
ಬೆಂಗಳೂರು, (ಅ.20): ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ (By Election) ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ರೆ, ಮತ್ತೊಂದೆಡೆ ರಾಜಕೀಯ ನಾಯಕರ ವೈಯಕ್ತಿಕ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ.
ಎಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಬೈಗಮಿ (ದ್ವಿಪತ್ನಿತ್ವ) ಆರೋಪ ಮಾಡಿರುವ ಬಿಜೆಪಿ (BJP) ವಿರುದ್ಧ ಜೆಡಿಎಸ್ (JDS)ನಾಯಕ ಟಿ.ಎ. ಶರವಣ ತಿರುಗೇಟು ಕೊಟ್ಟಿದ್ದಾರೆ.
ಎಚ್‌ಡಿಕೆ ವಿರುದ್ಧ ದ್ವಿಪತ್ನಿತ್ವ ಪದ ಬಳಕೆ: ಬಿಜೆಪಿಗೆ ಕುಮಾರಸ್ವಾಮಿ ಖಡಕ್ ಎಚ್ಚರಿಕೆ
ಈ ಬಗ್ಗೆ ಫೇಸ್ಬುಕ್ನಲ್ಲಿ (Facebook) ಈ ವಿಷಯವಾಗಿ ಬರೆದಿರುವ ಟಿ.ಎ. ಶರವಣ(T.A.Sharavana) ಅವರು, ನಾಡಿನ ಜನ ಈ ಬಿಜೆಪಿ ಸಿಡಿಗಳನ್ನು ಕಣ್ಣಾರೆ ಕಂಡಿದ್ದರು. ಒಬ್ಬ ಅಲ್ಲ ಬೇಕಾದಷ್ಟು ನಾಯಕರು ಸಿಡಿಗಳಲ್ಲಿ ರಾಸಲೀಲೆಯಲ್ಲಿ (Sex Scandal) ರಾರಾಜಿಸಿದ ನಾಯಕರ ಪಕ್ಷದಿಂದ ಕುಮಾರಣ್ಣ ನೈತಿಕತೆಯ ಪಾಠ ಕಲಿಯಬೇಕಾಗಿಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ,
ಬೈಗಮಿ ಬಗ್ಗೆ ಮಾತನಾಡಿರುವುದು ತಪ್ಪು. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹಿಡಿದಿರುವುದು ಸರಿಯಲ್ಲ. ಇತ್ತೀಚಿಗೆ ಸಚಿವರ ದಂಡು ಕೋರ್ಟ್ ಗೆ ಹೋಗಿ ಸಿಡಿ ಬಿಡುಗಡೆ ಬಗ್ಗೆ ಸ್ಟೆ ಪಡೆಯಿತು? ರಾಜ್ಯದ ಪ್ರಭಾವಿ ಮಂತ್ರಿಗಳು, ಕೇಂದ್ರದ ಮಂತ್ರಿಗಳು, ಬಂಡಾಯ ನಾಯಕರು ಎಲ್ಲರದ್ದೂ ಒಂದೇ ಯೋಗ್ಯತೆ. ಹೆಸರಗಳನ್ನು ಹೇಳುವುದಾದರೆ. *ಜಾರಕಿಹೊಳಿ, ಸದಾನಂದಗೌಡ, ಯತ್ನಾಳ್. ಇನ್ನು ಬಿಡುಗಡೆಗೆ ಕಾದಿರುವ ಸಿಡಿ ಬಗ್ಗೆ ಬಿಜೆಪಿ ಏನು ಹೇಳುತ್ತದೆ ಎಂದು ಪ್ರಶ್ನಿಸಿದ್ದಾರೆ.
ಎಚ್‌ಡಿಕೆ 'ದ್ವಿಪತ್ನಿತ್ವ' ಕೆದಕಿದ ಕಮಲ ಪಾಳಯ: 'ಬೈಗಮಿ' ಅಪರಾಧ ಅಲ್ವಾ ಎಂದು ಕುಟುಕಿದ ಬಿಜೆಪಿ
ಸಿಎಂ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಮಂತ್ರಿ ಸ್ಥಾನ ಪಡೆದವರು ಎಂದು ನಾನಲ್ಲ ಅವರದ್ದೇ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿದ್ದಾರೆ. ಇಂಥ ಹೀನ, ನಾಚಿಕೆ ಗೆಟ್ಟ ಹಿನ್ನಲೆಯ ಬಿಜೆಪಿ ನಾಯಕರು ಕುಮಾರಸ್ವಾಮಿ ಬಗ್ಗೆ ಹೇಗೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷ ಪಾಠದ ಬಗ್ಗೆ ಬಿಜೆಪಿ ಮಾತನಾಡುವುದು ಜೋಕ್. ಹಾಸ್ಯಾಸ್ಪದ. ಭ್ರಷ್ಟಾಚಾರದ ಕಾರಣಕ್ಕೆ ಆ ಪಕ್ಷದ ನಾಯಕರೇ ಜೈಲು ಸೇರಿದ್ದಾರೆ. ಭ್ರಷ್ಟಾಚಾರದ ಕಾರಣಕ್ಕೆ ಇತ್ತೀಚೆಗೆ ಮಾಜಿ ಸಿಎಂ ಆಪ್ತ ಸಿಬ್ಬಂದಿ, ಗುತ್ತಿಗೆದಾರ ಮೇಲೆ ಬಿಜೆಪಿ ಅವರೇ ಐಟಿ ದಾಳಿ ಮಾಡಿಸಿದ್ದಾರೆ. ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡುವ ಸಣ್ಣ ಯೋಗ್ಯತೆ ಕೂಡ ಇಲ್ಲ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.