ನಾವು ಮುಂದೆ ಅಧಿಕಾರಕ್ಕೆ ಬಂದ ನಂತರ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಇದಕ್ಕೂ ನಾವು ಗ್ಯಾರೆಂಟಿ ಕಾರ್ಡ್ ಕೊಡುತ್ತೇವೆ: ಸಿದ್ದರಾಮಯ್ಯ
ಹುನಗುಂದ(ಫೆ.23): ಬಿಜೆಪಿಯವರು ದ್ವೇಷ ರಾಜಕೀಯ ಮಾಡಿದರೆ ನಾವು ಅಭಿವೃದ್ಧಿ ರಾಜಕಾರಣ ಮಾಡುತ್ತೇವೆ. ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದ ಜನರಿಗೆ ಅಭಿವೃದ್ಧಿ ಹೆಸರಿನಲ್ಲಿ ಢೋಂಗಿ ರಾಜಕಾರಣ ಮಾಡುತ್ತಿದೆ. ಬಿಜೆಪಿ ಸುಳ್ಳಿನ ಕಾರ್ಖಾನೆಯಾಗಿದ್ದು, ಕೋಮು ಮನೋಭಾವ ಕೆರಳಿಸುವ ಕೆಲಸ ಬಿಜೆಪಿಗರಿಂದ ನಡೆಯುತ್ತಿದೆ. ಅದಕ್ಕೆ ಬಿಜೆಪಿಯನ್ನು ಜನರು ನಂಬಬೇಡಿ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬುಧವಾರ ಪಟ್ಟಣದ ಟಿಸಿಎಚ್ ಕಾಲೇಜು ಮೈದಾನದಲ್ಲಿ ಹುನಗುಂದ ಮತ್ತು ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಹುನಗುಂದ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಮುಂದೆ ಅಧಿಕಾರಕ್ಕೆ ಬಂದ ನಂತರ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಇದಕ್ಕೂ ನಾವು ಗ್ಯಾರೆಂಟಿ ಕಾರ್ಡ್ ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
undefined
ನಾವು ಈಗಾಗಲೇ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು .2 ಸಾವಿರದಂತೆ ವರ್ಷಕ್ಕೆ .24 ಸಾವಿರ ನೀಡುವುದಾಗಿ ಮತ್ತು ರಾಜ್ಯದ ಪ್ರತಿ ಮನೆಗೆ ತಿಂಗಳಿಗೆ ಉಚಿತವಾಗಿ 200 ಯುನಿಟ್ ವಿದ್ಯುತ್ ಅನ್ನು ನೀಡುತ್ತೇವೆ ಎಂದು ಭರವಸೆ ನಿಡಿದ್ದೇವೆ. ಇದಕ್ಕೆ ಬದ್ಧರಿದ್ದೇವೆ ಎಂಬುದಕ್ಕೆ ಇಲ್ಲಿ ಸಾಂಕೇತಿಕವಾಗಿ ಗ್ಯಾರೆಂಟಿ ಕಾರ್ಡ್ ನೀಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ರಾಜ್ಯದ ಬಡ ಜನರ ನೆರವಿಗೆ ಕಾಂಗ್ರೆಸ್ ಕಂಕಣಬದ್ಧವಾಗಿದೆ ಎಂದರು.
