
ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಪೆಷಲ್
ಬೆಂಗಳೂರು (ಡಿ.7): ತವರು ರಾಜ್ಯ ಗುಜರಾತ್'ನಲ್ಲಿ ಸಪ್ತವಿಜಯಕ್ಕೆ ವೇದಿಕೆ ಸಿದ್ಧಮಾಡಿಕೊಂಡಿರುವ ನರೇಂದ್ರ ಮೋದಿವರ ಮುಂದಿನ ಟಾರ್ಗೆಟ್ ಕರ್ನಾಟಕದಲ್ಲಿ ಗೆಲ್ಲುವುದಾಗಿದೆ. ಇನ್ನುಮುಂದೆ ಕರ್ನಾಟಕಕ್ಕೆ ನರೇಂದ್ರ ಮೋದಿ ಅವರ 'ಯಜ್ಞಾಶ್ವ' ನುಗ್ಗಲಿದೆ. ಕರುನಾಡಲ್ಲೂ ಧೂಳೆಬ್ಬಿಸಲಿದ್ಯಾ ಮೋದಿ ಅಶ್ವಮೇಧದ ಕುದುರೆ ಎನ್ನುವುದನ್ನು ಕಾದುನೋಡಬೇಕಿದೆ.
ಗುಜರಾತಿನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಅಂತ 'ಎಕ್ಸಿಟ್ ಪೋಲ್'ಗಳು ಹೇಳ್ತಾ ಇವೆ. ಆದರೆ ಕರ್ನಾಟಕದ ಕಥೆಯೇ ಬೇರೆ ಅಂತ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಇದಕ್ಕೆ ಕಾರಣವಾಗಿರೋ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿಯೇ ಬೇರೆ ಇದೆ. ಗುಜರಾತ್ ಫಲಿತಾಂಶ ಕರ್ನಾಟಕ ಚುನಾವಣೆಗೆ ದಿಕ್ಸೂಚಿ ಆಗುತ್ತಿದೆಯೇ ಎಂದು ಕಂಡುಬರುತ್ತದೆ. ಮೋದಿ ಇದ್ದಾರೆ ಅನ್ನೋ ಕಾರಣಕ್ಕೆ ಕರ್ನಾಟಕದಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಬಿಜೆಪಿಗೆ ಮಹಾವೀರ ಮೋದಿಯವರೇ ಅಸ್ತ್ರ ಮತ್ತು ಅವರೇ ಬ್ರಹ್ಮಾಸ್ತ್ರವಾಗಿದ್ದಾರೆ. ಆ ಬ್ರಹ್ಮಾಸ್ತ್ರವನ್ನು ಕಾಂಗ್ರೆಸ್ ಹೇಗೆ ಎದುರಿಸಲಿದೆ ಎನ್ನುವುದರ ಮೇಲೆ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ನಿರ್ಧಾರವಾಗಲಿದೆ.
ಕರ್ನಾಟಕ ಚುನಾವಣೆಗೆ ಗುಜರಾತ್ ಮಾಡೆಲ್ ಅನುಸರಿಸುತ್ತಾ ಬಿಜೆಪಿ? ಆತಂಕದಲ್ಲಿ ಹಲವರು!
