
ಕಲಬುರಗಿ(ಡಿ.27): ಮುಂಬರುವ 2024 ರ ಸಂಸತ್ ಚುನಾವಣೆಯಲ್ಲಿ(2024 General Election) ಈ ದೇಶದಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಂವಿಧಾನಕ್ಕೆ ವಿಪತ್ತು ಕಾದಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಆತಂಕ ಹೊರಹಾಕಿದ್ದಾರೆ. ಕಲಬುರಗಿಯಲ್ಲಿ(Kalaburagi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಜಾಪ್ರಭುತ್ವದ(Democracy) ಮೌಲ್ಯಗಳನ್ನು ಗಾಳಿಗೆ ತೂರುತ್ತಿರುವ ಬಿಜೆಪಿ(BJP) ಕೇಂದ್ರದಲ್ಲಿ ಮನ ಬಂದಂತೆ ಅಧಿಕಾರ ಮಾಡುತ್ತಿದೆ. ಇದೇ ಪಕ್ಷ ಮತ್ತೆ ಪುನಃ ಹೆಚ್ಚಿನ ಸ್ಥಾನಗಳೊಂದಿಗೆ, 2024ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದೇಯಾದರೆ ಸಂವಿಧಾನಕ್ಕೆ(Constitution) ಆಪತ್ತು ನಿಶ್ಚಿತ ಎಂದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುವ ಎಲ್ಲ ಪ್ರಯತ್ನ ಬಿಜೆಪಿ ಹೊಂದಿದೆ. ಹೀಗಾಗಿ ಸಂವಿಧಾನ ಬದಲಾಯಿಸುವುದನ್ನು ತಪ್ಪಿಸಲು ಜನರು ಈಗಲಾದರೂ ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ ಎಂದು ಖರ್ಗೆ ಹೇಳಿದರು.
ಸಬ್ ಕಾ ಸಾಥ್ ಅಲ್ಲ; ಸಬ್ ಕಾ ಸತ್ಯಾನಾಶ- ಖರ್ಗೆ
ಬಲವಂತದ ಮತಾಂತರ(Conversion) ತಡೆಯಲು ಈಗಾಗಲೇ ಭಾರತೀಯ ದಂಡ ಸಂಹಿತೆಯಡಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಇಷ್ಟಿದ್ದರೂ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಜಾರಿಗೆ ತರುತ್ತಿರುವುದನ್ನು ನೋಡಿದರೆ ಬಿಜೆಪಿ ತನ್ನ ಅಜೆಂಡಾ ಹೇಗಾದರೂ ಮಾಡಿ ಕಾರ್ಯರೂಪಕ್ಕೆ ತಂದೇ ತರುತ್ತೇವೆ ಎಂಬುದಕ್ಕೆ ಸಾಕ್ಷೀಕರಿಸುವಂತಿದೆ ಎಂದು ಟೀಕಿಸಿದರು.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಕ್ಷದ ಪ್ರಚಾರ:
ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಹೇಳೊದೊಂದು ಮಾಡೋದು ಇನ್ನೊಂದು. ಸಂಸತ್ ಅಧಿವೇಶನ(Parliamentary Session) ನಡೆದಾಗ ಸಂಸತ್ ಗೆ ಬಾರದ ಮೋದಿ ಚುನಾವಣಾ ಪ್ರಚಾರದಲ್ಲಿ 15 ದಿನಗಳಟ್ಟಲೇ ತೊಡಗಿಸಿಕೊಳ್ಳುತ್ತಾರೆ. ಈಗ ಚುನಾವಣಾ ಎದುರಾಗುತ್ತಿರುವುದರಿಂದ ಪ್ರತಿದಿನ ಟಿವಿ ಹಾಗೂ ಮಾಧ್ಯಮಗಳ ಮುಂದೆ ಬರುತ್ತಿದ್ದಾರೆ. ಯಾಕೆ ಲೋಕಸಭೆ ಹಾಗೂ ರಾಜ್ಯಸಭೆಗೇಕೆ ಬಂದು ಹೇಳಲಿಲ್ಲ ಎಂದು ಪ್ರಶ್ನಿಸಿದರು.
