ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ಸ್ವಪಕ್ಷೀಯರೇ ಸೋಲಿಸುತ್ತಾರೆ: ಈಶ್ವರಪ್ಪ

By Kannadaprabha News  |  First Published Mar 1, 2023, 6:54 AM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಕೋಲಾರದಲ್ಲಿ ಸ್ಪರ್ಧಿಸುವುದಿಲ್ಲ. ಹಾಗೊಂದು ವೇಳೆ ಸ್ಪರ್ಧಿಸಿದರೆ ನೂರಕ್ಕೆ ನೂರರಷ್ಟುಸೋಲುತ್ತಾರೆ. ಇವರನ್ನು ಸೋಲಿಸಲು ಅವರ ಪಕ್ಷದವರೇ ಸಿದ್ಧತೆ ನಡೆಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರತಿಪಾದಿಸಿದರು.


ಶಿವಮೊಗ್ಗ (ಮಾ.1): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಕೋಲಾರದಲ್ಲಿ ಸ್ಪರ್ಧಿಸುವುದಿಲ್ಲ. ಹಾಗೊಂದು ವೇಳೆ ಸ್ಪರ್ಧಿಸಿದರೆ ನೂರಕ್ಕೆ ನೂರರಷ್ಟುಸೋಲುತ್ತಾರೆ. ಇವರನ್ನು ಸೋಲಿಸಲು ಅವರ ಪಕ್ಷದವರೇ ಸಿದ್ಧತೆ ನಡೆಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಪ್ರತಿಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರಟಗೆರೆ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿದ ಸಿ​ದ್ದು ವಿರುದ್ಧ ಡಾ.ಜಿ.ಪರಮೇಶ್ವರ್‌ (Dr G Parameshwar)ಕತ್ತಿ ಮಸೆಯುತ್ತಿದ್ದಾರೆ. ಕೋಲಾರದಲ್ಲಿ ಸೋತ ಕೆ.ಎಚ್‌.ಮುನಿಯಪ್ಪ(KH muniyappa) ಕೋಪಗೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ(Mallikarjun kharge)ಯವರ ಸೋಲಿಗೂ ಸಿದ್ದು ಕಾರಣವಾಗಿದ್ದು, ಒಂದೆಡೆ ವಿ.ಶ್ರೀನಿವಾಸ್‌ ಪ್ರಸಾದ್‌(V Srinivas prasad) ಕೂಡ ಅಸಮಾಧಾನಗೊಂಡಿದ್ದಾರೆ. ಈ ನಾಲ್ಕು ಮಂದಿಯೂ ಕೋಲಾರದಲ್ಲಿ ಇರುವ ದೊಡ್ಡ ಸಂಖ್ಯೆಯ ದಲಿತರ ಮತ ಸಿದ್ದರಾಮಯ್ಯಗೆ ಹೋಗದಂತೆ ನೋಡಿಕೊಳ್ಳುತ್ತಾರೆ. ಇನ್ನು ಕೋಲಾರ ಕುರುಬರ ಸಂಘವು ಬಹಿರಂಗವಾಗಿ ಬಿಜೆಪಿಯ ವರ್ತೂರು ಪ್ರಕಾಶ್‌ಗೆ ಬೆಂಬಲ ಸೂಚಿಸಿದೆ. ಇನ್ನು ಸಿದ್ದರಾಮಯ್ಯನವರಿಗೆ ಉಳಿದಿರೋದು ಮುಸ್ಲಿಂ ಮತಗಳು ಮಾತ್ರ ಎಂದರು.

Tap to resize

Latest Videos

Ticket fight: ಈಶ್ವರಪ್ಪಗೆ ಟಿಕೆಟ್‌ ಸಿಗುತ್ತೋ, ಇಲ್ವೋ ಎಂಬುದೇ ಕುತೂಹಲ

ಇಂದಿನಿಂದ ವಿಜಯ ಸಂಕಲ್ಪ ಯಾತ್ರೆ:

ಮಾ. 1ರಿಂದ ವಿಜಯ ಸಂಕಲ್ಪ ಯಾತ್ರೆ ಆರಂಭಗೊಳ್ಳಲಿದ್ದು, ರಾಜ್ಯಾದ್ಯಂತ ಸಂಚರಿಸಲಿದೆ. ಮಾ. 25ರಂದು ರಾಜ್ಯದ ನಾಲ್ಕೂ ದಿಕ್ಕಿನಿಂದ ಮುಗಿಸಿದ ಈ ಯಾತ್ರೆ ದಾವಣಗೆರೆಯಲ್ಲಿ ಕೊನೆಗೊಳ್ಳಲಿದ್ದು, ಅಲ್ಲಿ ಸಮಾವೇಶ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ನಾಲ್ಕು ಯಾತ್ರೆಗಳು ನಡೆಯಲಿದ್ದು, ಮೊದಲ ಯಾತ್ರೆಗೆ ಮಾ. 1ರಂದು ಮಲೆ ಮಹದೇಶ್ವರ ಬೆಟ್ಟ(Male Mahadeshwar hill)ದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ(JP Nadda) ವಿಜಯಸಂಕಲ್ಪ ಯಾತ್ರೆ(Vijaya sankalpa yatre)ಗೆ ಚಾಲನೆ ನೀಡಲಿದ್ದಾರೆ. ಈ ಯಾತ್ರಾ ತಂಡದಲ್ಲಿ ನನ್ನ ಜೊತೆ ವಿ. ಸೋಮಣ್ಣ, ಕೆ.ಸಿ. ನಾರಾಯಣಗೌಡ, ವಿ. ಸುನೀಲ್‌ ಕುಮಾರ್‌, ಕೋಟಾ ಶ್ರೀನಿವಾಸ ಪೂಜಾರಿ, ಆರಗ ಜ್ಞಾನೇಂದ್ರ, ಗೋಪಾಲಯ್ಯ, ಎಸ್‌.ಅಂಗಾರ, ವಿ.ಶ್ರೀನಿವಾಸ ಪ್ರಸಾದ್‌, ಎನ್‌.ಮಹೇಶ್‌, ನಿರ್ಮಲ್‌ ಕುಮಾರ ಸುರಾನಾ ಭಾಗವಹಿಸುವರು.

