ರಾಮನಗರ (ಡಿ.27): ಈ ರಾಜ್ಯಕ್ಕೆ ಗೊತ್ತಿದೆ ಕುಮಾರಸ್ವಾಮಿ (Kumaraswamy) ಕೊಡುಗೆ ಏನೆಂದು. ನೀರಾವರಿ ವಿಚಾರವಾಗಿ ದೇವೇಗೌಡರ (HD Devegowda) ಕೊಡುಗೆ ಏನೆಂದು ಎಲ್ಲರಿಗೂ ಗೊತ್ತಿದೆ. ಮೊನ್ನೆ ಹಾಸನದಲ್ಲಿ (Hassan) ಹೇಳಿದ್ದಾರೆ ಏನ್ ಪಂಚೆ ಹಾಕಿದವರೆಲ್ಲ ರೈತರ ಮಕ್ಕಳ, ನಾವು ಪಂಚೆ ಹಾಕಿದ್ದೇವೆ ನಾವು ರೈತರು (Farmers) ಎಂದಿದ್ದಾರೆ. ನಾವು ಎದೆ ಮೇಲೆ ಬೋರ್ಡ್ ಹಾಕಿಕೊಂಡಿಲ್ಲ ರೈತರ ಮಕ್ಕಳೆಂದು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD Kumaraswamy) ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಡದಿಯ (Bidadi) ಕೇತಗಾನಹಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, ಡಿಕೆಶಿ ಹೆಸರು ಬಳಸದೇ ವಾಗ್ದಾಳಿ ನಡೆಸಿದರು. ಜನರೇ ಅವರವರ ಕಾರ್ಯ ನೋಡಿ ಬಿರುದು ಕೊಡುತ್ತಾರೆ. ಪಂಚೆ ಹಾಕಿಕೊಂಡು ಶೋ ಮಾಡಿದವರು ಎಲ್ಲರೂ ರೈತರಾಗುವುದಿಲ್ಲ. ಈಗ ನೋಡಿದೆವಲ್ಲ. ನಾವು ತಲಕಾವೇರಿಯಲ್ಲಿ (Talacauvery) ಎಲ್ಲರನ್ನೂ ದೂರ ಕಳುಹಿಸಿ ಕಾವೇರಿ ನೀರಿಗೆ ಅಕ್ಷತೆ ಹಾಕೋದನ್ನ. ಮೆಟ್ಟಲಿಗೆ ನಮಸ್ಕಾರ ಮಾಡಿಕೊಂಡಿರುವುದನ್ನ. ನರೇಂದ್ರ ಮೋದಿಯವರನ್ನೇ (Narendra Modi) ಕಾಪಿ ಮಾಡಿದ್ದಾರೆ ಎಂದರು.
ಮೇಕೆದಾಟು (Mekedatu) ವಿಚಾರವಾಗಿ ಪಾದಯಾತ್ರೆ ಮಾಡುತ್ತೇವೆ ಎನ್ನುತ್ತಿದ್ದು ಇದೆಲ್ಲವೂ ಆರ್ಟಿಫಿಷಿಯಲ್ ಹೋರಾಟಗಳು, ಇವುಗಳೆಲ್ಲಾ ನಡೆಯಲ್ಲ. ಕಾಂಗ್ರೆಸ್ (Congress) ನಡಿಗೆ ಕೃಷ್ಣೆಯ ಕಡೆಗೆ ಹೋರಾಟ ನೋಡಿಲ್ಲವೇ. ಕೃಷ್ಣೆಯ ನೀರನ್ನ ಇವರು ಉಳಿಸಿದ್ದನ್ನ ನೋಡಿದ್ದೇವೆ. ಈಗ ಮೇಕೆದಾಟು ಹೋರಾಟ ಮಾಡುತ್ತಿದ್ದಾರೆ, ಪಾದಯಾತ್ರೆ ಮೂಲಕ ಸ್ವಾಮೀಜಿಗಳನ್ನ ಪಾದಯಾತ್ರೆ ಗೆ ಕರೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಷ್ಟು ಕಾಳಜಿ ಇದ್ದಲ್ಲಿ ಹೋಗಿ ದೆಹಲಿಯಲ್ಲಿ (Delhi) ಉಪವಾಸ ಕುಳಿತುಕೊಳ್ಳಿ ಕೇಂದ್ರ ಸರ್ಕಾರದ ಮುಂದೆ. ಇದು