ಬಿಜೆಪಿ ಸುಳ್ಳನ್ನೇ ನೂರು ಬಾರಿ ಹೇಳಿ ಜನರನ್ನು ಅದೇ ಸತ್ಯವೆಂದು ನಂಬಿಸುತ್ತಿದೆ. ಸುಳ್ಳು ಹೇಳಿಯೇ ಅಧಿಕಾರಕ್ಕೆ ಬಂದಿರುವ ಬಿಜೆಪಿಯಿಂದ ಅಭಿವೃದ್ಧಿ ಅಸಾಧ್ಯ. ಅಧಿಕಾರಕ್ಕೆ ಬಂದು ಎಂಟು ವರ್ಷವಾದರೂ ಉದ್ಯೋಗ ಸೃಷ್ಟಿಸದ, ಸ್ವಿಸ್ ಬ್ಯಾಂಕಿನಲ್ಲಿರುವ ಬ್ಲಾಕ್ ಮನಿ ವಾಪಸ್ ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗೆ .15 ಲಕ್ಷ ಹಾಕುತ್ತೆವೆ ಎಂಬ ಭರವಸೆಯನ್ನು ಬಿಜೆಪಿ ಸಕ್ರಾ ಈಡೇರಿಸಿಲ್ಲ: ಸಿದ್ದು
ಮುದ್ದೇಬಿಹಾಳ(ಫೆ.23): ಸುಳ್ಳನ್ನೇ ಬಂಡವಾಳ ಮಾಡಿಕೊಂಡು ರಾಜ್ಯದ ಜನತೆಗೆ ವಂಚಿಸಿ, ಧರ್ಮಗಳ ಮಧ್ಯ ವೈಷಮ್ಯ ಸೃಷ್ಟಿಸುತ್ತಿರುವ ಭ್ರಷ್ಟಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇಲ್ಲಿನ ವಿಬಿಸಿ ಪೌಢ್ರಶಾಲೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸುಳ್ಳನ್ನೇ ನೂರು ಬಾರಿ ಹೇಳಿ ಜನರನ್ನು ಅದೇ ಸತ್ಯವೆಂದು ನಂಬಿಸುತ್ತಿದೆ. ಸುಳ್ಳು ಹೇಳಿಯೇ ಅಧಿಕಾರಕ್ಕೆ ಬಂದಿರುವ ಬಿಜೆಪಿಯಿಂದ ಅಭಿವೃದ್ಧಿ ಅಸಾಧ್ಯ. ಅಧಿಕಾರಕ್ಕೆ ಬಂದು ಎಂಟು ವರ್ಷವಾದರೂ ಉದ್ಯೋಗ ಸೃಷ್ಟಿಸದ, ಸ್ವಿಸ್ ಬ್ಯಾಂಕಿನಲ್ಲಿರುವ ಬ್ಲಾಕ್ ಮನಿ ವಾಪಸ್ ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗೆ .15 ಲಕ್ಷ ಹಾಕುತ್ತೆವೆ ಎಂಬ ಭರವಸೆಯನ್ನು ಬಿಜೆಪಿ ಸಕ್ರಾ ಈಡೇರಿಸಿಲ್ಲ. ದೇಶದ ಅಭಿವೃದ್ಧಿ ಬದಿಗಿಟ್ಟು ಜಾತಿ- ಧರ್ಮಗಳ ನಡುವೆ ವಿಷ ಬೀಜ ಬಿತ್ತುತಿದೆ. ಇಂಥ ಕೋಮುವಾದಿ ಬಿಜೆಪಿ ಪಕ್ಷವನ್ನು ಕಿತ್ತೆಸೆಯಿರಿ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂಬ ಜನತೆಯ ಕನಸಾಗಿದೆ. ಮತಪ್ರಭುಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಸ್.ನೌಡಗೌಡ ವರಿಗೆ ಆಶೀರ್ವಾದ ಮಾಡಬೇಕು ಎಂದು ಮೂಲಕ ತಾಲೂಕಿನಲ್ಲಿ ಕಾಂಗ್ರೆಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆದರು.