ಮಾ. 2ರಂದು ನಂದಗುಡಿಯಲ್ಲಿನ ಸಂಗೊಳ್ಳಿ ರಾಯಣ್ಣ ಸ್ಮಾರಕದಿಂದ ಆರಂಭಗೊಳ್ಳುವ ಎರಡನೇ ಯಾತ್ರೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಚಾಲನೆ ನೀಡಲಿದ್ದು, ಗೋವಿಂದ ಕಾರಜೋಳ ನೇತೃತ್ವದಲ್ಲಿ ಲಕ್ಷ್ಮಣ ಸವದಿ, ರಮೇಶ್‌ ಜಾರಕಿಹೊಳಿ, ಸಿ.ಸಿ. ಪಾಟೀಲ, ಮುರುಗೇಶ್‌ ನಿರಾಣಿ, ಶಶಿಕಲಾ ಜೊಲ್ಲೆ, ಭೈರತಿ ಬಸವರಾಜ, ಶಿವರಾಮ ಹೆಬ್ಬಾರ, ಅನಿಲ್‌ ಬೆನಕೆ, ಮಹೇಶ್‌ ಟೆಂಕಿನಕಾಯಿ ಭಾಗಿಯಾಗಲಿದ್ದಾರೆ.

ಮಾ. 3ರಂದು ಬಸವಕಲ್ಯಾಣದ ಅನುಭವ ಮಂಟಪದಿಂದ ಬೆಳಗ್ಗೆ ಆರಂಭಗೊಳ್ಳುವ ಮೂರನೇ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡುವರು. ಜಗದೀಶ್‌ ಶೆಟ್ಟರ್‌ ನೇತೃತ್ವದ ಈ ತಂಡದಲ್ಲಿ ಬಿ. ಶ್ರೀರಾಮುಲು, ಭಗವಂತ ಖೂಬಾ, ಪ್ರಭು ಚೌವ್ಹಾಣ್‌, ಹಾಲಪ್ಪ ಆಚಾರ್‌, ಆನಂದ್‌ ಸಿಂಗ್‌, ಅರವಿಂದ ಲಿಂಬಾವಳಿ, ಬಾಬುರಾವ್‌ ಚಿಂಚನಸೂರು, ಮಾಲೀಕಯ್ಯ ಗುತ್ತೇದಾರ್‌, ಸಿದ್ದರಾಜು, ಚಲವಾದಿ ನಾರಾಯಣಸ್ವಾಮಿ ಮತ್ತು ಮಾರುತಿರಾವ್‌ ಮೂಳೆ ಭಾಗವಹಿಸುವರು.

ಈಶ್ವರಪ್ಪ ರಾಜಕೀಯ ಬಿಟ್ಟು ಭವಿಷ್ಯ ಹೇಳಲಿ, ಗಿಳಿ ಪಂಚಾಂಗ ಗಿಫ್ಟ್ ಕೋಡಿಸುತ್ತೇನೆ: ಕೈ ನಾಯಕಿ ನಾಗವೇಣಿ ಪಾಟೀಲ್

ಮಾ. 3ರಂದು ದೇವನಹಳ್ಳಿಯ ಕೆಂಪೇಗೌಡ ಜನ್ಮಸ್ಥಳ ಆವತಿಯಲ್ಲಿ ಗೃಹ ಸಚಿವ ಅಮಿತ್‌ ಶಾ ನಾಲ್ಕನೇ ಯಾತ್ರೆಗೆ ಮಧ್ಯಾಹ್ನ ಚಾಲನೆ ನೀಡಲಿದ್ದು, ಆರ್‌. ಅಶೋಕ್‌ ನೇತೃತ್ವದ ಯಾತ್ರೆಯಲ್ಲಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌, ಎ. ನಾರಾಯಣ ಸ್ವಾಮಿ, ಎಸ್‌.ಟಿ. ಸೋಮಶೇಖರ್‌, ಡಾ. ಕೆ. ಸುಧಾಕರ್‌, ಮುನಿರತ್ನ, ಎಂ.ಟಿ.ಬಿ. ನಾಗರಾಜ್‌, ಬಿ.ಸಿ. ನಾಗೇಶ್‌, ಜೆ.ಸಿ. ಮಾಧುಸ್ವಾಮಿ, ಪಿ.ಸಿ. ಮೋಹನ್‌, ಪೂರ್ಣಿಮಾ ಶ್ರೀನಿವಾಸ್‌ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

click me!