
ನವದೆಹಲಿ(ಮಾ.02): ಈಶಾನ್ಯ ರಾಜ್ಯದಲ್ಲಿ ಇದೀಗ ಬಿಜೆಪಿಗೆ ಹ್ಯಾಟ್ರಿಕ್. ತ್ರಿಪುರಾ ಹಾಗೂ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಸ್ಪಷ್ಟಬಹುತ ಪಡೆದಿದೆ. ಈ ಎರಡು ರಾಜ್ಯದಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಯಾವುದೇ ಆತಂಕವಿಲ್ಲದೆ ಸರ್ಕಾರ ರಚಿಸಲಿದೆ. ಆದರೆ ಮೆಘಾಲಯದಲ್ಲಿ ಬಿಜೆಪಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಎನ್‌ಪಿಪಿ ಪಕ್ಷ 26 ಸ್ಥಾನ ಗೆದ್ದ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಮೆಘಾಲಯದಲ್ಲಿ ಯಾವುದೇ ಪಕ್ಷಕ್ಕೆ ಪೂರ್ಣಬಹುತ ಸಿಕ್ಕಿಲ್ಲ. ಹೀಗಾಗಿ ಮೈತ್ರಿ ಸರ್ಕಾರ ಅನಿವಾರ್ಯವಾಗಿದೆ.26 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊಮ್ಮಿದ ಎನ್‌ಪಿಪಿ ಮುಖ್ಯಸ್ಥ ಹಾಗೂ ಮೆಘಾಲಯ ಹಾಲಿ ಮುಖ್ಯಮಂತ್ರಿ ಕೊನಾರ್ಡ್ ಸಾಂಗ್ಮಾ, ಕೇಂದ್ರ ಗೃಹ ಸಚಿವ, ಬಿಜೆಪಿ ಹೈಕಮಾಂಡ್ ಅಮಿತ್ ಶಾಗೆ ಕರೆ ಮಾಡಿ ಬೆಂಬಲ ಕೋರಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಮೆಘಾಲಯದಲ್ಲಿ ಸರ್ಕಾರ ರಚನೆಗೆ ಕೊನಾರ್ಡ್ ಸಾಂಗ್ಮಾ, ಬಿಜೆಯ ಬೆಂಬಲ ಕೋರಿದ್ದಾರೆ. ಸರ್ಕಾರ ರಚಿಸಲು ಬೆಂಬಲ ನೀಡುವುದಾಗಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆದರೆ ಬಿಜೆಪಿ ಬೆಂಬಲ ಪಡೆದ ಬೆನ್ನಲ್ಲೇ ಮೆಘಾಲಯದಲ್ಲಿ ಎನ್‌ಪಿಪಿ ಪಕ್ಷಕ್ಕೆ ಸರ್ಕಾರ ರಚಿಸಲು ಸಾಧ್ಯವಾಗಲ್ಲ. ಕಾರಣ ಎನ್‌ಪಿಪಿ 26 ಸ್ಥಾನ ಗೆದ್ದುಕೊಂಡಿದ್ದರೆ, ಬಿಜೆಪಿ 2 ಸ್ಥಾನ ಗೆದ್ದುಕೊಂಡಿದೆ. ಮೈತ್ರಿ ಮಾಡಿಕೊಂಡರೆ 28 ಸ್ಥಾನವಾಗಲಿದೆ. ಮೆಘಾಲದಲ್ಲಿನ ಮ್ಯಾಜಿಕ್ ನಂಬರ್ 31.
ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕಿ, ಇತಿಹಾಸ ರಚಿಸಿದ ಬಿಜೆಪಿ ಮೈತ್ರಿಕೂಟದ ಹೆಕಾನಿ!
