
ಹಾನಗಲ್(ಅ.20): ರಾಹುಲ್ ಗಾಂಧಿ(Rahul Gandhi) ಡ್ರಗ್ ಪೆಡ್ಲರ್(Drug Peddler) ಅಲ್ಲ ಎಂದರೆ ಸರ್ಟಿಫಿಕೆಟ್(Certificate) ತೋರ್ಸಿ, ರಾಹುಲ್ ಗಾಂಧಿ ದೇಶಕ್ಕೆ ಏನು ಮಾಡಿದ್ದಾರೆ ಎಂದು ಅವರನ್ನು ಯುವ ನಾಯಕ ಎಂದು ಕರೆಯುತ್ತೀರಿ? ರಾಹುಲ್ ಗಾಂಧಿ ಮಾತನಾಡುವಾಗ ತೊದಲುವುದು, ಜೋಲಿ ಹೊಡೆಯುವುದನ್ನು ನೋಡಿದರೆ ಯುವಕರಿಗೆ ಸಂಶಯ ಮೂಡುತ್ತದೆ. ಆ ಕಾರಣಕ್ಕಾಗಿಯೇ ನಮ್ಮ ಪಕ್ಷದ ಅಧ್ಯಕ್ಷ ಅವರನ್ನು ಡ್ರಗ್ ಪೆಡ್ಲರ್ ಎಂದು ಹೇಳಿರಬಹುದು ಎಂದು ವಿಪ ಸದಸ್ಯ ಎನ್. ರವಿಕುಮಾರ(N Ravikumar) ಹೇಳಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ(Siddaramaiah) ಅವರು ನಳಿನ್ ಕುಮಾರ್ ಕಟೀಲ್(Nalin Kumar Kateel) ನಿಮ್ಹಾನ್ಸ್‌ಗೆ(NIMHANS) ಸೇರಿಬೇಕು ಎಂದಿದ್ದಾರೆ. ಅವರು ಮೊದಲು ನಿಮ್ಹಾನ್ಸ್‌ಗೆ ಸೇರಲಿ ಎಂದರು.
ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್: ಕಟೀಲ್ ಹೇಳಿಕೆಗೆ ಬಿಜೆಪಿ ಸಮರ್ಥನೆ
ಆರ್‌ಎಸ್‌ಎಸ್‌ನವರು(RSS) ಏನು ಮಾಡ್ತಾರೆ ಎಂದು ವಾಜಪೇಯಿ(Atal Bihari Vajpayee) ಅವರು ರಾಷ್ಟ್ರೀಯ ಹೆದ್ದಾರಿ(National Highway) ನಿರ್ಮಿಸಿ ತೋರಿಸಿದ್ದಾರೆ. ಮೋದಿ(Narendra Modi) ಅವರು ಬಂದ ಆನಂತರ ರೈತರಿಗೆ(Farmers) ಕಿಸಾನ್ ಸಮ್ಮಾನ್ ಸೇರಿ ಅನೇಕ ಯೋಜನೆ ಕೊಟ್ಟಿದ್ದಾರೆ. ಕುಮಾರಸ್ವಾಮಿ(HD Kumaraswamy) ಏನು ಮಾಡಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ. ಮಾಜಿ ಪ್ರಧಾನಿ ನೆಹರು(Jawaharlal Nehru) ಅವರೇ ಆರ್‌ಎಸ್‌ಎಸ್ ಕರೆಯಿಸಿ ಕೆಲಸ ಮಾಡಿಸಿದ್ದಾರೆ. ಕುಮಾರಸ್ವಾಮಿ ಅವರಿಂದ ನಮಗೆ ಸರ್ಟಿಫಿಕೆಟ್ ಬೇಕಾಗಿಲ್ಲ. ನೀವು ನಮ್ಮ ಕಚೇರಿಗೆ ಬನ್ನಿ, ಏನು ಮಾಡಿದ್ದೀವಿ ಎಂದು ತೋರಿಸುತ್ತೇವೆ ಎಂದು ತಿರುಗೇಟು ನೀಡಿದರು.
ಹಾನಗಲ್‌ನಲ್ಲಿ(Hanagal) ಸೋಲುವ ಭೀತಿಯಿಂದ ಸಿದ್ದರಾಮಯ್ಯ ಅವರು ಏನು ಅಭಿವೃದ್ಧಿ ಆಗಿಲ್ಲ ಎನ್ನುತ್ತಿದ್ದಾರೆ. ನಾನು ಅವರಿಗೆ ಆಹ್ವಾನ ಕೊಡುತ್ತೇನೆ. ನೀವು ಪ್ರತಿನಿಧಿಸಿದ ಬಾದಾಮಿ(Badami), ವರುಣಾದಲ್ಲಿ(Varuna) ಆಗಿರುವ ಅಭಿವೃದ್ಧಿ ಹಾಗೂ ಹಾನಗಲ್‌ನಲ್ಲಿ ಆಗಿರುವ ಅಭಿವೃದ್ಧಿಯನ್ನು ಟ್ಯಾಲಿ ಮಾಡಿ ಎಂದು ಆಹ್ವಾನ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.