ನೇಹಾ ಹಿರೇಮಠ ಕೊಲೆ ಪ್ರಕರಣ: ಮತಾಂತರ ಮಾಡಲೆಂದೇ ಲವ್ ಜಿಹಾದ್ -ಸಿಟಿ ರವಿ ಆಕ್ರೋಶ

By Suvarna News  |  First Published Apr 19, 2024, 7:36 PM IST

ಪ್ರಚಾರ ನಿರತ ಬಿಜೆಪಿ ಕಾರ್ಯಕರ್ತರಿಗೆ ಅಪಘಾತ ಮತ್ತು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಹೋರಾಟದ ಸ್ಥಳಕ್ಕೆ ಬಂದಿದ್ದ ಬಿಜೆಪಿ ನಾಯಕ ಸಿ.ಟಿ. ರವಿ. ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.19) :
ಪ್ರಚಾರ ನಿರತ ಬಿಜೆಪಿ ಕಾರ್ಯಕರ್ತರಿಗೆ ಅಪಘಾತ ಮತ್ತು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಹೋರಾಟದ ಸ್ಥಳಕ್ಕೆ ಬಂದಿದ್ದ ಬಿಜೆಪಿ ನಾಯಕ ಸಿ.ಟಿ. ರವಿ. ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಮೇಲ್ನೋಟಕ್ಕೆ ಇದು ಅಪಘಾತದಂತೆ ಕಾಣುತ್ತಿದೆ. ಆದರೆ ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ಹತ್ಯೆ ಎನ್ನುವ ಅನುಮಾನವಿದೆ. ಕೇಸರಿ ಶಾಲು ಹಾಕಿಕೊಂಡಿರುವುದನ್ನು ನೋಡಿ ಹತ್ಯೆ ಮಾಡಬೇಕೆಂದೇ ಅಪಘಾತ ಮಾಡಲಾಗಿದೆ. ಅಪಘಾತದ ಬಳಿಕ ನಿಲ್ಲಿಸದಂತೆ ಹೋಗಿದ್ದಾರೆ. ಇಂತಹ ಪ್ರಕರಣಗಳನ್ನು ಲಘುವಾಗಿ ತೆಗೆದುಕೊಳ್ಳುವ ಸ್ವಭಾವ ನಮ್ಮ ಗೃಹಸಚಿವ ಮತ್ತು ಮುಖ್ಯಮಂತ್ರಿಗಳದ್ದು ಕುಟುಕಿದರು.

Latest Videos

undefined

ಪ್ರಧಾನಿ ಅಭ್ಯರ್ಥಿ ಹೆಸರಲ್ಲಿ ಕಾಂಗ್ರೆಸ್‌ ಮತ ಕೇಳುತ್ತಿಲ್ಲ: ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದೇನು?

 ಕೆಲವು ವಿಷಯಗಳಲ್ಲಿ ಅವರದು ಕೋಣನ ಚರ್ಮಕ್ಕಿಂತಲೂ ದಪ್ಪವಿದೆ. ಕೆಲವು ವಿಷಯಗಳಲ್ಲಿ ಮಾತ್ರ ತೀರಾ ಸೂಕ್ಷ್ಮವೇದನೆಯವರಾಗಿ ಬಿಡುತ್ತಾರೆ ಎಂದ ಅವರು ಇದರ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು. ಬಿಜೆಪಿ ಕಾರ್ಯಕರ್ತರು ಎನ್ನುವ ಉದ್ದೇಶದಿಂದಲೇ ಹತ್ಯೆ ಮಾಡಿರುವ ಅನುಮಾನವಿದೆ. ನಿನ್ನೆ ಇದೊಂದೇ ಘಟನೆ ನಡೆದಿಲ್ಲ. ನೇಹಾ ಹಿರೆಮಠ(Neha hiremath murder) ಎನ್ನುವ ಕಾಲೇಜು ವಿದ್ಯಾರ್ಥಿನಿಗೆ 14 ಬಾರಿ ಇರಿದು ಕೊಂದಿದ್ದಾನೆ. ಲವ್ ಜಿಹಾದ್(Love jihad) ಕೇರಳದಿಂದ ಕರ್ನಾಟಕಕ್ಕೆ ವ್ಯಾಪಿಸಿದೆ. ಲವ್ ಜಿಹಾದ್ ಬಗ್ಗೆ ಎಚ್ಚರದಿಂದ ಇರುವಂತೆ ನಾವು ಹೇಳುತ್ತಿದ್ದವು. ಆದರೆ ನಮ್ಮನ್ನು ಕೋಮುವಾದಿಗಳು ಎನ್ನುತ್ತಿದ್ದರು. ಲವ್ ಜಿಹಾದಿಗೆ ಎನ್ನೆಷ್ಟು ಬಲಿ ಬೇಕು ಎಂದು ಸಿ. ಟಿ. ರವಿ ಪ್ರಶ್ನಿಸಿದರು.