undefined
4 ಜಿಲ್ಲೆ ಪ್ರಮುಖರ ಜೊತೆ ಅಮಿತ್ ಶಾ ಮೀಟಿಂಗ್; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಇಂಧನ ಸೇರಿದಂತೆ ಪ್ರತಿಯೊಂದರ ಬೆಲೆ ಗಗನಕ್ಕೆ ಏರಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಮೋಸ ಮಾಡಿದ್ದಾರೆ. ಅನ್ನದಾತರ ಬೆಳೆಗಳ ಮೇಲೆ ಕೇಂದ್ರ ಕಣ್ಣಿಟ್ಟು ಉದ್ಯಮಿಗಳಿಗೆ ಲಾಭ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಇಂದು ಎಲ್ಲೆಡೆಯೂ ಲಂಚ ತಾಂಡವವಾಡುತ್ತಿದೆ. ನಾನು ಹಣಕಾಸು ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಯಾವುದೇ ಒಬ್ಬ ಕಂಟ್ರಾಕ್ಟರ್ ನಾನು 5 ಪೈಸೆ ಲಂಚ ತೆಗೆದುಕೊಂಡಿದ್ದೇನೆ ಎಂದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸಿ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಇದೇ ವೇಳೆ ಸಿದ್ದ್ರಾಮಯ್ಯ ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ 7 ಕೆಜಿ ಅಕ್ಕಿಯನ್ನು ಉಚಿತವಾಗಿ ಕೋಡುತ್ತಿದ್ದೆ. ಸದ್ಯ ಬಿಜೆಪಿ ಸರ್ಕಾರದವರು 5 ಕೆಜಿ ಮಾತ್ರ ಕೊಡುತ್ತಿದ್ದಾರೆ. ಮತ್ತೆ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ. ಪ್ರತಿ ಕುಟುಂಬದ ಮಹಿಳೆಗೆ .2000 ಸಾವಿರ ನೀಡುತ್ತೇವೆ. ಜೊತೆಗೆ ಗ್ರಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ಜೊತೆಗೆ ಕೃಷ್ಣಾ ಸೇರಿದಂತೆ ವಿವಿಧ ನಿರಾವರಿ ಯೋಜನೆಗಳ ಅಭಿವೃದ್ಧಿಗಾಗಿ ಸುಮಾರು .2 ಲಕ್ಷ ಕೋಟಿ ಖರ್ಚು ಮಾಡಲಾಗುವುದು. ಒಂದು ವೇಳೆ ಚುನಾವಣೆಯಲ್ಲಿ ಕೊಟ್ಟಭರವಸೆಗಳನ್ನು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಅವರು ಘೋಷಿಸಿದರು .
ಈ ವೇಳೆ ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಬ.ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಶಾಸಕ ಜಮೀರಹಮ್ಮದ್ ಖಾನ್, ಮಾಜಿ ಸಚಿವ, ಎಸ್.ಸಿ.ಮಾಹಾದೇವಪ್ಪ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಸಿ.ಎಸ್.ನಾಡಗೌಡ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಮಲ್ಲಿಕಾರ್ಜುನ ಮದರಿ, ಗಫäರಸಾಬ ಮಕಾನಂದಾರ, ಗುರು ತಾರನಾಳ, ಬಾಪುರಾಯ ದೇಸಾಯಿ, ಗೋವಾ ಕನ್ನಡಿಗರ ಹೋರಾಟದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಸೇರಿದಂತೆ ಹಲವರು ಇದ್ದರು. ವೈ.ಎಚ್.ವಿಜಯಕರ ನಿರೂಪಿಸಿದರು.
ನನ್ನ ಸಾಯಿಸಲು ನೀವು ಬಿಡ್ತೀರಾ?
ಬಸವನ ಬಾಗೇವಾಡಿ: ಗಾಂಧೀಜಿ ಕೊಲೆ ಮಾಡಿದವರು ಬಿಜೆಪಿಯವರು. ಧರ್ಮದ ಬಗ್ಗೆ ಮಾತನಾಡುವವರು ಕೊಲೆ ಮಾಡುವ ಬಗ್ಗೆ ಮಾತನಾಡುತ್ತಾರೆ. ಓರ್ವ ಸಚಿವ ನನ್ನ ಮುಗಿಸಿ ಬಿಡಬೇಕು ಎಂದು ಹೇಳುತ್ತಾನೆ. ನಾನು ಸಾವಿಗೆ ಹೆದರಲ್ಲ. ನನ್ನ ಸಾಯಿಸಲು ನೀವು ಬಿಡ್ತೀರಾ. ನಾನು ಬಡವರ ಪರವಾಗಿ ಕೆಲಸ ಮಾಡಿದ್ದೇನೆ. ರೈತರ ಪರ ಕೆಲಸ ಮಾಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬುಧವಾರ ರಾತ್ರಿ ಪ್ರಜಾಧ್ವನಿ ಯಾತ್ರೆ ಅಂಗವಾಗಿ ಬಸವನ ಬಾಗೇವಾಡಿ ಪಟ್ಟಣದಲ್ಲಿ ಆಯೋಜಿಸಿದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಹಲವಾರು ಭಾಗ್ಯಗಳನ್ನು ಎಲ್ಲ ಕೋಮಿನ ಜನರಿಗಾಗಿ ಜಾರಿ ಮಾಡಿದ್ದೇನೆ. ಎಸ್ಸಿ, ಎಸ್ಟಿಸಮುದಾಯಕ್ಕೆ ವಿಶೇಷ ಅನುದಾನ ನಿಯಮ ಜಾರಿ ಮಾಡಿದ್ದೇನೆ. 2018 ರಲ್ಲಿ ನಾನು ಕೊನೆ ಬಜೆಟ್ ಮಂಡಿಸಿದ್ದೆ. ಈಗ ಎಸ್‌ಇಪಿಟಿ ಎಸ್ಪಿಗೆ ಇಟ್ಟಹಣ ಕಡಿಮೆಯಾಗಿದೆ. ಐವತ್ತು ಸಾವಿರ ಕೋಟಿ ಹಣ ಬಜೆಟ್‌ನಲ್ಲಿ ಇಡಬೇಕಿತ್ತು. ಆದರೆ, ಬಿಜೆಪಿಯವರು ಇಟ್ಟಿಲ್ಲ. ಅಲ್ಪಸಂಖ್ಯಾತರಿಗೂ ಅನ್ಯಾಯ ಮಾಡಿದ್ದಾರೆ ಎಂದರು.
