ಕಾಂಗ್ರೆಸ್ ಗೆದ್ದರೆ ವಿದೇಶದಿಂದಲೇ ಮತದಾನ ವ್ಯವಸ್ಥೆ: ಡಾ. ಆರತಿ ಕೃಷ್ಣ

By Kannadaprabha NewsFirst Published Apr 19, 2024, 1:41 PM IST
Highlights

ಅನಿವಾಸಿ ಭಾರತೀಯರಿಗೆ ವಿದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಲ್ಲಿ ಮತದಾನ ಮಾಡಲು ಅವಕಾಶವಿಲ್ಲ, ಇಲ್ಲಿಗೆ ಬಂದು ಮತ ಹಾಕಲು ಖರ್ಚು ಹೆಚ್ಚಾಗುತ್ತದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದು ಹೇಳಿದ ಡಾ. ಆರತಿ ಕೃಷ್ಣ

ಬೆಂಗಳೂರು(ಏ.19):  ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಸಚಿವಾಲಯ ಹಾಗೂ ಆನ್‌ಲೈನ್‌ನಲ್ಲಿ ಮತದಾನ ಅಥವಾ ರಾಯಭಾರ ಕಚೇರಿಯಲ್ಲಿ ಮತ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಸಾಗರೋತ್ತರ ಭಾರತೀಯ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಆರತಿ ಕೃಷ್ಣ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನಿವಾಸಿ ಭಾರತೀಯರಿಗೆ ವಿದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಲ್ಲಿ ಮತದಾನ ಮಾಡಲು ಅವಕಾಶವಿಲ್ಲ, ಇಲ್ಲಿಗೆ ಬಂದು ಮತ ಹಾಕಲು ಖರ್ಚು ಹೆಚ್ಚಾಗುತ್ತದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದು ಹೇಳಿದರು.

ಎಂಇಎಸ್ ಬೇಡಿಕೆ ಪೂರೈಕೆಗೆ ಕಾಂಗ್ರೆಸ್ ಅಂಜಲಿಗೆ ಟಿಕೆಟ್ ನೀಡಿದೆ- ಬಿಜೆಪಿ ಆರೋಪ

ಡಾ. ಮನಮೋಹನ್ ಸಿಂಗ್ ಅವರ ಸರ್ಕಾರ ಇದಾಗ ಅನಿವಾಸಿ ಭಾರತೀಯರಿಗೆ ಎಂದೇ ಪ್ರತ್ಯೇಕ ಸಚಿವಾಲಯ ಕೆಲಸ ಮಾಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ವಿದೇಶಾಂಗ ಸಚಿವಾಲಯದ ಜೊತೆ ಸೇರಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಸಚಿವಾಲಯ ಪ್ರಾರಂಭ ಮಾಡುತ್ತೇವೆ. ಜತೆಗೆ ಪ್ರಣಾಳಿಕೆಯಲ್ಲಿ ನೀಡಿರುವ 5 ನ್ಯಾಯಗಳು ಮತ್ತು 25 ಗ್ಯಾರಂಟಿಗಳ ಭರವಸೆ ಈಡೇರಿಸುತ್ತೇವೆ ಎಂದರು. ಕರ್ನಾಟಕ ವಿಭಾಗದ ಅಧ್ಯಕ್ಷ ರಾಜೀವ್‌ ಗೌಡ, ಯುರೋಪ್ ಭಾಗದ ಕಾರ್ಯದರ್ಶಿ ವೀರೇಂದ್ರ ವಸಿಷ್ಟ ಹಾಜರಿದ್ದರು.

click me!