ವಿಧಾನಸಭೆಗೆ ಸ್ಪರ್ಧಿಸುವಂತೆ ಕೇಳಿದ್ರೆ ಒಳಗೊಳಗೆ ಸಂತೋಷ: ಸಂಸದ ಡಾ.ಸಿದ್ದೇಶ್ವರ

By Kannadaprabha News  |  First Published Feb 5, 2023, 9:49 AM IST

ಮುಂಬರುವ ವಿಧಾನಸಭೆ ಚುನಾವಣೆಗೆ ನಾನು ಸ್ಪರ್ಧೆ ಮಾಡಬೇಕೆಂದು ಯಾರಾದರೂ ಹೇಳಿದಾಗ ಒಳಗೆ ಸಂತೋಷವಾಗುತ್ತದೆಯಾದರೂ, ಚುನಾವಣೆ ವಿಚಾರಕ್ಕೆ ನನ್ನ ನಿರ್ಧಾರವನ್ನು 2019ರ ಚುನಾವಣೆ ಸಂದರ್ಭದಲ್ಲೇ ಸ್ಪಷ್ಟವಾಗಿ ಹೇಳಿದ್ದೇನೆæ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಪುನರುಚ್ಛರಿಸಿದ್ದಾರೆ.


ದಾವಣಗೆರೆ (ಫೆ.5) : ಮುಂಬರುವ ವಿಧಾನಸಭೆ ಚುನಾವಣೆಗೆ ನಾನು ಸ್ಪರ್ಧೆ ಮಾಡಬೇಕೆಂದು ಯಾರಾದರೂ ಹೇಳಿದಾಗ ಒಳಗೆ ಸಂತೋಷವಾಗುತ್ತದೆಯಾದರೂ, ಚುನಾವಣೆ ವಿಚಾರಕ್ಕೆ ನನ್ನ ನಿರ್ಧಾರವನ್ನು 2019ರ ಚುನಾವಣೆ ಸಂದರ್ಭದಲ್ಲೇ ಸ್ಪಷ್ಟವಾಗಿ ಹೇಳಿದ್ದೇನೆæ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಪುನರುಚ್ಛರಿಸಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಬರಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, 2019ರ ಚುನಾವಣೆ ವೇಳೆಯೇ ನನ್ನ ಮುಂದಿನ ನಿರ್ಧಾರದ ಬಗ್ಗೆ ಹೇಳಿದ್ದೇನಲ್ಲ ಎಂದರು. ತಮ್ಮ ಪುತ್ರ ಜಿ.ಎಸ್‌.ಅನಿತ್‌ನದ್ದು ಬೇರೆ ಪ್ರಶ್ನೆ. ನನ್ನ ವಿಚಾರ ಮಾತ್ರ ನಾನು ಹೇಳುತ್ತೇನೆ. ನನ್ನ ಮಾತು ಹೇಳಿದಂತೆಯೇ ನಾನು ನಡೆಯುವುದು ಶತಃಸಿದ್ಧ. ಆದರೆ, ವಿಧಾನಸಭೆ ಚುನಾವಣೆಗೆ ಸಿದ್ದೇಶ್ವರ ಸ್ಪರ್ಧಿಸುತ್ತಾರೆಂಬ ಸುದ್ದಿ ಹರಡಿದೆಯಯೆಂದು, ಮಾಧ್ಯಮದವರು ಪ್ರಶ್ನೆ ಕೇಳಿದಾಗ ಸಹಜವಾಗಿಯೇ ಒಳಗೊಳಗೆ ಖುಷಿ ಆಗುತ್ತದೆ ಎಂದು ತಿಳಿಸಿದರು.

Tap to resize

Latest Videos

Karnataka Politics: ಕಾಂಗ್ರೆಸ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಂಸದ ಜಿ.ಎಂ.ಸಿದ್ದೇಶ್ವರ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್‌ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಿದ್ದೇವೆ. ನನ್ನ ನಿಲುವನ್ನೂ ಹಿಂದೆಯೇ ಪ್ರಕಟಿಸಿದ್ದೇನೆ. ಈ ವಿಚಾರದಲ್ಲಿ ಯಾವುದೇ ಗೊಂದಲವೂ ಇಲ್ಲ. ಅದರ ಮೇಲೆಯೂ ನೀವು ಏನಾದರೂ ಅಂದುಕೊಳ್ಳಿ ಎಂದರು.

