ್ದುಸಚಿವರಾಗಿದ್ದರು. ಈಗ ಯುವಕ ಮಲ್ಲೇಶಪ್ಪಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ನಾಯಕರ ಮೇಲೆ ಶ್ರೀಗಳು ಒತ್ತಾಯ ಹೇರಿದ್ದಾರೆ.
ಹಠಗಾರ ಸಮುದಾಯ ದೊಡ್ಡದಿದೆ: ಮಲ್ಲಪ್ಪ ಬಾವಿಕಟ್ಟೆ ಮಾತನಾಡಿ, ಮಹಾಲಿಂಗಪುರದಲ್ಲಿ ನೇಕಾರ ಸಮುದಾಯವಿದೆ. ದಡ್ಡೆ ಡಾಕ್ಟರ್‌ಗೆ ಟಿಕೆಟ್ ಕೊಡಿಸಬೇಕು. ಅವರಿಗೆ ಕೊಟ್ಟರಷ್ಟೇ ಗೆಲ್ಲೋದು ಅಂತಾರೆ. ನಮ್ಮ ಸಮುದಾಯದ ಜನ ನಮಗೆ ಒತ್ತಡ ಹಾಕ್ತಿದ್ದಾರೆ. ಹಾಗಾಗಿ ಡಾ. ದಡ್ಡೆನವರಿಗೆ ಟಿಕೆಟ್ ನೀಡಬೇಕು. ಟಿಕೆಟ್ ಕೊಟ್ಟರೆ ತೇರದಾಳದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನಮ್ಮ ಹಠಗಾರ ಸಮಾಜ ದೊಡ್ಡ ಸಮಾಜ. ಹಾಗಾಗಿ ನಮ್ಮ ಮಲ್ಲೇಶಪ್ಪ ದಡ್ಡೆನ್ನವರಿಗೆ ಕೊಡಬೇಕು ಎಂದು ಮಲ್ಲಪ್ಪ ಬಾವಿ ಕಟ್ಟೆ ಒತ್ತಾಯಿಸಿದರು.
ಧಾರವಾಡ: ನಾಲ್ಕು ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್? ಭಿನ್ನಮತದಿಂದ ಕಂಗೆಟ್ಟ ಕಾಂಗ್ರೆಸ್!
ವೈದ್ಯ ಮಲ್ಲೇಶಪ್ಪ ಸೇವೆಯಿಂದ ಗೆಲ್ಲುವುದು ಸುಲಭ: ತೇರದಾಳ ಕ್ಷೇತ್ರದಲ್ಲಿ 60 ಸಾವಿರಕ್ಕೂ ಹೆಚ್ಚು ಹಟಗಾರ ಲಿಂಗಾಯತ ( ನೇಕಾರ ) ಮತಗಳಿವೆ. 2.5 ಲಕ್ಷಕ್ಕೂ ಹೆಚ್ಚು ಮತದಾರರು ಬಾಗಲಕೋಟೆ ಜಿಲ್ಲೆಯಲ್ಲಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಜನರು ಇಡೀ ರಾಜ್ಯದಲ್ಲಿದ್ದಾರೆ. ಹೀಗಾಗಿ ಹಟಗಾರ ಲಿಂಗಾಯತ (ನೇಕಾರ) ಸಾಂದ್ರತೆ ಹೆಚ್ಚಿದ್ದು, ತೇರದಾಳದಲ್ಲಿ ನಮ್ಮ ಸಮೂದಾಯದವರಿಗೆ ಟಿಕೆಟ್ ನೀಡಬೇಕು. ಮಲ್ಲೇಶಪ್ಪ ಅವರು ವೃತ್ತಿಯಲ್ಲಿ ವೈದ್ಯರು. ಇವರ ಮನೆತನವು ಕಾಂಗ್ರೆಸ್ ಪಕ್ಷದ ಕಚೇರಿಯಂತೆ ಸ್ವಾತಂತ್ರ್ಯ ಕಾಲದಿಂದ ನಡೆದುಕೊಂಡು ಬಂದಿದೆ. ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಲ್ಲೇಶಪ್ಪ ಅವರಿಗೆ ಟಿಕೆಟ್ ಕೊಡದಿದ್ದರೆ ಅದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ಅಭಿನವ ರೇವಣಸಿದ್ದ ಪಟ್ಟದೇವರು, ಗುರು ಹಿರೇಮಠ, ಮೈಂದಗಿರಿ ಸ್ವಾಮೀಜಿ ಒತ್ತಾಯಿಸಿದರು.