ಜನರನ್ನ ಪರಿವರ್ತನೆ ಮಾಡುವ ಸಲುವಾಗಿ ಹೋರಾಟ. ಮತಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ ಅಷ್ಟೇ. ಆದರೆ ಎಲ್ಲಾ ಸಂದರ್ಭದಲ್ಲಿಯೂ ಜನರನ್ನ ಪರಿವರ್ತಿಸಲು ಆಗುವುದಿಲ್ಲ ಎನ್ನುವುದನ್ನುಅರಿತರೆ ಒಳಿತು. ಅದಕ್ಕೆ ಮೂಲ ಉದ್ದೇಶ ಇರಬೇಕು ಎಂದು ಬಿಡದಿಯ ಕೇತಗಾನಹಳ್ಳಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸೋಲುವ ದಿನ ದೂರವಿಲ್ಲ : ಕಾಂಗ್ರೆಸ್ (Congress) ಪಕ್ಷ ಅಧಿಕಾರ ಇರಲಿ ಇಲ್ಲದಿರಲಿ ದೇಶದ ಸೇವೆ ಮಾಡುವ ಗುಣ ಹೊಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದರು. ಈ ದೇಶದಲ್ಲಿ ರೂಪಿತವಾದ ಎಲ್ಲಾ ಯೋಜನೆಗಳು ಕಾಂಗ್ರೆಸ್ ಕೊಡುಗೆ ಎಂದರು. ದೇಶದ ಶಕ್ತಿ ಕಾಂಗ್ರೆಸ್. ಕಾಂಗ್ರೆಸ್ ದೇಶದಲ್ಲಿ ಅಧಿಕಾರ ಹಿಡಿದರೆ ಎಲ್ಲಾ ವರ್ಗದ ಜನರಿಗೆ ಅಧಿಕಾರ ಸಿಕ್ಕಿದಂತೆ ಎಂದಿದ್ದರು.
ಶಾಶ್ವತವಲ್ಲ. ಹಲವುಬಾರಿ ನಾನೂ ಸೋತಿದ್ದೇನೆ. ಗೆದ್ದಿದ್ದೇನೆ. ಸೋಲು ಗೆಲುವು ಶಾಶ್ವತವಲ್ಲ. ಹಾಸನದಲ್ಲಿ (Hassan) ಇಂದು ಗೆದ್ದಿರುವವರು ನಾಳೆ ಸೋಲುವ ದಿನ ದೂರವಿಲ್ಲ. ದೇವೇಗೌಡರು (Devegowda) ತೇಜಸ್ವಿನಿ ವಿರುದ್ಧ ಸೋತಿದ್ದರು. ನಾನು ದೇವೇಗೌಡರ ವಿರುದ್ಧ ಸೋತಿದ್ದೆ. ಕುಮಾರಸ್ವಾಮಿ (Kumaraswamy) ವಿರುದ್ಧ ನಾನು ಗೆದ್ದಿದ್ದೇನೆ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ವಿರುದ್ಧ ನನ್ನ ಸಹೋದರ ಸುರೇಶ್ ಗೆದ್ದಿದ್ದಾರೆ. ಈ ಜಿಲ್ಲೆಯಲ್ಲಿ ದೇವೇಗೌಡರು ದೊಡ್ಡ ಗೌಡರ ವಿರುದ್ಧ ಸೋತಿದ್ದಾರೆ. ಹಾಗಾಗಿ ಜೆಡಿಎಸ್ (JDS) ಸೋಲುವ ದಿನಗಳು ದೂರ ಇಲ್ಲ. ಇದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ (Congress) ವಿರೋಧ ಪಕ್ಷದಲ್ಲಿದ್ದರೂ ವಿಧಾನ ಪರಿಷತ್ ಚುನಾವಣೆಯಲ್ಲಿ 11 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮತ್ತು ಜೆಡಿಎಸ್‌ನವರನ್ನು ಮಲಗಿಸಿದ್ದೇವೆ ಎಂದು ಹೇಳಿದ್ದರು.