ರಾಜಕಾರಣಿಗಳ ಗಿಫ್ಟ್ ತಿರಸ್ಕರಿಸಿದರೆ ₹5000 ಬಹುಮಾನ: ರವಿ ಕೃಷ್ಣಾರೆಡ್ಡಿ ಘೋಷಣೆ

By Kannadaprabha News  |  First Published Jan 31, 2023, 8:37 AM IST

ಚುನಾವಣೆ ವೇಳೆ ಮತದಾರರಿಗೆ ಜನಪ್ರತಿನಿಧಿಗಳು ಆಮಿಷವೊಡ್ಡಲು ವಸ್ತುಗಳನ್ನು ನೀಡಿದರೆ ಅದನ್ನು ಪ್ರಶ್ನಿಸಿ, ತಿರಸ್ಕರಿಸುವವರಿಗೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷ ವತಿಯಿಂದ .5 ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ.


ಬೆಂಗಳೂರು (ಜ.31) : ಚುನಾವಣೆ ವೇಳೆ ಮತದಾರರಿಗೆ ಜನಪ್ರತಿನಿಧಿಗಳು ಆಮಿಷವೊಡ್ಡಲು ವಸ್ತುಗಳನ್ನು ನೀಡಿದರೆ ಅದನ್ನು ಪ್ರಶ್ನಿಸಿ, ತಿರಸ್ಕರಿಸುವವರಿಗೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷ ವತಿಯಿಂದ .5 ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ.

ಕೆಆರ್‌ಎಸ್‌ ಪಕ್ಷ(KRS Party)ದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಪಾರದರ್ಶಕ, ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಎಂಬ ಉದ್ದೇಶದಿಂದ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

Tap to resize

Latest Videos

ಜನರೇ ಜನಪ್ರತಿನಿಧಿಗಳ ಆಮಿಷಗಳನ್ನು ತಿರಸ್ಕರಿಸುವ ಮತ್ತು ಚುನಾವಣಾ ಅಕ್ರಮಗಳನ್ನು ನಿಲ್ಲಿಸುವ ಕಾರ್ಯಕ್ಕೆ ಮುಂದಾಗಬೇಕು. ಯಾವುದೇ ವ್ಯಕ್ತಿ ಕುಕ್ಕರ್‌, ಮಿಕ್ಸಿ, ತಟ್ಟೆಇತ್ಯಾದಿ ವಸ್ತುಗಳನ್ನು ನೀಡಿದರೆ ಆದನ್ನು ಪ್ರಶ್ನಿಸಿ, ತಿರಸ್ಕರಿಸುವ ಘಟನೆಯ ವಿಡಿಯೋ ಮಾಡಿ ಮೊ.ಸಂ. 88617-75862ಗೆ ಕಳುಹಿಸುವವರಿಗೆ .5 ಸಾವಿರ ಬಹುಮಾನ ನೀಡಲಾಗುವುದು ಎಂದು ರವಿಕೃಷ್ಣಾ ರೆಡ್ಡಿ(Ravikrishnareddy) ತಿಳಿಸಿದ್ದಾರೆ.

ಈ ನಡುವೆ, ಮತಕ್ಕಾಗಿ ಮತದಾರರಿಗೆ ಆಮಿಷವೊಡ್ಡುವ ಚುನಾವಣಾ ಅಕ್ರಮಗಳನ್ನು ನಿಲ್ಲಿಸಲು ಮತ್ತು ರಾಜ್ಯದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವಂತೆ ಒತ್ತಾಯಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡುವ ಅಭಿಯಾನವನ್ನು ಕೈಗೊಂಡಿದ್ದಾರೆ. ಈಗಾಗಲೇ ಅಭಿಯಾನ ಪ್ರಾರಂಭಿಸಿರುವ ರವಿಕೃಷ್ಣಾ ರೆಡ್ಡಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸೋಮವಾರದಿಂದ ವಿವಿಧ ಜಿಲ್ಲೆಗಳ ಭೇಟಿ ಮುಂದುವರೆಸಲಿದ್ದಾರೆ.

click me!