ಅಧಿಕಾರಿಗಳ ಅಸಡ್ಡೆಗೆ ಸಂಸದ ಗರಂ

ವಿಜ್ಞಾನ ಕೇಂದ್ರ ಮಂಜೂರಾಗಿ, ಶಂಕುಸ್ಥಾಪನೆಯಾಗಿ 10 ವರ್ಷದ ನಂತರ ಉದ್ಘಾಟನೆಯಾಗುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನಾವು ಜನರಿಂದ ಮಾತುಗಳನ್ನು ಕೇಳಬೇಕಾಗಿದೆ ಎಂದು ಸಂಸದಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ತಾಲೂಕಿನ ಆನಗೋಡು ಹೋಬಳಿಯ ಹುಳುಪಿನಕಟ್ಟೆಯಲ್ಲಿ ಶನಿವಾರ ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸೊಸೈಟಿಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿ 12 ವರ್ಷವಾಗಿದ್ದರೂ ಅಧಿಕಾರಿಗಳ ಅಸಡ್ಡೆಯಿಂದಾಗಿ ಸರಿಯಾಗಿ ಸವೀರ್‍ಸ್‌ ರಸ್ತೆ ಕಾಮಗಾರಿ ಪೂರ್ಣವಾಗಿಲ್ಲ ಎಂದರು. ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲ್ವೆ ಮಾರ್ಗದ ಭೂ ಸ್ವಾಧೀನವೂ ತಡವಾಗಿದೆ. ಅಧಿಕಾರಿಗಳು ಮಾಡುವ ಉದಾಸೀನಕ್ಕೆ ಜನ ಪ್ರತಿನಿಧಿಗಳು ಉತ್ತರ ನೀಡಬೇಕಾದ ಸ್ಥಿತಿ ಇದೆ. ಸಂಸದನಾಗಿ ನನ್ನ ಕೆಲಸ ಪ್ರಾಮಾಣಿಕವಾಗಿ ಮಾಡಿದರೂ ಟೀಕೆಗಳು ತಪ್ಪಿಲ್ಲ. ದಾವಣಗೆರೆವರೆಗೆ ರೈಲ್ವೇ ವಿದ್ಯುದೀಕರಣ ಕಾಮಗಾರಿ ಆಗಿದೆ. ಈಗ ಜೋಡಿ ಮಾರ್ಗದ ಕೆಲಸ ಮಾತ್ರ ಇದೆ. ಆದರೆ, ನೇರ ರೈಲ್ವೆ ಮಾರ್ಗಕ್ಕೆ ದಾವಣಗೆರೆ ಭಾಗದಲ್ಲಷ್ಟೇ ಭೂ ಸ್ವಾಧೀನ ಪೂರ್ಣವಾಗಿದೆ. ತುಮಕೂರು, ಚಿತ್ರದುರ್ಗ ಭಾಗದಲ್ಲಿ ಇನ್ನೂ ಭೂ ಸ್ವಾಧೀನ ಆಗಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಅವಧಿಯಲ್ಲೆ ಉದ್ಘಾಟನೆ ಸೌಭಾಗ್ಯ:

ಅಧ್ಯಕ್ಷತೆ ವಹಿಸಿದ್ದ ಮಾಯಕೊಂಡ ಶಾಸಕ, ಲಿಡ್ಕರ್‌ ಅಧ್ಯಕ್ಷ ಪ್ರೊ.ಎನ್‌.ಲಿಂಗಣ್ಣ ಮಾತನಾಡಿ, ದಾವಣಗೆರೆ ಇಂತಹದ್ದೊಂದು ವಿಜ್ಞಾನ ಕೇಂದ್ರದ ಅಗತ್ಯವಿತ್ತು. ಮುಂಚೆಯೆಲ್ಲಾ ವಿದ್ಯಾರ್ಥಿಗಳು ಮೈಸೂರು, ಬೆಂಗಳೂರು, ದೆಹಲಿಗೆ ಹೋಗಬೇಕಿತ್ತು. ಈಗ ನಮ್ಮಲ್ಲೇ ವಿಜ್ಞಾನ ಕೇಂದ್ರ ಸ್ಥಾಪನೆಯಾಗಿರುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿಜ್ಞಾನ ಕೇಂದ್ರ ಮಂಜೂರಾಗಿ 10 ವರ್ಷವಾದರೂ ನನ್ನ ಅವಧಿಯಲ್ಲೇ ಉದ್ಘಾಟನೆಯಾಗುವ ಯೋಗವಿತ್ತು ಎನಿಸುತ್ತದೆ ಎಂದರು.