ನಿಮ್ಮ ಆಶೀರ್ವಾದಿಂದ ಅಧಿಕಾರಕ್ಕೆ ಬಂದರೆ ಐದು ಸಾವಿರ ಕೋಟಿ ಅಲ್ಪಸಂಖ್ಯಾತರಿಗೆ ನೀಡುತ್ತೇವೆ. ಜನರಿಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದೇವೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ಕರೆಂಟ್ ಉಚಿತ, ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ಹಣ ನೀಡುತ್ತೇವೆ. ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿವೆ. ಮೋದಿ ಅವರ ಅಚ್ಚೇ ದಿನ್ ಬರಲಿಲ್ಲ. ಎಲ್ಲಿದೆ ಮೋದಿ ಅವರ ಅಚ್ಛೇ ದಿನ್ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಾವು ನೀಡಿದ್ದ ಉಚಿತ ಅಕ್ಕಿಯನ್ನು ಕಡಿಮೆ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಹತ್ತು ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ. ಇನ್ನೂ ಹೆಚ್ವಿನ ನೀರಾವರಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಹಾಗೂ ತುಂಗಭದ್ರಾ ಹೂಳು ತೆಗೆಯಲು ಎರಡು ಲಕ್ಷ ಕೋಟಿ ಹಣ ಖರ್ಚು ಮಾಡುತ್ತೇವೆ. ಈ ಹಿಂದೆಯೂ ನೀರಾವರಿ ಯೋಜನೆಯಲ್ಲಿ ನುಡಿದಂತೆ ನಡೆದಿದ್ದೇವೆ. ಈಗ ನುಡಿದಂತೆ ನಡೆಯದೇ ಇದ್ದರೆ ಅಧಿಕಾರದಲ್ಲಿ ಇರಲ್ಲ ಎಂದರು.
ಮೋದಿ ನಾ ಖಾವೂಂಗಾ ನ ಖಾನೇದೂಂಗಾ ಎನ್ನುತ್ತಾರೆ. ಆದರೆ, ರಾಜ್ಯದಲ್ಲಿ ಬಿಜೆಪಿಯವರು ಮಾಡುತ್ತಿರುವುದು ಏನು? ಎಲ್ಲಿ ಹೋದರೂ ಲಂಚ, ಲಂಚವಾಗಿದೆ. ವಿಧಾನಸೌಧದ ಗೋಡೆಗಳು ಸಹ ಲಂಚ ಲಂಚ ಲಂಚ ಎನ್ನುತ್ತಿವೆ ಎಂದು ದೂರಿದರು.
ಈ ಬಾರಿ ಬಸವನಬಾಗೇವಾಡಿ ಕ್ಷೇತ್ರಕ್ಕೆ ಹಾಲಿ ಶಾಸಕ ಶಿವಾನಂದ ಪಾಟೀಲಗೆ ಆಶೀರ್ವಾದ ಮಾಡಿ. ಶಿವಾನಂದ ಪಾಟೀಲಗೆ ಮತ ಹಾಕಿದರೆ ಅದು ನನಗೆ ಮತ ಹಾಕಿದಂತೆ. ಮತ್ತೊಮ್ಮೆ ಶಿವಾನಂದಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿದರು.