ಸಚಿವ ಅಶ್ವಥನಾರಾಯಣ ವಜಾಕ್ಕೆ ಕಾಂಗ್ರೆಸ್ ಆಗ್ರಹ
ಈ ಹಿಂದೆ ನಾವು ಮಾತು ಕೊಟ್ಟಂತೆ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ರಾಜ್ಯದ ನೀರಾವರಿ ಯೋಜನೆಗಳಿಗೆ ವರ್ಷಕ್ಕೆ 5 ವರ್ಷದಲ್ಲಿ .56 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಆದರೆ, 2018ರಲ್ಲಿ ಬಿಜೆಪಿಯವರು ನೀರಾವರಿಗೆ 5 ವರ್ಷದಲ್ಲಿ .1.5 ಲಕ್ಷ ಕೋಟಿ ಹಣ ಖರ್ಚು ಮಾಡುವುದಾಗಿ ಭರವಸೆ ನೀಡಿ, ಕೇವಲ .50 ಸಾವಿರ ಕೋಟಿ ಮಾತ್ರ ಹಣ ಖರ್ಚು ಮಾಡಿದ್ದಾರೆ. ಬಿಜೆಪಿ ಪಕ್ಷ ತಮ್ಮ ಪ್ರಣಾಳಿಕೆ ಮೂಲಕ 600 ಭರವಸೆಗಳನ್ನು ನೀಡಿ ಅದರಲ್ಲಿ 50 ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಯಾರು ಬಸವಾದಿ ಶರಣರಂತೆ ನುಡಿದಂತೆ ನಡೆದಿದ್ದಾರೆ ಎಂದು ಇಂದು ಜನ ತೀರ್ಮಾನ ಮಾಡಬೇಕು ಎಂದರು.
ನಾವು ಅಧಿಕಾರಕ್ಕೆ ಬಂದ ಮೇಲೆ ನಂದವಾಡಿ ಏತನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿಯನ್ನು ಕೂಡ ಮಾಡಿಕೊಡುತ್ತೇವೆ. ಈ ಬಗ್ಗೆ ಇಲ್ಲಿನ ರೈತರು ಯಾವುದೇ ಚಿಂತೆ ಮಾಡುವುದು ಬೇಡ. ಅಧಿಕಾರಕ್ಕೆ ಬಂದ ನಂತರದ 5 ವರ್ಷಗಳಲ್ಲಿ .2 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಿ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಬಾಗಲಕೋಟೆ ಜಿಲ್ಲೆಯಲ್ಲಿನ ಎಲ್ಲಾ ಸಂತ್ರಸ್ತರಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಕೂಡ ಮಾಡುತ್ತೇವೆ ಎಂದರು.
ಹಿಂದೆ ವಿಜಯಾನಂದ ಕಾಶಪ್ಪನವರು ಶಾಸಕರಾಗಿದ್ದಾಗ ಮಂತ್ರಿ ಪದವಿಗಾಗಿ ಲಾಬಿ ಮಾಡಿಲ್ಲ, ಅದರ ಬದಲು ಹುನಗುಂದ ಕ್ಷೇತ್ರಕ್ಕೆ ನಾನು ಕೇಳುವ ಎಲ್ಲ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ಕೊಡಿ ಸಾಕು ಎಂದಿದ್ದರು. ಅವರು ಕೇಳಿದ್ದ ಪ್ರತಿ ಬೇಡಿಕೆಗಳನ್ನು ಈಡೇರಿಸಿದ್ದೆ, ನಮ್ಮ ಸರ್ಕಾರ ಇದ್ದಾಗ ಸುಮಾರು .4.5 ಸಾವಿರ ಕೋಟಿ ಅನುದಾನವನ್ನು ಹುನಗುಂದಕ್ಕೆ ನೀಡಿದ್ದೆ. ಅಕ್ಷರಧಾಮ ಸ್ಥಾಪನೆಗೆ ಅನುಮೋದನೆ ನೀಡಿ, ಹಣ ಬಿಡುಗಡೆ ಮಾಡಿಕೊಟ್ಟಿದ್ದು ನಮ್ಮ ಸರ್ಕಾರ, ಆದರೆ ಇಂದು ಕೆಲಸ ನಿಂತಿದೆ. ಬಸವಣ್ಣನ ಹೆಸರು ಹೇಳುವವರು ಬಸವಣ್ಣನ ಮಾತಿನಂತೆ ನಡೆಯುತ್ತಿಲ್ಲ. ಅಂಥವರಿಗೆ ಮತ ಹಾಕುತ್ತೀರಾ? ಎಂದು ನೆರದ ಜನರನ್ನು ಪ್ರಶ್ನಿಸಿದರು.
