
ವಿಜಯಪುರ, (ಅ.20): ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆ (By Election) ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ, ಆರೋಪ-ಪ್ರತ್ಯಾರೋಪ ತಾರಕಕ್ಕೇರುತ್ತಿದೆ. ರಾಜಕೀಯ ನಾಯಕರು ಟೀಕಿಸುವ ಭರದಲ್ಲಿ ವೈಯಕ್ತಿಕ ದಾಳಿಗೆ ಇಳಿದಿದ್ದಾರೆ.
ಅದರಲ್ಲೂ ಬಿಜೆಪಿ (BJP) ಬೈಗಮಿ (ದ್ವಿಪತ್ನಿತ್ವ) ಎನ್ನುವ ಪದ ಬಳಕೆ ಮಾಡಿದೆ. ಇದಕ್ಕೆ ಇದೀಗ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದು ಬಿಜೆಪಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಎಚ್‌ಡಿಕೆ 'ದ್ವಿಪತ್ನಿತ್ವ' ಕೆದಕಿದ ಕಮಲ ಪಾಳಯ: 'ಬೈಗಮಿ' ಅಪರಾಧ ಅಲ್ವಾ ಎಂದು ಕುಟುಕಿದ ಬಿಜೆಪಿ
ವಿಜಯಪುರದ (Vijayapura) ಸಿಂದಗಿಯಲ್ಲಿ ಇಂದು (ಅ.20) ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಬಿಜೆಪಿಯ ಒಬ್ಬೊಬ್ಬ ನಾಯಕರಿಗೂ ಒಂದೊಂದು ಇತಿಹಾಸವಿದೆ. ಅದನ್ನ ನನ್ನ ಬಾಯಲ್ಲಿ ಹೇಳೋಕೆ ಆಗಲ್ಲ. ಅವರ ಬಂಡವಾಳ ಬಿಚ್ಚಿದ್ರೆ ಚರ್ಚೆ ಮಾಡೋಕೆ ಆಗಲ್ಲ. ಅವರ ಈ ಪದಗಳ ಬಳಕೆಗೆ ನಾನು ಹತ್ತರಷ್ಟು ಕೆಸರೆರಚಬಲ್ಲೆ. ಅವರು ಜವಾಬ್ದಾರಿ ಅರಿತು ನಡೆದುಕೊಳ್ಳಲಿ ಎಂದು ಎಚ್ಚರಿಕೆ ನೀಡಿದರು.
ನನ್ನ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಯಾವುದನ್ನು ಕದ್ದು ಮುಚ್ಚಿ ಮಾಡಿಲ್ಲ ಇದೆಲ್ಲ ಅವರಿಗೆ ಅನ್ವಯಿಸುತ್ತೆ. ನಮ್ಮ ಪಕ್ಷದ ಇತ್ತೀಚಿನ ಏಳಿಗೆಯನ್ನ ಸಹಿಸದೇ ಬಿಜೆಪಿಯವ್ರು ವೈಯಕ್ತಿಕ ದಾಳಿಗೆ ಇಳಿದಿದ್ದಾರೆ. ನನ್ನನ್ನು ಡಿಸ್ಟರ್ಬ್ ಮಾಡೋಕೆ ಅಂತಾನೇ ಈ ರೀತಿ ಮಾಡಿದ್ದಾರೆ. ಆದರೆ ಇವರ ಈ ಹೇಳಿಕೆಗಳಿಂದ ನಾನೇನು ವಿಚಲಿತನಾಗೋದಿಲ್ಲ ಎಂದರು.
ಕುಮಾರಸ್ವಾಮಿ ಆರ್‌ಎಸ್‌ಎಸ್ (RSS) ಹಾಗೂ ಮುಸ್ಲಿಂರ (Muslim) ಮತಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಬಿಜೆಪಿ ಕುಮಾರಸ್ವಾಮಿ ಅವರ ವೈಯಕ್ತಿಕ ವಿಚಾರಗಳನ್ನೂ ಕೂಡ ಪ್ರಸ್ತಾಪ ಮಾಡುವಂತ ಪ್ರಯತ್ನ ಮಾಡಿದ್ದು, ಸ್ವಜನ ಪಕ್ಷಪಾತ ಇವೆಲ್ಲ ತಪ್ಪುಗಳನ್ನು ಮಾಡಿರುವ ನೀವು ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ(ದ್ವಿಪತ್ನಿತ್ವ)ಯಲ್ಲವೇ ಎಂದು ಪ್ರಶ್ನೆ ಮಾಡಿ ಟೀಕಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.