ಶಾಸಕ ಶಿವಾನಂದ ಪಾಟೀಲ ಮಾತನಾಡಿ, ನಾನು ಕ್ಷೇತ್ರಕ್ಕೆ ಬಂದಾಗ ಒಬ್ಬರು ಅವರು ಕ್ಷೇತ್ರಕ್ಕೆ ನೀರು ತರಲ್ಲ,ಬೀರು ತರುತ್ತಾರೆ ಎಂದು ಹೇಳಿದವರೇ ಎರಡು ಬಾರಿ ಅಂಗಡಿ ತಂದಿದ್ದಾರೆ. ಇನ್ನೊಬ್ಬರು ತಮ್ಮ ಅಪ್ಪನ ಹೆಸರು ಹೇಳಿಕೊಂಡು ತಮ್ಮ ಮುಂದೆ ಮತ ಕೇಳಲು ಬರುತ್ತಾರೆ. ಆದರೆ, ನಾನು ಮಾಡಿರುವ ಅಭಿವೃದ್ಧಿ ಕಾರ್ಯ, ಪಕ್ಷ, ದೇಶದಲ್ಲಿ ನಡೆಯುತ್ತಿರುವ ಚಲನವಲನ ಮುಂದಿಟ್ಟುಕೊಂಡು ನೈತಿಕವಾಗಿ ತಮ್ಮ ಮುಂದೆ ಮತ ಕೇಳುವುದಾಗಿ ಹೇಳಿದ ಅವರು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಿರಂತರ ನಡೆಯಬೇಕಾದರೆ ಎರಡು ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಮತಬಾಂಧವರು ಮತ ನನಗೆ ನೀಡಬೇಕು. ಇಂದಿನಿಂದಲೇ ನನ್ನ ಚುನಾವಣಾ ಪ್ರಚಾರ ಆರಂಭ ಎಂದರು.
2013-18ರ ಅವಧಿಯಲ್ಲಿದ್ದ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ಇತಿಹಾಸದಲ್ಲಿಯೇ ಜನತೆಗೆ ಹೆಚ್ಚು ಭಾಗ್ಯಗಳನ್ನು ನೀಡಿತು. ಚುನಾವಣೆ ಸಮೀಪ ಇರುವದರಿಂದ ರಾಜ್ಯಕ್ಕೆ ಮೇಲಿಂದ ಮೇಲೆ ಮೋದಿ, ಅಮಿತಾ ಷಾ ಬರುತ್ತಿದ್ದಾರೆ. ಅವರು ನೂರು ಸಲ ಬಂದರೂ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 125 ಕ್ಕಿಂತ ಹೆಚ್ಚು ಸ್ಥಾನ ಪಡೆಯುವದು ನಿಶ್ಚಿತ ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಲ್ಲೆಯು ಸಂಪೂರ್ಣ ನೀರಾವರಿಗೆ ಒಳಪಡಲಿದೆ. ಬರದ ನಾಡು ಬಂಗಾರದ ನಾಡಾಗಿ ಕಂಗೊಳಿಸಲಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
Viral Video: ಮೋದಿ ಮೋದಿ ಎಂದು ಘೋಷಣೆ ಕೂಗಿ ಸಿದ್ದರಾಮಯ್ಯಗೆ ಸ್ವಾಗತ!
ನಾನು ಶಾಸಕನಾದ ಮೇಲೆ ಕ್ಷೇತ್ರದಲ್ಲಿ 70 ಸಾವಿರ ಎಕರೆ ಜಮೀನು ನೀರಾವರಿಗೆ ಒಳಪಟ್ಟಿದೆ. ನೀರಾವರಿ ಯೋಜನೆಗಾಗಿ, ಕೂಡಗಿ ವಿದ್ಯುತ್ ಉತ್ಪಾದನೆ ಘಟಕಕ್ಕಾಗಿ ಭೂಮಿಯನ್ನು ತ್ಯಾಗ ಮಾಡಿದ್ದಾರೆ. ನಾನು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ನಿಮ್ಮ ಕಣ್ಣ ಮುಂದಿದೆ. ಅಭಿವೃದ್ಧಿ ಕಾರ್ಯಗಳು ನನಗೆ ತೃಪ್ತಿ ತಂದಿದೆ. ಇತರರಿಗೆ ಮಾದರಿಯಾಗಿವೆ. ನಾನು ಅಪ್ಪನ ಹೆಸರು ಹೇಳಿ ಮತಯಾಚಿಸದೇ ನನ್ನ ಅಭಿವೃದ್ಧಿ ಕಾರ್ಯ, ಹಿಂದಿನ ಸಿದ್ದರಾಮಯ್ಯನವರ ಸರ್ಕಾರದ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ನೈತಿಕತೆಯಿಂದ ಮತಯಾಚಿಸುತ್ತೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಮುಂದುವರೆಯಬೇಕಾದರೆ ಮುಂಬರುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುತ್ತೀರಿ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.
2013ರಿಂದ 2018ರವರೆಗೆ ಹೆಚ್ಚಿನ ಭಾಗ್ಯಗಳನ್ನು ಕೊಟ್ಟಿದ್ದು ಸಿದ್ಧರಾಮಯ್ಯನವರ ಸರ್ಕಾರ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 120ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದರು.