ಕಾಂಗ್ರೆಸ್ ಟಿಕೆಟ್ ತಪ್ಪಿದ್ದಕ್ಕೆ ಗಳಗಳನೆ ಅತ್ತ ಗೋಪಿಕೃಷ್ಣ: ಕಾರ್ಯಕರ್ತರಿಂದ ಭುಗಿಲೆದ್ದ ಆಕ್ರೋಶ

By Govindaraj S  |  First Published Apr 16, 2023, 1:00 AM IST

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಕಾಂಗ್ರೆಸ್ ಟಿಕೆಟ್ ಕೊನೆಗೂ ಘೋಷಣೆ ಆಗಿದೆ. ಮಾಜಿ ಸಿಎಂ ಸಿದ್ದು ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ. ನಾನೀದ್ದಿನಿ ಅಂದ ಡಿಕೆಶಿಯೂ ನಡುನೀರಲ್ಲಿ ಕೈಬಿಟ್ರು.‌ ಟಿಕೆಟ್ ಕೈತಪ್ಪಿದ್ದಕ್ಕೆ ಆಕಾಂಕ್ಷಿ ಗೋಪಿಕೃಷ್ಣ ಬಿಕ್ಕಳಿಸಿ-ಬಿಕ್ಕಳಿಸಿ ಕಣ್ಣೀರಿಟ್ರು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.16): ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಕಾಂಗ್ರೆಸ್ ಟಿಕೆಟ್ ಕೊನೆಗೂ ಘೋಷಣೆ ಆಗಿದೆ. ಮಾಜಿ ಸಿಎಂ ಸಿದ್ದು ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ. ನಾನೀದ್ದಿನಿ ಅಂದ ಡಿಕೆಶಿಯೂ ನಡುನೀರಲ್ಲಿ ಕೈಬಿಟ್ರು.‌ ಟಿಕೆಟ್ ಕೈತಪ್ಪಿದ್ದಕ್ಕೆ ಆಕಾಂಕ್ಷಿ ಗೋಪಿಕೃಷ್ಣ ಬಿಕ್ಕಳಿಸಿ-ಬಿಕ್ಕಳಿಸಿ ಕಣ್ಣೀರಿಟ್ರು. ಅಭಿಮಾನಿಗಳು ಡಿಕೆಶಿ-ಸಿದ್ದು ವಿರುದ್ಧ ಕಿಡಿಕಾರಿ, ರಸ್ತೆ ಮಧ್ಯೆ ಟೈರ್ ಸುಟ್ಟು, ಆಟೋಗೂ ಬೆಂಕಿ ಹಾಕುವ ಯತ್ನ ನಡೆಸಿ ಆಕ್ರೋಶ ಹೊರಹಾಕಿದರು.

Tap to resize

Latest Videos

undefined

ಕೈ ತಪ್ಪಿದ ಕೈ ಟಿಕೆಟ್, ಕಣ್ಣೀರಿಟ್ಟ ಸಮಾಜ ಸೇವಕ: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಕಾಂಗ್ರೆಸ್ ಟಿಕೆಟ್ ಗಾಗಿ ಸಮಾಜ ಸೇವಕ ಗೋಪಿಕೃಷ್ಣ-ಮಾಜಿ ಶಾಸಕ ಶ್ರೀನಿವಾಸ್ ತೀವ್ರ ಪೈಪೋಟಿ  ನಡೆಸಿದ್ದರು. ‌ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ಕುರುಬ‌ ಸಮುದಾಯದ ಶ್ರೀನಿವಾಸ್ ಪಾಲಾಯ್ತು. ರಾಜ್ಯದಲ್ಲಿ ಎಲ್ಲೂ ಮಡಿವಾಳ ಸಮುದಾಯಕ್ಕೆ ಟಿಕೆಟ್ ಕೊಟ್ಟಿಲ್ಲ. ಗೋಪಿಕೃಷ್ಣಂಗೆ ಟಿಕೆಟ್ ಎಂದು ಡಿಕೆಶಿ-ಸಿದ್ದು ಎಲ್ಲಾ ಕಡೆ ಹೇಳಿದ್ರು. ಆದ್ರೆ, ಕೈ ಟಿಕೆಟ್ ತಪ್ಪಿದ್ದರಿಂದ ಗೋಪಿಕೃಷ್ಣ ಕಣ್ಣೀರಿಟ್ಟು ಡಿಕೆಶಿ-ಸಿದ್ದು ವಿರುದ್ಧ ಕಿಡಿಕಾರಿದ್ದಾರೆ. ಸೋಮವಾರ ಬೆಂಬಲಿಗರ ಸಭೆ ಸೇರಿ ಮುಂದಿನ ರಾಜಕೀಯ ಕುರಿತು ತೀರ್ಮಾನ ಮಾಡ್ತೀನಿ ಅಂತ ಗೋಪಿಕೃಷ್ಣ ಕಣ್ಣೀರಿಟ್ಟಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತಾಡುವ ವೇಳೆಯಲ್ಲಿ‌ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ  ಗಳಗಳನೆ  ಕಣ್ಣೀರು ಹಾಕಿ ಟಿಕೆಟ್ ಕೈ ತಪ್ಪಲು ಬೈರತಿ ಸುರೇಶ್ ಕಾರಣವೆಂದು ಆಕ್ರೋಶ ಹೊರ ಹಾಕಿದ್ರು.