ಬಿಜೆಪಿ ಜೊತೆ ಇತರರು ಸಾಥ್ ನೀಡುವ ಸಾಧ್ಯತೆ ಇದೆ. ಈ ಮೂಲಕ ಮೆಘಾಲಯದಲ್ಲೂ ಬಿಜೆಪಿ ಅಧಿಕಾರ ಹಿಡಿಯಲಿದೆ. ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಕಮಲ ಅರಳಿಸುವ ಹಿಂದೆ ಅನಂತ್ ಬಿಸ್ವಾ ಶರ್ಮಾ ಪ್ರಮುಖ ಪಾತ್ರನಿರ್ಹಸಿದ್ದಾರೆ. ಸಮೀಕ್ಷಾ ವರದಿ ಬಂದ ಬೆನ್ನಲ್ಲೇ, ಮೆಘಾಲಯದಲ್ಲೂ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದೀಗ ಕೋನಾರ್ಡ್ ಸಂಗ್ಮಾ ಬಿಜೆಪಿ ಬೆಂಬಲ ಕೋರಿದ ಬೆನ್ನಲ್ಲೇ ಬಿಸ್ವಾ ಶರ್ಮಾ ಮಾತುಗಳು ನಿಜವಾಗುತ್ತಿದೆ. ಮೆಘಾಲಯದಲ್ಲಿ ಯುಡಿಪಿ ಪಕ್ಷ 11 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 5 ಸ್ಥಾನ ಗೆದ್ದುಕೊಂಡಿದ್ದರೆ, ಟಿಎಂಸಿ 5 ಸ್ಥಾನ ಗೆದ್ದುಕೊಂಡಿದೆ. ಇತರರು 10 ಸ್ಥಾನ ಗೆದ್ದುಕೊಂಡಿದ್ದಾರೆ.
ತ್ರಿಪುರಾದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಬಿಡೆಪಿ ಹಾಗೂ ಮಿತ್ರ ಪಕ್ಷಗಳು ಒಟ್ಟು 33 ಸ್ಥಾನ ಗೆದ್ದುಕೊಂಡಿದೆ. ತ್ರಿಪುರಾದಲ್ಲಿ ಸರ್ಕಾರ ರಚಿಸಲು 31 ಸ್ಥಾನ ಗೆಲ್ಲಬೇಕು. ಬಿಜೆಪಿ 33 ಸ್ಥಾನ ಗೆಲ್ಲುವ ಮೂಲಕ ಅತೀ ದೊಡ್ಡ ಪಕ್ಷವಾಗಿದೆ. ಸ್ಪಷ್ಟ ಬಹುಮತದ ಸರ್ಕಾರ ರಚಿಸಲಿದೆ. ಇತ್ತ ಮೆಘಾಲಯದಲ್ಲಿ ಬಿಜೆಪಿ ಹಾಗೂ ಎನ್‌ಡಿಪಿಪಿ ಮೈತ್ರಿ ಪಕ್ಷ ಒಟ್ಟು 37 ಸ್ಥಾನ ಗೆದ್ದುಕೊಂಡಿದೆ. ಹಾಲಿ ಅಧಿಕಾರಿದಲ್ಲಿರುವ ಬಿಜೆಪಿ ಹಾಗೂ ಎನ್‌ಡಿಪಿಪಿ ಮೈತ್ರಿ ಮತ್ತೆ ಸರ್ಕಾರ ರಚಿಸಲಿದೆ. ನಾಗಾಲ್ಯಾಂಡ್‌ಲ್ಲೂ ಮ್ಯಾಜಿಕ್ ನಂಬರ್ 31.
ತ್ರಿಪುರ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ, ಲೆಕ್ಕಕ್ಕಿಲ್ಲದಂತಾದ ಕಾಂಗ್ರೆಸ್!
ಈಶಾನ್ಯ ರಾಜ್ಯದಲ್ಲಿ ಮತ್ತೆ ಕೇಸರಿ ಕಲರವ ಹೆಚ್ಚಾಗಿದೆ. ಬಿಜೆಪಿ ಮೂರು ರಾಜ್ಯಗಳಲ್ಲಿ ಸರ್ಕಾರ ರಚಿಸವು ಕಸರತ್ತು ಶುರು ಮಾಡಿದರೆ, ಕಾಂಗ್ರೆಸ್ ಧೂಳೀಪಟವಾಗಿದೆ. ತ್ರಿಪುರಾದಲ್ಲಿ ಕಾಂಗ್ರೆಸ್ ಹಾಗೂ ಎಡಪಪಕ್ಷಗಳು 14 ಸ್ಥಾನ ಗೆದ್ದುಕೊಂಡಿದೆ. ಇದು ಕಾಂಗ್ರೆಸ್ ಗರಿಷ್ಠ ಸಾಧನೆ. ಆದರೆ ಎಲ್ಲೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.