 ಮತಾಂತರದ ದುರುದ್ದೇಶ ಇಟ್ಟುಕೊಂಡೇ ಲವ್ ಜಿಹಾದ್ ಮಾಡಲಾಗುತ್ತಿದೆ. ಅವರಿಗೆ ಸಪೋರ್ಟ್ ಮಾಡುವಂತಹ ವ್ಯವಸ್ಥೆ ದೇಶ ವ್ಯಾಪಿ ಇದೆ. ನಮಗೆ ಬದುಕುವ ಗ್ಯಾರಂಟಿ ಕೊಡಿ. ನೆಮ್ಮದಿಯ ಗ್ಯಾರೆಂಟಿ ಕೊಡಿ ಎಂದು ಸಿ. ಟಿ. ರವಿ ಆಗ್ರಹಿಸಿದರು ಇದೇ ವೇಳೆ ನೀವು ಇಡೀ ಕರ್ನಾಟಕವನ್ನು ಕ್ರೈಂ ಸ್ಟೇಟ್ ಆಗಿ ಬದಲಾಯಿಸುತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬೆಂಗಳೂರು. ಗದಗ್, ಹುಬ್ಬಳ್ಳಿ ಹಾಗೂ ಕೊಡಗಿನಲ್ಲಿ ನಡೆದಿರುವ ಈ ಎಲ್ಲಾ ಘಟನೆಗಳ ಸಮಗ್ರ ತನಿಖೆ ಆಗಬೇಕು. ಈ ಎಲ್ಲಾ ಘಟನೆಗಳ ಹಿಂದೆ ಒಂದು ನೆಟ್ ವರ್ಕ್ ಇರಬಹುದು. ಬಿಜೆಪಿಯ ಗೆಲುವಿನ ವಾತಾವರಣವನ್ನು ನೋಡಿ ಬೆದರಿಸುವ ತಂತ್ರವನ್ನು ಮಾಡಲಾಗುತ್ತಿದೆ. ಇದೆಲ್ಲದರ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. 

ಈ ಜಿಹಾದಿ ಮಾನಸಿಕತೆಗೆ ಬೆಂಬಲ ಕೊಡುವುದನ್ನು ಕಾಂಗ್ರೆಸ್ ಮೊದಲು ಬಿಡಬೇಕು. ಇಲ್ಲದಿದ್ದರೆ ನೀವು ನಾಶವಾಗಿ ದೇಶವನ್ನು ನಾಶ ಮಾಡುತ್ತೀರ ಎಂದು ಟೀಕಿಸಿದರು. ಇಂತಹ ನಾಮಾರ್ಧ ಸರ್ಕಾರದಿಂದ ಪಾಕಿಸ್ತಾನ ಪರ ಘೋಷಣೆ ಕೂಗಿ ಸಂಭ್ರಮಿಸುವಂತೆ ಮಾಡಿತು ಎಂದರು. 

 

ದೇಶದಲ್ಲಿ ಮೋದಿ ಅಲೆ ಇದ್ದು, ಈ ಬಾರಿ ಎಲ್ಲರೂ ಬಿಜೆಪಿಗೆ ಓಟು ಹಾಕ್ತಾರೆ: ಸಿ.ಟಿ.ರವಿ

ಅವರ ಉದ್ದೇಶ ಇರುವುದೇ ಮೊಘಲ್ ದೇಶವನ್ನು ಮಾಡಬೇಕೆನ್ನುವುದು. ಹೀಗಾಗಿ ಇವುಗಳ ಸಮಗ್ರ ತನಿಖೆ ನಡೆಯಬೇಕು. ನಮ್ಮ ಪಕ್ಷದ ಕಡೆಯಿಂದ ಗಾಯಾಳುಗಳಿಗೆ 2 ಲಕ್ಷ ಪರಿಹಾರ, ಹತ್ಯೆಯಾದ ರಾಮಣ್ಣ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿದ್ದೇವೆ. ನಾವು ಪಕ್ಷದ ಕಾರ್ಯಕರ್ತರಿಂದ ಹೆಚ್ಚಿನ ಸಹಾಯ ಮಾಡಲಿದ್ದೇವೆ ಎಂದು ಸಿ. ಟಿ ರವಿ ಹೇಳಿದರು. ಬಿಜೆಪಿ ಮಾಜಿ ಶಾಸಕ ಕೆ.ಜಿ ಬೋಪಯ್ಯ ಅವರು ಮಾತನಾಡಿ ಮಂಗಳೂರಿನಲ್ಲಿ ನಡೆದಿರುವ ಕೊಲೆ ಪ್ರಕರಣಗಳಿಗೂ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

click me!