ಕಾಂಗ್ರೆಸ್‌ನಿಂದ ಮಾತ್ರ ಸಂವಿಧಾನ ರಕ್ಷಣೆ: ಶಾಸಕ ಎಚ್‌.ಕೆ.ಪಾಟೀಲ್

ಕೈ ಟಿಕೆಟ್ ಸಿಕ್ಕ ಶ್ರೀನಿವಾಸ್ ಹಾದಿಯೂ ಸುಲಭವಾಗಿಲ್ಲ: ಸದ್ಯ ಟಿಕೆಟ್ ಸಿಕ್ಕಿರೋ ಮಾಜಿ ಶಾಸಕ ಶ್ರೀನಿವಾಸ್ ಗೆಲುವಿನ ಹಾದಿಯೂ ಸುಲಭವಾಗಿಲ್ಲ. ಯಾಕಂದ್ರೆ, ನಿರ್ಣಾಯಕ ಪಾತ್ರದ ಇಡೀ ಕುರುಬ ಸಮುದಾಯ ಶ್ರೀನಿವಾಸ್ ವಿರೋಧವಿದೆ. ಶ್ರೀನಿವಾಸ್ ಕುರುಬ ಸಂಘದ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕುರುಬ ಸಮುದಾಯ ಶ್ರೀನಿವಾಸ್ ವಿರುದ್ಧ ಇದೆ. ಶ್ರೀನಿವಾಸ್ ಗೆ ಟಿಕೆಟ್ ಕೈತಪ್ಪಿಸಬೇಕೆಂದು ಕುರುಬ ಸಮುದಾಯದ ಪ್ರಮುಖ ನಾಯಕರು ಹೋರಾಡಿದ್ದರು.‌ ಅವರಿಗೆ ಟಿಕೆಟ್ ಕೊಟ್ಟರೆ ಕುರುಬರೇ ಏಳೆಂಟು ಜನ ಚುನಾವಣೆಗೆ ನಿಲ್ಲುತ್ತೇವೆಂದು ಎಚ್ಚರಿಕೆ ಕೂಡ ನೀಡಿದ್ದರು. ‌

ಆದರೂ, ಟಿಕೆಟ್ ಶ್ರೀನಿವಾಸ್ ಗೆ ಸಿಕ್ಕಿರೋದು ಕುರುಬ ಸಮುದಾಯದವನ್ನ ಸಿಟ್ಟಾಗಿಸಿದೆ. ಶ್ರೀನಿವಾಸ್ ವಿರುದ್ಧ ಇದ್ದ ಕುರುಬರು ಗೋಪಿಕೃಷ್ಣ ಜೊತೆಗೆ ನಿಂತಿದ್ದಾರೆ. ಈಗ ಟಿಕೆಟ್ ಕೈತಪ್ಪಿರೋ ಗೋಪಿಕೃಷ್ಣ ಸ್ವತಂತ್ರವಾಗಿ ಸ್ಪರ್ಧಿಸಿದ್ರೆ   ಶ್ರೀನಿವಾಸ್ ಗೆಲುವಿಗೆ ಮುಳ್ಳಾಗೋದಂತು ಗ್ಯಾರಂಟಿ. ಆದರೆ, ಗೋಪಿಕೃಷ್ಣಂಗೆ ಟಿಕೆಟ್ ಕೈತಪ್ಪಿದ್ದರಿಂದ ಗೋಪಿ ಅಭಿಮಾನಿಗಳು ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.‌  ಒಟ್ಟಾರೆ, ಶ್ರೀನಿವಾಸ್ ಗೆ ಟಿಕೆಟ್ ಸಿಕ್ಕಿರೋದು, ಕುರುಬರು ಶ್ರೀನಿವಾಸ್ ವಿರುದ್ಧ ರೆಬಲ್ ಆಗಿರೋದು. ಗೋಪಿಕೃಷ್ಣ ಸ್ವತಂತ್ರ ಸ್ಪರ್ಧೆಯ ಸುಳಿವು ನೀಡಿರೋದು ಬಿಜೆಪಿಗೆ ಮನಸಲ್ಲೇ ಮೊಸರನ್ನ ತಿಂದಂತಾಗಿದೆ. 

ಕೊಟ್ಟಮಾತಿನಂತೆ ನಡೆದುಕೊಂಡು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ: ಸಚಿವ ಬಿ.ಸಿ.ಪಾಟೀಲ್‌

ಆದರೆ, ಶ್ರೀನಿವಾಸ್ ಈಗ ಎಲ್ಲರನ್ನೂ ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ತಾರೆ, ಗೋಪಿಕೃಷ್ಣ ಯಾವ ರೀತಿ ರಾಜಕೀಯ ಹೆಜ್ಜೆ ಇಡ್ತಾರೆ. ಇವರ ಮನಸ್ತಾಪಗಳನ್ನ ಬಿಜೆಪಿ ಹೇಗೆ ಬಳಸಿಕೊಳ್ಳುತ್ತೆ ಅನ್ನೋದ್ರ ಮೇಲೆ ಸೋಲು-ಗೆಲುವಿನ ಲೆಕ್ಕಾಚಾರವಿದೆ. ಆದರೆ, ಜನ ಕುರುಬ ಸಮುದಾಯದ ಶ್ರೀನಿವಾಸ್ ಕೈಹಿಡಿಯುತ್ತಾರೋ ಅಥವ ಎರಡು ಬಾರಿ ಸೋತಿರೋ ಸಣ್ಣ ಸಮುದಾಯದ ಗೋಪಿ ಕೈಹಿಡಿಯುತ್ತಾರೋ ಕಾದುನೋಡ್ಬೇಕು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!