ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋತಾಗ ಅವರಿಗೆ ಮರುಜೀವ ತುಂಬಿದ್ದೇ ಜೆಡಿಎಸ್ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೆನಪು ಮಾಡಿದರು.
ಕೊಪ್ಪಳ (ಜ.31) : ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋತಾಗ ಅವರಿಗೆ ಮರುಜೀವ ತುಂಬಿದ್ದೇ ಜೆಡಿಎಸ್ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೆನಪು ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಸಂಗಣ್ಣ ಕರಡಿ ಅವರು ಮರಳಿ ಜೆಡಿಎಸ್‌ಗೆ ಬರುತ್ತಾರೆಯೇ? ನಿಮ್ಮ ಜತೆ ಸಂಪರ್ಕದಲ್ಲಿದ್ದಾರೆಯೇ ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರಿಸದ ಅವರು, ಈ ರೀತಿ ಪ್ರತಿಕ್ರಿಯೆ ನೀಡಿದರು.
undefined
ಜೆಡಿಎಸ್‌ಗೆ ಕಡಿಮೆ ಸ್ಥಾನ, ನಾನೇನು ತಪ್ಪು ಮಾಡಿದ್ದೇನೆ?: ಎಚ್.ಡಿ.ಕುಮಾರಸ್ವಾಮಿ
24 ಗಂಟೆಗಳ ಕಾಲ ನಿದ್ದೆಗೆಟ್ಟು ಅವರಿಗಾಗಿ ನಾನು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡಿದೆ. ಕ್ಷೇತ್ರಕ್ಕೆ .350 ಕೋಟಿ ಅನುದಾನ ಕೊಟ್ಟಿದ್ದೇನೆ. ನಂತರ ಸಂಗಣ್ಣ ಕರಡಿಯವರು ಗೆದ್ದರು. ಗೆದ್ದ ಮೇಲೆ ಒಂದೆರಡು ವರ್ಷಗಳ ಬಳಿಕ ಪುನಃ ಬಿಜೆಪಿ ಹೋದರು ಎಂದರು.
ಗಂಗಾವತಿಯ ಇಕ್ಬಾಲ್ ಅನ್ಸಾರಿ ಅವರು ಮರಳಿ ಜೆಡಿಎಸ್‌ಗೆ ಬರುತ್ತಾರೆಯೇ ಎನ್ನುವ ಪ್ರಶ್ನೆಗೆ, ನೇರವಾಗಿ ಉತ್ತರಿಸಲಿಲ್ಲ. ಗಂಗಾವತಿಯಲ್ಲಿ ಅವರ ಪರೀಕ್ಷೆ ಎಷ್ಟುಬಾರಿ ಆಗಿದೆ ಎಂದು ಮರು ಪ್ರಶ್ನೆ ಮಾಡಿದರು.
ಹೀಗಾಗಿಯೇ ನಾನು ಬಹಿರಂಗ ಸಮಾವೇಶದಲ್ಲಿಯೇ ಹೇಳಿದ್ದೇನೆ, ರಾಜಕೀಯ ಗಂಧಗಾಳಿ ಗೊತ್ತಿಲ್ಲದಿದ್ದರೂ ಪರವಾಗಿಲ್ಲ, ಸಮಾಜ ಸೇವೆ ಮಾಡುವ ತುಡಿತ ಇರುವ ಯುವಕರಿಗೆ ಆದ್ಯತೆ ನೀಡುತ್ತೇನೆ ಎಂದರು.
ಯುವಕರು ಜವಾಬ್ದಾರಿ ತೆಗೆದುಕೊಳ್ಳುವುದಕ್ಕೆ ಬರುವುದಾದರೆ ಖಂಡಿತ ನಾನು ಅವಕಾಶ ನೀಡುತ್ತೇನೆ. ಹೊಸ ಯುವಶಕ್ತಿಯನ್ನು ಕಟ್ಟುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಇಕ್ಬಾಲ್ ಅನ್ಸಾರಿ ಮತ್ತು ಸಂಸದ ಸಂಗಣ್ಣ ಕರಡಿ ಅವರ ನಡೆಯ ಕುರಿತು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ ಪಕ್ಷಗಳ ಭರವಸೆಗಳಿಗೆ ಮರುಳಾಗಬೇಡಿ: ಎಚ್.ಡಿ.ಕುಮಾರಸ್ವಾಮಿ
ಅನ್ಸಾರಿ ಬರುವ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಮುಂದೆ ಅಂಥ ಯಾವ ಪ್ರಸ್ತಾಪ ಇಲ್ಲ. ಹೊಸ ಶಕ್ತಿಯತ್ತ ಚಿತ್ತ ನೆಟ್ಟಿದ್ದೇವೆ ಎಂದರು. ಕುಷ್ಟಗಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಕುಷ್ಟಗಿಯಲ್ಲಿ ತುಕಾರಾಂ ಅವರಿಗೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ಅವರಿಗೆ ಸಹಕಾರ ನೀಡಬೇಕು ಎಂದು ಸೂಚಿಸುತ್ತೇನೆ ಎಂದರು. ಜನಾರ್ದನ ರೆಡ್ಡಿ ಅವರ ಪಕ್ಷದಿಂದ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ನಮ್ಮ ಮತಗಳೇ ಬೇರೆ, ಅವರ ಮತಗಳೇ ಬೇರೆ ಎಂದರು.