ಮಲಪ್ರಭಾ ಮತ್ತು ಕೃಷ್ಣಾ ನದಿ ಜೋಡಿಸುವ ಸೇತುವೆ ನಿರ್ಮಾಣ ಆಗಲು ಕಾಶಪ್ಪನವರ ಶ್ರಮ ಮತ್ತು ನಮ್ಮ ಸಹಕಾರ ಕಾರಣ, ನಾವು ನಿರ್ಮಿಸಿದ್ದ ಸೇತುವೆ ಉದ್ಘಾಟನೆ ಕೂಡ ಮಾಡಲು ಈ ಸರ್ಕಾರದಿಂದ ಆಗಿಲ್ಲ. ಬಿಜೆಪಿಯವರು ಎಂದರೆ ಮಾನಗೆಟ್ಟವರು, ಲಜ್ಜೆಗೆಟ್ಟವರು ಎಂದರ್ಥ ಎಂದರು.
ಮಾಜಿ ಸಚಿವ ಡಾ.ಎಚ್.ಸಿ ಮಹಾದೇವಪ್ಪ ಮಾತನಾಡಿ, ಪ್ರಧಾನಿ ಮೋದಿಯೊಬ್ಬ ಮೂಢನಂಬಿಕೆಗಳ ದಾಸ. ಒಬ್ಬ ಮಾಜಿ ಸಿಎಂ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದರೂ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಕ್ರಮ ತಗೆದುಕೊಳ್ಳುತ್ತಿಲ್ಲ ಅಂದರೆ ಇದೆಂಥ ಸರ್ಕಾರ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭ್ರಷ್ಟಾಚಾರದ ಕೂಪವಾಗಿವæ ಎಂದು ಆರೋಪಿದರು.
ಮಾಜಿ ಸಚಿವ ಜಮೀರ್ ಅಹ್ಮದ ಖಾನ್ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಬೆಲೆ ಏರಿಕೆ ಈ ರಾಜ್ಯದ ಜನರಿಗೆ ಬಿಜೆಪಿ ನೀಡಿದ ಬಹುದೊಡ್ಡ ಕೊಡುಗೆ. ಬಿಜೆಪಿ ಸರ್ಕಾರದಲ್ಲಿ ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಇದ್ದರೆ, ಹುನಗುಂದ ತಾಲೂಕಿನಲ್ಲಿ 55 ಪರ್ಸೆಂಟ್ ಕಮಿಷನ್ ಪಡೆಯುವ ಅಪ್ಪ ಮತ್ತು ಮಗನ ಭ್ರಷ್ಟಚಾರ ಇದೆ. .130 ಕೋಟಿ ನೀರಾವರಿ ಅನುದಾನವನ್ನು ಸಚಿವ ಗೋವಿಂದ ಕಾರಜೋಳ ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಿದ್ದಾರೆ ಎಂದು ದೂರಿದರು.
