ಸುಧಾಕರ್ ನಿಂದಾಗಿಯೇ ನಾನು ಸೋತಿದ್ದು, ತಾವೂ ಸೋತು, ನಮ್ಮನ್ನೂ‌‌ ಸೋಲಿಸಿದ್ರು: ಎಂಟಿಬಿ ಫುಲ್ ಗರಂ

By Gowthami KFirst Published Jun 8, 2023, 7:43 PM IST
Highlights

ತಮ್ಮ ಡಬಲ್ ಸೋಲಿನ ಬಗ್ಗೆ ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಎಂಟಿಬಿ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಲ್ಲಿದ್ದಾಗ ಮೂರು ಸಲ ಗೆದ್ದಿದ್ದೆ ಬಿಜೆಪಿಗೆ ಬಂದ ಮೇಲೆ ಎರಡೂ ಸಲ ಸೋಲಬೇಕಾಯ್ತು ಎಂದಿದ್ದಾರೆ.

ಬೆಂಗಳೂರು (ಜೂ.8): ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,  ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ವಿಧಾನ ಸಭೆ ಚುನಾವಣೆ  ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ  ನಾಯಕರ ವಿರುದ್ಧವೇ ಎಂಟಿಬಿ ನಾಗರಾಜ್ ಗರಂ ಆದ ಪ್ರಸಂಗ ನಡೆದಿದೆ. ತಮ್ಮ ಡಬಲ್ ಸೋಲಿನ ಬಗ್ಗೆ ಸಭೆಯಲ್ಲಿ ಎಂಟಿಬಿ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಲ್ಲಿದ್ದಾಗ ಮೂರು ಸಲ ಗೆದ್ದಿದ್ದೆ ಬಿಜೆಪಿಗೆ ಬಂದ ಮೇಲೆ ಎರಡೂ ಸಲ ಸೋಲಬೇಕಾಯ್ತು. ನಾನು ಬಿಜೆಪಿಗೆ ಬಂದಿದ್ದು ಹಣದ, ಸಚಿವ ಸ್ಥಾನದ, ಅಧಿಕಾರದ ಆಮಿಷಕ್ಕಾಗಿ ಅಲ್ಲ ಎಂದಿದ್ದಾರೆ. 

ಸುಧಾಕರ್ ಮೇಲೂ ಸಿಟ್ಟಾದ ಎಂಟಿಬಿ:
ಸಭೆಯಲ್ಲಿ ಎಂಟಿಬಿ ಮಾಜಿ ಸಚಿವ ಸುಧಾಕರ್‌ ಮೇಲೂ ಸಿಟ್ಟಾದರು. ಡಾ.ಸುಧಾಕರ್‌ ಗೆ ಉಸ್ತುವಾರಿ ನೀಡಿದ್ರು, ಆತನೂ ಸೋತ, ನಮ್ಮನ್ನೂ ಸೋಲಿಸಿದ. ಸುಧಾಕರ್ ನಿಂದಾಗಿಯೇ ನಾನು ಸೋತಿದ್ದು,  ಉಸ್ತುವಾರಿಯನ್ನು ಸಮರ್ಥವಾಗಿ ಸುಧಾಕರ್‌ ನಿಭಾಯಿಸಲಿಲ್ಲ. ತನ್ನ ಸೋಲಿನ ಹತಾಶೆಯನ್ನು ಪಕ್ಷದ ಜೊತೆಗೆ ಕೆಲವು ಪ್ರಮುಖ ನಾಯಕರನ್ನು ಕೂಡ ಸೇರಿಸಿ ಎಂಟಿಬಿ ನಾಗರಾಜ್ ದೂರಿದ್ದಾರೆ.

ನಾನು ಮತ್ತು ಚಿಂತಾಮಣಿ ಅಭ್ಯರ್ಥಿ ಸೋಲಲು ಸುಧಾಕರ್ ಸಹ ಕಾರಣ ಎಂದ ಎಂಟಿಬಿ ನಾಗರಾಜ್ ಬಳಿಕ ಕಾಂಗ್ರೆಸ್ ನವರು ಹತ್ತು ಕೆಜಿ ಅಕ್ಕಿ ಕೊಡ್ತಿದ್ರು. ನೀವು ಆರು ಕೆಜಿ ಅಕ್ಕಿ ಕೊಟ್ರಿ, ಬಡವರು ಇದರಿಂದ ಸಿಟ್ಟಾಗಿದ್ರು, ನನ್ನ ಕ್ಷೇತ್ರದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಗ್ಯಾರಂಟಿಯೂ ನನ್ನ ಸೋಲಿಗೆ ಕಾರಣ  ಎಂದು ಬಿಜೆಪಿ ವಿರುದ್ಧವೇ ಎಂಟಿಬಿ ತಮ್ಮ ಸೋಲಿನ ಬಗ್ಗೆ ಹತಾಶರಾಗಿ ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಪರಿಹಾರ ಹಣ ಅತ್ತೆ ಪಾಲಾಗದಂತೆ ಸೊಸೆ ಹೋರಾಟ, ರಿಮ್ಸ್ ಆಸ್ಪತ್ರೆ ಡೀನ್ ವಿರುದ್ಧ