ಕೇಸರಿ ಕಲಿಗಳಿಂದ ಮೀಸೆ ತಿರುವುದು ಆರಂಭ: ಗುಜರಾತ್‌ನ ಫಲಿತಾಂಶವೇ ಕರ್ನಾಟಕದ ಮೇಲೆಯೂ ಬೀರಲಿದೆ ಎಂಬಂತೆ ರಾಜ್ಯದಲ್ಲಿ ಕೇಸರಿ ಕಲಿಗಳು ಮೀಸೆ ತಿರುವುತ್ತಿದ್ದಾರೆ. ಒಂದು ರಾಜ್ಯದಲ್ಲಿ ಜನರು ಸತತ ಏಳು ಬಾರಿ ಒಂದೇ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆಂದರೆ ಅದು ಸಾಮಾನ್ಯವಲ್ಲ. ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರನ್ನು ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಮುಂದಿನ ಬಾರಿ ನೂರಕ್ಕೆ ನೂರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನರೇಂದ್ರ ಮೋದಿಗೆ ಮತಗಳು ಮೀಸಲು: ರಾಜ್ಯದ ನಗರ ಪ್ರದೇಶಗಲ್ಲಿ ನರೇಂದ್ರ ಮೋದಿ ಅವರನ್ನು ನೋಡಿ ಮತಗಳನ್ನು ಹಾಕುವ ಪ್ರತ್ಯೇಕ ವರ್ಗವೇ ಇದೆ. ಈ ಬಗ್ಗೆ 2018ರ ಚುನಾವಣೆಯಲ್ಲಿಯೂ ಸ್ಪಷ್ಟವಾಗಿ ಕಂಡುಬಂದಿದೆ. ಮುಂದಿನ ದಿನಗಳಲ್ಲಿಯೂ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆಯಲ್ಲಿಯೂ ರಾಜ್ಯಕ್ಕೆ ಮೋದಿ ಆಗಮಿಸಲಿದ್ದು, ಹೆಚ್ಚಿನ ಮತಗಳು ಬಿಜೆಪಿಗೆ ಹೋಗಲಿವೆ. ಈ ಲೆಕ್ಕಾಚಾರವನ್ನು ಬಿಜೆಪಿ ಒಂದು ಕಡೆ ನಂಬಿಕೊಂಡಿದೆ. ಜೊತೆಗೆ, ಆಡಳಿತ ಸರ್ಕಾರ ಅಧಿಕಾರದಲ್ಲಿ ಇರುವ ಹಿನ್ನೆಲೆಯಲ್ಲಿ ಸಾಧನೆಗಳನ್ನು ಜನರ ಮುಂದಿಟ್ಟು ಗೆಲ್ಲಲು ಸಿದ್ಧರೆ ನಡೆಸಿದ್ದಾರೆ.
ಗುಜರಾತ್'ನಲ್ಲಿ ಮತ್ತೆ ಬಿಜೆಪಿ ಪಾರುಪತ್ಯ?: ಎಕ್ಸಿಟ್ ಪೋಲ್ ಏನು ಹೇಳುತ್ತಿವೆ?
ಬಿಜೆಪಿ ಕಾಂಗ್ರೆಸ್ ಪ್ರಭಲ ಪೈಪೋಟಿ: ರಾಜ್ಯದಲ್ಲಿ ಮೇಕೆದಾಟು, ಭಾರತ್ ಜೋಡೋ ಮತ್ತು ಸಿದ್ಧರಾಮೋತ್ಸವದ ಮೂಲಕ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಕೂಡ ಪ್ರಭಲವಾಗಿದೆ. ಇನ್ನು ಕಳೆದ ಏಳು ವರ್ಷಗಳಿಂದ ಸತತವಾಗಿ ಗುಜರಾತ್‌ನಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲುವಿನ ತಂತ್ರವೇ ಬೇರೆಯಿದೆ. ಅಲ್ಲಿನ ಕಾಂಗ್ರೆಸ್ ಸ್ಥಿತಿಗಿಂತ ರಾಜ್ಯದ ಕಾಂಗ್ರೆಸ್ ಪ್ರಭಾವ ಭಾರಿ ವಿಭಿನ್ನವಾಗಿದೆ. ದೇಶದೆಲ್ಲೆಡೆ ಕಾಂಗ್ರೆಸ್ ಕಾಲುಮುರಿದುಕೊಂಡು ಬಿದ್ದಿದ್ದರೂ ಕರ್ನಾಟಕದಲ್ಲಿ ನಿರಂತರವಾಗಿ ಓಡುತ್ತಿದೆ. ಇಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಜೋಡೆತ್ತಿನ ಬಂಡಿಯಲ್ಲಿ ನಾಗಾಲೋಟದಿಂದ ಸಾಗುತ್ತಿದೆ. ಆದರೆ, ನರೇಂದ್ರ ಮೋದಿ ಬ್ರಹ್ಮಾಸ್ತ್ರವನ್ನು ಹೇಗೆ ನಿಯಂತ್ರಣ ಮಾಡಲಿದೆ ಎಂಬುದರ ಮೇಲೆ ಕಾಂಗ್ರೆಸ್ ಗೆಲುವು ನಿರ್ಧಾರವಾಗಲಿದೆ.
ರಾಜ್ಯದಲ್ಲಿ ಚುನಾವಣೆಗಿರುವ ಸವಾಲುಗಳು:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.