ಕಾಂಗ್ರೆಸ್ ಗ್ಯಾರಂಟಿಗಳಿಂದ ನನ್ನ ಅಸ್ತಿತ್ವ ಕುಸಿತ ಆಗಿರೋದು. ಕಾಂಗ್ರೆಸ್ ಸೋಲಿಸಲು ಈ 5 ಗ್ಯಾರಂಟಿಗಳೇ ನಮಗೆ ಅಸ್ತ್ರವಾಗಲಿವೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು (ಮೇ 25): ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಂದ ನನ್ನ ಅಸ್ತಿತ್ವ ಕುಸಿತ ಆಗಿರೋದು. ನಾನು ಏನು ಸನ್ಯಾಸಿ ಅಲ್ಲ, ಕಾಂಗ್ರೆಸ್‌ನ 5 ಗ್ಯಾರಂಟಿಗಳೇ ನಮಗೆ ಅಸ್ತ್ರವಾಗಿದೆ. ಕಾಂಗ್ರೆಸ್ ಕೊಟ್ಟಿರುವ ಗ್ಯಾರೆಂಟಿ ಈಡೇರಿಸಲ್ಲ ಅದನ್ನು ಹಿಡಿದುಕೊಂಡೇ ಹಳ್ಳಿ ಹಳ್ಳಿಗಳಿಗೆ ಹೋಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಜೆಡಿಎಸ್ ಅವಲೋಕನಾ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಜನರು ಕಾಂಗ್ರೆಸ್ ಎಲ್ಲರಿಗೂ ಸಿಗುವ 5 ಗ್ಯಾರಂಟಿಗಳನ್ನು ನೋಡಿ ಮತವನ್ನು ಹಾಕಿ ಗೆಲ್ಲಿಸಿದ್ದಾರೆ. ಮೊದಲು ಎಲ್ಲರಿಗೂ ಗ್ಯಾರಂಟಿ ಕೊಡ್ತೇವೆಂದು ಹೇಳಿ ಈಗ ಷರತ್ತುಗಳನ್ನು ಹಾಕುತ್ತಿದ್ದಾರೆ. ಕಾಂಗ್ರೆಸ್ ಕೊಟ್ಟಿರುವ ಗ್ಯಾರೆಂಟಿ ಈಡೇರಿಸಲ್ಲ. ಇದನ್ನ ಹಳ್ಳಿ ಹಳ್ಳಿಗೂ ತೆಗೆದುಕೊಂಡು ಹೋಗಬೇಕು. ಷರತ್ತು ಹಾಕಿರಲಿಲ್ಲ, ಈಗ ಷರತ್ತು ಅಂತ ಹೇಳ್ತಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ ಈ ಬಗ್ಗೆ ಪ್ರತಿಭಟನೆ ಆಗಬೇಕು ಎಂದು ಹೇಳಿದರು.
ನಾನು ಕೆಲಸಕ್ಕಾಗಿ ಯಾರ ಕಾಲು ಬೇಕಾದ್ರೂ ಹಿಡೀತೀನಿ: ಸಂಸದ ಪ್ರತಾಪ್‌ಸಿಂಹ
ನಾನೇನು ರಾಜಕೀಯ ಸನ್ಯಾಸಿ ಅಲ್ಲ: ನಾನು ಏನು ಸನ್ಯಾಸಿ ಅಲ್ಲ, ಕಾಂಗ್ರೆಸ್‌ನ 5 ಗ್ಯಾರಂಟಿಗಳೇ ನಮಗೆ ಅಸ್ತ್ರವಾಗಿವೆ. ಕಾಂಗ್ರೆಸ್ ಗ್ಯಾರಂಟಿಗಳಿಂದ ನನ್ನ ಅಸ್ತಿತ್ವ ಕುಸಿತ ಆಗಿರೋದು. ನಾನು ಅಷ್ಟು ಸುಲಭವಾಗಿ ಬಿಡ್ತೀನಾ.? ನೋಡಿ. ಪಕ್ಷ ಸಂಘಟನೆಗೆ ಇದು ಒಳ್ಳೆಯ ಅವಕಾಶ. ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಎರಡು ಮೂರು ಕ್ಯಾಬಿನೆಟ್ ಸಭೆ ಒಳಗೆ ಎಲ್ಲಾ ಗ್ಯಾರೆಂಟಿ ಜಾರಿ ಆಗಬೇಕು. ಇಲ್ಲದಿದ್ದರೆ ಮುಂದಿನ ಅಧಿವೇಶನದಲ್ಲಿ ಅಹೋರಾತ್ರಿ ಧರಣಿ ಮಾಡುವುದಾಗಿ ಎಚ್ಡಿಕೆ ಘೋಷಣೆ ಮಾಡಿದರು.