ಆರೋಪಕ್ಕೆ ಸರಿಯಾಗಿ ತಿರುಗೇಟು ಕೊಟ್ಟಿಲ್ಲ: 40% ಕಮಿಷನ್ ಆರೋಪಕ್ಕೆ ಕೌಂಟರ್ ಅಟ್ಯಾಕ್ ಮಾಡಿಲ್ಲ,ನಾವು ಕೇವಲ ಸಿದ್ದರಾಮಯ್ಯಗೆ ಅಷ್ಟೇ ಬೈದ್ವಿ. ನಮ್ಮಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಸರಿಯಾಗಿ ಆರೋಪಕ್ಕೆ ತಿರುಗೇಟು ಕೊಟ್ಟಿಲ್ಲ. ಪಕ್ಷದ ಕಾರ್ಯಕರ್ತರನ್ನು ಸಚಿವರು ಗಣನೆಗೆ ತೆಗೆದುಕೊಂಡಿಲ್ಲ. ಕಾರ್ಯಕರ್ತರ ಆಗು ಹೋಗುಗಳನ್ನು ಉಸ್ತುವಾರಿ ಸಚಿವರು ಕೇಳಲಿಲ್ಲ, ಇದರಿಂದ ಕಾರ್ಯಕರ್ತರು ಸಿಟ್ಟಾಗಿದ್ದರು ಎಂದು ಇದೇ ವೇಳೆ ಎಂಟಿಬಿ ಹೇಳಿದರು.

ಶಾಸನ ಸಭೆಯ ಗೌರವ ಕಾಪಾಡಿ, ಸ್ಪೀಕರ್ ಖಾದರ್ ಗೆ ಉಪರಾಷ್ಟ್ರಪತಿ ಸಲಹೆ

ಜೀವ, ಪ್ರಾಣ ಕೊಡ್ತೀವಿ ಆದರೆ ಮೀಸಲಾತಿ ಮುಟ್ಟಿದ್ರೆ ಸಹಿಸೋದಿಲ್ಲ: ರಾಮುಲು
ಜಾತಿ ಜನಗಣತಿ ಆಧಾರದ ಮೇಲೆ ಮೀಸಲಾತಿ ನಿರ್ಣಯ ಬದಲಾವಣೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಶ್ರೀರಾಮುಲು ಆಕ್ರೋಶ ವ್ಯಕ್ತಿಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಬಿಜೆಪಿಯ ಎಸ್‌ಟಿ ನಾಯಕ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಜಾತಿ ಜನಗಣತಿ ಬಹಳ ಹಳೆಯದ್ದು, ಅವ್ರು ಸಿಎಂ ಆಗಿದ್ದಾಗಲೇ ಇದನ್ನು ಸ್ವೀಕಾರ ಮಾಡಲು ಒಪ್ಪಿರಲಿಲ್ಲ, ಅವರೇ ಸಿಎಂ ಆಗಿದ್ರು, ಅವರೇ ಯಾರನ್ನೋ ಚೇರ್ ಮ್ಯಾನ್ ಕೂಡ ಮಾಡಿಕೊಂಡಿದ್ರು. ಅವರು ಕೊಟ್ಟ ವರದಿಯನ್ನೇ ಸ್ವೀಕಾರ ಮಾಡೋಕೆ ರೆಡಿ ಇರಲಿಲ್ಲ. ಇವತ್ತು ಜಾತಿ ಜನಗಣತಿ ಬಗ್ಗೆ ಮಾತಾಡಿದ್ರೆ ಎಲ್ಲಿಗೆ ಹೋಗಿ ನಿಲ್ಲುತ್ತದೆ. ಅಧಿಕಾರದಲ್ಲಿ ಇರುವಾಗ ಒಂದು ಮಾತು, ಅಧಿಕಾರದಲ್ಲಿ ಇಲ್ಲದೇ ಇರುವಾಗ ಒಂದು ಮಾತು ಆಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮೀಸಲಾತಿ ಮುಟ್ಟಿದ್ರೆ ಜನರು ಮುಂದೆ ಬೀದಿಗಿಳಿಯುತ್ತಾರೆ. ಶಾಸಕರ ಮನೆಗಳಿಗೆ ನುಗ್ಗುವಂತಹ ಕೆಲಸ ಕೂಡ ಆಗುತ್ತದೆ. ಎಂತಹ ಪರಿಸ್ಥಿತಿ ಆದರೂ ಸರಿ. ಜೀವ, ಪ್ರಾಣ ಬೇಕಿದ್ರೆ ಕೊಡ್ತೀವಿ ಸರಿ, ಆದರೆ ಮೀಸಲಾತಿ ಮುಟ್ಟೋರನ್ನು, ತೆಗೆಯೋರನ್ನಂತೂ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

click me!