ಕಲಬುರಗಿ: ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಉಸ್ತುವಾರಿ ಸಚಿವ ನಿರಾಣಿ: ಬಿ.ಆರ್‌. ಪಾಟೀಲ್‌

By Kannadaprabha News  |  First Published Dec 9, 2022, 7:05 PM IST

ರೈತರ ಗೋಳು ಕೇಳೋರಿಲ್ಲ. ಏನೆಲ್ಲಾ ಹಾನಿಯಾಗಿದೆ ಎಂದು ಸಮೀಕ್ಷೆ ಮಾಡೋರು ಗತಿ ಇಲ್ಲ. ಉಸ್ತುವಾರಿ ಸಚಿವರು ಹೊಣೆಗಾರಿಕೆ ನಿಭಾಯಿಸುತ್ತಿಲ್ಲ. ಇಲ್ಲಿಗೆ ಬಂದರೆ ತಾನೆ ರೈತರ ನೋವು- ಯಾತನೆ ಅವರ ಗಮನಕ್ಕೆ ಬರುತ್ತದೆ? ಅವರೇ ಇಲ್ಲಿ ಬರುತ್ತಿಲ್ಲ ಹಾಗಾಗಿ ರೈತರ ಗತಿ ಅಧೋಗತಿಯಾಗಿದೆ ಎಂದು ಪಾಟೀಲ್‌ ವಾಗ್ದಾಳಿ ನಡೆಸಿದ ಬಿ.ಆರ್‌ ಪಾಟೀಲ್‌ 


ಕಲಬುರಗಿ(ಡಿ.09): ಕಳೆದ 5 ದಶಕದಲ್ಲಿ ಕಾಣದಂತಹ ಮಳೆಯ ಆವಾಂತರ ಜಿಲ್ಲೆಯಲ್ಲಿ ಉಂಟಾಗಿದೆ, ತೊಗರಿಗೆ ನೆಟೆ, ತೇವಾಂಶ ಕೊರತೆ, ಕಾಯಿ ಕೊರಕಗಳ ಹಾವಳಿಯಂತಹ 3 ರೋಗ ಬಾಧೆ ಗಂಟು ಬಿದ್ದು ರೈತರು ಕಂಗಾಲಾಗಿದ್ದರೂ ಇದಕ್ಕೆಲ್ಲ ಪರಿಹಾರ ಒದಗಿದಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿಯತ್ತ ಮುಖ ಮಾಡುತ್ತಿಲ್ಲ. ಇದರಿಂದ ಬಿಜೆಪಿ ಸರ್ಕಾರದಲ್ಲಿ ಕಲಬುರಿಗೆ ಅನಾಥವಾಗಿದೆ ಎಂದು ಮಾಜಿ ಶಾಸಕ ಬಿ.ಆರ್‌ ಪಾಟೀಲ್‌ ದೂರಿದ್ದಾರೆ.

ಸುದ್ದಿಗಾರರೊಂದಿಗೆ ಮಾನಾಡಿದ ಪಾಟೀಲ್‌, ರೈತರ ಗೋಳು ಕೇಳೋರಿಲ್ಲ. ಏನೆಲ್ಲಾ ಹಾನಿಯಾಗಿದೆ ಎಂದು ಸಮೀಕ್ಷೆ ಮಾಡೋರು ಗತಿ ಇಲ್ಲ. ಉಸ್ತುವಾರಿ ಸಚಿವರು ಹೊಣೆಗಾರಿಕೆ ನಿಭಾಯಿಸುತ್ತಿಲ್ಲ. ಇಲ್ಲಿಗೆ ಬಂದರೆ ತಾನೆ ರೈತರ ನೋವು- ಯಾತನೆ ಅವರ ಗಮನಕ್ಕೆ ಬರುತ್ತದೆ? ಅವರೇ ಇಲ್ಲಿ ಬರುತ್ತಿಲ್ಲ ಹಾಗಾಗಿ ರೈತರ ಗತಿ ಅಧೋಗತಿಯಾಗಿದೆ ಎಂದು ಪಾಟೀಲ್‌ ವಾಗ್ದಾಳಿ ನಡೆಸಿದರು.

Tap to resize

Latest Videos

undefined

ಕರ್ನಾಟಕದಲ್ಲಿ ಮೋದಿ ಆಟ ನಡೆಯಲ್ಲ: ಪ್ರಿಯಾಂಕ್‌ ಖರ್ಗೆ

ಸಿಎಂ ಬಂದಾಗ ಮಾತ್ರ ಪ್ರತ್ಯಕ್ಷ:

ಸಿಎಂ ಬಂದಾಗ ಜಿಲ್ಲೆಗೆ ಬಂದು ಹೋಗಿದ್ದು ಬಿಟ್ಟರೆ ಇಲ್ಲಿದ್ದು ಕೆಡಿಪಿ ಸಭೆ ನಡೆಸಿ, ರೈತರ ಗೋಳು ಆಲಿಸುವ, ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸವಾಗಿಲ್ಲ. ನಿರಾಣಿಯವರು ಸಿಎಂ ಬಂದಾಗ ಬಂದು ಹೋಗುತ್ತಾ ರಷ್ಟೆ. ಹೀಗಾಗಿ ಜಿಲ್ಲೆಯ ಪ್ರಗತಿ ನಿಂತ ನೀರಾಗಿದೆ. ಮಳೆಯಿಂದ ಮೂಲ ಸವಲತ್ತು ಹಾನಿಗೊಳಗಾದರೂ ಅದರ ಪುನರ್‌ ನಿರ್ಮಾಣ ಮಾಡೋರಿಲ್ಲ. ಈ ಸಲ ಅತೀ ಹೆಚ್ಚು ಅತಿವೃಷ್ಟಿಯಿಂದ ಹಾನಿಯಾದ ಜಿಲ್ಲೆ ಕಲಬುರಗಿ, ಇಲ್ಲಿನ ಪ್ರಮುಖ ಬೆಳೆಗಳಾದ ತೊಗರಿ, ಉದ್ದು, ಸೋಯಾ ಬಿನ್‌, ಕಡಲೆ, ಹೆಸರು ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿ ರೈತರು ಸಾಲ ತೀರಿಸಲಾರದೆ ಕಣ್ಣಿರು ಹಾಕುತ್ತಿದ್ದಾರೆ, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರಸ್ತೆಗಳು ಹಾಳಾಗಿದೆ. ಮಳೆಯಿಂದಾಗಿ ಮನೆಗಳು ಬಿದ್ದಿವೆ. ಸರ್ಕಾರ ಮಾತ್ರ ಮೂಗಿಗೆ ತುಪ್ಪ ಸವರಿದ ಹಾಗೆ ಅಲ್ಪಸ್ವಲ್ಪ ಪರಿಹಾರ ನೀಡಿ ದೊಡ್ಡದಾಗಿ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಸ್ನೇಹಿತನ ಪೋಸ್ಟ್‌ಮಾರ್ಟಮ್‌ ನಾನೇ ಮಾಡೋದು ಬಂತ್ರಿ: ಕಣ್ಣೀರಿಟ್ಟ ಜೇವರ್ಗಿ ಸಿಪಿಐ

ಡಬ್ಬಲ್‌ ಎಂಜಿನ್‌ ಸರ್ಕಾರಕ್ಕೆ ರೈತ ಕಾಳಜಿ ಇಲ್ಲ:

ಬಿಜೆಪಿ ಡಬ್ಬಲ್‌ ಎಂಜಿನ್‌ ಸರ್ಕಾರಕ್ಕೆ ನಿಜವಾಗಿಯೂ ಅನ್ನದಾತರ ಬಗ್ಗೆ ಕಾಳಜಿ ಇದ್ರೆ, ಅವರು ಮೊದಲು ಸಹಕಾರ ಸಂಘದ, (ಸೊಸೈಟಿ) ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನ ಮಾಡಲಿ, ಅದನ್ನು ಬಿಟ್ಟು, ವೇದಿಕೆಗಳಲ್ಲಿ ಭಾಷಣ ಮಾಡುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ಮುಚ್ಚಿ ಹಾಕಲು ಮತ್ತು ಚುನಾವಣೆಯ ಸಮಯ ಸಮೀಪ ಸುಮ್ಮನೆ ಗಡಿ ವಿವಾದವನ್ನು ತೆಗೆದುಕೊಂಡ ರಾಜ್ಯದಲ್ಲಿನ ಬಿಜೆಪಿ ಆಡಳಿತ ಸರ್ಕಾರ ರಾಜಕೀಯಕ್ಕೆ ಮುಂದಾಗಿದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಲ್ಲಿ ಆಳಂದದ 59 ಸಾವಿರ ರೈತರು ಸೇರಿದಂತೆ ಜಿಲ್ಲಾದ್ಯಂತ 2. 16 ಲಕ್ಷದಷ್ಟುನೋಂದಣಿಯಾಗಿದ್ದಾರೆ. ವಿಮಾ ಕಂಪನಿಯವರು ಬೆಳೆ ಕಟಾವು ಪ್ರಯೋಗದಲ್ಲೇ ಹೇರಾಫೇರಿ ಮಾಡುತ್ತ ರೈತರಿಗೆ ಪರಿಹಾರ ದೊರಕದಂತಾಗಿದೆ. ಇದನ್ನೆಲ್ಲ ಸರಿಪಡಿಸುವ ಕೆಲಸ ಜರೂರಾಗಿ ನಡೆಯಲಿದೆ ಎಂದರು. ಆಳಂದ ತಾಲೂಕು ಪಕ್ಷ ವಕ್ತಾರ ಗಣೇಶ ಪಾಟೀಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 

click me!