ಸಾಶಿಇ ಉಪ ನಿರ್ದೇಶಕ ಜಿ.ಆರ್‌.ತಿಪ್ಪೇಶಪ್ಪ ಮಾತನಾಡಿ, ಹುಳುಪಿನಕಟ್ಟೆಯಲ್ಲಿ 4 ಎಕರೆ ಜಾಗದಲ್ಲಿ 10 ವರ್ಷದ ಹಿಂದೆ ವಿಜ್ಞಾನ ಕೇಂದ್ರ ಸ್ಥಾಪನೆಗೆಂದು ಮಕ್ಕಳಿಂದಲೇ 8 ಲಕ್ಷ ದೇಣಿಗೆ ಸಂಗ್ರಹಿಸಲಾಗಿತ್ತು.2017-18ರಿಂದ ಸ್ವಲ್ಪ ವಿಳಂಬವಾಗಿ, ಕೊರೋನಾ ಕಾರಣಕ್ಕೆ ಹಿನ್ನೆಡೆಯಾಗಿತ್ತು. ಇದೀಗ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸ್ಪಂದಿಸಿ, ಮೂಲ ಸೌಕರ್ಯ ಕಲ್ಪಿಸಲು ಮುಂದಾಗಿದ್ದರಿಂದ ಕೇಂದ್ರ ನಿರ್ಮಾಣವಾಗಿದೆ. ಕೇಂದ್ರದ ಒಳಾಂಗಣ ಕೆಲಸ ಬಾಕಿ ಇದೆ ಎಂದು ತಿಳಿಸಿದರು.

ಡಯಟ್‌ ಪ್ರಾಚಾರ್ಯರಾದ ಗೀತಾ, ಗ್ರಾಪಂ ಅಧ್ಯಕ್ಷ ಎಂ.ಮಾದಪ್ಪ, ಜಿಲ್ಲಾ ಶಿಕ್ಷಣಾಧಿಕಾರಿ ರಾಜಶೇಖರ, ನಿರ್ಮಿತಿ ಕೇಂದ್ರದ ರವಿ, ಗ್ರಾಪಂ ಪಿಡಿಒ ಸುಮಲತಾ ಇತರರಿದ್ದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್‌ ವರಿಷ್ಠ ಸಿ.ಬಿ.ರಿಷ್ಯಂತ್‌ ಅಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಹಾಲುವರ್ತಿ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ವಿಜ್ಞಾನ ವಿಷಯ ಪರಿವೀಕ್ಷಕಿ ವಸಂತಕುಮಾರಿ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜ್ಞಾನ ಕೇಂದ್ರದ ಬಗ್ಗೆ ಶಾಲೆಗಳಿಗೆ ತಿಳಿಸಿ

ದಾವಣಗೆರೆಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ 3.10 ಕೋಟಿ ಖರ್ಚು ಮಾಡಿದ್ದು, ಮೂಲ ಸೌಕರ್ಯ ಕಲ್ಪಿಸಲು ಇನ್ನೂ ಹಣವಿದೆ. ಇನ್ನು 3 ತಿಂಗಳಲ್ಲಿ ಜಿಲ್ಲೆಯ ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳು ವಿಜ್ಞಾನ ಕೇಂದ್ರಕ್ಕೆ ಬಂದು, ವಿಜ್ಞಾನ ವಿವರಣೆ ಪಡೆಯುವ, ವಿಜ್ಞಾನದ ಬಗ್ಗೆ ಕುತೂಹಲ ಹೆಚ್ಚಿಸುವ ವಾತಾವರಣ ಇಲ್ಲಿರಬೇಕು. ಕೇಂದ್ರದ ಬಗ್ಗೆ ಜಿಲ್ಲಾದ್ಯಂತ ಶಾಲೆಗಳಿಗೆ ತಿಳಿಸಿ, ವ್ಯಾಪಕ ಪ್ರಚಾರ ನೀಡಬೇಕು ಎಂದು ಸಂಸದ ಸಿದ್ದೇಶ್ವರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

 

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಜನ ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ ಎಂದ ಬಿಜೆಪಿ ಸಂಸದ

ಜಿಲ್ಲೆಗೆ ಎಫ್‌ಎಂ ಬ್ಯಾಂಡ್‌ ರೇಡಿಯೋ ಆರಂಭಿಸಬೇಕೆಂಬ ಕನಸಿತ್ತು. ಅದಕ್ಕಾಗಿ 13 ಕೋಟಿ ರು. ಮಂಜೂರು ಮಾಡಿಸಿದ್ದೆ. ಆಗ ಜಾಗ ಇರಲಿಲ್ಲ. ಈಗ 3 ಎಕರೆ ಜಾಗ ಲಭ್ಯವಿದ್ದರೂ, ಸರ್ಕಾರವು ಹಣ ಮಂಜೂರು ಮಾಡಲು ತಯಾರಿಲ್ಲ. ಖಾಸಗಿಯವರು ಇಷ್ಟುದೂರ ಬರಲು ಒಪ್ಪುತ್ತಿಲ್ಲ. ಆದರೂ ಎಫ್‌ಎಂ ರೇಡಿಯೋ ತರುವ ಪ್ರಯತ್ನ ಮಾತ್ರ ನಿಂತಿಲ್ಲ.

ಡಾ.ಜಿ.ಎಂ.ಸಿದ್ದೇಶ್ವರ, ಸಂಸದ.

click me!