Assembly election: ಕುಮಾರಸ್ವಾಮಿಗೆ ತತ್ವ, ಸಿದ್ದಾಂತವಿಲ್ಲ- ಬ್ಲಾಕ್‌ಮೇಲ್‌ ಮಾಡ್ತಾರೆ: ಚಲವಾದಿ ನಾರಾಯಣಸ್ವಾಮಿ ಆರೋಪ

By Sathish Kumar KHFirst Published Feb 8, 2023, 4:03 PM IST
Highlights

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬ್ಲಾಕ್‌ಮೇಲ್‌ ಟೆಕ್ನಿಕ್‌ ಬಳಸಿಕೊಂಡು ಚುನಾವಣೆ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಸಿದ್ದಾಂತ ಅಥವಾ ತತ್ವ ಯಾವುದೇ ಇಲ್ಲ.

ಬೆಂಗಳೂರು (ಫೆ.08): ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬ್ಲಾಕ್‌ಮೇಲ್‌ ಟೆಕ್ನಿಕ್‌ ಬಳಸಿಕೊಂಡು ಚುನಾವಣೆ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಸಿದ್ದಾಂತ ಅಥವಾ ತತ್ವ ಯಾವುದೇ ಇಲ್ಲವೆಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಚಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಾಮಕೃಷ್ಣ ಹೆಗಡೆರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಎಸ್. ಬಂಗಾರಪ್ಪ ಮತ್ತು ಸೀನಿಯರ್ ಬೊಮ್ಮಾಯಿ‌ (ಎಸ್‌.ಆರ್. ಬೊಮ್ಮಾಯಿ). ಆದರೆ, ದೇವೇಗೌಡ ಅಥವಾ ಕುಮಾರಸ್ವಾಮಿ ಅವರು ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಆದರೆ, ದೇವೇಗೌಡರು ಪ್ರಧಾನಮಂತ್ರಿ ಆಗುತ್ತಿದ್ದಂತೆ ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಹೊರಗೆ ಹಾಕಿದರು ಎಂದು ಹೇಳಿದರು.

ಬ್ರಾಹ್ಮಣರು ಇಲ್ಲದಿದ್ದರೆ ಹಿಂದುತ್ವ ಉಳಿಯಲು ಸಾಧ್ಯವಿಲ್ಲ: ಸುಬ್ಬರಾಯ ಹೆಗ್ಗಡೆ

ಕಾಂಗ್ರೆಸ್ ಮತ್ತು ಬಿಜೆಪಿಗಳನ್ನು ಸಮನಾದ ಅಂತರ: ರಾಜ್ಯದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರದ್ದು ಬ್ಲಾಕ್‌ಮೇಲ್ ಟೆಕ್ನಿಕ್ ಆಗಿದೆ. ಅವರಿಗೆ ಸಿದ್ಧಾಂತ, ತತ್ವ ಯಾವುದೂ ಇಲ್ಲ. ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರಲು ಯಾರಾದರೂ ಸರಿ ಅಂತಾರೆ. ಬಿಜೆಪಿ ಜತೆಗೂ ಕಾಂಗ್ರೆಸ್ ಜತೆಗೂ ಸೇರಿ ಅಧಿಕಾರ ಹಿಡೀತಾರೆ. ಅವರು ಕಾಂಗ್ರೆಸ್ ಮತ್ತು ಬಿಜೆಪಿಗಳನ್ನು ಸಮನಾದ ಅಂತರದಲ್ಲಿ ಇಟ್ಟಿದ್ದಾರೆ. ಯಾರ ಜತೆಗೂ ಬೇಕಾದರೂ ಸೇರಿ ಅಧಿಕಾರ ಹಿಡಿಯಬಹುದು ಅಂತ ಹೊಂಚು ಹಾಕುತ್ತಿರುತ್ತಾರೆ. ಕುಮಾರಸ್ವಾಮಿ ಅವರೂ ಗಾಜಿನ ಮನೆಯಲ್ಲಿ ಇದ್ದಾರೆ ಅನ್ನೋದನ್ನು ಮರೆಯಬಾರದು ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಮೇಲೆ ಶೇ.40 ಕಮಿಷನ್‌ ಆರೋಪ: ಬಾದಾಮಿಯಲ್ಲಿ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ.ಬಿ. ಹೊಸಗೌಡ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿನ ಕಾಮಗಾರಿಗಳನ್ನು ಮಾಡಲು ಶೇ.40 ಕಮಿಷನ್‌ ಆರೋಪ‌ ಮಾಡಿದ್ದಾರೆ. ಹೀಗೆ ಆರೋಪಮ ಮಾಡಿರುವ ಗುತ್ತಿಗೆದಾರ ಬಿ.ಬಿ. ಹೊಸಗೌಡ ಕೂಡ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷನಾಗಿದ್ದಾನೆ. ಇನ್ನು ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಶೇ.40 ಕಮಿಷನ್ ಪಡೆಯುತ್ತಾ ಇದ್ದರು ಎಂದು ಆರೋಸಿದ್ದಾರೆ. ಈಗ ತಾವು ಪಡೆದ ಕಮಿಷನ್‌ ಆರೋಪವನ್ನು ಸಿದ್ದರಾಮಯ್ಯ ಬಿಜೆಪಿ ಮೇಲೆ ಹೊರಿಸಿದ್ದಾರೆ. ಈಗ ಶೇ.40 ಆರೋಪ ಸಿದ್ದರಾಮಯ್ಯ ಮೇಲೆ ಬಂದಿದ್ದು, ಅವರು ಉತ್ತರವನ್ನು ಕೊಡಬೇಕು ಎಂದು ಆಗ್ರಹಿಸಿದರು.

ಸಿ.ಟಿ.ರವಿ, ಅಶ್ವತ್ಥ ನಾರಾಯಣ ಪತಿವ್ರತೆಯರಾ?: ಎಚ್‌ಡಿಕೆ ಗರಂ

ಮತದಾರರ ದಿಕ್ಕು ತಪ್ಪಿಸುವ ಕೆಲಸ: ರಾಜಯದಲ್ಲಿ ಕುಮಾರಸ್ವಾಮಿ ಬ್ರಾಹ್ಮಣ ಮುಖ್ಯಮಂತ್ರಿ ಬಗ್ಗೆ ಮಾತಾಡಿದ್ದಾರೆ. ನೀವು ಮುಸ್ಲಿಂ ಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದೀರಿ. ಮುಸ್ಲಿಂ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಘೋಷಣೆ ಮಾಡುವುದು ನಿಮ್ಮ ಚುನಾವಣೆ ತಂತ್ರವಾದರೆ, ಬಿಜೆಪಿಯಿಂದ ಬ್ರಾಹ್ಮಣ ಮುಖ್ಯಮಂತ್ರಿ ಮಾಡುವ ವಿಚಾರ ನಿಮಗೆ ಕುತಂತ್ರವೆಂದು ಏಕೆ ಕಾಣಿಸುತ್ತಿದೆ. ಸುಮ್ಮನೆ ಮತದಾರರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ನೀಡಿ ಕುಮಾರಸ್ವಾಮಿ ಎಂದು ಆಗ್ರಹಿಸಿದ್ದಾರೆ.

click me!