ಚಪ್ಪಾಳೆ ಗಿಟ್ಟಿಕೊಂಡವರಿಗೆ ಬುದ್ಧಿ ಕಲಿಸ್ತೀನಿ: ಎರಡು ಸಚಿವ ಸಂಪುಟ ಸಭೆ ಆಗಲಿ, ಆಮೇಲೆ ಹೋರಾಟದ ಬಗ್ಗೆ ತೀರ್ಮಾನ ಮಾಡ್ತೀವಿ. ಕಾಂಗ್ರೆಸ್ ಪಕ್ಷ ಮತ ಹಾಕಿಸಿಕೊಂಡಿದ್ದಾರೆ. ಚಪ್ಪಾಳೆ ಗಿಟ್ಟಿಸಿಕೊಂಡು ಮತ ಹಾಕಿಸಿಕೊಂಡಿದ್ದಾರೆ. ನೋಡೋಣ ಏನೇನು ಕಾರ್ಯಕ್ರಮ ಕೊಡ್ತಾರೆ ಅಂತ. ಜೊತೆಗೆ ಕುಮಾರಸ್ವಾಮಿ ಅಸ್ತಿತ್ವ ಉಳಿಸಿಕೊಳ್ಳೋಕೆ ಹೀಗೆಲ್ಲಾ ಮಾಡ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ನನ್ನ ಅಸ್ತಿತ್ವ ಹೊರಟೋಗಿದೆ, ಇದೇ ಗ್ಯಾರಂಟಿ ಸ್ಕೀಮ್ ನನ್ನ ಅಸ್ತಿತ್ವ ಕುಂಠಿತಗೊಳಿಸಿದೆ
ಇದನ್ನು ಇಟ್ಟುಕೊಂಡೇ ಮಾತಾಡಬೇಕಲಾ. ಯಾವ ಅಧಾರದ ಮೇಲೆ ಗ್ಯಾರಂಟಿ ಕೊಟ್ಟಿದ್ದಾರೆ. ಇವರೇ ಅಲ್ವಾ ಪ್ರಣಾಳಿಕೆ ಅಧ್ಯಕ್ಷರು. ನಮಗೂ ಫ್ರೀ, ನಿಮಗೂ ಫ್ರೀ ಅಂತ ಹೇಳಿದ್ಯಾರು. ಸುಳ್ಳು ಹೇಳಿ ಜನರಿಗೆ ಟೋಪಿ ಹಾಕಿದ್ರಲ್ಲಾ ಎಂದು ಕಿಡಿ ಕಾರಿದರು.
ಯಾವ ಸಮುದಾಯ ಮೋಸ ಮಾಡಿವೆ ಎಂತ ಗೊತ್ತಿದೆ: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದವನು ಹೊಟ್ಟೆಗೆ ಹಿಟ್ಟು ಇಲ್ಲದವನು. ನಂದು ಜನತೆಯ ಸಮಸ್ಯೆ ಅಷ್ಟೆ. ರಾಜಕೀಯ ಸನ್ಯಾಸತ್ವಕ್ಕೆ ಮಾಡ್ತಾ ಇದ್ದೀನಾ ನಾನು? ಕಡುಬು ತಿನ್ನೋಕಾ ರಾಜಕೀಯ ಮಾಡ್ತಾ ಇದ್ದೀನಿ? ಕಾಂಗ್ರೆಸ್ ಗ್ಯಾರಂಟಿಯೇ ನನ್ನ ಅಸ್ತ್ರ. ಇದನ್ನೇ ಮಾತನಾಡಬೇಕಲಾ. ಹಲವಾರು ಸಮಯದಾಯ ನಮಗೆ ಮೋಸ ಮಾಡಿದ್ದಾವೆ. ಇದು ಪ್ರಪಂಚಕ್ಕೆ ಗೊತ್ತಿದೆ. ಈಗ ನಮಗೆ ಬುದ್ದಿ ಕಲಿಸಿದ್ದಾರೆ. ನಾವು ಅದರ ರೀತಿಯಲ್ಲೇ ನಡೆದುಕೊಳ್ತೀವಿ ಎಂದು ಹೇಳಿದರು.
ಡಿಕೆಸು Vs ಎಂಬಿಪಾ: ಕೈ ಕೋಟೆಯ ಜಂಗೀಕುಸ್ತಿ ಹಿಂದಿನ ಅಸಲಿ ರಹಸ್ಯ ಏನ್ ಗೊತ್ತಾ..?
ನಾಲ್ಕು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸುಲಭ ಗೆಲುವು: ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹಿ ಹಾಕಿ ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಹೇಳಿದ್ದಾರೆ. ನಾವು ಇದನ್ನ ಬಳಸಿಕೊಳ್ಳಬೇಕು. ಸರ್ಕಾರಕ್ಕೆ ಗ್ಯಾರೆಂಟಿ ಜಾರಿ ಮಾಡಬೇಕು. ಇನ್ನು ಹದಿನೈದು ದಿನಗಳ ಒಳಗೆ ಜೆಡಿಎಸ್ ಜಿಲ್ಲಾ ಘಟಕ ಪುನರ್ ಸಂಘಟನೆ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ, ಹಾಸನ, ತುಮಕೂರು, ಕೋಲಾರ ಕ್ಷೇತ್ರಗಳಲ್ಲಿ ನಾವು ಗೆಲ್ಲಬಹುದು. ಈ ಕ್ಷೇತ್ರಗಳಲ್ಲಿ ಯಾರ ಜತೆ ಮೈತ್ರಿ ಮಾಡಿಕೊಳ್ಳದೇ ನಾವು ಗೆಲ್ಲಬಹುದು. ಇಂದಿನಿಂದಲೇ ನಾವು ಸಂಘಟನೆ ಚುರುಕು ಮಾಡೋಣ ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.