ಹಿಂದೂಗಳು ಮನೆಯಲ್ಲಿ ಖಡ್ಗ, ತಲ್ವಾರ್ ಇಟ್ಟುಕೊಳ್ಳಿ; ಗೋವು, ಸೋದರಿಯರ ರಕ್ಷಣೆಗೆ ಆಯುಧ ಬೇಕು: ಮುತಾಲಿಕ್
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣು, ಮುಖ್ಯ ಸಚೇತಕ ಪ್ರಕಾಶ ರಾಠೋಡ, ಶಾಸಕ ಆನಂದ ನ್ಯಾಮಗೌಡ, ಮಾಜಿ ಶಾಸಕ ಜೆ.ಟಿ.ಪಾಟೀಲ, ಸಿ.ಎಸ್.ನಾಡಗೌಡ್ರ, ಮಾಜಿ ಸಚಿವ ಹನಮಂತಪ್ಪ ಆಲಕೋಡ, ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ದೇವರಾಜ ಪಾಟೀಲ, ಸತೀಶ ಬಂಡಿವಡ್ಡರ, ನಿಸಾರಹ್ಮದ್ ಖಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಂಗಾಧರ ದೊಡಮನಿ, ಅಬ್ದಲ್ ರಜಾಕ್ ತಟಗಾರ, ಮುಖಂಡರಾದ ಮಹಾಂತೇಶ ಅವಾರಿ, ಚನ್ನಪ್ಪ ನಾಡಗೌಡ್ರ, ದೀಪಾ ಸುಂಕದ, ಸರಸ್ವತಿ ಈಟಿ, ಪುರಸಭೆ ಅಧ್ಯಕ್ಷ ಪರ್ವೇಜ್ ಖಾಜಿ, ಉಪಾಧ್ಯಕ್ಷೆ ಶಾಂತಮ್ಮ ಮೇಲಿನಮನಿ, ಸದಸ್ಯರಾದ ಶರಣು ಬೆಲ್ಲದ, ಚಂದ್ರು ತಳವಾರ, ಯಲ್ಲಪ್ಪ ನಡುವಿನಮನಿ, ಮೈನು ಧನ್ನೂರ, ಮಲ್ಲಿಕಾರ್ಜುನ ಹೂಗಾರ, ಶಿವಾನಂದ ಕಂಠಿ, ರವಿ ಹುಚನೂರ, ದೇವು ಡಂಬಳ, ವಿಶ್ವನಾಥ ಬ್ಯಾಳಿ, ಮುತ್ತು ಲೋಕಾಪೂರ, ಶಾರಾದಾ ಗೋಡಿ, ರೇಶ್ಮಾ ಮಾರನಬಸರಿ, ಬಸವರಾಜ ಹೊಸಮನಿ, ಮಹಾಂತೇಶ ಕಡಿವಾಲ, ಮುತ್ತಣ್ಣ ಕಲಗೋಡ, ಅಮರೇಶ ನಾಗೂರ, ಸುರೇಶ ಜಂಗ್ಲಿ, ರಾಜು ಬಡಿಗೇರ ಸೇರಿದಂತೆ ಅನೇಕರು ಇದ್ದರು. ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ಅಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ ನಿರೂಪಿಸಿ, ವಂದಿಸಿದರು.
ಕಾಶಪ್ಪನವರ ಗೆದ್ದರೆ ಸಿದ್ದರಾಮಯ್ಯ ಗೆದ್ದಂತೆ
ನವಲಿ ಹಿರೇಮಠ ಅವರು ನನ್ನ ಹೆಸರು ಹೇಳಿಕೊಂಡು ಇಲ್ಲಿ ಮತ ಕೇಳುತ್ತಿದ್ದಾರಂತೆ, ನೀವು ಅಂಥವರಿಗೆ ಉಗಿದು ಕಳಿಸಿ, ನನ್ನ ಹೆಸರು ಹೇಳುವ ಯೋಗ್ಯತೆ ಅವರಿಗೆ ಇದೆಯಾ ಎಂದು ಕೇಳಿ. ಅವರ ಮನೆಯ ಮದುವೆ ಕಾರ್ಯಕ್ಕೆ ಹೋಗಿದ್ದೆ ಅಷ್ಟೆ, ಮದುವೆ, ಸಾವಿನ ಕಾರ್ಯಗಳಿಗೆ ಹೋಗುವುದೇ ಬೇರೆ ರಾಜಕೀಯವೇ ಬೇರೆ. ನಾನು ನೂರಕ್ಕೆ ನೂರು ವಿಜಯಾನಂದ ಕಾಶಪ್ಪನವರ ಅವರ ಪರ. ಕಾಶಪ್ಪನವರ ಗೆದ್ದರೆ ಸಿದ್ದರಾಮಯ್ಯ ಗೆದ್ದಂತೆ. ಕಾಶಪ್ಪನವರಗೆ ನೀಡುವ ಪ್ರತಿ ಮತ ಸಿದ್ದರಾಮಯ್ಯನಿಗೆ ಕೊಟ್ಟಂತೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.