ನಿಮ್ಮ ಕಾರ್ಯಕ್ರಮ ಹೇಳಿ, ನಮ್ಮನ್ನು ಟೀಕಿಸುವುದು ಬೇಡ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Mar 2, 2023, 8:42 PM IST
Highlights

ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬುದನ್ನು ಹೇಳಿಕೊಂಡು ಹೋಗಿ, ಅದು ಬಿಟ್ಟು ಜೆಡಿಎಸ್‌ಗೆ ಮೇಲೆ ನಿಮಗೇಕೆ ಕಣ್ಣು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. 

ಮೈಸೂರು (ಮಾ.02): ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬುದನ್ನು ಹೇಳಿಕೊಂಡು ಹೋಗಿ, ಅದು ಬಿಟ್ಟು ಜೆಡಿಎಸ್‌ಗೆ ಮೇಲೆ ನಿಮಗೇಕೆ ಕಣ್ಣು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಗುರುವಾರ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದುವರೆಗೆ ಸಿದ್ದರಾಮಯ್ಯ ಮಾತ್ರ ಜೆಡಿಎಸ್‌ ಟೀಕಿಸುತ್ತಿದ್ದರು. ಈಗ ಅಮಿತ್‌ ಶಾ ಕೂಡ ಟೀಕಿಸುತ್ತಿದ್ದಾರೆ. ನೀವು ಮಾಡುತ್ತಿರುವ ಪ್ರಜಾಧ್ವನಿ, ವಿಜಯ ಸಂಕಲ್ಪ ಯಾತ್ರೆಯಿಂದ ಏನೂ ಪ್ರಯೋಜನ ಇಲ್ಲ. ಅದರಲ್ಲಿ ನಿಮ್ಮ ಕಾರ್ಯಕ್ರಮವನ್ನು ಮಾತ್ರ ಹೇಳಿಕೊಂಡು ಹೋಗಿ. ಅದು ಬಿಟ್ಟು ನಮ್ಮನ್ನು ಟೀಕಿಸುವುದು ಏಕೆ? ಎಂದರು.

ಉತ್ತರ ಕರ್ನಾಟದ ಹಳ್ಳಿಗಳಿಗೆ ಭೇಟಿ ನೀಡಿ. ಅಲ್ಲಿನ ಸಮಸ್ಯೆ ನೋಡಿ. ಗುಲ್ಬರ್ಗ, ರಾಯಚೂರು ಮುಂತಾದ ಕಡೆಗಳಲ್ಲಿ ತಲೆಗೊಂದು ಮುಂಡಾಸು, ಮನೆಗೊಂದು ಸಂಡಾಸು (ಶೌಚಾಲಯ) ಎಂದು ಬರೆಯಲಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ 100ಕ್ಕೆ 100 ಬಯಲು ಶೌಚ ಮುಕ್ತ ರಾಜ್ಯ ಎಂದು ಪ್ರಶಸ್ತಿ ಪಡೆದರು. ತಮ್ಮ ಅಧಿಕಾರದ 75 ವರ್ಷದಲ್ಲಿ ನೀವು ಕೊಟ್ಟಪರಿಸ್ಥಿತಿ ಇದು. ಹಳ್ಳಿಯ ಕಡೆಗೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿ ಎಂದು ಅವರು ಕಿವಿಮಾತು ಹೇಳಿದರು.

Latest Videos

ರಾಜ್ಯದ ಹಳ್ಳಿಗಳ ನಿಜವಾದ ಚಿತ್ರಣ ತಿಳಿದುಕೊಳ್ಳಲು ಪಂಚರತ್ನ ಯಾತ್ರೆ: ಎಚ್.ಡಿ.ಕುಮಾರಸ್ವಾಮಿ

ಸಭೆಗಳಿಗೆ ಜನರನ್ನು ದುಡ್ಡು ಕೊಟ್ಟು ಕರೆತರುತ್ತಾರೆ. ಆದರೆ ನಾವು ಜನರು ಇರುವ ಕಡೆಗೆ ಹೋಗುತ್ತೇವೆ. ಆದ್ದರಿಂದ ನಮಗೆ ಅಂತಹ ಪರಿಸ್ಥಿತಿ ಇಲ್ಲ. ಈ ಹಿಂದಿನ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ದಿಂಬು, ಹಾಸಿಗೆಯಲ್ಲೂ ಕಮಿಷನ್‌ ಪಡೆದರು. ಆದರೆ ಜನರಿಗೆ ಏನೂ ಅನುಕೂಲ ಮಾಡಿಕೊಡಲಿಲ್ಲ. ಮುಖ್ಯಮಂತ್ರಿ ಆದಾಗ ಅನ್ನಭಾಗ್ಯ ಯೋಜನೆಗೆ 7 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿ, 5 ಕೆಜಿಗೆ ಮಾತ್ರ ಹಣ ಮೀಸಲಿಟ್ಟರು. ಉಳಿಕೆ ಮೊತ್ತವನ್ನು ನಾನು ಹೊಂದಿಸಬೇಕಾಯಿತು ಎಂದರು.

ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಪಾಠ ಕಲಿಸಿ: ಎಚ್‌.ಡಿ.ಕುಮಾರಸ್ವಾಮಿ

ದೇವೇಗೌಡರನ್ನು ನಾವು ಪ್ರಧಾನಿ ಮಾಡಿದ್ದು ಎನ್ನುತ್ತೀರಲ್ಲ. ಹಾಸನಕ್ಕೆ ನಿಮ್ಮ ಕೊಡುಗೆ ಏನು? ನಾನು ಮುಖ್ಯಮಂತ್ರಿ ಆದ ಮೇಲೆ ಎಷ್ಟುಹಿಂಸೆ ಆಯಿತು. ತಾಜ್‌ ಹೋಟೆಲ್‌ನಲ್ಲಿ ಇದ್ದರೂ ಶಕ್ತಿ ಭವನದಲ್ಲಿ ಬೆಳಗ್ಗೆ 8 ರಿಂದಲೇ ಸಭೆ ನಡೆಸುತ್ತಿದ್ದೆ. ನನ್ನ ಗುರಿ ರೈತರ ಸಾಲ ಮನ್ನಾ ಮಾಡುವುದಾಗಿತ್ತು. ಬಳಿಕ ಸಚಿವ ಸ್ಥಾನದ ಸಂಖ್ಯೆಬಲದಲ್ಲಿ ಗೊಂದಲ, ಶಿಷ್ಟಾಚಾರ ಬಿಟ್ಟು ಅಧಿಕಾರಿಗಳ ವರ್ಗಾವಣೆ ಆಯಿತು. ಶಾಸಕಾಂಗ ಪಕ್ಷದ ಸಭೆ ಎಂದು ಕೆ.ಜೆ. ಜಾಜ್‌ರ್‍ ಅವರ ಹೋಟೆಲ್‌ ಕರೆದರು, ಆದರೆ ಒಳಗೆ ಬಾ ಎನ್ನಲಿಲ್ಲ. ಸಿಎಂ ಆಗದವನು ಸುಮಾರು 15 ರಿಂದ 20 ನಿಮಿಷ ಹೊರಗೆ ಅಬ್ಬೇಪಾರಿಯಂತೆ ನಿಂತಿದ್ದೆ. ನೀವು ಹೇಗೆ ನಡೆಸಿಕೊಂಡಿದ್ದೀರಿ ಎಂಬುದು ಗೊತ್ತಿಲ್ಲವೇ ಎಂದು ಕುಮಾರಸ್ವಾಮಿ ಮೊದಲಿಸಿದರು.

click me!