ಕೋವಿಡ್(Covid-19) ನಿಯಂತ್ರಣ ನಿಟ್ಟಿನಲ್ಲಿ ಅನೇಕ ರಾಷ್ಟ್ರಗಳು ಕೆಲಸ ಮಾಡುತ್ತಿವೆ. ಈ ಹಿಂದೆ ಕೋವಿಡ್ ಅಲೆಯಲ್ಲಿ ದೇಶದಲ್ಲಿ 50 ಲಕ್ಷ ಜನ ಸಾವನ್ನಪ್ಪಿದ್ದರೂ ನಾಲ್ಕೈದು ಲಕ್ಷ ಎಂಬುದಾಗಿ ತೋರಿಸಲಾಗಿದೆ. ಹೀಗೆ ಮೋದಿ ಆಡಳಿತ ನಡೆಯುತ್ತಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಪ್ರಚಾರ ಮಾಡುವುದು ಹಿಂದೆಂದೂ ಆಗಿಲ್ಲ. ಮೋದಿಯಿಂದ ಇದೆಲ್ಲವೂ ನಡೆಯುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ರೈತರ ಮಾರಣಹೋಮ ದೇಶಕ್ಕೇ ಕಪ್ಪುಚುಕ್ಕೆ: ಸಿಎಂ ರಾಜೀನಾಮೆ ಕೊಡಲಿ
ಪ್ರಧಾನಿ ಮೋದಿಗೆ ರೈತರ ಪರ ಕಾಳಜಿ ಇಲ್ಲ
ಕೃಷಿ ಕಾಯ್ದೆ(Farm Laws) ಮಸೂದೆ ವಾಪಸ್ ಹಿಂದೆ ಪ್ರಧಾನಿ ಮೋದಿಯವರಿಗೆ ರೈತರ ಪರ ಕಾಳಜಿ ಇಲ್ಲ. ಪಂಚರಾಜ್ಯಗಳ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎನ್ನುವ ದೃಷ್ಟಿಯಿಂದ ಕಾಯ್ದೆಯನ್ನ ವಾಪಸ್ ತೆಗೆದುಕೊಂಡಿದ್ದಾರೆ. ಈಗಲೂ ಕಾನೂನು ಸರಿ ಇದೆ ಎನ್ನುವುದೇ ಅವರ ಭಾವನೆಯಾಗಿದೆ. ಹೋರಾಟದಿಂದ ಏಳುನೂರು ರೈತರ ಸಾವಿಗೀಡಾಗಿದ್ದಾರೆ. ಇದರಿಂದ ರೈತರ(Farmers) ಕುಟುಂಬಗಳು ಬೀದಿಗೆ ಬಿದ್ದಿವೆ ಅಂತ ನರೇಂದ್ರ ಮೋದಿ ಸರ್ಕಾರ ವಿರುದ್ಧ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದಿದ್ದಾರೆ.
ಮೋದಿ ಪದೇ ಪದೇ ತಪ್ಪು ಮಾಡುತ್ತಿರುವುದು ಇದರಿಂದ ಗೊತ್ತಾಗುತ್ತದೆ. ಮೋದಿ ಅವರು ಸಡನ್ ಆಗಿ ತಮ್ಮ ಮನಸ್ಸಿಗೆ ತೋಚಿದ ನಿರ್ಣಯವನ್ನ ಕೈಗೊಳ್ಳುತ್ತಾರೆ. ಕಾಯ್ದೆ ವಾಪಸ್ ತೆಗೆದುಕೊಳ್ಳುವ ನಿರ್ಣಯದ ಬಗ್ಗೆ ಸಂಪುಟದಲ್ಲಿ ಚರ್ಚಿಸಿಲ್ಲ. ಮೋದಿ ಮನಸ್ಸಿಗೆ ಬಂತು ಕಾಯ್ದೆ ವಾಪಸ್ ತೆಗೆದುಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿಯ ಸೋಲಿನಿಂದ ಕಂಗೆಟ್ಟು ಮೋದಿ ಈ ನಿರ್ಣಯ ಕೈಗೊಂಡಿದ್ದಾರೆ ಅಂತ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.